ಕನ್ನಡ ಸುದ್ದಿ  /  ಜೀವನಶೈಲಿ  /  Relationship Tips: ದಂಪತಿಗಳು ಅನ್ಯೋನ್ಯವಾಗಿರೋದು ಹೇಗೆ? ಸುಮಧುರ ದಾಂಪತ್ಯಕ್ಕೆ ಬಾಲಿವುಡ್‌ ಸೆಲೆಬ್ರಿಟಿಗಳು ನೀಡಿದ್ರು ಟಿಪ್ಸ್‌

Relationship Tips: ದಂಪತಿಗಳು ಅನ್ಯೋನ್ಯವಾಗಿರೋದು ಹೇಗೆ? ಸುಮಧುರ ದಾಂಪತ್ಯಕ್ಕೆ ಬಾಲಿವುಡ್‌ ಸೆಲೆಬ್ರಿಟಿಗಳು ನೀಡಿದ್ರು ಟಿಪ್ಸ್‌

ದಾಂಪತ್ಯ ಜೀವನದ ಸುಮಧುರವಾಗಿದ್ದರೆ ಮಾತ್ರ ಜೀವನದಲ್ಲಿ ನೆಮ್ಮದಿ ನೆಲೆಸಲು ಸಾಧ್ಯ. ಪರಸ್ಪರರ ಭಾವನೆಗಳಿಗೆ ಗೌರವ ನೀಡುತ್ತಾ ಪರಸ್ಪರ ಬೇಡಿಕೆಗಳನ್ನು ಪೂರೈಸುತ್ತಾ, ಒಬ್ಬರಿಗೊಬ್ಬರು ಬೆನ್ನೆಲುಬಾಗಿ ನಿಂತಾಗ ಮಾತ್ರ ಯಶಸ್ವಿ ದಾಂಪತ್ಯ ಜೀವನವನ್ನು ಸಾಗಿಸಲು ಸಾಧ್ಯವಿದೆ. ಸೆಲೆಬ್ರಿಟಿ ದಂಪತಿಗಳು ಸಮಧುರ ದಾಂಪತ್ಯಕ್ಕೆ ನೀಡಿದ ಟಿಪ್ಸ್‌ ಇಲ್ಲಿದೆ.

ದಂಪತಿಗಳು ಅನ್ಯೋನ್ಯವಾಗಿರೋದು ಹೇಗೆ? ಸುಮಧುರ ದಾಂಪತ್ಯಕ್ಕೆ ಬಾಲಿವುಡ್‌ ಸೆಲೆಬ್ರಿಟಿಗಳು ನೀಡಿದ್ರು ಟಿಪ್ಸ್‌
ದಂಪತಿಗಳು ಅನ್ಯೋನ್ಯವಾಗಿರೋದು ಹೇಗೆ? ಸುಮಧುರ ದಾಂಪತ್ಯಕ್ಕೆ ಬಾಲಿವುಡ್‌ ಸೆಲೆಬ್ರಿಟಿಗಳು ನೀಡಿದ್ರು ಟಿಪ್ಸ್‌

ಸಿನಿಮಾಗಳಲ್ಲಿ ಬರುವಂತಹ ಲವ್ ಸ್ಟೋರಿ ನಿಜ ಜೀವನದಲ್ಲಿಯೂ ಇರಬೇಕು ಎನ್ನುವ ಆಸೆ ಹಲವರದ್ದು. ಸಿನಿಮಾಗಳಲ್ಲಿ ಅಂತಹ ಮಹಾನ್ ಪ್ರೇಮಕತೆಗಳಲ್ಲಿ ಕಾಣಿಸಿಕೊಳ್ಳುವ ನಟ ನಟಿಯರು ನಿಜ ಜೀವನದಲ್ಲಿಯೂ ಸಾಮಾನ್ಯ ಜನರಿಗೆ ಮಾದರಿಯಾಗಿದ್ದಾರಾ ಎಂದು ಕೇಳಿದರೆ ಕೆಲವರ ವಿಷಯದಲ್ಲಿ ಹೌದು ಎಂದು ಹೇಳಬಹುದು. ಹಾಗಾದರೆ ಬಾಲಿವುಡ್‌ನಲ್ಲಿರುವ ಯಾವ್ಯಾವ ಜೋಡಿಗಳಿಂದ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಎಂತಹ ಪಾಠ ಕಲಿಯಬಹುದು ಎಂಬುದನ್ನು ತಿಳಿಯೋಣ

ಟ್ರೆಂಡಿಂಗ್​ ಸುದ್ದಿ

1. ಗೌರಿ ಖಾನ್ - ಶಾರೂಕ್ ಖಾನ್

ಒಬ್ಬರಿಗೊಬ್ಬರು ಬೆನ್ನೆಲುಬಾಗಿ ನಿಲ್ಲುವುದು: ಮೂರು ದಶಕಗಳಿಂದ ಯಶಸ್ವಿ ದಾಂಪತ್ಯ ಜೀವನವನ್ನು ನಡೆಸಿಕೊಂಡು ಬರುತ್ತಿರುವ ಗೌರಿ ಖಾನ್ ಹಾಗೂ ಶಾರೂಕ್ ಖಾನ್ ಸಾಕಷ್ಟು ರೀತಿಯಲ್ಲಿ ಮಾದರಿ ದಂಪತಿ ಎನಿಸುತ್ತಾರೆ. ಗೌರಿ ಖಾನ್ ಶ್ರೀಮಂತ ಕುಟುಂಬದ ಹಿನ್ನೆಲೆವುಳ್ಳವರಾಗಿದ್ದರೆ ಶಾರೂಕ್ ಖಾನ್ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದುಬಂದವರು. ತಮ್ಮ ವೃತ್ತಿಜೀವನದಲ್ಲಿ ಆರಂಭದಿಂದ ಉತ್ತುಂಗದವರೆಗೂ ಈ ಜೋಡಿ ಒಬ್ಬರಿಗೊಬ್ಬರು ಬೆನ್ನೆಲುಬಾಗಿ ನಿಂತಿದೆ. ಶಾರೂಕ್‌ ಖಾನ್‌ ಅವರ ಯಶಸ್ವಿ ಸಿನಿ ಜೀವನಕ್ಕೆ ಗೌರಿ ಖಾನ್ ಕಾರಣರಾದರೆ ಗೌರಿ ಖಾನ್‌ರ ವಿವಿಧ ಉದ್ಯಮಗಳಿಗೆ ಶಾರೂಕ್ ಬೆಂಬಲ ಸೂಚಿಸುತ್ತಲೇ ಬಂದಿದ್ದಾರೆ. ಅನ್ಯಧರ್ಮಕ್ಕೆ ಸೇರಿದ ಈ ದಂಪತಿ ಇಂದಿಗೂ ಪರಸ್ಪರ ಇಬ್ಬರ ಧರ್ಮವನ್ನು ಗೌರವಿಸಿಕೊಂಡು ಬರುವ ಮೂಲಕವೂ ಅನೇಕರಿಗೆ ಮಾದರಿಯಾಗಿದ್ದಾರೆ.

2. ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್

ಪೋಷಕತ್ವದ ಜವಾಬ್ದಾರಿಯಲ್ಲಿ ಸಮನಾದ ಹಂಚಿಕೆ: ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಇಬ್ಬರೂ ಯಶಸ್ವಿ ತಾರೆಯರು ಅನ್ನೋದ್ರಲ್ಲಿ ಎರಡು ಮಾತಿಲ್ಲ. ನಟಿ ಆಲಿಯಾ ಭಟ್ ತಮ್ಮ ಸಿನಿ ಜೀವನದ ಉತ್ತುಂಗದಲ್ಲಿ ಇರುವಾಗಲೇ ಗರ್ಭಿಣಿಯಾಗಿ ರಾಹಾ ಎಂಬ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಜೋಡಿ ತಮ್ಮ ಮಗುವಿನ ಜೊತೆಯಲ್ಲಿ ಸಾಕಷ್ಟು ಬಾರಿ ಕ್ಯಾಮರಾ ಕಣ್ಣಿಗೆ ಕಾಣಿಸಿಕೊಂಡಿವೆ. ಇಬ್ಬರಲ್ಲಿ ಒಬ್ಬರು ಎಂದಿಗೂ ತಮ್ಮ ಮಗುವಿನೊಂದಿಗೆ ಇರುತ್ತಾರೆ. ಆಲಿಯಾರಂತೆಯೇ ಸಮನಾಗಿ ರಣಬೀರ್ ಕೂಡ ತಮ್ಮ ಮಗಳ ಜೊತೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ವೃತ್ತಿ ಜೀವನದ ಒತ್ತಡದ ನಡುವೆಯೂ ಈ ದಂಪತಿ ಎಂದಿಗೂ ತಮ್ಮ ಮಗಳ ಜವಾಬ್ದಾರಿಯನ್ನು ಮರೆತಿಲ್ಲ.

3. ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಖಾನ್

ಪರಸ್ಪರರ ವ್ಯತ್ಯಾಸಗಳನ್ನು ಗೌರವಿಸುವುದು: ತೀರಾ ಮುಕ್ತವಾಗಿ ಮಾತನಾಡುವ ಕರೀನಾ ಹಾಗೂ ಎಷ್ಟು ಬೇಕೋ ಅಷ್ಟೇ ಬೆರೆಯುವ ಸೈಫ್ ಅಲಿಖಾನ್ ತಮ್ಮ ವ್ಯಕ್ತಿತ್ವದ ವಿಚಾರಕ್ಕೆ ಬಂದಾಗ ಅಜಗಜಾಂತರ ವ್ಯತ್ಯಾಸವನ್ನು ಹೊಂದಿದ್ದಾರೆ. ಅಲ್ಲದೇ ಇವರಿಬ್ಬರ ನಡುವೆ 10 ವರ್ಷಗಳ ವಯಸ್ಸಿನ ಅಂತರ ಕೂಡ ಇದೆ. ಇಬ್ಬರೂ ವಿಭಿನ್ನ ಧರ್ಮಕ್ಕೆ ಸೇರಿದವರು. ಆದರೂ ಇಬ್ಬರೂ ಇಬ್ಬರ ಧರ್ಮವನ್ನು ಗೌರವಿಸುತ್ತಾ, ಇಬ್ಬರ ವ್ಯಕ್ತಿತ್ವಕ್ಕೂ ಬೆಲೆ ನೀಡುತ್ತಾ ಯಶಸ್ವಿ ದಾಂಪತ್ಯ ಜೀವನವನ್ನು ನಡೆಸುತ್ತಿದ್ದಾರೆ.

4. ಅಕ್ಷಯ್ ಕುಮಾರ್ ಹಾಗೂ ಟ್ವಿಂಕಲ್ ಖನ್ನಾ

ಪರಸ್ಪರರ ವೃತ್ತಿ ಬದುಕಿಗೆ ಗೌರವ ನೀಡುವುದು: ಅಕ್ಷಯ್ ಕುಮಾರ್ ಬಾಲಿವುಡ್‌ನ ಅತ್ಯಂತ ಶ್ರಮಜೀವಿ ನಟರ ಪೈಕಿ ಒಬ್ಬರು. ಇತ್ತ ಟ್ವಿಂಕಲ್ ಖನ್ನಾ ಯಶಸ್ವಿ ಅಂಕಣಗಾರ್ತಿಯಾಗಿದ್ದಾರೆ. ಇಬ್ಬರ ವೃತ್ತಿ ಜೀವನವೂ ಭಿನ್ನವಾಗಿದೆ. ಆದರೂ ಸಹ ಇಬ್ಬರೂ ಪರಸ್ಪರ ತಮ್ಮ ವೃತ್ತಿ ಬದುಕಿಗೆ ಗೌರವ ನೀಡುವ ಕಾರ್ಯ ಮಾಡುತ್ತಿದ್ದಾರೆ. ಒತ್ತಡದ ಕೆಲಸದ ನಡುವೆಯೂ ಅಕ್ಷಯ್ ವಾರದಲ್ಲಿ ಒಂದು ದಿನವನ್ನು ಕುಟುಂಬಕ್ಕಾಗಿ ಮೀಸಲಿಡುತ್ತಾರೆ ಎನ್ನಲಾಗಿದೆ.

5. ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ

ಪ್ರೀತಿ ವ್ಯಕ್ತಪಡಿಸುವ ಪರಿ: ಈ ದಂಪತಿ ಸದ್ಯ ತಮ್ಮ ಮೊದಲನೇ ಮಗುವಿನ ನಿರೀಕ್ಷೆಯಲ್ಲಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಸಾಕಷ್ಟು ವಿಡಿಯೊಗಳಲ್ಲಿ ನಟ ರಣವೀರ್ ಸಿಂಗ್ ಹೇಗೆ ತಮ್ಮ ಪತ್ನಿ ದೀಪಿಕಾ ಪಡುಕೋಣೆ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಾರೆ ಎನ್ನುವುದನ್ನು ಪ್ರತಿಯೊಬ್ಬರೂ ಗಮನಿಸಿರಬಹುದು. ಪರಸ್ಪರರ ಫೋಟೋಗಳಿಗೆ ಇನ್ಸ್ಟಾಗ್ರಾಂನಲ್ಲಿ ಕಾಮೆಂಟ್ ಹಾಕುವುದರಿಂದ ಹಿಡಿದು ಈ ದಂಪತಿ ತಮ್ಮ ಭಾವನೆಗಳನ್ನು ಹೊರಹಾಕುವುದರಲ್ಲಿ ಎಲ್ಲಿಯೂ ಹಿಂದೆ ಬಿದ್ದಿಲ್ಲ. ಜೀವನದ ಪ್ರತಿ ಹಂತದಲ್ಲಿಯೂ ದಂಪತಿಯು ಒಬ್ಬರಿಗೊಬ್ಬರು ನೀಡುವ ಮೆಚ್ಚುಗೆಯ ಮಾತು, ಪ್ರೀತಿಯ ಭಾವನೆ ಖಂಡಿತವಾಗಿಯೂ ಆ ಸಂಬಂಧವನ್ನು ಇನ್ನಷ್ಟು ಬಿಗಿಗೊಳಿಸುತ್ತದೆ ಎಂಬುದಕ್ಕೆ ಈ ಜೋಡಿಯೇ ಸಾಕ್ಷಿ.

ಈ ಎಲ್ಲಾ ಜೋಡಿಗಳು ರೀಲ್‌ನಲ್ಲಿ ಮಾತ್ರವಲ್ಲ, ರಿಯಲ್‌ ಲೈಫ್‌ನಲ್ಲೂ ಬೆಸ್ಟ್‌ ಕಪಲ್‌ ಅನ್ನಿಸಿಕೊಂಡಿದ್ದಾರೆ. ಸುಮಧುರ ದಾಂಪತ್ಯಕ್ಕೆ ಇವರ ಈ ನಡವಳಿಕೆಗಳಲ್ಲದೇ ಇನ್ನೇನು ಬೇಕು ಅಲ್ವಾ?

ವಿಭಾಗ