Cooking Oil: ಬಳಸಿದ ಅಡುಗೆ ಎಣ್ಣೆ ಮತ್ತೆ ಬಳಸುತ್ತೀರಾ? ಆರೋಗ್ಯಕ್ಕೆ ಅಪಾಯವಿದೆ ಎಚ್ಚರವಿರಿ
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಹೊರಡಿಸಿದ ಸುರಕ್ಷತಾ ಮಾರ್ಗಸೂಚಿಗಳ ಪ್ರಕಾರ, ಎಣ್ಣೆಯನ್ನು ಒಮ್ಮೆ ಬಿಸಿ ಮಾಡಿದ ಬಳಿಕ ಮತ್ತೆ ಬಿಸಿ ಮಾಡಬಾರದು. ಎಣ್ಣೆಯನ್ನು ಪದೇ ಪದೇ ಹೆಚ್ಚಿನ ತಾಪಮಾನಕ್ಕೆ ಒಳಪಡಿಸುವುದರಿಂದ ಕೆಲ ವಿಷಕಾರಿ ಅಂಶಗಳು ರೂಪುಗೊಳ್ಳುತ್ತವೆ.
ಬೋಂಡಾ, ಪಕೋಡ, ಬಜ್ಜಿ ಮೊದಲಾದ ಕರಿದ ತಿಂಡಿ ಮಾಡಿದ ಬಳಿಕ ಎಣ್ಣೆ ಉಳಿಯುತ್ತದೆ. ಮತ್ತೆ ಆ ಎಣ್ಣೆಯನ್ನು ಒಗ್ಗರಣೆಗೆ ಬಳಸುತ್ತೇವೆ. ಅದರಲ್ಲೇ ಮತ್ತೊಮ್ಮೆ ಪಕೋಡವನ್ನೂ ಮಾಡುತ್ತೇವೆ. ಮತ್ತೆ ಉಳಿದ ಎಣ್ಣೆಯಲ್ಲಿ ಕೆಲ ದಿನ ಬಿಟ್ಟು ಮತ್ತೊಮ್ಮೆ ತಿಂಡಿ ಕರಿಯಲು ಬಳಸುತ್ತೇವೆ. ಹೆಚ್ಚಿನ ಮಧ್ಯಮ ವರ್ಗದ ಮನೆಗಳಲ್ಲಿ ಇಂತಹ ಪರಿಪಾಠ ಚಾಲ್ತಿಯಲ್ಲಿದೆ. ಇದು ಅನಿವಾರ್ಯವಾದರೂ, ನೀವು ಆರೋಗ್ಯದ ವಿಚಾರದಲ್ಲಿ ರಾಜಿ ಮಾಡಿಕೊಳ್ಳುತ್ತಿದ್ದೀರಿ ಎಂಬುದು ನಿಮಗೆ ನೆನಪಿನಲ್ಲಿರಬೇಕು.
ಹೀಗೆ ಒಮ್ಮೆ ಹೆಚ್ಚಿನ ತಾಪಮಾನದಲ್ಲಿ ಬೇಯಿಸಿದ ಎಣ್ಣೆಯು ಅನೇಕ ರೀತಿಯ ಬದಲಾವಣೆಗಳಿಗೆ ಒಳಗಾಗುತ್ತದೆ. ಇದನ್ನು ಮತ್ತೆ ಬೇಯಿಸಿ, ಅದರಲ್ಲಿ ತಯಾರಿಸಿದ ಅಡುಗೆ ತಿನ್ನುವುದರಿಂದ ದೇಹದಲ್ಲಿ ಕ್ಯಾನ್ಸರ್ ಕೋಶಗಳು ಉತ್ಪತ್ತಿಯಾಗುತ್ತವೆ. ಅಲ್ಲದೆ ಹೃದ್ರೋಗ ಸಮಸ್ಯೆ ಕೂಡಾ ಬರುವ ಸಾಧ್ಯತೆ ಇದೆ. ಇಷ್ಟೇ ಅಲ್ಲ, ನಮಗೆ ಮೇಲ್ನೋಟಕ್ಕೆ ತಿಳಿಯದ ಹಲವು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ.
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಹೊರಡಿಸಿದ ಸುರಕ್ಷತಾ ಮಾರ್ಗಸೂಚಿಗಳ ಪ್ರಕಾರ, ಎಣ್ಣೆಯನ್ನು ಒಮ್ಮೆ ಬಿಸಿ ಮಾಡಿದ ಬಳಿಕ ಮತ್ತೆ ಬಿಸಿ ಮಾಡಬಾರದು. ಎಣ್ಣೆಯನ್ನು ಪದೇ ಪದೇ ಹೆಚ್ಚಿನ ತಾಪಮಾನಕ್ಕೆ ಒಳಪಡಿಸುವುದರಿಂದ ಕೆಲ ವಿಷಕಾರಿ ಅಂಶಗಳು ರೂಪುಗೊಳ್ಳುತ್ತವೆ. ಇವು ಹೃದಯಕ್ಕೆ ತುಂಬಾ ಅಪಾಯಕಾರಿ. ಈ ಎಣ್ಣೆಯು ಆಮ್ಲಜನಕರಹಿತವಾಗುವುದರಿಂದ, ಇದರಲ್ಲಿ ಕ್ಲೋಸ್ಟ್ರಿಡಿಯಮ್ ಬೊಟುಲಿನಮ್ ಉತ್ಪತ್ತಿಯಾಗುತ್ತದೆ. ಇದು ಆಹಾರದ ವಿಷ(food poisoning)ಕ್ಕೆ ಕಾರಣವಾಗುತ್ತದೆ. ಬಳಸಿದ ಅಡುಗೆ ಎಣ್ಣೆಯನ್ನು ಮತ್ತೆ ಬಳಸುವುದರಿಂದ ಆಗುವ ಗಂಭೀರ ಆರೋಗ್ಯ ಸಮಸ್ಯೆಗಳಿವು.
ಉರಿಯೂತ
ಒಮ್ಮೆ ಬಳಸಿದ ಅಡುಗೆ ಎಣ್ಣೆಯನ್ನು ಮತ್ತೆ ಬಳಸಿ ಅಡುಗೆ ಮಾಡುವುದರಿಂದ, ಅಂತಹ ಆಹಾರ ಸೇವಿಸಿದಾಗ ಸ್ವತಂತ್ರ ರಾಡಿಕಲ್‌ಗಳು ಹೆಚ್ಚುತ್ತವೆ. ಇದು ಉರಿಯೂತವನ್ನು ಉಂಟುಮಾಡುತ್ತದೆ. ಇದು ಹೃದ್ರೋಗ ಮತ್ತು ಮಧುಮೇಹದಂತಹ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಈ ಉರಿಯೂತವು ಪ್ರತಿರಕ್ಷಣಾ ವ್ಯವಸ್ಥೆಯನ್ನು ಸಹ ಕಡಿಮೆ ಮಾಡುತ್ತದೆ. ಇದು ದೇಹದಲ್ಲಿ ಅನೇಕ ಸೋಂಕುಗಳಿಗೆ ಕಾರಣವಾಗುತ್ತದೆ.
ಕ್ಯಾನ್ಸರ್ ಕಾರಕ
ಆರೋಗ್ಯ ತಜ್ಞರ ಪ್ರಕಾರ, ಅಡುಗೆ ಎಣ್ಣೆಯನ್ನು ಪದೇ ಪದೇ ಬಳಸುವುದರಿಂದ ಕ್ಯಾನ್ಸರ್ ಕಾರಕ ಅಂಶಗಳು ಹುಟ್ಟುತ್ತವೆ. ಎಣ್ಣೆಯನ್ನು ಮತ್ತೆ ಬಿಸಿ ಮಾಡುವುದರಿಂದ ಅಡಾಲ್ಡಿಹೈಡ್‌ಗಳು ಉತ್ಪತ್ತಿಯಾಗುತ್ತವೆ. ಈ ಎಣ್ಣೆಯಿಂದ ತಯಾರಿಸಿದ ಆಹಾರವನ್ನು ಸೇವಿಸುವುದರಿಂದ ದೇಹದಲ್ಲಿ ಕ್ಯಾನ್ಸರ್ ಕೋಶಗಳು ರೂಪುಗೊಳ್ಳುತ್ತವೆ.
ಬ್ಯಾಕ್ಟೀರಿಯಾ
ಎಣ್ಣೆಯನ್ನು ಬಿಸಿ ಮಾಡಿದ ನಂತರ, ಅದನ್ನು ಸಂಗ್ರಹಿಸುವುದರಿಂದ ಎಣ್ಣೆಯಲ್ಲಿರುವ ಸೂಕ್ಷ್ಮ ಆಹಾರ ಕಣಗಳ ಮೇಲೆ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ. ಇದು ಅಪಾಯಕಾರಿ ಸೋಂಕುಗಳಿಗೆ ಕಾರಣವಾಗಬಹುದು. ಮತ್ತೆ ಈ ಎಣ್ಣೆಯನ್ನು ಬಳಸಿದಾಗ ದೇಹದಲ್ಲಿ ಫ್ರೀರ್ಯಾಡಿಕಲ್‌ಗಳು ಶೇಖರಗೊಳ್ಳುತ್ತವೆ. ಅವು ಜೀವಕೋಶಗಳನ್ನು ಹಾನಿಗೊಳಿಸುತ್ತವೆ. ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.
ಆಹಾರ ಕಲುಷಿತ
ಹೆಚ್ಚಿನ ತಾಪಮಾನದ ಕಾರಣ ಬಿಸಿ ಎಣ್ಣೆಯಿಂದ ಅಡುಗೆ ಮಾಡುವ ಮೂಲಕ ಆಹಾರವು ಕೆಲವೊಮ್ಮೆ ಕಲುಷಿತಗೊಳ್ಳುತ್ತದೆ. ಅದು ನಮಗೆ ಗೊತ್ತಾಗುವುದಿಲ್ಲ. ನಾವು ಹಾಗೆಯೇ ತಿನ್ನುತ್ತೇವೆ. ಯಾವುದೇ ಕಾಯಿಲೆ ಬಂದರೂ ಅದು ಆ ಎಣ್ಣೆಯಿಂದಲೇ ಎಂಬ ಅರಿವು ಕೂಡ ನಮಗಾಗುವುದಿಲ್ಲ.
ಅಸಿಡಿಟಿ, ಅಜೀರ್ಣ
ಎಣ್ಣೆಯ ಮರುಬಳಕೆಯು ಆಮ್ಲೀಯತೆ, ಎದೆಯುರಿ, ಜೀರ್ಣಕಾರಿ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಇವು ತಾತ್ಕಾಲಿಕ ಸಮಸ್ಯೆಗಳು. ಆದರೆ ಪುನರಾವರ್ತನೆಯದರೆ, ದೀರ್ಘಕಾಲಿಕ ಸಮಸ್ಯೆಯಾಗಿ ಬದಲಾಗಬಹುದು. ಆ ಬಳಿಕ ತುಂಬಾ ಅಪಾಯ ಎದುರಿಸಬೇಕಾಗಬಹುದು.
ಕೊಲೆಸ್ಟ್ರಾಲ್
ಎಣ್ಣೆ ಮರುಬಳಕೆ ಮಾಡಿದಾಗ ಟಾನ್ಸ್ ಕೊಬ್ಬಿನಾಮ್ಲಗಳು ಹೆಚ್ಚಾಗುತ್ತವೆ. ಅವು ಅನಾರೋಗ್ಯಕ್ಕೆ ಕಾರಣವಾಗುತ್ತವೆ. ಈ ಕೊಬ್ಬು ಹೃದಯ ಸಂಬಂಧಿ ಸಮಸ್ಯೆಗಳನ್ನು ಉಂಟುಮಾಡುತ್ತವೆ.
ವಿಭಾಗ