Rama navami 2024: ರಾಮ ನವಮಿಯಂದು ಬೆಲ್ಲದ ಪಾನಕ, ಮಜ್ಜಿಗೆ, ಕೋಸಂಬರಿ ತಯಾರಿಸುವ ಹಿಂದಿನ ವೈಜ್ಞಾನಿಕ ಕಾರಣವಿದು
ಕನ್ನಡ ಸುದ್ದಿ  /  ಜೀವನಶೈಲಿ  /  Rama Navami 2024: ರಾಮ ನವಮಿಯಂದು ಬೆಲ್ಲದ ಪಾನಕ, ಮಜ್ಜಿಗೆ, ಕೋಸಂಬರಿ ತಯಾರಿಸುವ ಹಿಂದಿನ ವೈಜ್ಞಾನಿಕ ಕಾರಣವಿದು

Rama navami 2024: ರಾಮ ನವಮಿಯಂದು ಬೆಲ್ಲದ ಪಾನಕ, ಮಜ್ಜಿಗೆ, ಕೋಸಂಬರಿ ತಯಾರಿಸುವ ಹಿಂದಿನ ವೈಜ್ಞಾನಿಕ ಕಾರಣವಿದು

ರಾಮ ನವಮಿಯಂದು ಬೆಲ್ಲದ ಪಾನಕ, ಮಜ್ಜಿಗೆ ಹಾಗೂ ಕೋಸಂಬರಿ ತಯಾರಿಸುವುದು ವಾಡಿಕೆ. ಈ ದಿನದಂದು ಈ ಪದಾರ್ಥಗಳನ್ನೇ ಏಕೆ ತಯಾರಿಸುತ್ತಾರೆ ಎಂಬುದಕ್ಕೆ ಕೆಲವು ಧಾರ್ಮಿಕ ಮತ್ತು ವೈಜ್ಞಾನಿಕ ಕಾರಣಗಳಿವೆ. ಅಂತಹ ಕಾರಣಗಳೇನು ನೋಡಿ.

ರಾಮ ನವಮಿಯಂದು ಬೆಲ್ಲದ ಪಾನಕ, ಮಜ್ಜಿಗೆ, ಕೋಸಂಬರಿ ಹಂಚುವ ಹಿಂದಿನ ವೈಜ್ಞಾನಿಕ ಕಾರಣವಿದು
ರಾಮ ನವಮಿಯಂದು ಬೆಲ್ಲದ ಪಾನಕ, ಮಜ್ಜಿಗೆ, ಕೋಸಂಬರಿ ಹಂಚುವ ಹಿಂದಿನ ವೈಜ್ಞಾನಿಕ ಕಾರಣವಿದು

ರಾಮ ನವಮಿ ಆಚರಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ಭಗವಾನ್ ಶ್ರೀರಾಮ ಜನಿಸಿದ ದಿನವನ್ನು ಹಿಂದೂಗಳು ರಾಮ ನವಮಿ ರೂಪದಲ್ಲಿ ಆಚರಿಸುತ್ತಾರೆ. ಚೈತ್ರ ಮಾಸ ಶುಕ್ಲ ಪಕ್ಷದ 9ನೇ ದಿನವನ್ನು ಹಿಂದೂ ಪಂಚಾಗದಲ್ಲಿ ರಾಮ ನವಮಿ ಎಂದು ಕರೆಯಲಾಗುತ್ತದೆ. ಈ ಬಾರಿ ಏಪ್ರಿಲ್ 17ರಂದು ರಾಮನವಮಿ ಇದೆ. ಈ ದಿನದಂದು ರಾಮ ಅಯೋಧ್ಯೆಯಲ್ಲಿ ಜನಿಸಿದ ಎಂದು ಹೇಳಲಾಗುತ್ತದೆ. ಅದರ ಜೊತೆಯಲ್ಲಿ ರಾಮನು ಕೆಟ್ಟ ಶಕ್ತಿಗಳ ವಿರುದ್ಧ ಜಯ ಸಾಧಿಸಿದ ದಿನವಿದು ಎಂದು ನಂಬುವವರೂ ಇದ್ದಾರೆ.

ಇನ್ನು ಶ್ರೀರಾಮ ನವಮಿಯ ದಿನದಂದು ಭಗವಾನ್ ರಾಮನನ್ನು ಸ್ಮರಿಸುವುದು ಒಂದೆಡೆಯಾದರೆ ರಾಮ ನವಮಿ ಎಂದಾಕ್ಷಣ ನೆನಪಿಗೆ ಬರುವುದೇ ಬೆಲ್ಲದ ಪಾನಕ, ಮಜ್ಜಿಗೆ ಹಾಗೂ ಕೋಸಂಬರಿ. ಹಿಂದೂ ಧರ್ಮದಲ್ಲಿ ಅನೇಕ ಹಬ್ಬಗಳು ಬರುತ್ತವೆ, ಎಲ್ಲಾ ಹಬ್ಬಕ್ಕೂ ಕಡುಬು, ಹೋಳಿಗೆ, ಪಾಯಸ ಮಾಡುವುದು ಸರ್ವೇ ಸಾಮಾನ್ಯ. ಆದರೆ ಈ ಹಬ್ಬಕ್ಕೆ ಮಾತ್ರ ಮಜ್ಜಿಗೆ ಏಕೆ ತಯಾರಿಸುತ್ತಾರೆ..? ಬೆಲ್ಲದ ಪಾನಕ ಏಕೆ ಮಾಡಬೇಕು ಎಂದು ಎಂದಾದರೂ ಯೋಚಿಸಿದ್ದೀರೇ..? ರಾಮ ನವಮಿಯ ದಿನದಂದು ಹೆಸರುಬೇಳೆ ಕೋಸಂಬರಿಯನ್ನೇ ಏಕೆ ತಯಾರಿಸಬೇಕು ಎಂದು ನಿಮ್ಮಲ್ಲಿ ಎಂದಾದರೂ ಕುತೂಹಲ ಮೂಡಿದ್ದರೆ ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

ಬೆಲ್ಲದ ಪಾನಕ ನೀಡುವ ಹಿಂದಿನ ವೈಜ್ಞಾನಿಕ, ಧಾರ್ಮಿಕ ಕಾರಣ

ನಿಮಗೆಲ್ಲ ತಿಳಿದಿರುವಂತೆ ಶ್ರೀರಾಮ ನವಮಿಯು ಚೈತ್ರಮಾಸದಲ್ಲಿ ಬರುತ್ತದೆ. ಚೈತ್ರಮಾಸವೆಂದರೆ ವಿಪರೀತ ಬಿಸಿಲಿನ ಕಾಲ. ಬಿಸಿಲ ಧಗೆಯಿಂದ ತತ್ತರಿಸಿ ಹೋಗುವ ಜನರು ಮಜ್ಜಿಗೆ, ಬೆಲ್ಲದ ಪಾನಕಗಳನ್ನು ಸೇವಿಸಿದ್ರೆ ದೇಹಕ್ಕೆ ತಂಪಾಗುತ್ತದೆ ಎಂಬುದು ಇದರ ಹಿಂದಿರುವ ವೈಜ್ಞಾನಿಕ ಕಾರಣ. ಅಲ್ಲದೇ ಪಾನಕ ವಿಷ್ಣುವಿಗೆ ಅತ್ಯಂತ ಪ್ರಿಯವಾದ ಪಾನೀಯಗಳಲ್ಲಿ ಒಂದು. ಭಗವಾನ್ ಶ್ರೀರಾಮ ವಿಷ್ಣುವಿನ ರೂಪವಾಗಿರುವ ಹಿನ್ನೆಲೆಯಲ್ಲಿ ರಾಮನಿಗೆ ಪಾನಕವನ್ನು ಅರ್ಪಿಸಲಾಗುತ್ತದೆ ಎಂಬುದು ಧಾರ್ಮಿಕ ನಂಬಿಕೆ.

ಕೋಸಂಬರಿ ಹಂಚುವ ವೈಜ್ಞಾನಿಕ ಕಾರಣವಿದು

ಇನ್ನು ಬೇಸಿಗೆಕಾಲದಲ್ಲಿ ವಿವಿಧ ರೋಗ ರುಜಿನಗಳು ನಮ್ಮನ್ನು ಕಾಡುತ್ತದೆ. ಆದರೆ ಹೆಸರುಬೇಳೆ ಆಂಟಿ ಅಕ್ಸಿಡೆಂಟ್‌ ಅಂಶವಿರುವ ಪದಾರ್ಥಗಳಲ್ಲಿ ಒಂದಾಗಿದೆ. ಬೇಸಿಗೆಕಾಲದಲ್ಲಿ ಇದನ್ನು ಸೇವಿಸುವುದರಿಂದ ದೇಹದಲ್ಲಿ ಆಂಟಿ ಆಕ್ಸಿಡೆಂಟ್ ಪ್ರಮಾಣಗಳು ಹೆಚ್ಚಾಗಿ ಯಾವುದೇ ರೋಗ ರುಜಿನಗಳು ದೇಹಕ್ಕೆ ಬಾಧಿಸುವುದಿಲ್ಲ ಎಂದು ಹೇಳುತ್ತಾರೆ. ಬೇಸಿಗೆ ಕಾಲದಲ್ಲಿ ಹೀಟ್ ಸ್ಟ್ರೋಕ್‌ ಉಂಟಾಗುವ ಅಪಾಯವೂ ಹೆಚ್ಚಿರುತ್ತದೆ. ಆದರೆ ಹೆಸರುಬೇಳೆಯಲ್ಲಿರುವ ವೈಟೆಕ್ಸಿನ್ ಹಾಗೂ ಐಸೋ ವೈಟೆಕ್ಸಿನ್ ಅಂಶವು ಬೇಸಿಗೆಯಲ್ಲಿ ಸ್ಟ್ರೋಕ್ ಉಂಟಾಗದಂತೆ ನಮ್ಮನ್ನು ಕಾಪಾಡುತ್ತದೆ. ಹೀಗಾಗಿ ರಾಮ ನವಮಿಯಂದು ರಾಮನಿಗಾಗಿ ತಯಾರಿಸುವ ಈ ಪದಾರ್ಥಗಳು ಕೇವಲ ಬಾಯಿಗೆ ರುಚಿಕೊಡುವುದು ಮಾತ್ರವಲ್ಲದೇ ದೇಹಕ್ಕೂ ಎಷ್ಟೆಲ್ಲ ತಂಪು ನೀಡುತ್ತದೆ.

Whats_app_banner