Relationship Tips: ಬಾಲಿವುಡ್ ಸೆಲೆಬ್ರಿಟಿ ಜೋಡಿಗಳಿಂದ ಕಲಿಯಬೇಕಾದ ದಾಂಪತ್ಯ ಜೀವನ ಪಾಠಗಳಿವು
ಕನ್ನಡ ಸುದ್ದಿ  /  ಜೀವನಶೈಲಿ  /  Relationship Tips: ಬಾಲಿವುಡ್ ಸೆಲೆಬ್ರಿಟಿ ಜೋಡಿಗಳಿಂದ ಕಲಿಯಬೇಕಾದ ದಾಂಪತ್ಯ ಜೀವನ ಪಾಠಗಳಿವು

Relationship Tips: ಬಾಲಿವುಡ್ ಸೆಲೆಬ್ರಿಟಿ ಜೋಡಿಗಳಿಂದ ಕಲಿಯಬೇಕಾದ ದಾಂಪತ್ಯ ಜೀವನ ಪಾಠಗಳಿವು

ತೆರೆಯ ಮೇಲೆ ಕಾಣಿಸಿಕೊಳ್ಳುವ ನಟ ನಟಿಯರ ನಟನೆಯನ್ನು ಅನುಕರಿಸುವುದಕ್ಕಿಂತ, ಅವರ ನಿಜ ಜೀವನದಿಂದ ಸ್ಪೂರ್ತಿ ಪಡೆಯುವುದು ತುಂಬಾ ಮುಖ್ಯ. ಬಾಲಿವುಡ್‌ನಲ್ಲಿ ಜನಪ್ರಿಯ ಜೋಡಿಗಳಿದ್ದಾರೆ. ಅವರ ಬದುಕಿನ ಒಂದು ಪಾಠ ಜೀವನಕ್ಕೆ ಅಳವಡಿಸಿದರೂ, ಸಂಸಾರ ಸುಖಮಯವಾಗಿ ಸಾಗುತ್ತದೆ.

ಬಾಲಿವುಡ್ ಸೆಲೆಬ್ರಿಟಿ ಜೋಡಿಗಳಿಂದ ಕಲಿಯಬೇಕಾದ ದಾಂಪತ್ಯ ಜೀವನ ಪಾಠಗಳಿವು
ಬಾಲಿವುಡ್ ಸೆಲೆಬ್ರಿಟಿ ಜೋಡಿಗಳಿಂದ ಕಲಿಯಬೇಕಾದ ದಾಂಪತ್ಯ ಜೀವನ ಪಾಠಗಳಿವು

ಸಿನಿಮಾಗಳನ್ನು ನೋಡಿ ಅದರಲ್ಲಿ ಬರುವ ನಟ-ನಟಿಯರನ್ನು ಅನುಕರಿಸುವ ಜನರಿದ್ದಾರೆ. ಚಿತ್ರದಲ್ಲಿ ಅವರ ಪಾತ್ರಕ್ಕೆ ಮಾರುಹೋಗಿ ಅದನ್ನು ತಮ್ಮ ಬದುಕಿನಲ್ಲಿ ಅನುಸರಿಸುವ ಅಭಿಮಾನಿಗಳೇ ಹೆಚ್ಚು. ಆದರೆ, ಅವೆಲ್ಲಾ ತೆರೆ ಮೇಲೆ ಮಾತ್ರ ಕಾಣಿಸುವ ನಟನೆ ಅಷ್ಟೇ. ನಿಜವಾಗಿ ಅನುಸರಿಸಬೇಕಿದರುವುದು ಅವರ ನಿಜ ಜೀವನವನ್ನು. ಬಾಲಿವುಡ್‌ನಲ್ಲಿ ಮದುವೆಯ ನಂತರ ಮಾದರಿ ಜೋಡಿಯಾಗಿ ಬದುಕುತ್ತಿರುವ ದಂಪತಿಗಳಿದ್ದಾರೆ. ತೆರೆ ಮೇಲೆ ಕಾಣಸಿಗುವ ತಾತ್ಕಾಲಿಕ ಜೋಡಿಗಳಿಂದ ಬದುಕಿನ ಪಾಠ ಕಲಿಯುವುದಕ್ಕಿಂತ, ನಿಜ ಜೀವನದಲ್ಲಿ ಮಾದರಿ ಜೋಡಿಯಾಗಿ ಬಾಳುತ್ತಿರುವ ದಂಪತಿಯಿಂದ ಕೆಲವೊಂದು ಪಾಠ ಕಲಿಯಬಹುದು. ಅಂಥಾ ಬಾಲಿವುಡ್‌ ಜೋಡಿ ಇಲ್ಲಿದ್ದಾರೆ.

ಶಾರುಖ್ ಖಾನ್ ಮತ್ತು ಗೌರಿ ಖಾನ್

ನನಗೆ ನೀನು-ನಿನಗೆ ನಾನು, ಪರಸ್ಪರ ಬೆಂಬಲ: ಬಾಲಿವುಡ್‌ ಸೂಪರ್‌ ಸ್ಟಾರ್‌ ಶಾರುಖ್ ಖಾನ್‌ ಮತ್ತು ಗೌರಿ ಮೂರು ದಶಕಗಳ ಹಿಂದೆ ಮದುವೆಯಾಗಿದ್ದಾರೆ. ಗೌರಿ ಶ್ರೀಮಂತ ಹಿನ್ನೆಲೆಯವಾರಾಗಿದ್ದು, ವೃತ್ತಿಬದುಕಿನ ಆರಂಭದಲ್ಲಿ ಶಾರುಖ್ ಮಧ್ಯಮ ವರ್ಗದ ಹುಡುಗ. ವೃತ್ತಿಜೀವನದ ಆರಂಭದಿಂದಲೂ ಖಾನ್‌ಗೆ ಅಪಾರ ಬೆಂಬಲ ನೀಡುತ್ತಾ ಬಂದವರು ಗೌರಿ. ಏಳು ಬೀಳುಗಳಲ್ಲಿ ಜೊತೆಯಾಗಿದ್ದಾರೆ. ಇದೇ ವೇಳೆ ಶಾರುಖ್ ಕೂಡಾ ಗೌರಿ ಅವರ ವ್ಯವಹಾರದಲ್ಲಿ ನೆರವಾದರು. ವೈಯಕ್ತಿಕ ಮತ್ತು ವೃತ್ತಿಪರ ಸವಾಲುಗಳನ್ನು ಮೆಟ್ಟಿ ನಿಂತು ಮೂರು ದಶಕಗಳಿಂದ ಗಂಡ-ಹೆಂಡತಿಯಾಗಿ ಜೊತೆಯಾಗಿ ಬಾಳಿ ಮಾದರಿಯಾಗದ್ದಾರೆ.

ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ

ಸಹಜವಾಗಿರಿ, ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಿ: ಬಾಲಿವುಡ್‌ನ ಅತ್ಯಂತ ಫನ್ನೀ ಜೋಡಿಗಳಲ್ಲಿ ದೀಪಿಕಾ ಮತ್ತು ರಣವೀರ್ ಪ್ರಮುಖರು. ತಮ್ಮ ಭಾವನೆಗಳನ್ನು ಪರಸ್ಪರ ವ್ಯಕ್ತಪಡಿಸುವುದರಲ್ಲಿ ಇವರು ಹಿಂದೇಟು ಹಾಕಲ್ಲ. ಈವೆಂಟ್‌ಗಳಲ್ಲಿ ಮಾತ್ರವಲ್ಲದೆ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳಲ್ಲಿ ಕಾಮೆಂಟ್‌ಗಳನ್ನು ಮಾಡುವವರೆಗೆ ತಮ್ಮ ಭಾವನೆಗಳನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಾರೆ. ಸಣ್ಣ ಸಣ್ಣ ಖುಷಿಯನ್ನೂ ಹಂಚಿಕೊಳ್ಳುತ್ತಾರೆ. ಇನ್ನೊಬ್ಬರ ಬಗೆಗಿನ ಅಭಿಪ್ರಾಯವನ್ನು ವ್ಯಕ್ತಪಡಿಸುವುದು ತುಂಬಾ ಮುಖ್ಯ.

ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್

ಪರಸ್ಪರರ ವ್ಯತ್ಯಾಸಗಳನ್ನು ಸ್ವೀಕರಿಸಬೇಕು: ಕರಿನಾ ಮತ್ತು ಸೈಫ್‌ ಸ್ವಭಾವದಲ್ಲಿ ತುಂಬಾ ವ್ಯತ್ಯಾಸಗಳಿವೆ. ಮಾತು, ಹರಟೆಯೊಂದಿಗೆ ಕರೀನಾ ಸದಾ ಸಕ್ರಿಯರಾಗಿರುತ್ತಾರೆ. ಅತ್ತ ಸೈಫ್‌ ಇದಕ್ಕೆ ತದ್ವಿರುದ್ಧ. ರಿಸರ್ವ್‌ಡ್‌ ಸ್ವಭಾವದ ಸೈಫ್, ವ್ಯಕ್ತಿತ್ವದಲ್ಲಿ ಕರೀನಾಗಿಂತ ಭಿನ್ನ. ಅಲ್ಲದೆ ಇವರಿಬ್ಬರ ನಡುವೆ ಹತ್ತು ವರ್ಷಗಳ ವಯಸ್ಸಿನ ಅಂತರವಿದೆ. ಮಾತ್ರವಲ್ಲ, ಎರಡೂ ಕುಟುಂಬದವರ ನಂಬಿಕೆ ಹಾಗೂ ಆಚರಣೆಗಳು ಬೇರೆ ಬೇರೆ. ಆದರೆ ಇಂಥಾ ಯಾವುದೇ ಭಿನ್ನಾಭಿಪ್ರಾಯಗಳು ಇವರ ನಡುವೆ ಸುಳಿದಿಲ್ಲ. ಸುಖ ಸಂಸಾರಕ್ಕೆ ಯಾವ ನೆಪವೂ ಬೇಕಿಲ್ಲ ಎಂಬುದನ್ನು ಇವರು ಸಾಬೀತುಪಡಿಸಿದ್ದಾರೆ.

ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ

ಪರಸ್ಪರರ ವೃತ್ತಿಪರ ಬದ್ಧತೆಗಳನ್ನು ಗೌರವಿಸಿ: ಅಕ್ಷಯ್ ಕುಮಾರ್ ಬಾಲಿವುಡ್‌ನ ಅತ್ಯಂತ ಯಶಸ್ವಿ ನಟ. ಅತ್ತ ಅವರ ಪತ್ನಿ ಟ್ವಿಂಕಲ್ ಯಶಸ್ವಿ ಲೇಖಕಿ ಮತ್ತು ಅಂಕಣಗಾರ್ತಿ. ಆದರೆ, ಇವರಿಬ್ಬರು ವೃತ್ತಿಬದುಕು ಯಶಸ್ವಿಯಾಗಿ ಸಾಗುತ್ತಿದೆ. ಜೀವನಶೈಲಿಗೆ ಸಂಬಂಧಿಸಿದಂತೆ ಅಕ್ಷಯ್ ಕುಮಾರ್‌ ತುಂಬಾ ಶಿಸ್ತು ಪಾಲಿಸುತ್ತಾರೆ. ಇದರ ನಡುವೆ ತಮಗೆ ಅನುಕೂಲವಾಗುವಂತೆ ವೃತ್ತಿ ಜೀವನದಲ್ಲಿ ಪರಸ್ಪರ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಇನ್ನೊಬ್ಬರ ವೃತ್ತಿಯನ್ನು ಗೌರವಿಸುವುದು ತುಂಬಾ ಮುಖ್ಯ ಎಂಬುದನ್ನು ಈ ಜೋಡಿಯಿಂದ ಕಲಿಯಬಹುದು.

ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ

ಪರಸ್ಪರರ ಹಿನ್ನೆಲೆಯನ್ನು ಗೌರವದಿಂದ ಒಪ್ಪಿಕೊಳ್ಳಿ: ಮಲೈಕಾ ತಮ್ಮ 19 ವರ್ಷಗಳ ದಾಂಪತ್ಯ ಜೀವನದಿಂದ ಹೊರಬಂದರೆ, ಅರ್ಜುನ್ ಕೂಡಾ ಹಳೆಯ ಸಂಬಂಧವನ್ನು ಮುರಿದು ಒಂದಾದರು. ಪ್ರತಿಯೊಬ್ಬರ ಹಿನ್ನೆಲೆ ಬೇರೆ ಇರಬಹುದು. ನೆನಪಿನಲ್ಲಿ ಕಹಿಯೇ ಹೆಚ್ಚಿರಬಹುದು. ಮದುವೆ, ಸಂಬಂಧ ವಿಫಲವಾಗಬಹುದು. ಮುರಿದ ಸಂಬಂಧದಿಂದ ಕಲಿಯುವುದು ಮತ್ತು ಜೀವನದಲ್ಲಿ ಮುಂದುವರಿಯುವುದು ತುಂಬಾ ಮುಖ್ಯ ಎಂಬುದನ್ನು ಈ ಜೋಡಿ ತೋರಿಸಿಕೊಟ್ಟಿದ್ದಾರೆ.

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್

ಪೋಷಕರ ಜವಾಬ್ದಾರಿ ಸಮಾನ ಹಂಚಿಕೆ: ಬಾಲಿವುಡ್‌ನ ಅತ್ಯಂತ ಯಶಸ್ವಿ ನಟರಾದ ಆಲಿಯಾ ಮತ್ತು ರಣಬೀರ್ ಕಪೂರ್‌, ಮದುವೆ ಬಳಿಕ ಜವಾಬ್ದಾರಿಯುತ ಅಪ್ಪ ಅಮ್ಮನಾಗಿದ್ದಾರೆ. ತಮ್ಮ ಮಗಳು ರಾಹಾ ಮೇಲೆ ಇಬ್ಬರೂ ಸಮಾನವಾಗಿ ಜವಾಬ್ದಾರಿ ಹಂಚಿಕೊಳ್ಳುತ್ತಾರೆ. ಇದು ಈಗನ ದಂಪತಿಗಳು ಕಲಿಯಬೇಕಾದ ಪಾಠ. ಅಪ್ಪ-ಅಮ್ಮ ಇಬ್ಬರಲ್ಲಿ ಒಬ್ಬರಾದರೂ ಎಲ್ಲಾ ಸಮಯದಲ್ಲೂ ಮಗಳ ಜೊತೆ ಇರಬೇಕು ಎನ್ನುವುದು ಇವರು ಹಾಕಿಕೊಂಡಿರುವ ನಿಯಮ. ಹೀಗಾಗಿ ತಮ್ಮ ಚಿತ್ರೀಕರಣ ಮತ್ತು ಕೆಲಸದ ಸಮಯವನ್ನು ಸಾಮರಸ್ಯದಿಂದ ಇದೇ ಮಮಾದರಿಯಲ್ಲಿ ನಿಗದಿಪಡಿಸಿಕೊಂಡಿದ್ದಾರೆ. ತಮ್ಮ ಮಗಳಿಗೆ ಸಮಯ ನೀಡಲು ವೃತ್ತಿಜೀವನದಲ್ಲಿ ಆರೋಗ್ಯಕರ ಸಮತೋಲನ ಕಾಪಾಡಿಕೊಂಡಿದ್ದಾರೆ.

ಸಿನಿಮಾಗಳಿಗೆ ಸಂಬಂಧಿಸದ ಇನ್ನಷ್ಟು ಸುದ್ದಿಗಳಿಗೆ ಕ್ಲಿಕ್‌ ಮಾಡಿ

Whats_app_banner