ಕನ್ನಡ ಸುದ್ದಿ  /  ಜೀವನಶೈಲಿ  /  Dating: ಕಾಫಿ ಡೇ, ಮಾಲ್‌ಗೆ ಹೋಗೋದೆಲ್ಲ ಹಳೆದಾಯ್ತು; ನಿಮ್ಮ ಫಸ್ಟ್‌ಡೇಟ್‌ ಮಧುರವಾಗಿಸಲು ಈ ಐಡಿಯಾಗಳನ್ನು ಟ್ರೈ ಮಾಡಿ

Dating: ಕಾಫಿ ಡೇ, ಮಾಲ್‌ಗೆ ಹೋಗೋದೆಲ್ಲ ಹಳೆದಾಯ್ತು; ನಿಮ್ಮ ಫಸ್ಟ್‌ಡೇಟ್‌ ಮಧುರವಾಗಿಸಲು ಈ ಐಡಿಯಾಗಳನ್ನು ಟ್ರೈ ಮಾಡಿ

ಮೊದಲ ಬಾರಿ ಪ್ರೇಮಿ ಅಥವಾ ಸಂಗಾತಿಯನ್ನು ಮೀಟ್‌ ಮಾಡಲು ಹೋಗುವಾಗ ಎಲ್ಲಿಗೆ ಹೋಗೋದು ಅಂತ ಯೋಚನೆ ಬರೋದು ಸಹಜ. ಆಗ ನಮ್ಮ ತಲೆಗೆ ಮೊದಲು ಬರುವುದು ಕಾಫಿ ಡೇಗೆ ಹೋದ್ರೆ ಹೇಗೆ ಅಂತ. ಆದ್ರೆ ಈಗ ಈ ಐಡಿಯಾ ಹಳೇದಾಗಿ. ಈಗಿನ ಟ್ರೆಂಡ್‌ಗೆ ತಕ್ಕ ಹಾಗೆ ಫಸ್ಟ್‌ಡೇಟ್‌ಗೆ ಎಲ್ಲಿಗೆ ಹೋಗೋದು, ಮೆಮೊರೇಬಲ್‌ ಆಗಿರಬೇಕು ಅಂದ್ರೆ ಏನು ಮಾಡಬೇಕು ಅನ್ನೋದಕ್ಕೆ ಇಲ್ಲಿದೆ ಉತ್ತರ.

ಕಾಫಿ ಡೇ, ಮಾಲ್‌ಗೆ  ಹೋಗೋದೆಲ್ಲಾ ಹಳೆದಾಯ್ತು, ನಿಮ್ಮ ಫಸ್ಟ್‌ಡೇಟ್‌ ಎಕ್ಸೈಟ್‌ ಆಗಿರಲು ಈ ಐಡಿಯಾಗಳನ್ನು ಟ್ರೈ ಮಾಡಿ
ಕಾಫಿ ಡೇ, ಮಾಲ್‌ಗೆ ಹೋಗೋದೆಲ್ಲಾ ಹಳೆದಾಯ್ತು, ನಿಮ್ಮ ಫಸ್ಟ್‌ಡೇಟ್‌ ಎಕ್ಸೈಟ್‌ ಆಗಿರಲು ಈ ಐಡಿಯಾಗಳನ್ನು ಟ್ರೈ ಮಾಡಿ

ಪ್ರೀತಿ ಮಾಡಿದಾಗ ಅಥವಾ ಮದುವೆಯಾಗಲು ಸಿದ್ಧರಾದಾಗ ಪ್ರೇಮಿ ಅಥವಾ ಸಂಗಾತಿಯನ್ನು ಭೇಟಿ ಮಾಡಬೇಕು ಎನ್ನಿಸುವುದು ಸಹಜ. ತಮ್ಮ ಫಸ್ಟ್‌ಡೇಟ್‌ ರೋಮಾಂಚಕಾರಿ ಆಗಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ಆದ್ರೆ ವಿಶೇಷ ಅನುಭವ ನೀಡುವ ಫಸ್ಟ್‌ಡೇಟ್‌ಗೆ ಎಲ್ಲಿಗೆ ಹೋಗೋದು ಅಂತ ಯೋಚನೆ ಬರೋದು ಸಹಜ. ಮೊದಲೆಲ್ಲಾ ಫಸ್ಟ್‌ಡೇಟ್‌ ಎಂದಾಕ್ಷಣ ನೆನಪಿಗೆ ಬರೋದು ಕಾಫಿಡೇ. ಕಾಫಿಡೇಯಲ್ಲಿ ಕ್ಯಾಪುಚಿನೋ ಹೀರುತ್ತಾ ಸಮಯ ಕಳೆಯೋದೇ ಖುಷಿ ಕೊಡ್ತಾ ಇತ್ತು. ಆದರೆ ಈಗ ಹಾಗಲ್ಲ ಕಾಲ ಬದಲಾಗಿದೆ, ಕಾಫಿ ಡೇಗೆ ಹೋಗೋ ಟ್ರೆಂಡ್‌ ಕೂಡ ಹಳೇದಾಗಿದೆ. ಮಾಲ್‌ನಲ್ಲಿ ಟೈಮ್‌ಸ್ಪೆಂಡ್‌ ಮಾಡೋದು, ಫಿಲ್ಮಂಗೆ ಹೋಗೋದು, ಲಂಚ್‌-ಡಿನ್ನರ್‌ಗೆ ಹೋಗೋದು ಬಿಟ್ಟು ಏನೆಲ್ಲಾ ಫಸ್ಟ್‌ಡೇಟ್‌ನಲ್ಲಿ ಏನೆಲ್ಲಾ ಮಾಡಬಹುದು ಅಂತ ನೀವು ಕೇಳಿದ್ರೆ ಇಲ್ಲಿದೆ ಉತ್ತರ.

ನೇಚರ್‌ ವಾಕ್‌

ನಿಮ್ಮ ಸಂಗಾತಿಯ ಜೊತೆ ಪ್ರಕೃತಿಯ ಮಡಿಲಲ್ಲಿ ಕೈ ಕೈ ಹಿಡಿದು ವಾಕ್‌ ಹೋಗುವುದು ರೋಮಾಂಚನಕಾರಿ ಫೀಲ್‌ ನೀಡುತ್ತದೆ. ಇದು ನಿಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಶಾಂತ ವಾತಾವರಣ ಇರುವ ಪಾರ್ಕ್‌ನಂತಹ ಸ್ಥಳ ಆಯ್ದುಕೊಳ್ಳಿ.

ಗೋ ಕಾರ್ಟಿಂಗ್‌

ರೇಸಿಂಗ್ ಪ್ರೇಮಿಗಳು ಅಥವಾ ಥ್ರಿಲ್ಲಿಂಗ್‌ ಕ್ಷಣಗಳನ್ನು ಎಂಜಾಯ್‌ ಮಾಡುವವರು ನಿಮವಾಗಿದ್ದರೆ ಗೋ-ಕಾರ್ಟಿಂಗ್ ನಿಮಗೆ ಹೇಳಿ ಮಾಡಿಸಿದ್ದು. ರೇಸ್‌ನಲ್ಲಿ ಒಬ್ಬರನ್ನ ಒಬ್ಬರು ಹಿಂದೆ ಹಾಕಿಕೊಳ್ಳುತ್ತಾ, ಅಪಹಾಸ್ಯ ಮಾಡಿಕೊಳ್ಳುತ್ತಾ ಮುಂದೆ ಸಾಗುವುದು ಒಂಥರಾ ಥ್ರಿಲ್ಲಿಂಗ್‌ ಎಕ್ಸ್‌ಪಿರಿಯೆನ್ಸ್‌ ಸಿಗುತ್ತದೆ. ಗೋ-ಕಾರ್ಟ್ ರೇಸಿಂಗ್ ನಿಮ್ಮ ಉತ್ಸಾಹವನ್ನು ಹೆಚ್ಚಿಸುತ್ತದೆ ಮತ್ತು ಸಾಹಸಮಯ ಡೇಟಿಂಗ್‌ಗೆ ಇದು ಹೇಳಿ ಮಾಡಿಸಿದ್ದು.

ಟ್ರೆಂಡಿಂಗ್​ ಸುದ್ದಿ

ಪ್ಲಾನಟೋರಿಯಂ

ನಕ್ಷತ್ರ ವೀಕ್ಷಣೆಯು ನಿಮ್ಮ ಫಸ್ಟ್‌ಡೇಟ್‌ಗೆ ಹೇಳಿ ಮಾಡಿಸಿದ್ದು. ಒತ್ತಡದ ಬದುಕಿನಿಂದ ಹೊರ ಬರಲು ಇದು ನಿಮಗೆ ಬೆಸ್ಟ್‌ ಆಯ್ಕೆ ಅನ್ನಿಸುತ್ತದೆ. ತಾರಾಲೋಕದಲ್ಲಿ ನಿಮ್ಮ ಸಂಗಾತಿಯೊಂದಿಗೆ ವಿಹರಿಸುವ ಅನುಭವ ನಿಮಗೆ ಸಿಗುತ್ತದೆ. ಆಕಾಶದ ವಿಸ್ಮಯವನ್ನು ಕಣ್ತುಂಬಿಕೊಂಡು ಖುಷಿ ಅನುಭವಿಸಬಹುದು. ನಿಮ್ಮ ಪ್ರೇಮಿ ಅಥವಾ ಸಂಗಾತಿಗೂ ಈ ಡೇಟ್‌ ಸ್ಪೆಷಲ್‌ ಅನ್ನಿಸಬಹುದು.

ಕರೋಕೆ

ನೀವು ಬಾತ್‌ರೂಮ್‌ ಸಿಂಗರ್‌ ಆಗಿದ್ದರೆ ಕರೋಕೆಯಲ್ಲಿ ನೀವು ಧ್ವನಿಗೂಡಿಸಬಹುದು. ಅಲ್ಲಿ ನೀವು ಮೈಕ್‌ ಹಿಡಿದು ನಿಮ್ಮ ಸಂಗಾತಿಯನ್ನು ಆಶ್ಚರ್ಯಗೊಳಿಸಬಹುದು. ಇದು ನಿಮಗೆ ರೋಮಾನಂಚಕಾರಿ ಡೇಟ್‌ ಅನ್ನಿಸಬಹುದು.

ಪೇಟಿಂಗ್‌

ಒಟ್ಟಾಗಿ ಪೇಟಿಂಗ್‌ ಮಾಡುವ ಮೂಲಕ ನಿಮ್ಮ ಫಸ್ಟ್‌ಡೇಟ್‌ ಅನ್ನು ಅವಿಸ್ಮರಣೀಯವನ್ನಾಗಿಸಬಹುದು. ನಿಮ್ಮ ಸಂಗಾತಿಗೆ ಇಷ್ಟವಾಗುವ ವಿಚಾರಗಳನ್ನು ನಿಮ್ಮ ಚಿತ್ರದಲ್ಲಿ ಮೂಡಿಸಬಹುದು. ಚಿತ್ರಕಲೆಯು ಸೃಜನಾತ್ಮಕ ಚಟುವಟಿಕೆಯಾಗಿದ್ದು ಅದು ನಿಮ್ಮಬ್ಬರಿಗೂ ಇಷ್ಟವಾಗುವುದರಲ್ಲಿ ಅನುಮಾನವಿಲ್ಲ. ಅದಕ್ಕಾಗಿ ನೀವು ಆರ್ಟ್‌ ಗ್ಯಾಲರಿಗಳು, ಪಾರ್ಕ್‌ಗಳನ್ನು ಆಯ್ಕೆ ಮಾಡಿಕೊಳ್ಳಿ.

ಅಮ್ಯೂಸ್‌ಮೆಂಟ್‌ ಪಾರ್ಕ್‌

ಈಗಿನ ಕಾಲದಲ್ಲಿ ಅಮ್ಯೂಸ್‌ಮೆಂಟ್‌ ಪಾರ್ಕ್‌ಗಳಲ್ಲಿ ವಾಟರ್‌ ಗೇಮಿಂಗ್‌ ಸೇರಿದಂತೆ ಇತರ ಚಟುವಟಿಕೆಗಳ ಮೂಲಕ ಎಂಜಾಯ್‌ ಮಾಡುವುದು ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ. ಈ ಮನೋರಂಜನಾ ಉದ್ಯಾನದಲ್ಲಿ ಕೈ ಕೈ ಹಿಡಿದು ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಬಹುದು.

ಐತಿಹಾಸಿಕ ತಾಣಗಳಲ್ಲಿ ಸಮಯ ಕಳೆಯಿರಿ

ಇತಿಹಾಸದ ಬಗ್ಗೆ ತಿಳಿದುಕೊಳ್ಳುವುದು ಎಲ್ಲರಿಗೂ ಇಷ್ಟವಾಗುತ್ತದೆ. ಐತಿಹಾಸಿಕ ತಾಣಗಳಲ್ಲಿ ಒಂದಾಗಿ ಡೇಟ್‌ ಮಾಡುವುದು ಕೂಡ ಥ್ರಿಲ್ಲಿಂಗ್‌ ಎಕ್ಸ್‌ಪಿರಿಯೆನ್ಸ್‌ ನೀಡುತ್ತದೆ. ವಸ್ತುಸಂಗ್ರಹಾಲಯಗಳು, ಹಳೆಯ ಮಾರುಕಟ್ಟೆಗಳು ಮತ್ತು ಐತಿಹಾಸಿಕ ಹೆಗ್ಗುರುತುಗಳಿರುವ ಜಾಗಗಳಿಗೆ ಭೇಟಿ ಮಾಡಿ.

ಒಟ್ಟಾಗಿ ಓದುವುದು

ಓದುವುದು ಮನಸ್ಸಿಗೆ ಖುಷಿ ಕೊಡುತ್ತದೆ. ಇಬ್ಬರೂ ಒಟ್ಟಾಗಿ ಗ್ರಂಥಾಲಯಕ್ಕೆ ಭೇಟಿ ನೀಡಿ ನಿಮ್ಮಿಷ್ಟದ ಪುಸ್ತಕ ಓದಬಹುದು. ಪರಸ್ಪರ ಓದಿನ ಮೂಲಕ ಇಬ್ಬರೂ ನಿಮ್ಮ ಜ್ಞಾನ ಭಂಡಾರವನ್ನು ವೃದ್ಧಿಸಿಕೊಳ್ಳುವ ಜೊತೆಗೆ ಒಟ್ಟಿಗೆ ಸಮಯವನ್ನೂ ಕಳೆಯಬಹುದು.

ನೋಡಿದ್ರಲ್ಲ, ಕಾಫಿ ಡೇ, ಮಾಲ್‌ ಎಲ್ಲಾ ಬಿಟ್ಟು ನಿಮ್ಮ ಫಸ್ಟ್‌ಡೇಟ್‌ ಅನ್ನು ಹೀಗೂ ಎಂಜಾಯ್‌ ಮಾಡಬಹುದು. ನೀವು ನಿಮ್ಮ ಫಸ್ಟ್‌ಡೇಟ್‌ ಹೇಗೆ ಮಾಡಬಹುದು ಅಂತ ಯೋಚಿಸ್ತಾ ಇದ್ರೆ ಈ ಐಡಿಯಾಗಳು ನಿಮಗೆ ಸಹಾಯ ಮಾಡಬಹುದು.