Ramadan 2024: ರಂಜಾನ್ ಬಂತು; ಭಾರತದ ಪ್ರಮುಖ 10 ನಗರಗಳಲ್ಲಿನ ಸೆಹ್ರಿ-ಇಫ್ತಾರ್ ಸಮಯ ಹೀಗಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  Ramadan 2024: ರಂಜಾನ್ ಬಂತು; ಭಾರತದ ಪ್ರಮುಖ 10 ನಗರಗಳಲ್ಲಿನ ಸೆಹ್ರಿ-ಇಫ್ತಾರ್ ಸಮಯ ಹೀಗಿದೆ

Ramadan 2024: ರಂಜಾನ್ ಬಂತು; ಭಾರತದ ಪ್ರಮುಖ 10 ನಗರಗಳಲ್ಲಿನ ಸೆಹ್ರಿ-ಇಫ್ತಾರ್ ಸಮಯ ಹೀಗಿದೆ

Ramadan 2024 Sehri-Iftar: ರಂಜಾನ್ ತಿಂಗಳ ಉಪವಾಸದ ಅವಧಿಯಲ್ಲಿ ಎರಡು ಮುಖ್ಯ ಊಟವೆಂದರೆ ಸೂರ್ಯಾಸ್ತದ ನಂತರ ಸೇವಿಸುವ ಇಫ್ತಾರ್ ಮತ್ತು ಸೂರ್ಯೋದಯಕ್ಕೆ ಮುಂಚೆ ಸೇವಿಸುವ ಸೆಹ್ರಿ. ಭಾರತದ ಪ್ರಮುಖ 10 ನಗರಗಳಲ್ಲಿನ ಸೆಹ್ರಿ-ಇಫ್ತಾರ್ ಸಮಯ ಇಲ್ಲಿದೆ..

ರಂಜಾನ್ 2024 (ಸಾಂದರ್ಭಿಕ ಚಿತ್ರ freepik)
ರಂಜಾನ್ 2024 (ಸಾಂದರ್ಭಿಕ ಚಿತ್ರ freepik)

ಇಸ್ಲಾಂ ಧರ್ಮದ ಅತ್ಯಂತ ಪವಿತ್ರವಾದ ರಂಜಾನ್ ತಿಂಗಳು ಆರಂಭವಾಗುತ್ತಿದೆ. ಮಾರ್ಚ್ 10 ರಂದು ಸೌದಿ ಅರೇಬಿಯಾದಲ್ಲಿ ಚಂದ್ರನ ದರ್ಶನವಾಗುತ್ತಿದ್ದಂತೆ, ಭಾರತದಲ್ಲಿ ಮಾರ್ಚ್ 11 ರಂದು ರಂಜಾನ್ ಪ್ರಾರಂಭವಾಗುತ್ತದೆ. ಈ ಒಂದು ತಿಂಗಳ ಕಾಲ ಪ್ರಪಂಚದಾದ್ಯಂತದ ಮುಸ್ಲಿಮರು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ (ರೋಜಾ) ಮಾಡುತ್ತಾರೆ. ಉಪವಾಸದ ಅವಧಿಯಲ್ಲಿ ಎರಡು ಮುಖ್ಯ ಊಟವೆಂದರೆ ಸೂರ್ಯಾಸ್ತದ ನಂತರ ಸೇವಿಸುವ ಇಫ್ತಾರ್ ಮತ್ತು ಸೂರ್ಯೋದಯಕ್ಕೆ ಮುಂಚೆ ಸೇವಿಸುವ ಸೆಹ್ರಿ. ಇಫ್ತಾರ್ ಸಮಯವು ಸೂರ್ಯಾಸ್ತದ ಆಧಾರದ ಮೇಲೆ ಪ್ರತಿದಿನವೂ ಸ್ವಲ್ಪ ಹೆಚ್ಚು ಕಡಿಮೆಯಾಗುತ್ತದೆ.

ಭಾರತ ಸೇರಿದಂತೆ ಆಯಾ ದೇಶದ ಭೌಗೋಳಿಕ ವ್ಯತ್ಯಾಸಗಳಿಂದಾಗಿ ಇಫ್ತಾರ್ ಸಮಯವು ಮನಾರ್ಹವಾಗಿ ಬದಲಾಗುತ್ತವೆ. ನೀವು ವಾಸಿಸುವ ಸ್ಥಳವನ್ನು ಅವಲಂಬಿಸಿ, ಮುಂಜಾನೆ-ಮುಸ್ಸಂಜೆಯ ಉಪವಾಸವು 12 ರಿಂದ 17 ಗಂಟೆಗಳವರೆಗೆ ಇರುತ್ತದೆ. ವಿಶ್ವದ ದಕ್ಷಿಣದ ರಾಷ್ಟ್ರಗಳಲ್ಲಿನ ಮುಸ್ಲಿಮರು ಸರಿಸುಮಾರು 12 ಗಂಟೆಗಳ ಕಾಲ ಉಪವಾಸ ಮಾಡುತ್ತಾರೆ, ಆದರೆ ವಿಶ್ವದ ಉತ್ತರದ ರಾಷ್ಟ್ರಗಳಲ್ಲಿರುವವರು 17 ಅಥವಾ ಅದಕ್ಕಿಂತ ಹೆಚ್ಚು ಗಂಟೆಗಳ ಕಾಲ ಉಪವಾಸ ಮಾಡುತ್ತಾರೆ. ಏಕೆಂದರೆ ಪ್ರಪಂಚದಾದ್ಯಂತ ಹಗಲಿನ ಸಮಯವು ವಿಭಿನ್ನವಾಗಿರುತ್ತದೆ. ಈ ವರ್ಷ ಭಾರತದಲ್ಲಿ ಮುಸ್ಲಿಮರಿಗೆ ಸರಾಸರಿ ಉಪವಾಸ ಅವಧಿಯು ಸುಮಾರು 14 ಗಂಟೆಗಳಿರುತ್ತದೆ.

ಭಾರತದಲ್ಲಿ ಮಾರ್ಚ್ 11 ರಂದು ಪ್ರಾರಂಭವಾಗುವ ರಂಜಾನ್ 29 ಅಥವಾ 30 ದಿನಗಳ ಅವಧಿಯ ಉಪವಾಸದ ನಂತರ ಏಪ್ರಿಲ್ 9 ರಂದು ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ ಮತ್ತು ಈದ್ ಅಲ್-ಫಿತರ್ ಆಚರಣೆಯು ಏಪ್ರಿಲ್ 10 ರಂದು ಪ್ರಾರಂಭವಾಗುವ ನಿರೀಕ್ಷೆಯಿದೆ. ಬಹುಶಃ ಒಂದೆರಡು ದಿನಗಳು ವ್ಯತ್ಯಾಸವಾಗಬಹುದು.

ಭಾರತದ ಪ್ರಮುಖ 10 ನಗರಗಳಲ್ಲಿನ ಸೆಹ್ರಿ-ಇಫ್ತಾರ್ ಸಮಯ ಹೀಗಿದೆ

1) ಅಹಮದಾಬಾದ್: ಸೆಹ್ರಿ- 05:38 AM; ಇಫ್ತಾರ್- 06:47 PM

2) ಬೆಂಗಳೂರು: ಸೆಹ್ರಿ- 05:19 AM; ಇಫ್ತಾರ್- 06:31 PM

3) ಚೆನ್ನೈ: ಸೆಹ್ರಿ- 05:08 AM; ಇಫ್ತಾರ್- 06:20 PM

4) ದೆಹಲಿ: ಸೆಹ್ರಿ- 05:18 AM; ಇಫ್ತಾರ್: 06-27 PM

5) ಹೈದರಾಬಾದ್: ಸೆಹ್ರಿ- 05:16 AM; ಇಫ್ತಾರ್- 06:26 PM

6) ಕೋಲ್ಕತ್ತಾ: ಸೆಹ್ರಿ- 04:35 AM; ಇಫ್ತಾರ್- 05:45 PM

7) ಕಾನ್ಪುರ: ಸೆಹ್ರಿ- 05:06 AM; ಇಫ್ತಾರ್- 06:15 PM

8) ಮುಂಬೈ: ಸೆಹ್ರಿ- 05:38 AM; ಇಫ್ತಾರ್- 06:48 PM

9) ಪುಣೆ: ಸೆಹ್ರಿ- 05:34 AM; ಇಫ್ತಾರ್- 06:44 PM

10) ಸೂರತ್: ಸೆಹ್ರಿ- 05:38 AM; ಇಫ್ತಾರ್- 06:47 PM

ರಂಜಾನ್ ರೋಜಾ ಮಹತ್ವ

ರೋಜಾ ಅಥವಾ ಉಪವಾಸವು ರಂಜಾನ್ ಹಬ್ಬದ ಆದ್ಯ ಕರ್ತವ್ಯ. ರೋಜಾ ಎಂದರೆ ಕೇವಲ ಉಪವಾಸಕ್ಕಷ್ಟೇ ಸೀಮಿತವಲ್ಲ. ಬಡವರು ತುತ್ತು ಅನ್ನಕ್ಕಾಗಿ ಪರಿತಪಿಸುವ ರೀತಿ ಶ್ರೀಮಂತರು ಅನುಭವಿಸಬೇಕು, ಆ ಮೂಲಕ ಅವರಿಗೆ ನೆರವಾಗಬೇಕು ಎಂಬ ಸಂದೇಶ ಅದರಲ್ಲಿ ಅಡಗಿದೆ, ಇಂದ್ರೀಯಗಳ ನಿಗ್ರಹವೂ ಸಹ ರೋಜಾ ಭಾಗ, ಕೇವಲ ಉಪವಾಸ ಮಾಡಿ ಇಂದ್ರಿಯಗಳಿಂದ ಅಶ್ಲೀಲ ದೃಶ್ಯ ನೋಡುವುದು, ಅಶ್ಲೀಲ ಮಾತುಗಳನ್ನಾಡಿದರೆ ರೋಜಾ ಸಿಂಧುವಾಗುವುದಿಲ್ಲ. ಹೀಗಾಗಿ ಇಂದ್ರೀಯ ನಿಗ್ರಹವೂ ಸಹ ರೋಜಾನ ಒಂದು ಅನುಪಮ ಭಾಗವಾಗಿ ಪರಿಗಣಿತವಾಗಿದೆ. ಉಪವಾಸದ ಶಬ್ದಾರ್ಥವು, ಆಹಾರ, ಪಾನೀಯ, ಲೈಂಗಿಕ ಕ್ರಿಯೆ, ಧೂಮಪಾನ ಮತ್ತು ಎಲ್ಲಾ ರೀತಿಯ ಕೆಟ್ಟ ಮತ್ತು ಭೌತಿಕವಾದ ಆಸೆ ಆಮಿಷಗಳಿಗೆ ಬಲಿಯಾಗುವುದರಿಂದ ಸಂಪೂರ್ಣವಾಗಿ ತಡೆಗಟ್ಟುವ ನಿಟ್ಟಿನಲ್ಲಿ ರೋಜಾ ಪ್ರಧಾನ ಪಾತ್ರ ವಹಿಸುತ್ತದೆ.ಇಸ್ಲಾಮಿನ 9ನೇ ತಿಂಗಳಾದ ರಂಜಾನ್ ಅವಧಿಯಲ್ಲಿ ಸಂಪೂರ್ಣ ತಿಂಗಳು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಇದೇ ರೀತಿ ವ್ರತ ಆಚರಿಸಬೇಕು.

Whats_app_banner