ಅಣ್ಣ-ತಂಗಿಯರ ಈ ಬಂಧ ಜನುಮ ಜನುಮಗಳ ಅನುಬಂಧ: ಸಹೋದರನ ಸುರಕ್ಷತೆಗೆ ರಕ್ಷಾ ಬಂಧನದ ಆಚರಣೆ ಹೇಗಿರಬೇಕು ಎಂಬ ಮಾಹಿತಿ ಇಲ್ಲಿದೆ ಓದಿ-raksha bandhan wealth increasing rituals for rakhi festival prosperity practices for raksha bandhan prk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಅಣ್ಣ-ತಂಗಿಯರ ಈ ಬಂಧ ಜನುಮ ಜನುಮಗಳ ಅನುಬಂಧ: ಸಹೋದರನ ಸುರಕ್ಷತೆಗೆ ರಕ್ಷಾ ಬಂಧನದ ಆಚರಣೆ ಹೇಗಿರಬೇಕು ಎಂಬ ಮಾಹಿತಿ ಇಲ್ಲಿದೆ ಓದಿ

ಅಣ್ಣ-ತಂಗಿಯರ ಈ ಬಂಧ ಜನುಮ ಜನುಮಗಳ ಅನುಬಂಧ: ಸಹೋದರನ ಸುರಕ್ಷತೆಗೆ ರಕ್ಷಾ ಬಂಧನದ ಆಚರಣೆ ಹೇಗಿರಬೇಕು ಎಂಬ ಮಾಹಿತಿ ಇಲ್ಲಿದೆ ಓದಿ

ರಕ್ಷಾ ಬಂಧನವು ಒಡಹುಟ್ಟಿದವರ ಬಾಂಧವ್ಯವನ್ನು ಆಚರಿಸುವ ಹಬ್ಬ.ಅಷ್ಟೇ ಅಲ್ಲ ರಾಖಿ ಹಬ್ಬದಂದು ನಿರ್ದಿಷ್ಟ ಆಚರಣೆಗಳನ್ನು ಪಾಲಿಸುವ ಮೂಲಕ ಸಮೃದ್ಧಿಯನ್ನು ಆಹ್ವಾನಿಸಬಹುದು. ಸಹೋದರನ ಆರ್ಥಿಕ ಯಶಸ್ಸಿಗೆ ದೇವರನ್ನು ಪ್ರಾರ್ಥಿಸಬಹುದು.ರಕ್ಷಾ ಬಂಧನದಂದು ಸಹೋದರಿಯರು ಅನುಸರಿಸಬೇಕಾದ ಆಚರಣೆಗಳು ಇಲ್ಲಿವೆ:

ರಕ್ಷಾ ಬಂಧನದಂದು ಸಹೋದರಿಯರು ಅನುಸರಿಸಬೇಕಾದ ಆಚರಣೆಗಳು ಇಲ್ಲಿವೆ:
ರಕ್ಷಾ ಬಂಧನದಂದು ಸಹೋದರಿಯರು ಅನುಸರಿಸಬೇಕಾದ ಆಚರಣೆಗಳು ಇಲ್ಲಿವೆ:

ಸಹೋದರ-ಸಹೋದರಿಯರ ನಡುವಿನ ಬಾಂಧವ್ಯವನ್ನು ವೃದ್ಧಿಸುವ ಹಬ್ಬ ರಕ್ಷಾ ಬಂಧನ ಬಂದೇ ಬಿಟ್ಟಿದೆ. ಸಹೋದರಿಯರು ತಮ್ಮ ಸಹೋದರರ ಮಣಿಕಟ್ಟಿನ ಮೇಲೆ ರಾಖಿ ಕಟ್ಟಿ, ತಮ್ಮ ಸಹೋದರರ ಯೋಗಕ್ಷೇಮ ಮತ್ತು ಯಶಸ್ಸಿಗಾಗಿ ಪ್ರಾರ್ಥನೆ ಮಾಡುತ್ತಾರೆ. ಸಹೋದರಿಯರ ಸುರಕ್ಷತೆಗಾಗಿ ಸಹೋದರ ಸದಾ ಬದ್ಧನಾಗಿರುತ್ತಾನೆ ಎಂಬುದು ಈ ಹಬ್ಬದ ಸಂಕೇತ. 2024ರ ರಕ್ಷಾ ಬಂಧನದಂದು ಸಹೋದರಿಯರು ಅನುಸರಿಸಬೇಕಾದ ಆಚರಣೆಗಳು ಇಲ್ಲಿವೆ:

ಈ ವರ್ಷ ರಕ್ಷಾಬಂಧನ ಆಗಸ್ಟ್ 19, ಸೋಮವಾರ ಬಂದಿದ್ದು, ಬೆಳಗ್ಗೆ 5.53ಕ್ಕೆ ಆರಂಭವಾಗಿ ರಾತ್ರಿ 11.32ರ ವರೆಗೆ ಮುಂದುವರಿಯಲಿದೆ. ರಾಖಿ ಕಟ್ಟಲು ಮಧ್ಯಾಹ್ನ 1.33 ಸೂಕ್ತ ಸಮಯ. ಆದರೆ, ರಾಖಿ ಕಟ್ಟುವಾಗ ಕೆಲವು ನಿಯಮಗಳನ್ನು ಪಾಲಿಸಬೇಕು. ಸಹೋದರಿಯು ತನ್ನ ಸಹೋದರನ ಯೋಗಕ್ಷೇಮಕ್ಕಾಗಿ ಕೆಲವು ಪರಿಹಾರಗಳನ್ನು ಅನುಸರಿಸುವುದು ತುಂಬಾ ಒಳ್ಳೆಯದು. ಈ ರೀತಿ ಮಾಡಿದರೆ ಸಹೋದರನ ಜೀವನ ಸುಖಮಯವಾಗಿರುತ್ತದೆ.

ಗಣೇಶನಿಗೆ ಕಟ್ಟಬೇಕು ರಾಖಿ: ಸಹೋದರ-ಸಹೋದರಿಯರ ನಡುವೆ ಯಾವುದೇ ಸಮಸ್ಯೆಯಾದರೆ ರಾಖಿ ಹಬ್ಬದ ದಿನದಂದು ಸಹೋದರಿ ಮೊದಲು ಗಣೇಶನಿಗೆ ರಾಖಿ ಕಟ್ಟಬೇಕು. ನಂತರ ಸಹೋದರರಿಗೆ ಕಟ್ಟಬೇಕು. ಹೀಗೆ ಮಾಡುವುದರಿಂದ ಅಣ್ಣ-ತಂಗಿಯರ ನಡುವೆ ಪ್ರೀತಿ ಹೆಚ್ಚುತ್ತದೆ. ಅವರ ಬಾಂಧವ್ಯ ಗಟ್ಟಿಯಾಗುತ್ತದೆ. ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯ ಹರಿವಿಗಾಗಿ ಗಣೇಶನನ್ನು ಪೂಜಿಸಬೇಕು. ವಿಘ್ನ ನಿವಾರಕನನ್ನು ಪೂಜಿಸುವುದರಿಂದ, ಅಣ್ಣ ಮತ್ತು ತಂಗಿ ಇಬ್ಬರೂ ತಮ್ಮ ವೃತ್ತಿಜೀವನದಲ್ಲಿ ಎದುರಿಸುತ್ತಿರುವ ಅಡೆತಡೆಗಳನ್ನು ನಿವಾರಿಸಲು ಸಾಧ್ಯವಾಗುತ್ತದೆ.

ಸಂಪತ್ತು ವೃದ್ಧಿಗೆ ಈ ರೀತಿ ಮಾಡಿ: ಆರ್ಥಿಕ ಲಾಭವನ್ನು ಪಡೆಯಲು, ತನ್ನ ಸಹೋದರನಿಗೆ ವೀಳ್ಯದೆಲೆಗಳು, ಬೆಳ್ಳಿಯ ನಾಣ್ಯವನ್ನು ನೀಡಬೇಕು. ಇವುಗಳನ್ನು ಸಹೋದರ ಸುರಕ್ಷಿತವಾಗಿಡಬೇಕು. ಹೀಗೆ ಮಾಡುವುದರಿಂದ ಸಹೋದರನ ಮನೆಯಲ್ಲಿ ಯಾವತ್ತೂ ಆರ್ಥಿಕ ಕೊರತೆ ಉಂಟಾಗುವುದಿಲ್ಲ.

ಸುಖ-ಸಂತೋಷಕ್ಕಾಗಿ ಈ ರೀತಿ ಮಾಡಿ: ರಾಖಿ ಹಬ್ಬದ ದಿನ ಬಡವರಿಗೆ ದಾನ ಮಾಡಿ. ಹಸುಗಳಿಗೆ ಹಸಿರು ಹುಲ್ಲನ್ನು ನೀಡಿ. ಈ ರೀತಿ ಮಾಡುವುದರಿಂದ ಜೀವನದಲ್ಲಿ ಸುಖ, ಸಂತೋಷ, ಶಾಂತಿ ಮತ್ತು ಸಮೃದ್ಧಿ ಉಂಟಾಗುತ್ತದೆ.

ಚಂದ್ರನನ್ನು ಪೂಜಿಸಿ: ಹುಣ್ಣಿಮೆಯ ದಿನದಂದು ರಕ್ಷಾಬಂಧನ ಹಬ್ಬವನ್ನು ಆಚರಿಸಲಾಗುತ್ತದೆ. ಹಾಗಾಗಿ ಆ ದಿನ ಚಂದ್ರೋದಯದ ಸಮಯದಲ್ಲಿ ಚಂದ್ರನನ್ನು ಪೂಜಿಸಿ. ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸಬೇಕು. ಹೀಗೆ ಮಾಡುವುದರಿಂದ ಜೀವನದಲ್ಲಿ ಸುಖ, ಶಾಂತಿ ಸಿಗುತ್ತದೆ.

ರಾಖಿಯನ್ನು ಶುದ್ಧೀಕರಿಸಬೇಕು: ನಿಮ್ಮ ಸಹೋದರನಿಗೆ ರಾಖಿಯನ್ನು ಕಟ್ಟುವ ಮೊದಲು ನೀವು ರಾಖಿಯನ್ನು ಗಂಗಾಜಲದಿಂದ ಶುದ್ಧೀಕರಿಸಬೇಕು. ನಂತರ ಅದನ್ನು ನಿಮ್ಮ ನೆಚ್ಚಿನ ದೇವರ ಪಾದಗಳಿಗೆ ಅರ್ಪಿಸಿ, ಪೂಜೆ ಮಾಡಿ. ನಂತರ ಅದನ್ನು ಸಹೋದರನ ಕೈಗೆ ಕಟ್ಟಿ.

ಕೆಟ್ಟ ದೃಷ್ಟಿ ತೊಡೆದುಹಾಕಲು ಈ ರೀತಿ ಮಾಡಿ: ಸಹೋದರನ ಬಾಳು ಹಸನಾಗಲಿ ಎಂದು ಹಾರೈಸುವ ಸಂದರ್ಭದಲ್ಲಿ ಕೆಡುಕನ್ನು ಹೋಗಲಾಡಿಸಲು ಈ ರೀತಿ ಮಾಡಿ. ಸ್ವಲ್ಪ ಅರಳು ತೆಗೆದುಕೊಂಡು ಅದನ್ನು ಸಹೋದರನ ತಲೆಯ ಸುತ್ತಲೂ 7 ಬಾರಿ ತಿರುಗಿಸಿ. ನಂತರ ಅರಳನ್ನು ರಸ್ತೆಯ ಮೇಲೆ ಎಸೆಯಿರಿ. ಹೀಗೆ ಮಾಡುವುದರಿಂದ ಅವರ ಕೆಟ್ಟ ದೃಷ್ಟಿ ತೊಡೆದುಹಾಕಬಹುದು.

ಭಗವಂತನನ್ನು ಆರಾಧಿಸಿ: ರಕ್ಷಾಬಂಧನ ಹಬ್ಬವು ಶ್ರಾವಣ ಸೋಮವಾರದಂದು ಬರುತ್ತದೆ. ಈ ದಿನದಂದು ಭಗವಂತನನ್ನು ಆರಾಧಿಸುವುದರಿಂದ ಒಳಿತಾಗಲಿದೆ. ಸಹೋದರಿಯು ತನ್ನ ಸಹೋದರನ ಜೀವನ ಸುರಕ್ಷಿತವಾಗಿರಲಿ ಎಂದು ಶಿವನನ್ನು ಪ್ರಾರ್ಥಿಸಬೇಕು.