ವೈವಾಹಿಕ ಜೀವನದಲ್ಲಿ ಸದಾ ಸಂತೋಷ, ನೆಮ್ಮದಿ ಇರಬೇಕು ಅಂದ್ರೆ 10 ಟಿಪ್ಸ್ ಪಾಲಿಸಿ; ಸುಖ ಸಂಸಾರದ ಸೂತ್ರಗಳಿವು
ಮದುವೆಯಾದಾಗ ಎಲ್ಲರೂ ಹ್ಯಾಪಿ ಮ್ಯಾರಿಡ್ ಲೈಫ್ ಎಂದು ಹಾರೈಸುತ್ತಾರೆ. ಆದರೆ ಹಾರೈಸಿದಷ್ಟು ಸುಲಭವಲ್ಲ ಸಂಸಾರದ ಬಂಡಿ ಸಾಗಿಸುವುದು. ಮದುವೆ ಎಂಬ ಸಂಬಂಧವು ಸದಾ ಸಂತೋಷ, ನೆಮ್ಮದಿಯಿಂದ ಕೂಡಿರಬೇಕು ಅಂದ್ರೆ ಗಂಡ–ಹೆಂಡತಿ ಇಬ್ಬರೂ ಕೆಲವು ಸೂತ್ರಗಳನ್ನು ಪಾಲಿಸಬೇಕು. ಆಗ ಮಾತ್ರ ವೈವಾಹಿಕ ಜೀವನವೆಂಬ ನೌಕೆ ಎಲ್ಲೂ ತಡೆ ಇಲ್ಲದೆ ಸಾಗಲು ಸಾಧ್ಯ.
ಮದುವೆ ಎಂಬುದು ಗಂಡ–ಹೆಂಡತಿ ಇಬ್ಬರು ಸಪ್ತಪದಿ ತುಳಿದು ಮುಂದಿನ ಹೆಜ್ಜೆಗಳನ್ನು ಬದುಕಿನಲ್ಲಿ ಜೊತೆಯಾಗಿ ಕಳೆಯೋಣ ಎಂದು ನಿರ್ಧಾರ ಮಾಡುವ ಒಂದು ಸುಮಧುರ ಅನುಬಂಧ. ಸಂಸಾರವೆಂಬ ನೌಕೆ ಯಾವುದೇ ಗಾಳಿ, ಮಳೆಗೆ ಹೆದರದಂತೆ ನಿರಂತರವಾಗಿ ಸಾಗಬೇಕು ಎಂದು ಗಂಡ–ಹೆಂಡತಿ ನಡುವೆ ಪ್ರೀತಿ, ಆತ್ಮೀಯತೆ, ನಂಬಿಕೆ, ಅನ್ಯೋನ್ಯತೆ, ಕಾಳಜಿ ಈ ಎಲ್ಲವೂ ಮುಖ್ಯವಾಗುತ್ತದೆ.
ಒಮ್ಮೆ ಮದುವೆ ಅಂತಾಗಿ ಗಂಡ–ಹೆಂಡತಿ ಜೊತೆಯಾದರೆ ಕಷ್ಟವೋ, ಸುಖವೋ ಇಡೀ ಬಾಳಿಗೆ ಅವರೇ ಸಂಗಾತಿ ಎಂದರ್ಥ. ಆದರೆ ಈಗೀಗ ಮದುವೆಯ ಪರಿಕಲ್ಪನೆಗಳು ಬದಲಾಗಿವೆ. ಮದುವೆಯಾಗಿ ಒಂದು ವರ್ಷ ಕೂಡ ಗಂಡ–ಹೆಂಡತಿ ಜೊತೆಯಾಗಿ ಸಂಸಾರ ಮಾಡುವುದಿಲ್ಲ. ಕೆಲವೇ ದಿನಗಳಲ್ಲಿ ಸಂಸಾರ ಬೇಸರವಾಗಿ ವಿಚ್ಛೇದನದ ಹಂತಕ್ಕೆ ತಲುಪುತ್ತದೆ. ಇನ್ನೂ ಕೆಲವರು ಜೊತೆಗೆ ಇದ್ದು ಸಮಾಜ, ಮನೆಯವರ ಕಣ್ಣಿಗೆ ಸಂತೋಷವಾಗಿಒ ಇದ್ದಂತೆ ನಾಟಕವಾಡುತ್ತಾರೆ. ಸಂಸಾರವೆಂಬ ಗಾಳಿಪಟದ ಸೂತ್ರ ಎಂದಿಗೂ ಹರಿಯದೇ ಸುಸೂತ್ರವಾಗಿ ಇರಬೇಕು ಅಂದ್ರೆ ಈ ಕೆಲವು ಸೂತ್ರಗಳನ್ನು ಗಂಡ–ಹೆಂಡತಿ ಇಬ್ಬರೂ ಪಾಲಿಸಬೇಕು. ಈ ಸೂತ್ರಗಳೇ ನಿಮ್ಮ ಸುಖ ಸಂಸಾರಕ್ಕೆ ಬುನಾದಿ ಎಂದರೂ ತಪ್ಪಲ್ಲ.
ಸಂವಹನ
ಸಂಬಂಧದಲ್ಲಿ ಸಂವಹನ ಬಹಳ ಮುಖ್ಯವಾಗುತ್ತದೆ. ಯಾವುದೇ ವಿಚಾರವಿರಲಿ ಗಂಡ–ಹೆಂಡತಿ ಮುಕ್ತವಾಗಿ ಮಾತನಾಡಬೇಕು. ತಮ್ಮಿಬ್ಬರ ನಡುವೆ ಯಾವುದೇ ಭಿನ್ನಭಿಪ್ರಾಯ ಎದುರಾದರೂ ಮಾತನಾಡುವ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಮಾತನಾಡದೇ ಇದ್ದರೆ ಖಂಡಿತ ಯಾವುದು ಬಗೆ ಹರಿಯುವುದಿಲ್ಲ ನೆನಪಿರಲಿ. ಕಷ್ಟ–ಸುಖ, ನೋವು–ನಲಿವುಗಳನ್ನು ಹಂಚಿಕೊಳ್ಳುವ ಮೂಲಕ ಸಂಬಂಧವನ್ನು ಸುಂದರವಾಗಿಸಿಕೊಳ್ಳಬೇಕು.
ಆತ್ಮೀಯತೆ
ಮದುವೆಯ ಎನ್ನುವುದು ಗಂಡು–ಹೆಣ್ಣಿನ ನಡುವೆ ಒಂದು ಸಮಧುರ ಅನುಬಂಧ ಕಟ್ಟಿಕೊಡುವ ನಂಟು. ಮದುವೆಯಾದ ಮೇಲೆ ಒಬ್ಬರ ಮೇಲೆ ಒಬ್ಬರು ಒಲವು ಹೊಂದಿರಬೇಕು. ಒಬ್ಬರ ನಡುವೆ ಆತ್ಮೀಯ ಭಾವ ಇರಬೇಕು. ಪ್ರೀತಿಯಿಂದ ಮಾತುಗಳನ್ನಾಡಬೇಕು. ದೈಹಿಕವಾಗಿ ಒಂದಾಗುವುದು ಕೂಡ ಸಾಂಸಾರಿಕ ಬಂಧವನ್ನು ಗಟ್ಟಿಗೊಳಿಸುವ ಪ್ರಕ್ರಿಯೆಯಾಗಿದೆ.
ಇಬ್ಬರು ಜೊತೆಯಾಗಿ ಸಮಯ ಕಳೆಯುವುದು
ಮದುವೆಯಾದ ಮೇಲೆ ಗಂಡ ತಾನಾಯಿತು ತನ್ನ ಪಾಡಾಯಿತು, ಹೆಂಡತಿ ಕೂಡ ತನ್ನ ಪಾಡಿಗೆ ಇದ್ದರೆ ಸಂಸಾರದಲ್ಲಿ ಬಿರುಕು ಮೂಡುವುದು ಖಂಡಿತ. ಅದರ ಬದಲು ಇಬ್ಬರೂ ಜೊತೆಯಾಗಿ ಒಂದಿಷ್ಟು ಸುಂದರ ಕ್ಷಣಗಳನ್ನು ಕಳೆಯಬೇಕು. ಇದನ್ನು ಮದುವೆಯಾದ ಆರಂಭಕ್ಕೆ ಮಾತ್ರ ಸೀಮಿತವಾಗಿಸದೇ ಆಗಾಗ ನಿಮಗಾಗಿ ಒಂದಿಷ್ಟು ಸಮಯ ಹೊಂದಿಕೊಳ್ಳಬೇಕು. ಜೊತೆಯಾಗಿ ಸಮಯ ಕಳೆಯುವುದರಿಂದ ಒಬ್ಬನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಇಬ್ಬರ ನಡುವೆ ಆತ್ಮೀಯತೆ ಹೆಚ್ಚುತ್ತದೆ.
ಗೌರವ ಕೊಡುವುದು
ಗಂಡ ಹೆಂಡತಿಗೆ, ಹೆಂಡತಿಗೆ ಗಂಡನಿಗೆ ಗೌರವ ಕೊಡುವುದು ಕೂಡ ಬಹಳ ಮುಖ್ಯವಾಗುತ್ತದೆ. ಅವಳು ಹೆಣ್ಣು ನಾನು ನಾನ್ಯಾಕೆ ಅವಳಿಗೆ ಗೌರವ ಕೊಡಬೇಕು ಎನ್ನುವ ಭಾವ ಎಂದಿಗೂ ಇರಬಾರದು. ಒಬ್ಬರು ಇನ್ನೊಬ್ಬರ ಭಾವನೆಗಳಿಗೆ ಗೌರವ ಕೊಟ್ಟಾಗ ಮಾತ್ರ ಸಂಸಾರ ಖುಷಿಯಿಂದ ಸಾಗಲು ಸಾಧ್ಯ.
ನಂಬಿಕೆ
ಸಂಸಾರವಾಗಲಿ, ಸಂಬಂಧವಾಗಲಿ ಅದಕ್ಕೆ ನಂಬಿಕೆಯೇ ಬುನಾದಿ. ನಂಬಿಕೆಯಿಲ್ಲ ಎಂದರೆ ಸಂಸಾರದ ಬುಡ ಅಲ್ಲಾಡಲು ಶುರುವಾಗುತ್ತದೆ. ಸಂಬಂಧಕ್ಕೆ ನಂಬಿಕೆ ಎನ್ನುವುದೇ ಪಾಯ. ಒಮ್ಮೆ ನಂಬಿಕೆ ಕೆಟ್ಟರೆ ಮತ್ತೆ ಸಂಸಾರವನ್ನು ಸರಿದೂಗಿಸಿಕೊಂಡು ಹೋಗುವುದು ಕಷ್ಟವಾಗುತ್ತದೆ. ಹಾಗಾಗಿ ನಿಮ್ಮ ಸಂಗಾತಿಯ ಮೇಲೆ ನಂಬಿಕೆ ಇರಿಸಿಕೊಳ್ಳಿ.
ಕ್ಷಮಾ ಗುಣ ಇರಲಿ
ತಪ್ಪು ಎಲ್ಲರೂ ಮಾಡುತ್ತಾರೆ. ಕೆಲವೊಮ್ಮೆ ತಿಳಿಯದೇ ತಪ್ಪಾಗುತ್ತದೆ. ಕೆಲವೊಮ್ಮೆ ತಿಳಿದು ತಪ್ಪಾಗುತ್ತದೆ. ಹಾಗಂತ ಮಾಡಿದ ತಪ್ಪನ್ನು ದೊಡ್ಡದು ಮಾಡುವ ಬದಲು ತಪ್ಪನ್ನ ಕ್ಷಮಿಸಿ, ಮುಂದೆ ಹೀಗಾಗದಂತೆ ನೋಡಿಕೊ ಎಂದು ಹೇಳುವ ಗುಣ ಇರಬೇಕು. ಒಬ್ಬರ ಮೇಲೆ ಒಬ್ಬರಿಗೆ ಗೌರವ, ನಂಬಿಕೆ, ಪ್ರೀತಿ ಎಲ್ಲರೂ ಹೆಚ್ಚಾಗುತ್ತದೆ.
ಮರೆತು ಬಿಡುವುದನ್ನ ಕಲಿಯಿರಿ
ಮರೆತು ಬಿಡುವುದು ಎಂದರೆ ಒಳ್ಳೆಯ ಕ್ಷಣಗಳನ್ನಲ್ಲ. ಜೀವನದಲ್ಲಿ ಯಾರು ತಪ್ಪು ಮಾಡುವುದಿಲ್ಲ ಹೇಳಿ. ನಿಮ್ಮ ಸಂಗಾತಿಯಿಂದ ನಿಮ್ಮ ನೋವಾಗಿರಬಹುದು. ನಿಮಗೆ ಅವರ ಮೇಲೆ ಯಾವುದೋ ಕಾರಣಕ್ಕೆ ಬೇಸರ ಮೂಡಿರಬಹುದು. ಆದರೆ ಇದ್ಯಾವುದನ್ನೂ ಮನಸ್ಸಿಗೆ ಹಚ್ಚಿಕೊಳ್ಳದಿರಿ. ಭೂತಕಾಲದ ಘಟನೆಗಳನ್ನು ವರ್ತಮಾನ ಹಾಗೂ ಭವಿಷ್ಯವನ್ನು ಹಾಳು ಮಾಡಲು ಬಿಡದಿರಿ. ಸಂಗಾತಿ ಮಾಡಿದ ತಪ್ಪುಗಳನ್ನು ಆ ಕ್ಷಣಕ್ಕೆ ಮರೆತು ಮುಂದೆ ಆಗ ನಿಮ್ಮ ಬದುಕು ಸುಂದರವಾಗುತ್ತದೆ.
ಈ ಎಲ್ಲಾ ಸೂತ್ರಗಳನ್ನು ಅನುಸರಿಸುವ ಮೂಲಕ ನೀವು ನಿಮ್ಮ ದಾಂಪತ್ಯ ಜೀವನವನ್ನು ಸದಾ ಖುಷಿಯಾಗಿ ಇರಿಸುವಂತೆ ಮಾಡಬಹುದು. ಇದರಿಂದ ನಿಮಗೆ ಇಂದಿಗೂ ಸಾಂಸಾರಿಕ ಜೀವನದಲ್ಲಿ ಬೇಸರ ಮೂಡುವುದಿಲ್ಲ, ನಿಮ್ಮಬ್ಬರ ನಡುವೆ ಮನಸ್ತಾಪ ಮೂಡುವುದಿಲ್ಲ.
ವಿಭಾಗ