Ramadan 2023: ಪುರುಷರಿಗೂ ಉಂಟು ಫ್ಯಾಷನ್ ನಂಟು; ರಂಜಾನ್ ಸಂಭ್ರಮ ಹೆಚ್ಚಿಸಲಿ ಈ ಸಾಂಪ್ರದಾಯಿಕ ಫ್ಯಾಷನ್ ದಿರಿಸುಗಳು
ಈ ವರ್ಷದ ರಂಜಾನ್ ಹಬ್ಬದಲ್ಲಿ ಗಂಡುಮಕ್ಕಳು ಸ್ಟೈಲಿಶ್ ಆಗಿ ಕಾಣುವ ಸಾಂಪ್ರದಾಯಿಕ ಉಡುಪುಗಳನ್ನು ಧರಿಸುವ ಮೂಲಕ ಸಂಭ್ರಮವನ್ನು ಹೆಚ್ಚಿಸಿಕೊಳ್ಳಬಹುದು. ಈ ಸಾಂಪ್ರದಾಯಿಕ ಫ್ಯಾಷನ್ ಟ್ರೆಂಡ್ ಹಬ್ಬಕ್ಕೆ ನಿಮಗೊಂದು ಟ್ರೆಂಡಿ ಲುಕ್ ನೀಡುವುದರಲ್ಲಿ ಎರಡು ಮಾತಿಲ್ಲ.
ಹಬ್ಬಗಳ ಸಂದರ್ಭದಲ್ಲಿ ಹೊಸ ಬಟ್ಟೆಗಳನ್ನು ಧರಿಸಿ ಸಂಭ್ರಮಿಸುವುದು ವಾಡಿಕೆ. ಫ್ಯಾಷನ್ ವಿಚಾರಕ್ಕೆ ಬಂದಾಗ ಹೆಣ್ಣುಮಕ್ಕಳು ಮೊದಲ ಸ್ಥಾನದಲ್ಲಿದ್ದರೂ ಗಂಡುಮಕ್ಕಳಿಗೆ ಅವಕಾಶವಿಲ್ಲ ಎಂದೇನಿಲ್ಲ.
ಇದಂತೂ ರಂಜಾನ್ ಮಾಸ. ಮುಸಲ್ಮಾನರ ಪವಿತ್ರ ರಂಜಾನ್ ಮಾಸದಲ್ಲಿ ಹಬ್ಬದ ಸಂಭ್ರಮ ಹೆಚ್ಚಿರುತ್ತದೆ. ಈ ತಿಂಗಳ 23ನೇ ತಾರೀಕಿನಂದು ಈದ್ ಉಲ್ ಫಿತ್ರ್ ಆಚರಣೆ ಇದೆ. ಈ ಹಬ್ಬದಂದು ಗಂಡುಮಕ್ಕಳು ಸಾಂಪ್ರದಾಯಿಕ ಉಡುಪುಗಳನ್ನು ಧರಿಸುವ ಮೂಲಕ ಹಬ್ಬದ ಸಂಭ್ರಮವನ್ನು ಹೆಚ್ಚಿಸಬಹುದು. ಈ ಸಾಂಪ್ರದಾಯಿಕ ಫ್ಯಾಷನ್ ಟ್ರೆಂಡ್ ಹಬ್ಬಕ್ಕೆ ನಿಮಗೊಂದು ಟ್ರೆಂಡ್ ಲುಕ್ ನೀಡುವುದರಲ್ಲಿ ಎರಡು ಮಾತಿಲ್ಲ.
ಸರಳವಾದ ಹಾಗೂ ಅತ್ಯಾಧುನಿಕ ಪಠಾನಿ ಡ್ರೆಸ್ ಈ ವರ್ಷ ಈದ್‌ನಲ್ಲಿ ನಿಮ್ಮ ಲುಕ್‌ಗೆ ಹೊಸದೊಂದು ಆಯಾಮ ನೀಡಬಹುದು.
ಬಂಧಗಾಲ
ಸಂಪ್ರದಾಯಿಕ ಸೂಟ್‌ನಂತೆ ಕಾಣಿಸುವ ಬಂಧಗಾಲವನ್ನು ಈ ವರ್ಷ ನಿಮ್ಮ ಈದ್ ಸಂಭ್ರಮಕ್ಕೆ ಜೊತೆ ಮಾಡಿಕೊಳ್ಳಬಹುದು. ಇದರೊಂದಿಗೆ ಸೂಕ್ತ ಆಭರಣಗಳನ್ನು ಧರಿಸುವುದರಿಂದ ನಿಮ್ಮ ಲುಕ್ ಬದಲಾಗುತ್ತದೆ. ಬಂಧಗಾಲಾದೊಂದಿಗೆ ಮ್ಯಾಚಿಂಗ್ ಬಣ್ಣದ ಸ್ಟೋಲ್ ಅನ್ನು ಧರಿಸಿ ಸ್ಟೈಲ್ ಹೆಚ್ಚಿಸಿಕೊಳ್ಳಬಹುದು.
ನೆರಿಗೆಯ ಜಾಕೆಟ್
ಸಾಂಪ್ರದಾಯಿಕ ಉಡುಪಿನ ಜೊತೆ ನೆರಿಗೆ ಇರುವ ಉದ್ದನೆಯ ಜಾಕೆಟ್ ಧರಿಸಬಹುದು. ಇದು ನಿಮಗೆ ಶೇರ್ವಾನಿ ಲುಕ್ ನೀಡುತ್ತದೆ. ಸಾಂಪ್ರದಾಯಿಕ ನೋಟಕ್ಕೆ ಈ ಉಡುಪು ಹೇಳಿ ಮಾಡಿಸಿದ್ದು. ತೋಳಿನ ಬಳಿ ನೆರಿಗೆ ಇರುವ ಜಾಕೆಟ್ ಜೊತೆ ಉದ್ದನೆಯ ಸ್ಟೋಲ್ ಧರಿಸುವುದರಿಂದ ನಿಮ್ಮ ಅಂದ ಹೆಚ್ಚುವುದರಲ್ಲಿ ಎರಡು ಮಾತಿಲ್ಲ.
ಈದ್ ದಂಡಿ
ಬಿಳಿ ಬಣ್ಣದ ಲುಂಗಿಯ ಮೇಲೆ ಕಪ್ಪು ಬಣ್ಣದ ಉದ್ದನೆಯ ಕುರ್ತಾ ಧರಿಸುವ ಮೂಲಕ ಈ ವರ್ಷದ ಈದ್ ಸಂಭ್ರಮವನ್ನು ಹೆಚ್ಚಿಸಬಹುದು. ಇದು ಸಾಂಪ್ರದಾಯಿಕ ನೋಟ ಸಿಗುವಂತೆ ಮಾಡುತ್ತದೆ ಮಾತ್ರವಲ್ಲ, ಟ್ರೆಂಡಿ ಆಗಿಯೂ ಕಾಣಿಸುತ್ತದೆ. ಎಂಬ್ರಾಯಿಡರಿ ವಿನ್ಯಾಸವಿರುವ ಕುರ್ತಾವನ್ನು ಲುಂಗಿಯ ಮೇಲೆ ಧರಿಸಬಹುದು.
ಭವ್ಯ ವಿನ್ಯಾಸದ ಉಡುಪು
ಐಷಾರಾಮಿ ಉಡುಪಿನಂತೆ ಕಾಣುವ ಭವ್ಯ ವಿನ್ಯಾಸವಿರುವ ಕುರ್ತಾ, ಜಾಕೆಟ್ ಮಾದರಿಯ ಉಡುಪುಗಳು ಈ ವರ್ಷ ನಿಮ್ಮ ಹಬ್ಬದ ಸಂಭ್ರಮವನ್ನು ಹೆಚ್ಚಿಸಬಹುದು. ಸಂಪೂರ್ಣ ಕುರ್ತಾದ ಮೇಲೆ ಎಂಬ್ರಾಯಿಡರಿ ಅಥವಾ ಝರಿ ವಿನ್ಯಾಸವಿದ್ದು, ಇದು ಸಾಂಪ್ರದಾಯಿಕ ಶೈಲಿನೊಂದಿಗೆ ಟ್ರೆಂಡಿ ನೋಟ ಸಿಗುವಂತೆ ಮಾಡುವುದರಲ್ಲಿ ಅನುಮಾನವಿಲ್ಲ. ಇದರಲ್ಲಿ ಉದ್ದನೆಯ ಕುರ್ತಾ, ಮೊಣಕಾಲಿಗಿಂತ ಮೇಲೆ ಇರುವ ಶಾರ್ಟ್ ಟ್ಯುನಿಕ್ ರೀತಿಯ ಕುರ್ತಾವನ್ನು ಧರಿಸಬಹುದು.
ಕನ್ನಡಿ ಚಿತ್ತಾರವಿರುವ ಕುರ್ತಾ
ಹೆಣ್ಣುಮಕ್ಕಳ ಉಡುಪಿನಲ್ಲಿ ಕನ್ನಡಿ ವಿನ್ಯಾಸವಿರುವ ಅಥವಾ ಅಲ್ಲಲ್ಲಿ ಚಿತ್ತಾರದ ನಡುವೆ ಕನ್ನಡಿ ಅಂಟಿಸಿರುವಂತಹ ಉಡುಪುಗಳನ್ನು ನೋಡಿರಬಹುದು. ಈಗ ಗಂಡು ಮಕ್ಕಳ ಉಡುಪಿನಲ್ಲೂ ಕನ್ನಡಿ ಚಿತ್ತಾರವಿರುವ ಉಡುಪುಗಳು ಫ್ಯಾಷನ್ ಮಾರುಕಟ್ಟೆಯಲ್ಲಿ ಇಣುಕಿ ಹಾಕುತ್ತಿವೆ. ಈ ಹಬ್ಬದ ಸೀಸನ್‌ನಲ್ಲಿ ಕನ್ನಡಿ ಚಿತ್ತಾರವಿರುವ ಕುರ್ತಾಗಳು ನಿಮ್ಮ ಆಯ್ಕೆ ಆಗಲಿ. ವಿವಿಧ ಬಣ್ಣದ ಕುರ್ತಾ ಟ್ರೆಂಡ್‌ಗಳು ಹಬ್ಬದ ಸಂಭ್ರಮ ಹೆಚ್ಚಿಸುವ ಜೊತೆಗೆ ಸ್ಟೈಲ್‌ಗೂ ಹೇಳಿ ಮಾಡಿಸಿದಂತಿದೆ.
ವೇಸ್ಟ್ ಕೋಟ್ ಕುರ್ತಾ
ವೇಸ್ಟ್ ಕೋಟ್ ಕುರ್ತಾ ಇತ್ತೀಚೆಗೆ ಟ್ರೆಂಡ್ ಸೃಷ್ಟಿಸುತ್ತಿದೆ. ಇದು ಹಬ್ಬದ ಸಂಭ್ರಮದಲ್ಲಿ ತೊಡಲು ಹೇಳಿ ಮಾಡಿಸಿದ್ದು. ಈ ವರ್ಷದ ಈದ್‌ನಲ್ಲಿ ನೀವು ಸ್ಟೈಲಿಶ್ ಆಗಿ ಕಾಣುವ ಆಸೆ ಇದ್ದರೆ, ವೇಸ್ಟ್ ಕೋಟ್ ಕುರ್ತಾ ಧರಿಸಬಹುದು.
ವಿಭಾಗ