ಕುಂಬಳಕಾಯಿ ಬೀಜಗಳಿಂದ ಅಕ್ಕಿವರೆಗೆ: ಮಾರುಕಟ್ಟೆಯಲ್ಲಿ ಖರೀದಿಸಿದ ರಾಖಿಗಿಂತ ನಿವೇ ಕೈಯಾರೆ ಮಾಡಿ, ಇಲ್ಲಿದೆ ಐಡಿಯಾ-raksha bandhan creative rakhi making techniques handmade rakhi design ideas raksha bandhan celebration prk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಕುಂಬಳಕಾಯಿ ಬೀಜಗಳಿಂದ ಅಕ್ಕಿವರೆಗೆ: ಮಾರುಕಟ್ಟೆಯಲ್ಲಿ ಖರೀದಿಸಿದ ರಾಖಿಗಿಂತ ನಿವೇ ಕೈಯಾರೆ ಮಾಡಿ, ಇಲ್ಲಿದೆ ಐಡಿಯಾ

ಕುಂಬಳಕಾಯಿ ಬೀಜಗಳಿಂದ ಅಕ್ಕಿವರೆಗೆ: ಮಾರುಕಟ್ಟೆಯಲ್ಲಿ ಖರೀದಿಸಿದ ರಾಖಿಗಿಂತ ನಿವೇ ಕೈಯಾರೆ ಮಾಡಿ, ಇಲ್ಲಿದೆ ಐಡಿಯಾ

ರಕ್ಷಾ ಬಂಧನವು ಸಹೋದರ-ಸಹೋದರಿಯರ ನಡುವಿನ ವಿಶೇಷ ಬಾಂಧವ್ಯವನ್ನು ಆಚರಿಸುವ ಹಬ್ಬ. ಪ್ರತಿ ವರ್ಷ ರಾಖಿ ಹಬ್ಬದಂದು ಸಹೋದರಿಯರು ತಮ್ಮ ಸಹೋದರರ ಮಣಿಕಟ್ಟಿಗೆ ರಾಖಿ ಕಟ್ಟುತ್ತಾರೆ. ಇದು ರಕ್ಷಣೆ ಮತ್ತು ಪ್ರೀತಿಯನ್ನು ಸಂಕೇತಿಸುತ್ತದೆ.ಮಾರುಕಟ್ಟೆಯಿಂದಲೇ ರಾಖಿ ಖರೀದಿಸಬೇಕೆಂದಿಲ್ಲ. ಮನೆಯಲ್ಲಿ ಕುಳಿತು ನೀವೂ ತಯಾರಿಸಬಹುದು. ಅದು ಹೇಗೆ ಇಲ್ಲಿದೆ ಐಡಿಯಾ.

Raksha Bandhan Creative Rakhi Making Techniques Handmade Rakhi Design Ideas Raksha Bandhan Celebration prk
Raksha Bandhan Creative Rakhi Making Techniques Handmade Rakhi Design Ideas Raksha Bandhan Celebration prk (pinterest)

ಸಹೋದರ-ಸಹೋದರಿಯರ ನಡುವಿನ ಬಾಂಧವ್ಯವನ್ನು ಆಚರಿಸುವ ಹಬ್ಬ ಅಂದ್ರೆ ಅದು ರಕ್ಷಾ ಬಂಧನ. ತನ್ನ ರಕ್ಷಣೆಗಾಗಿ ಸಹೋದರಿಯು ಸಹೋದರನಿಗೆ ಕಟ್ಟುವ ರಾಖಿ ಹಬ್ಬ ಬಹಳ ಮಹತ್ವ ಪಡೆದಿದೆ. ಒಡಹುಟ್ಟಿದ ಸಹೋದರರಿಗೆ ಮಾತ್ರವೇ ಕಟ್ಟಬೇಕೆಂದಿಲ್ಲ. ಮನಃಪೂರ್ವಕವಾಗಿ ಯಾರನ್ನು ಅಣ್ಣ ಅಥವಾ ತಮ್ಮ ಎಂದು ಕರೆಯುತ್ತಿರೋ ಅವರಿಗೂ ರಾಖಿ ಕಟ್ಟಿ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಬಹುದು. ಇನ್ನು ರಕ್ಷಾ ಬಂಧನ ಹಬ್ಬ ಬಂತು ಅಂದರೆ ಸಾಕು ಅಂಗಡಿಗಳ ಮುಂದೆಲ್ಲಾ ತೋರಣಗಳಂತೆ ರಾಖಿಯು ಸಿಂಗಾರಗೊಂಡಿರುತ್ತದೆ. ತಮಗೆ ನೆಚ್ಚಿನ ರಾಖಿಯನ್ನು ಆರಿಸಿಕೊಳ್ಳುವ ಸಹೋದರಿಯರು ಅದನ್ನು ತಮ್ಮ ಪ್ರಿಯ ಸಹೋದರನಿಗೆ ಕಟ್ಟುತ್ತಾರೆ.

ಈ ರಾಖಿಯನ್ನು ನೀವು ಅಂಗಡಿಯಿಂದಲೇ ಖರೀದಿಸಬೇಕೆಂದಿಲ್ಲ. ಮನೆಯಲ್ಲೇ ಕುಳಿತು ತಯಾರಿಸಬಹುದು. ನೀವೇ ನಿಮ್ಮ ಕೈಯಾರೆ ತಯಾರಿಸಿದರೆ ನಿಮ್ಮ ಸಹೋದರ ಮತ್ತಷ್ಟು ಸಂತಸ ಪಡಬಹುದು. ಕುಂಬಳಕಾಯಿ ಬೀಜಗಳು, ಒಣ ಹಣ್ಣುಗಳು ಇತ್ಯಾದಿ ಪದಾರ್ಥಗಳಿಂದ ತಯಾರಿಸಿ, ನೈಸರ್ಗಿಕ ಸೊಬಗಿನ ಸ್ಪರ್ಶವನ್ನು ಕೊಡಬಹುದು.

ರಾಖಿ ಹಬ್ಬ ಸಮೀಪಿಸಿದೆ. ಆಗಸ್ಟ್ 19ರಂದೇ ಹಬ್ಬ ಇರುವುದರಿಂದ ಏನಾದ್ರೂ ಸ್ಪೆಷಲ್ ಮಾಡಬೇಕೆಂದರೆ ಬಹಳ ಬೇಗನೇ ಮಾಡಬೇಕು. ನೀವೇ ನಿಮ್ಮ ಕೈಯಾರೆ ತಯಾರಿಸುವ ರಾಖಿಗಳು ಹಬ್ಬದ ಸಂತಸವನ್ನು ಇಮ್ಮಡಿಗೊಳಿಸುತ್ತವೆ. ಇದನ್ನು ಮಾಡುವುದು ತುಂಬಾನೇ ಸಿಂಪಲ್. ಬಹಳ ಸರಳವಾಗಿ ರಾಖಿಯನ್ನು ಹೇಗೆ ತಯಾರಿಸಬಹುದು ಅನ್ನೋ ಬಗ್ಗೆ ಇಲ್ಲಿದೆ ಐಡಿಯಾ.

ಅಕ್ಕಿಯಿಂದ ಮಾಡಿದ ರಾಖಿಗಳು: ಇದನ್ನು ಮಾಡುವುದು ತುಂಬಾ ಸಿಂಪಲ್. ಇದು ಮನೆಯಲ್ಲಿ ತಯಾರಿಸಿದ ರಾಖಿಯಂತೆ ಕಾಣುವುದಿಲ್ಲ. ಇದನ್ನು ಮಾಡಲು ರಟ್ಟಿನ ಸಣ್ಣ ತುಂಡನ್ನು ನಿಮಗೆ ಇಷ್ಟವಾಗುವ ಆಕಾರದಲ್ಲಿ ಕತ್ತರಿಸಿ. ಅದರ ಮೇಲೆ ಅಂಟು ಹಾಕಿ ಮತ್ತು ಅಕ್ಕಿಯನ್ನು ಸಾಲುಗಳಲ್ಲಿ ಅಂಟಿಸಿ. ಇದರ ಮಧ್ಯಕ್ಕೆ ಕುಂದನ್ ಅನ್ನು ಅಂಟಿಸಿ. ಎರಡೂ ಬದಿಗಳಿದೆ ಬಣ್ಣದ ದಾರ ಸೇರಿಸಿ, ನಿಮ್ಮ ಸೋದರನ ಕೈಗೆ ಕಟ್ಟಿ. ಖಂಡಿತಾ ನಿಮ್ಮ ಸಹೋದರ ಸಂತಸ ಪಡುವುದರಲ್ಲಿ ಸಂಶಯವೇ ಇಲ್ಲ.

ಡ್ರೈ ಫ್ರೂಟ್ ರಾಖಿ: ಒಣಹಣ್ಣುಗಳನ್ನು ಬಳಸಿಯೂ ರಾಖಿ ತಯಾರಿಸಬಹುದು. ಗೋಡಂಬಿ, ಬಾದಾಮಿ, ಒಣದ್ರಾಕ್ಷಿ, ಪಿಸ್ತಾವನ್ನೂ ಬಳಸಿ ಉತ್ತಮ ರಾಖಿ ತಯಾರಿಸಬಹುದು. ಒಣ ಹಣ್ಣುಗಳು ಸ್ವಚ್ಛ ಮತ್ತು ಒಣಗಿರಬೇಕು. ಅಲಂಕಾರಿಕ ಕಾಗದ ಅಥವಾ ರಟ್ಟಿನ ತುಂಡು ಮೇಲೆ ಇವುಗಳನ್ನು ಅಂಟಿಸಿ. ಇದಕ್ಕೆ ರಿಬ್ಬನ್ ಅಥವಾ ದಾರವನ್ನು ಅಂಟಿಸಿ.

ಕುಂಬಳಕಾಯಿ ಬೀಜಗಳು: ಕುಂಬಳಕಾಯಿ ಬೀಜಗಳನ್ನು ಒಣಗಿಸಿ ಅದಕ್ಕೆ ನಿಮಗಿಷ್ಟವಾದ ಬಣ್ಣ (ಪೇಂಟಿಂಗ್) ಅನ್ನು ಕೊಡಬಹುದು. ಕಾಗದ ಅಥವಾ ಕಾರ್ಡ್‌ನ ತುಂಡು ಮೇಲೆ ಅಂಟಿಸಬಹುದು. ಬೀಜಗಳನ್ನು ರಿಬ್ಬನ್ ಅಥವಾ ದಾರದ ತುಂಡು ಮೇಲೆ ಅಂಟಿಸಿ, ರಾಖಿ ಬ್ಯಾಂಡ್ ಅನ್ನು ರಚಿಸಿದರೆ ಕುಂಬಳಕಾಯಿಯ ರಾಖಿ ಸಿದ್ಧವಾಗಿದೆ.

ಮಣ್ಣಿನ ರಾಖಿ: ಮಣ್ಣಿನಿಂದಲೂ ರಾಖಿ ತಯಾರಿಸಬಹುದು. ಇದರಿಂದ ಹೂವಿನ ಆಕಾರ ಅಥವಾ ನಿಮಗಿಷ್ಟವಾದ ಯಾವುದೇ ಡಿಸೈನ್ ಮಾಡಿ, ಆಕರ್ಷಕವಾಗಿ ಕಾಣಲು ಪೇಂಟಿಂಗ್ ಮಾಡಬಹುದು. ಒಣಗಿದ ನಂತರ ರಾಖಿ ಬ್ಯಾಂಡ್ (ಬಣ್ಣದ ದಾರ) ಅಂಟಿಸಿದರೆ ಆಕರ್ಷಕವಾದ ಮಣ್ಣಿನ ರಾಖಿ ಸಿದ್ಧ.

ಫೋಟೋ ರಾಖಿ: ನಿಮ್ಮ ಮತ್ತು ನಿಮ್ಮ ಒಡಹುಟ್ಟಿದವರ ಫೋಟೋವನ್ನು ಬಳಸಿಕೊಂಡು ರಾಖಿ ತಯಾರಿಸಬಹುದು. ಸ್ಟ್ಯಾಂಪ್ ಸೈಝ್ ಫೋಟೋ ತೆಗೆದುಕೊಂಡು ಸಣ್ಣ ಫ್ರೇಮ್ ಅಥವಾ ದಪ್ಪನೆಯ ಕಾಗದಕ್ಕೆ ಲಗತ್ತಿಸಿ. ನಂತರ ದಾರವನ್ನು ಅಂಟಿಸಿ.