Relationship: ವಿವಾಹೇತರ ಸಂಬಂಧಗಳಲ್ಲಿ ಇದ್ಯಂತೆ 8 ವಿಧ: ವಿವಾಹಿತರ ಮನಸ್ಸೇಕೆ ಜಾರುತ್ತೆ, ತಿಳಿದಿರಬೇಕಾದ ವಿಷಯ ಇದು-relationship know about 8 types of extramarital affairs one night stand love addict affair sex addict affair arc ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Relationship: ವಿವಾಹೇತರ ಸಂಬಂಧಗಳಲ್ಲಿ ಇದ್ಯಂತೆ 8 ವಿಧ: ವಿವಾಹಿತರ ಮನಸ್ಸೇಕೆ ಜಾರುತ್ತೆ, ತಿಳಿದಿರಬೇಕಾದ ವಿಷಯ ಇದು

Relationship: ವಿವಾಹೇತರ ಸಂಬಂಧಗಳಲ್ಲಿ ಇದ್ಯಂತೆ 8 ವಿಧ: ವಿವಾಹಿತರ ಮನಸ್ಸೇಕೆ ಜಾರುತ್ತೆ, ತಿಳಿದಿರಬೇಕಾದ ವಿಷಯ ಇದು

Relationship: ವಿವಾಹಿತರು ಹೊಂದಿರುವ ವಿವಾಹೇತರ ಸಂಬಂಧಗಳ ಬಗ್ಗೆ ನಾವು ಆಗಾಗ ಕೇಳಿರುತ್ತವೆ. ಆದರೆ ಅದರಲ್ಲೂ 8 ರೀತಿಯ ಸಂಬಂಧಗಳಿವೆಯಂತೆ. ಅದರ ಬಗ್ಗೆ ನಿಮಗೆ ಗೊತ್ತಾ? ಪ್ರತಿ ವಿವಾಹೇತರ ಸಂಬಂಧದ ಹಿಂದೆಯೂ ಒಂದೊಂದು ಅರ್ಥ ಮತ್ತು ಉದ್ದೇಶವಿರುತ್ತದೆಯಂತೆ. ಹಾಗಾದ್ರೆ ಯಾವ ಉದ್ದೇಶದಲ್ಲಿ ಆ ಸಂಬಂಧಗಳಾಗುತ್ತವೆ. ಅವುಗಳ ಪರಿಣಾಮ ಏನು ಇಲ್ಲಿದೆ ಓದಿ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (HT File Photo)

ಸಂಬಂಧಗಳೇ ಹಾಗೆ ಬಹಳ ಸುಂದರವಾಗಿರುತ್ತದೆ. ಅಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆಗಳಿರುತ್ತದೆ. ಗಂಡು ಹೆಣ್ಣಿನ ವಿವಾಹ ಸಂಬಂಧ ಸುಂದರ ಜೀವನ ರೂಪಿಸುತ್ತದೆ. ಒಬ್ಬರಿಗೊಬ್ಬರು ಪ್ರೀತಿ ತೋರಿಸುವುದಕ್ಕೆ ನಂಬಿಕೆಯೇ ಅದರ ಮೂಲವಾಗಿರುತ್ತದೆ. ಅಲ್ಲಿ ಯಾವುದೇ ಮೋಸಕ್ಕೆ ಅಥವಾ ಕಾರಣಕ್ಕೆ ಜಾಗವಿರುವುದಿಲ್ಲ. ಆದರೂ ನಾವು ಬಹಳಷ್ಟು ಬಾರಿ ಸಂಬಂಧಗಳಲ್ಲಿ ಅಪಸ್ವರವಿರುವುದನ್ನು ಕೇಳಿರುತ್ತೇವೆ. ವಿವಾಹೇತರ ಸಂಬಂಧಗಳು ಏರ್ಪಟ್ಟಿರುವ ವಿಷಯಗಳೂ ನಮ್ಮ ಕಿವಿಗೆ ಬಿದ್ದಿರುತ್ತವೆ. ಆ ರೀತಿ ಸಂಬಂಧಗಳೆಲ್ಲವೂ ಒಂದೇ ರೀತಿಯದ್ದಾಗಿರುತ್ತವೆಯೇ? ಅಥವಾ ಇಲ್ಲವೇ? ಈ ರೀತಿಯ ಪ್ರಶ್ನೆಗಳು ಒಮ್ಮೊಮ್ಮೆ ಕಾಡುವುದು ಸಹಜ. ವಿವಾಹಿತರು ಹೊಂದಿರುವ ವಿವಾಹೇತರ ಸಂಬಂಧದಲ್ಲಿಯೂ 8 ರೀತಿಯ ಸಂಬಂಧಗಳಿವೆಯಂತೆ. ಪ್ರತಿ ಸಂಬಂಧದ ಹಿಂದೆಯೂ ಒಂದು ಅರ್ಥ, ಉದ್ದೇಶವಿದೆಯಂತೆ. ಹಾಗಾದ್ರೆ ವಿವಾಹ ಸಂಬಂಧದ ಚೌಕಟ್ಟಿನ ಹೊರಗಿನ ಸಂಬಂಧದ ಅರ್ಥ, ಉದ್ದೇಶಗಳು ಹೀಗಿದೆ.

1) ಭಾವನಾತ್ಮಕ ಸಂಬಂಧ

ಈ ರೀತಿಯ ಭಾವನಾತ್ಮಕ ಸಂಬಂಧಗಳು ವಿಶೇಷವಾಗಿ ಯಾರೊಂದಿಗಾದರೂ ಪ್ರಾರಂಭವಾಗಬಹುದು. ಇದು ಸ್ನೇಹ ಅಥವಾ ಅದಕ್ಕಿಂತಲೂ ಮಿಗಿಲಾಗಿರುತ್ತದೆ. ಸಿಂಪ್ಲೀ ಹೈಯರ್ಡ್‌ ಅವರ ಸಮೀಕ್ಷೆಯ ಪ್ರಕಾರ ಭಾವನಾತ್ಮಕ ಸಂಬಂಧವು ಸಾಮಾನ್ಯವಾಗಿ ಕೆಲಸ ಮಾಡುವ ಜಾಗದಲ್ಲಿ ಸಹೋದ್ಯೋಗಿಗಳೊಂದಿಗೆ ಸಂಭವಿಸುವುದು ಹೆಚ್ಚು. ಅವರ ಜೊತೆ ಹೆಚ್ಚಿನ ಸಮಯ ಕಳೆಯುವುದರಿಂದ ಉಂಟಾಗಬಹುದು. ಇದು ಬರೀ ಭಾವನಾತ್ಮಕವಾಗಿರಬಹುದು ಇಲ್ಲವೇ ಅದಕ್ಕಿಂತಲೂ ಹೆಚ್ಚಿನದಾಗಿರಬಹುದು.

2) ಬಾಂಧವ್ಯದೊಂದಿಗೆ ರೊಮ್ಯಾಂಟಿಕ್‌ ಸಂಬಂಧಗಳು

ಈ ರೀತಿಯ ಸಂಬಂಧಗಳು ಸಂಗಾತಿಯ ಹೊರತಾಗಿ ಅವರ ಜೀವನದಲ್ಲಿ ಬೇರೊಬ್ಬರು ಇದ್ದಾಗ ಇಂತಹವುಗಳು ಏರ್ಪಡುತ್ತದೆ. ಆ ವ್ಯಕ್ತಿಯನ್ನು ನೀವು ಪ್ರೀತಿಸುತ್ತಿದ್ದು ಮತ್ತು ನಿಮ್ಮನ್ನು ನೀವು ನಿಯಂತ್ರಿಸಲು ಸಾಧ್ಯವಿಲ್ಲವೆಂದು ನೀವು ಭಾವಿಸಿದಾಗ ನೀವು ರೊಮ್ಯಾಂಟಿಕ್‌ ಸಂಬಂಧದಲ್ಲಿದ್ದೀರಿ ಎಂದರ್ಥ.

3) ಆಕಸ್ಮಿಕವಾದದ್ದು

ನಮ್ಮ ಭಾವನಾತ್ಮಕ ಸಂಬಂಧಗಳ ಪ್ರಯಾಣದಲ್ಲಿ ಆಕಸ್ಮಿಕ ಎಂಬ ಪದಕ್ಕೆ ಯಾವುದೇ ಜಾಗವಿಲ್ಲ ಎಂಬುದು ನಮಗೆಲ್ಲರಿಗೂ ತಿಳಿದಿರುವಂತಹ ವಿಷಯವೇ. ಯಾವುದೇ ಸಂಬಂಧ ಆಕಸ್ಮಿಕವಾಗಿರಲು ಸಾಧ್ಯವಿಲ್ಲ. ಒಂದು ವೇಳೆ ಆ ರೀತಿ ಸಂಭವಿಸಿದೆ ಎಂದರೆ ಅದನ್ನು ನೀವು ನಿಮಗೆ ಗೊತ್ತಿಲ್ಲದೇ ಬಯಸಿದ್ದಿರಿ ಎಂದೇ ಆಗುತ್ತದೆ. ಅದೊಂದು ‘ಹೀಟ್ ಆಫ್ ದಿ ಮೂಮೆಂಟ್‌’, ‘ಇಟ್‌ ಜಸ್ಟ್‌ ಹ್ಯಾಪೆನ್ಡ್‌’, ‘ನನ್ನ ಮನಸ್ಸು ದುರ್ಬಲವಾಗಿತ್ತು’ ಮತ್ತು ‘ನಾನು ಕುಡಿದಿದ್ದೆ’ ಎಂಬೆಲ್ಲ ಮಾತುಗಳು ಕೇಳಿಬರುತ್ತದೆ. ಇದು ಆಕಸ್ಮಿಕ ಸಂಬಂಧದ ಹಿನ್ನೆಲೆಯಾಗಿರುತ್ತದೆ. ಈ ರೀತಿಯ ಸಂಬಂಧದಲ್ಲಿ, ಸಂಬಂಧವನ್ನು ಹೊಂದಿರುವ ವ್ಯಕ್ತಿ ಸಾಮಾನ್ಯವಾಗಿ ಮದುವೆಯಾಗಿದ್ದು ಮತ್ತು ಆ ಸಂಬಂಧದಲ್ಲೇ ಉಳಿಯಲು ಬಯಸಿರುತ್ತಾನೆ. ಆದರೆ ತಾತ್ಕಾಲಿಕ ಬದಲಾವಣೆಯನ್ನು ಆ ವ್ಯಕ್ತಿ ಬಯಸಿರುತ್ತಾನೆ. ಅಂತಹ ವ್ಯವಹಾರಗಳಲ್ಲಿ ಯಾವುದೇ ಭಾವನಾತ್ಮಕ ಬಾಂಧವ್ಯ ಇರುವುದಿಲ್ಲ.

ಇದನ್ನೂ ಓದಿ: Relationship: ಪುರುಷರು ಹೇಳುವ 5 ಸಾಮಾನ್ಯ ಸುಳ್ಳುಗಳಿವು; ಸಂಬಂಧ ಕೆಡದಿರಲಿ ಎಚ್ಚರ

4) ಪ್ರೇಮದ ಸಂಬಂಧ

ಪ್ರೀತ ಪ್ರೇಮದಲ್ಲಿ ಬಿದ್ದವರು ತಮ್ಮ ಸದ್ಯದ ವೈವಾಹಿಕ ಜೀವನದಲ್ಲಿ ಪ್ರೀತಿಯ ಕೊರತೆಯನ್ನು ಅನುಭವಿಸುತ್ತಿರುತ್ತಾರೆ. ಮತ್ತು ತಪ್ಪಾಗಿ ಆ ವ್ಯಕ್ತಿ ಮದುವೆಯಾಗಿದ್ದಾರೆ ಎಂದು ಅವರು ನಂಬುತ್ತಾರೆ. ಇದು ಆ ಪ್ರೀತಿಯೇ ಶಾಶ್ವತ ಸಂಬಂಧ ಎಂದು ಅವರಿಗೆ ಭಾಸವಾಗುತ್ತದೆ. ಅಂತಹ ಮದುವೆಯಾದ ವ್ಯಕ್ತಿಗಳಲ್ಲಿ ಅದು ಬಲವಂತಾಗಿದ್ದು ಮತ್ತು ಅದರಲ್ಲಿ ದೈಹಿಕ ಸಂಬಂಧವಿರುವುದಿಲ್ಲ. ಅಂತಹ ಜನರು ಹೊಂದಿರುವ ವಿವಾಹೇತರ ಸಂಬಂಧವು ಲೈಂಗಿಕ ಮತ್ತು ಭಾವನಾತ್ಮಕವಾಗಿರಬಹುದು.

5) ಕೇವಲ ಲೈಂಗಿಕ ವ್ಯಸನಿ ಸಂಬಂಧಗಳು

ಒಬ್ಬ ವ್ಯಕ್ತಿಯು ಕೇವಲ ಲೈಂಗಿಕತೆಗಾಗಿ ಹೊಂದಿರುವ ಸಂಬಂಧ‌ಗಳು. ಅಂತಹ ವ್ಯಕ್ತಿಯು ಮೂಲತಃ ಲೈಂಗಿಕ ವ್ಯಸನಿಯಾಗಿರುತ್ತಾನೆ ಮತ್ತು ಯಾವುದೇ ರೀತಿಯ ಭಾವನಾತ್ಮಕ ಬಾಂಧವ್ಯಕ್ಕೆ ಒಳಪಟ್ಟಿರುವುದಿಲ್ಲ. ಅಂತಹ ಜನರು ಯಾವುದೇ ಸಂಬಂಧದಲ್ಲಿ ವಿಶ್ವಾಸವಿಡುವುದಿಲ್ಲ. ಅಂತಹವರು ಮದುವೆಯಾದರೆ, ಅವರು ಖಂಡಿತವಾಗಿಯೂ ಮೋಸ ಮಾಡುತ್ತಾರೆ.

6) ಸೇಡಿಗಾಗಿ

ಇದು ಅತ್ಯಂತ ಅಪಾಯಕಾರಿ ಸಂಬಂಧಗಳಲ್ಲಿ ಒಂದಾಗಿದೆ. ಈ ರೀತಿಯ ಸಂಬಂಧದಲ್ಲಿರುವವರು ಬೇರೊಬ್ಬರನ್ನು ಇನ್‌ಸೆಕ್ಯೂರ್‌ ಆಗಿಸಲು ಬಯಸುತ್ತಿರುತ್ತಾರೆ. ಜೊತೆಗೆ ಅವರು ಮೂರನೇ ವ್ಯಕ್ತಿ ಇದನ್ನು ಸಾಬೀತುಪಡಿಸಲು ನೋಡುತ್ತಿರುತ್ತಾರೆ.

7) ಸೈಬರ್ ಸಂಬಂಧ

ಇದು ಇತ್ತೀಚೆಗಿನ ಆಧುನಿಕ ರೀತಿಯ ಸಂಬಂಧವಾಗಿದೆ. ಇಲ್ಲಿ ಮೋಸಗಾರರು ತಮ್ಮನ್ನು ನಂಬುವಂತೆ ಮಾಡುತ್ತದೆ. ಒಳ್ಳೆಯವರಂತೆ ವರ್ತಿಸುತ್ತಾರೆ. ಏಕೆಂದರೆ ಅವರನ್ನು ಯಾರೂ ನೋಡಿರುವುದಿಲ್ಲ. ಅನಾಮಧೇಯರಾದ ಅಂತಹವರು ಮೋಜಿಗಾಗಿಗೂ ಈ ರೀತಿಯ ಸಂಬಂಧವನ್ನು ಹೊಂದುತ್ತಾರೆ. ಅವರ ಇದು ಅವರಿಗೆ ಉತ್ತೇಜನ ನೀಡುತ್ತದೆ ಅಂದುಕೊಂಡಿರುತ್ತಾರೆ. ಹಾಗೂ ಆ ವ್ಯಕ್ತಿಯ ಅವರ ಜೊತೆ ಭಾವನಾತ್ಮಕ, ಲೈಂಗಿಕ, ಅಶ್ಲೀಲತೆ ಇತ್ಯಾದಿಗಳನ್ನು ಪಡೆಯಬಹುದು.

8) ಸಂಬಂಧದಿಂದ ಹೊರ ಬರುವ ತಂತ್ರ

ಮದುವೆ ಅಥವಾ ಕಮಿಟ್ಮೆಂಟ್‌ ನಿಂದ ಹೊರಬರಲು ಬಯಸಿದಾಗ ಈ ರೀತಿಯ ಸಂಬಂಧಗಳಾಗುತ್ತವೆ ಮತ್ತು ಆ ಸಂಬಂಧದಲ್ಲಿ ಉದ್ದೇಶಪೂರ್ವಕವಾಗಿಯೇ ಅವರು ಸಿಕ್ಕಿಬೀಳುತ್ತಾರೆ. ಇದರಿಂದ ಅವರ ಸಂಗಾತಿ ಅವರನ್ನು ಬಿಟ್ಟು ಹೋಗುತ್ತಾರೆ.

mysore-dasara_Entry_Point