ಬಣ್ಣ ಬದಲಿಸುವಿಕೆ, ಅಗ್ಗದ ದರ, ಅತ್ಯುತ್ತಮ ಫೀಚರ್ಸ್; ರಿಯಲ್ಮಿ 14 ಪ್ರೊ ಪ್ಲಸ್ vs ಒನ್ಪ್ಲಸ್ ನಾರ್ಡ್-4, ಯಾವುದು ಬೆಸ್ಟ್?
Realme 14 Pro+ vs OnePlus Nord 4: ರಿಯಲ್ಮಿ 14 ಪ್ರೊ ಪ್ಲಸ್ ವರ್ಸಸ್ vs ಒನ್ಪ್ಲಸ್ ನಾರ್ಡ್-4 .. ಈ ಎರಡು ಸ್ಮಾರ್ಟ್‌ಫೋನ್‌ಗಳಲ್ಲಿ ಯಾವುದು ಬೆಸ್ಟ್? ಕಾಸಿಗೆ ತಕ್ಕ ಕಜ್ಜಾಯ ಯಾವುದು? ಯಾವ ಕ್ಯಾಮೆರಾ ಗುಣಮಟ್ಟ ಉತ್ತಮವಾಗಿದೆ? ಸಂಪೂರ್ಣ ವಿವರಗಳನ್ನು ಇಲ್ಲಿ ತಿಳಿಯಿರಿ.

ಆಧುನಿಕ ತಂತ್ರಜ್ಞಾನ ಯುಗದಲ್ಲಿ ಭಿನ್ನ, ವಿಭಿನ್ನ ಮತ್ತು ಆಕರ್ಷಕ ಅಪ್ಡೇಟ್ಗಳು ಮತ್ತು ಅಗ್ಗದ ದರದೊಂದಿಗೆ ನೂತನ ಮೊಬೈಲ್ಗಳು ಮಾರುಕಟ್ಟೆಗೆ ಕಾಲಿಡುತ್ತಿವೆ. ಅದರಂತೆ ಜನಪ್ರಿಯ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 14ರ ಸರಣಿಯ ಎರಡು ಮಾದರಿಗಳನ್ನು ಬಿಡುಗಡೆ ಮಾಡಿದೆ. ಅವುಗಳೆಂದರೆ ರಿಯಲ್ಮಿ 14 ಪ್ರೊ ಮತ್ತು ರಿಯಲ್ಮಿ 14 ಪ್ರೊ ಪ್ಲಸ್. ಇವುಗಳ ಅತ್ಯಾಕರ್ಷಕ ಫೀಚರ್ ಬಣ್ಣ ಬದಲಾಯಿಸುವ ತಂತ್ರಜ್ಞಾನ! ವಿನ್ಯಾಸ, ಕ್ಯಾಮೆರಾ, ಕಾರ್ಯಕ್ಷಮತೆ ಫೀಚರ್ಸ್ ಕೂಡ ಗಮನ ಸೆಳೆದಿವೆ. ಆದಾಗಿಯೂ ಆದಾಗ್ಯೂ, ಕಳೆದ ವರ್ಷ 30,000 ರೂಪಾಯಿಗಿಂತ ಕಡಿಮೆ ಬೆಲೆಗೆ ಬಿಡುಗಡೆಯಾದ ಒನ್ಪ್ಲಸ್ ನಾರ್ಡ್-4 ಮೊಬೈಲ್ಗಿಂತ ಇದು ಉತ್ತಮವಾಗಿದೆಯೇ? ಇದರ ಬೆಲೆಯೆಷ್ಟು? ಈ ಎರಡು ಸ್ಮಾರ್ಟ್‌ಫೋನ್‌ಗಳಲ್ಲಿ ಯಾವುದು ಬೆಸ್ಟ್? ಯಾವ ಕ್ಯಾಮೆರಾ ಗುಣಮಟ್ಟ ಉತ್ತಮವಾಗಿದೆ? ಸಂಪೂರ್ಣ ವಿವರಗಳನ್ನು ಇಲ್ಲಿ ತಿಳಿಯಿರಿ.
ರಿಯಲ್ಮಿ 14 ಪ್ರೊ ಪ್ಲಸ್ vs ಒನ್ಪ್ಲಸ್ ನಾರ್ಡ್ 4: ಬೆಲೆ
ರಿಯಲ್ಮಿ 14 ಪ್ರೊ ಪ್ಲಸ್ 8 ಜಿಬಿ ರ‍್ಯಾಮ್ (RAM) ಮತ್ತು 128 ಜಿಬಿ ಸ್ಟೋರೇಜ್ ವೇರಿಯಂಟ್ನ ಬೆಲೆ 29,999 ರೂಪಾಯಿ.
ಕಳೆದ ವರ್ಷ ಬಿಡುಗಡೆಯಾದ ಒನ್ಪ್ಲಸ್ ನಾರ್ಡ್ 4 ಕೂಡ 8 ಜಿಬಿ ರಾಮ್ ಮತ್ತು 128 ಜಿಬಿ ಸ್ಟೋರೇಜ್ನೊಂದಿಗೆ 29,999 ರೂ.ಗಳ ಆರಂಭಿಕ ಬೆಲೆಯನ್ನು ಹೊಂದಿದೆ. ಈ ಎರಡೂ ಮೊಬೈಲ್ಗಳು ಭಾರತದಲ್ಲಿ ಒಂದೇ ಬೆಲೆಯಲ್ಲಿ ಲಭ್ಯವಿದೆ.
ರಿಯಲ್ಮಿ 14 ಪ್ರೊ ಪ್ಲಸ್ vs ಒನ್ಪ್ಲಸ್ ನಾರ್ಡ್ 4: ವಿನ್ಯಾಸ
ರಿಯಲ್ಮಿ 14 ಪ್ರೊ ಪ್ಲಸ್ ಸ್ಮಾರ್ಟ್ಫೋನ್ ತನ್ನ ವಿನ್ಯಾಸಕ್ಕೆ ಜನಪ್ರಿಯವಾಗಿದೆ. ಏಕೆಂದರೆ ತಂಪಾದ ತಾಪಮಾನದಲ್ಲಿ ಇರಿಸಿದಾಗ ಬಣ್ಣ ಬದಲಾಯಿಸುವ ಬ್ಯಾಕ್ ಪ್ಯಾನಲ್ ಹೊಂದಿರುವ ವಿಶ್ವದ ಮೊದಲ ಸ್ಮಾರ್ಟ್ಫೋನ್ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.
ರಿಯಲ್ಮಿ 14 ಪ್ರೊ ಪ್ಲಸ್ ಆಕರ್ಷಕ ವಿನ್ಯಾಸದೊಂದಿಗೆ, ಸ್ಮಾರ್ಟ್ಫೋನ್ ಐಪಿ 66, ಐಪಿ 68, ಐಪಿ 69 ರೇಟಿಂಗ್ಗಳೊಂದಿಗೆ ಬಹಳ ಬಾಳಿಕೆ ಬರುತ್ತದೆ. ನೀರು, ಧೂಳು ನಿರೋಧಕವಾಗಿದೆ. ಇದೇ ವೈಶಿಷ್ಟ್ಯ ಹೊಂದಿರುವ ಒನ್ಪ್ಲಸ್ ಕಡಿಮೆ ಬಾಳಿಕೆ ಬರುತ್ತದೆ.
ರಿಯಲ್ಮಿ 14 ಪ್ರೊ ಪ್ಲಸ್ 6.83 ಇಂಚಿನ ಅಮೋಲೆಡ್ ಡಿಸ್ಪ್ಲೇ, 120 ಹೆರ್ಟ್ಜ್ ರಿಫ್ರೆಶ್ ರೇಟ್, 4500 ಇಂಚಿನ ಪೀಕ್ ಬ್ರೈಟ್ನೆಸ್ ಹೊಂದಿದೆ.
ಒನ್ಪ್ಲಸ್ ನಾರ್ಡ್-4 ಸ್ಮಾರ್ಟ್ಫೋನ್ 6.74 ಇಂಚಿನ ಅಮೋಲೆಡ್ ಡಿಸ್ಪ್ಲೇ, 120 ಹೆರ್ಟ್ಜ್ ರಿಫ್ರೆಶ್ ರೇಟ್ ಮತ್ತು 2150 ನಿಟ್ಸ್ ಪೀಕ್ ಬ್ರೈಟ್ನೆಸ್ ಹೊಂದಿದೆ.
ರಿಯಲ್ ಮಿ 14 ಪ್ರೊ ಪ್ಲಸ್ ವರ್ಸಸ್ ಒನ್ ಪ್ಲಸ್ 4 6.74 ಇಂಚಿನ ಅಮೋಲೆಡ್ ಡಿಸ್ ಪ್ಲೇ, 120 ಹೆರ್ಟ್ಜ್ ರಿಫ್ರೆಶ್ ರೇಟ್ ಮತ್ತು 2150 ನಿಟ್ಸ್ ಪೀಕ್ ಬ್ರೈಟ್ನೆಸ್ ಅನ್ನು ಹೊಂದಿದೆ.
ರಿಯಲ್ಮಿ 14 ಪ್ರೊ ಪ್ಲಸ್ vs ಒನ್ಪ್ಲಸ್ ನಾರ್ಡ್ 4: ಬ್ಯಾಟರಿ
ರಿಯಲ್ಮಿ 14 ಪ್ರೊ ಪ್ಲಸ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 7S Gen 3 ಚಿಪ್‌ಸೆಟ್‌ನಿಂದ ಚಾಲಿತವಾಗಿದ್ದು, 12 ಜಿಬಿ ರ‍್ಯಾಮ್ ಮತ್ತು 256 ಜಿಬಿ ಸ್ಟೋರೇಜ್ ಹೊಂದಿದೆ.
ಒನ್ಪ್ಲಸ್ ನಾರ್ಡ್-4 ಸ್ನ್ಯಾಪ್ ಡ್ರ್ಯಾಗನ್ 7+ Gen 3 ಪ್ರೊಸೆಸರ್, 8 ಜಿಬಿ LPDDR5X ರ‍್ಯಾಮ್ ಮತ್ತು 256 ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿದೆ.
ಬ್ಯಾಟರಿಗೆ ಸಂಬಂಧಿಸಿದಂತೆ, ರಿಯಲ್ಮಿ 14 ಪ್ರೊ + 80 ವ್ಯಾಟ್ ಫಾಸ್ಟ್ ಚಾರ್ಜಿಂಗ್ನೊಂದಿಗೆ 6,000mAh ಬ್ಯಾಟರಿಯನ್ನು ಹೊಂದಿದೆ.
ಒನ್ಪ್ಲಸ್ ನಾರ್ಡ್-4 100 ವ್ಯಾಟ್ ಸೂಪರ್ವೋಕ್ ಫಾಸ್ಟ್ ಚಾರ್ಜಿಂಗ್ನೊಂದಿಗೆ 5,500mAh ಬ್ಯಾಟರಿ ಹೊಂದಿದೆ.
ರಿಯಲ್ಮಿ 14 ಪ್ರೊ ಪ್ಲಸ್ vs ಒನ್ ಪ್ಲಸ್ ನಾರ್ಡ್-4: ಕ್ಯಾಮೆರಾ
ಕ್ಯಾಮೆರಾ ವಿಷಯಕ್ಕೆ ಬಂದರೆ, ರಿಯಲ್ಮಿ 14 ಪ್ರೊ ಪ್ಲಸ್ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 50 ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾದೊಂದಿಗೆ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ.
ಒನ್ಫ್ಲಸ್ ನಾರ್ಡ್-4 ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, ಸೋನಿ ಲೈಟಿಯಾ ಸೆನ್ಸಾರ್ ಮತ್ತು 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾದೊಂದಿಗೆ ಬರುತ್ತದೆ.
