Protein rich food for vegetarians: ಅತ್ಯಧಿಕ ಪ್ರೋಟೀನ್ ಅಂಶ ಇರುವ ಸಸ್ಯಹಾರಿಗಳ ಆಹಾರಗಳಿವು
ನಾನ್‌ವೆಜ್ ತಿನ್ನದವರು ತಮ್ಮ ಆಹಾರದಲ್ಲಿ ಪನೀರ್ ಸೇರಿಸಬಹುದು. ಇದು ಭಾರತೀಯ ಪಾಕಪದ್ಧತಿಯ ಪ್ರಮುಖ ಭಾಗವಾಗಿದೆ. ಇದು ನಿಮ್ಮ ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ಒದಗಿಸುತ್ತದೆ. ಪನೀರ್‌ನಲ್ಲಿ ಪೋಷಕಾಂಶಗಳು, ಖನಿಜಗಳು ತುಂಬಿದೆ.

ಪ್ರತಿಯೊಬ್ಬರಿಗೂ ಪ್ರೋಟೀನ್ ಬಹಳ ಅಗತ್ಯವಾಗಿದೆ. ಜೀವಕೋಶಗಳ ಬೆಳವಣಿಗೆಗೆ ಇದು ಬಹಳ ಅವಶ್ಯಕವಾಗಿದೆ. ಪ್ರೋಟೀನ್, ದೇಹದ ರಚನೆಯನ್ನು ಮಾತ್ರವಲ್ಲದೆ ನಮ್ಮ ಚರ್ಮ ಮತ್ತು ಕೂದಲಿನ ಸಮಸ್ಯೆಯನ್ನು ಕೂಡಾ ನಿವಾರಿಸುತ್ತದೆ. ಸಸ್ಯಾಹಾರಿಗಳಾಗಿದ್ದರೆ ಬಹಳ ಉಪಯುಕ್ತವಾದ ಪ್ರೋಟೀನ್ ಆಹಾರಗಳು ಈ ಕೆಳಕಂಡಂತಿವೆ.
ಮೆಂತ್ಯ ಸೊಪ್ಪು: ಮೆಂತ್ಯ ಸೊಪ್ಪಿನಲ್ಲಿ ಪ್ರೋಟೀನ್ ಅಧಿಕವಾಗಿದೆ. ಕೇವಲ 100 ಗ್ರಾಂ ಮೆಂತ್ಯ ಎಲೆಗಳಲ್ಲಿ 25 ಗ್ರಾಂನಷ್ಟು ಪ್ರೋಟೀನ್ ಇರುತ್ತದೆ. ಒಂದು ವೇಳೆ ನೀವು ಇದನ್ನು ಪ್ರತ್ಯೇಕವಾಗಿ ಸೇವಿಸಲ್ ಸಾಧ್ಯವಾಗದಿದ್ದಲ್ಲಿ ಪಾಲಕ್ ಮತ್ತು ಗೆಣಸಿನಂತ ಪ್ರೋಟೀನ್ ಇರುವ ತರಕಾರಿಗಳೊಂದಿಗೆ ಸೇರಿಸಿ ಸೇವಿಸಿದರೆ ದೇಹಕ್ಕೆ ಮತ್ತಷ್ಟು ಹೆಚ್ಚಿನ ಪ್ರೋಟೀನ್ ದೊರೆಯುತ್ತದೆ.
ಕೀನ್ವಾ: ಕೀನ್ವಾವನ್ನು ಸೂಪರ್ ಫುಡ್ ಎಂದೇ ಕರೆಯಲಾಗುತ್ತದೆ. ಕೀನ್ವಾ ಇತ್ತೀಚೆಗೆ ಭಾರತದಲ್ಲಿ ಪ್ರೋಟೀನ್-ಭರಿತ, ಕಡಿಮೆ-ಕೊಬ್ಬಿನ ಆರೋಗ್ಯಕರ ಆಹಾರವಾಗಿ ಮನ್ನಣೆ ಪಡೆಯುತ್ತಿದೆ. ಒಂದೂವರೆ ಕಪ್ ಬೇಯಿಸಿದ ಕೀನ್ವಾ, 13 ಗ್ರಾಂ ಪ್ರೋಟೀನ್ ಹೊಂದಿರುತ್ತದೆ. ಇದು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದ್ದು ಮಧುಮೇಹಿಗಳಿಗೆ ಉತ್ತಮ ಆಹಾರವಾಗಿದೆ. ಇದರಲ್ಲಿ ನಾರಿನಂಶವೂ ಅಧಿಕವಾಗಿದೆ. ಇದು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಪಿಸ್ತಾ: ಪಿಸ್ತಾದಲ್ಲಿ ಕೂಡಾ ಪ್ರೋಟೀನ್ ಹೆಚ್ಚಾಗಿದೆ. ಇದು ಕಡಿಮೆ ಕ್ಯಾಲೋರಿಯನ್ನು ಹೊಂದಿರುವ ಆಹಾರವಾಗಿದೆ. ಇದರಲ್ಲಿ ಫೈಬರ್, ಅಪರ್ಯಾಪ್ತ ಕೊಬ್ಬು ಮತ್ತು ಖನಿಜಾಂಶ ಹೇರಳವಾಗಿದೆ. ಇದು ತೂಕ ನಷ್ಟಕ್ಕೆ ಕೂಡಾ ಸಹಾಯಕಾರಿ.
ಪನೀರ್: ನಾನ್‌ವೆಜ್ ತಿನ್ನದವರು ತಮ್ಮ ಆಹಾರದಲ್ಲಿ ಪನೀರ್ ಸೇರಿಸಬಹುದು. ಇದು ಭಾರತೀಯ ಪಾಕಪದ್ಧತಿಯ ಪ್ರಮುಖ ಭಾಗವಾಗಿದೆ. ಇದು ನಿಮ್ಮ ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ಒದಗಿಸುತ್ತದೆ. ಪನೀರ್‌ನಲ್ಲಿ ಪೋಷಕಾಂಶಗಳು, ಖನಿಜಗಳು ತುಂಬಿದೆ.
ಸೋಯಾಚಂಕ್ಸ್: ಈ ಪ್ರೋಟೀನ್ ಭರಿತ ಆಹಾರವನ್ನು ಸಸ್ಯಾಹಾರಿ ಮಾಂಸ ಎಂದೂ ಕರೆಯುತ್ತಾರೆ. ಇದು ಕೊಬ್ಬು, ಕೊಲೆಸ್ಟ್ರಾಲ್ ಮುಕ್ತವಾಗಿದ್ದು ಅಧಿಕ ಪ್ರೋಟೀನ್ ಇದೆ. ಸೋಯಾ, ವಿಟಮಿನ್ ಸಿ ಯ ಉತ್ತಮ ಮೂಲವಾಗಿದೆ. ಸೋಯಾವನ್ನು ಮೊಸರು, ಸೋಯಾ ಹಾಲು, ಹುರಿದ ಸೋಯಾ ಇತ್ಯಾದಿ ರೂಪದಲ್ಲಿ ಸೇವಿಸಬಹುದು. 100 ಗ್ರಾಂ ಸೋಯಾಬೀನ್‌ನಲ್ಲಿ 38 ಗ್ರಾಂ ಪ್ರೋಟೀನ್ ಅಂಶವಿರುತ್ತದೆ.