ಹುಡುಗಿಯರು ಮೊದಲು ಲವ್ ಪ್ರಪೋಸ್ ಮಾಡೋಲ್ಲ ಯಾಕೆ; ಈ ವಿಚಾರ ತಿಳಿದ್ರೆ ಖಂಡಿತ ನೀವು ಅಚ್ಚರಿ ಪಡ್ತೀರಿ
ಪ್ರೀತಿಯಲ್ಲಿ ಹುಡುಗರೂ ಬೀಳ್ತಾರೆ, ಹುಡುಗಿಯರೂ ಬೀಳ್ತಾರೆ. ಆದರೆ ಹುಡುಗರೇ ಮೊದಲು ಪ್ರಪೋಸ್ ಮಾಡೋದು. ಹುಡುಗಿಗೆ ಇಷ್ಟ ಇದ್ರೂ ಅವಳು ಹುಡುಗನೇ ಲವ್ ಪ್ರಪೋಸ್ ಮಾಡ್ಲಿ ಎಂದು ಕಾಯುತ್ತಾಳೆ. ಹಾಗಾದರೆ ಹುಡುಗಿಯರೇಕೆ ಮೊದಲು ಲವ್ ಪ್ರಪೋಸ್ ಮಾಡೊಲ್ಲ, ಇದರ ಹಿಂದಿನ ಅಚ್ಚರಿ ಸಂಗತಿಯಿದು.

ಇಂದಿನ ದಿನಮಾನದಲ್ಲಿ ಹೆಣ್ಣುಮಕ್ಕಳು ಎಲ್ಲಾ ವಿಚಾರಗಳಲ್ಲೂ ಮೇಲುಗೈ ಸಾಧಿಸಿದ್ದಾರೆ, ಹೆಣ್ಣುಮಕ್ಕಳು ಕಾಲಿಡದ ಕ್ಷೇತ್ರವೇ ಇಲ್ಲ. ಆದರೆ ಲವ್ ಪ್ರಪೋಸ್ ಅಥವಾ ಪ್ರೇಮ ನಿವೇದನೆಯ ವಿಚಾರಕ್ಕೆ ಬಂದಾಗ ಮಾತ್ರ ಹೆಣ್ಣುಮಕ್ಕಳು ಹಿಂದೇಟು ಹಾಕುತ್ತಾರೆ. ಹೆಣ್ಣುಮಕ್ಕಳು ಯಾವಾಗಲೂ ತಾವೇ ಮೊದಲು ಪ್ರಪೋಸ್ ಮಾಡುವುದಿಲ್ಲ. ಗಂಡುಮಕ್ಕಳೇ ಪ್ರಪೋಸ್ ಮಾಡಲಿ ಎಂದು ಕಾಯುತ್ತಾರೆ. ಬೆಟ್ಟದಷ್ಟು ಪ್ರೀತಿ ಇದ್ದರೂ ಹುಡುಗನೇ ಮೊದಲು ಪ್ರಪೋಸ್ ಮಾಡಲಿ ಎಂದು ಕಾಯುತ್ತಾರೆ. ಹಾಗಾದರೆ ಹುಡುಗಿಯರು ಯಾಕೆ ಮೊದಲು ಲವ್ ಪ್ರಪೋಸ್ ಮಾಡುವುದಿಲ್ಲ ಎಂಬುದನ್ನು ತಿಳಿಯಿರಿ.
ನಿರಾಕರಣೆ ಸಹಿಸಲು ಸಾಧ್ಯವಾಗದೇ ಇರುವುದು
ಹುಡುಗಿಯರೇ ಮೊದಲು ಪ್ರಪೋಸ್ ಮಾಡಿದರೆ ಒಂದೊಮ್ಮೆ ಹುಡುಗ ಅವರ ಪ್ರೀತಿಯನ್ನು ನಿರಾಕರಿಸಿದರೆ? ಹುಡುಗಿಯರು ನಿರಕಾರಣೆಯನ್ನು ಸಹಿಸುವುದಿಲ್ಲ. ಇದು ಅವರನ್ನು ಬಹಳ ನೋಯಿಸುತ್ತದೆ. ಮಾನಸಿಕವಾಗಿ ಹಿಂಸಿಸುತ್ತದೆ. ಪ್ರೀತಿಯಲ್ಲಿ ತಿರಸ್ಕರಿಸಲ್ಪಟ್ಟ ಹುಡುಗಿ ಭಾವನಾತ್ಮಕವಾಗಿ ಖಿನ್ನತೆಗೆ ಒಳಗಾಗುತ್ತಾಳೆ, ಅದಕ್ಕೆ ಆಕೆ ಪ್ರಪೋಸ್ ಮಾಡಲು ಹಿಂಜರಿಯುತ್ತಾಳೆ.
ಸ್ವಾಭಿಮಾನಕ್ಕೆ ಕಳಂಕ
ಹುಡುಗಿಗೆ ಒಬ್ಬ ಹುಡುಗನ ಮೇಲೆ ಎಷ್ಟೇ ಪ್ರೀತಿ ಇದ್ದರೂ ಅವನೇ ಮೊದಲು ಪ್ರಪೋಸ್ ಮಾಡಲಿ ಎಂದು ಕಾಯುತ್ತಾಳೆ. ಅದಕ್ಕೆ ಕಾರಣ ಸ್ವಾಭಿಮಾನ. ಎಲ್ಲಿ ತಾವೇ ಮೊದಲು ಪ್ರಪೋಸ್ ಮಾಡಿದರೆ ತಮ್ಮ ಸ್ವಾಭಿಮಾನಕ್ಕೆ ಅಡ್ಡಿ ಬರುವುದೋ ಎಂಬ ಆತಂಕ ಅವರನ್ನು ಕಾಡಬಹುದು. ತಾವಾಗಿಯೇ ಪ್ರಪೋಸ್ ಮಾಡಿದರೆ ತಮಗೆ ಬೆಲೆ ಇರುವುದು, ಹುಡುಗ ತನಗೆ ಗೌರವ ನೀಡುವುದಿಲ್ಲ ಎಂಬ ಆತಂಕ ಹುಡುಗಿಯ ಮನದಲ್ಲಿ ಇರುತ್ತದೆ. ಎಲ್ಲಾದರೂ ತಾವೇ ಪ್ರಪೋಸ್ ಮಾಡಿದರೆ ಅವರ ಎದುರು ತಲೆ ಬಾಗಬೇಕಾಗುತ್ತದೆ ಎಂದು ಎಂಬ ಮನೋಭಾವವು ಹುಡುಗಿಗೆ ತಾನಾಗಿಯೇ ಪ್ರಪೋಸ್ ಮಾಡಲು ಅಡ್ಡಿ ಬರಲು ಅಂಶವಾಗಿದೆ.
ಬೋಲ್ಡ್ ಅಂದುಕೊಂಡರೆ ಎಂಬ ಭಯ
ಸಮಾಜದಲ್ಲಿ ಹೆಣ್ಣುಮಕ್ಕಳ ಬಗ್ಗೆ ಕೆಲವು ನಂಬಿಕೆಗಳಿವೆ. ಅವರು ಹೇಗಿರಬೇಕು ಎಂಬುದನ್ನು ಸಮಾಜವೂ ನಿರ್ಧರಿಸುತ್ತದೆ. ತಮ್ಮ ಆಯ್ಕೆಯ ಹುಡುಗನಿಗೆ ಮೊದಲು ಪ್ರಪೋಸ್ ಮಾಡುವ ಹುಡುಗಿಯರಿಗೆ ಬೋಲ್ಡ್ ಎಂಬ ಟ್ಯಾಗ್ ನೀಡಲಾಗುತ್ತದೆ. ಬೋಲ್ಡ್ ಹುಡುಗಿಯಂತೆ ಕಾಣಲು ಇಷ್ಟವಿಲ್ಲದಿದ್ದರೂ ಅನೇಕ ಹುಡುಗಿಯರು ತಮ್ಮ ಪ್ರೀತಿಯ ಕೊರತೆಯನ್ನು ಮರೆಮಾಚುತ್ತಾರೆ. ಹುಡುಗನೇ ಪ್ರಪೋಸ್ ಮಾಡುವವರೆಗೂ ಅವರು ಕಾಯುತ್ತಾರೆ. ಬೋಲ್ಡ್, ಗಂಡುಬೀರಿ ಎನ್ನುವ ಪಟ್ಟ ಬರುತ್ತದೆ ಎನ್ನುವ ಕಾರಣಕ್ಕೆ ಆದುದರಿಂದಲೇ ಅವಳು ತನ್ನ ಪ್ರೀತಿಯನ್ನು ಯಾವ ಹುಡುಗನ ಬಳಿಯೂ ಹೇಳಿಕೊಳ್ಳುವುದಿಲ್ಲ.
ರಾಜಕುಮಾರಿಯ ಫೀಲಿಂಗ್
ಹುಡುಗನು ಹುಡುಗಿಗೆ ಪ್ರಪೋಸ್ ಮಾಡುವ ರೀತಿಯು ಅವಳಿಗೆ ಅವಳು ರಾಜಕುಮಾರಿ ಎನ್ನುವ ಭಾವನೆ ಬರುವಂತೆ ಮಾಡುತ್ತದೆ. ಯಾಕೆಂದರೆ ಹುಡುಗರು ಪ್ರಪೋಸ್ ಮಾಡುವಾಗ ಸಾಮಾನ್ಯವಾಗಿ ಅದ್ಭುತ ಸನ್ನಿವೇಶಗಳನ್ನು ಸೃಷ್ಟಿ ಮಾಡುತ್ತಾರೆ. ಇದು ಹುಡುಗಿಯರಿಗೆ ತಾವೊಂದು ರಾಜಕುಮಾರಿ ಎಂಬಂತಹ ಭಾವನೆ ಮೂಡಲು ಕಾರಣವಾಗುತ್ತದೆ.
ನೋಡಿದ್ರಲ್ಲ, ಹುಡುಗಿಯರು ಹುಡುಗರೇ ಮೊದಲು ಪ್ರಪೋಸ್ ಮಾಡಲಿ ಎಂದು ಕಾಯುವುದು ಈ ಕಾರಣಕ್ಕೆ. ಗಂಡುಮಕ್ಕಳೇ ನೀವು ಯಾವುದೇ ಹುಡುಗಿಯನ್ನ ಪ್ರೀತಿಸುತ್ತಿದ್ದರೆ ನೀವೇ ಮೊದಲು ಹೋಗಿ ಅವರಿಗೆ ಪ್ರಪೋಸ್ ಮಾಡಿ, ಅವರಾಗಿಯೇ ಹೇಳಲಿ ಎಂದು ಕಾಯುವುದು ವ್ಯರ್ಥ ನೆನಪಿರಲಿ.
ವಿಭಾಗ