Relationship: ಹುಡುಗರಲ್ಲಿನ ಈ 10 ಗುಣಗಳಿಗೇ ಅಂತೆ ಹೆಣ್ಣುಮಕ್ಕಳು ಫಿದಾ ಆಗೋದು; ಸುಲಭ ಅಲ್ಲ ಕಣ್ರಿ ಹುಡುಗಿಯ ಹೃದಯ ಕದಿಯೋದು
ಹೆಣ್ಣುಮಕ್ಕಳ ಹೃದಯ ಕದಿಬೇಕು ಅಂದ್ರೆ ಹುಡುಗರಲ್ಲಿ ಕೆಲವು ವಿಶೇಷ ಗುಣಗಳಿರಬೇಕು ಅನ್ನುತ್ತೆ ಇತ್ತೀಚಿನ ಅಧ್ಯಯನ. ಹಾಗಾದ್ರೆ ನಿಮ್ಮ ಸಂಗಾತಿ ನಿಮ್ಮನ್ನು ಮೆಚ್ಚಬೇಕು ಅಂದ್ರೆ ನಿಮ್ಮಲ್ಲಿ ಯಾವೆಲ್ಲಾ ಗುಣಗಳಿರಬೇಕು ನೋಡಿ
ಹೆಣ್ಣುಮಕ್ಕಳು ತಮ್ಮ ಸಂಗಾತಿಯಾಗುವವರ ಬಗ್ಗೆ ಸಾಕಷ್ಟು ಕನಸು ಕಾಣುತ್ತಿರುತ್ತಾರೆ. ಹುಡುಗಿಯ ಹೃದಯ ಕದಿಯುವುದು ಹುಡುಗರಿಗೆ ನಿಜಕ್ಕೂ ಸವಾಲು. ಜಿಮ್‌ನಲ್ಲಿ ದೇಹದಂಡಿಸಿ ಫಿಟ್ ಆಗಿರುವ ದೇಹ ಹಾಗೂ ಕೊಲ್ಲುವ ನೋಟ ಇಷ್ಟಿದ್ದರೆ ಹೆಣ್ಣುಮಕ್ಕಳು ಪ್ರೀತಿಯಲ್ಲಿ ಬೀಳ್ತಾರೆ ಅಂದ್ಕೊಂಡಿದ್ರೆ ಅದು ಖಂಡಿತ ಸುಳ್ಳು.
ಮಿಲೇನಿಯಲ್ ಜಮಾನದ ಹೆಣ್ಣುಮಕ್ಕಳು ತಮ್ಮ ಸಂಗಾತಿಯಾಗುವವರಲ್ಲಿ ಜವಾಬ್ದಾರಿಯುತ ನಡವಳಿಕೆ, ಪ್ರಬುದ್ಧ ಮನೋಭಾವ, ಸಹಾನುಭೂತಿ ಹಾಗೂ ಭಾವನೆಗಳನ್ನು ಪರಿಣಾಮಕಾರಿಯಾಗಿ ವ್ಯಕ್ತಪಡಿಸುವುದು ಈ ಅಂಶಗಳು ಇರಬೇಕೆಂದು ಬಯಸುತ್ತಾರಂತೆ. ಇತ್ತೀಚಿನ ಸಮೀಕ್ಷೆಯೊಂದರ ಉತ್ತಮ ಹಾಸ್ಯಪ್ರಜ್ಞೆ, ಆತ್ಮವಿಶ್ವಾಸ, ಬುದ್ಧಿಶಕ್ತಿ ಮುಂತಾದ ಪುರುಷರ ಗುಣಗಳು ಮಹಿಳೆಯರ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ.
ಎಕ್ಸ್ಟ್ರಾಮೆರಿಟಿಯಲ್ ಡೇಟಿಂಗ್ ಆಪ್ ಗ್ಲೀಡೆನ್ ಪ್ರಕಾರ ಮಹಿಳೆಯರನ್ನು ಆಕರ್ಷಿಸುವ ಪುರುಷರಲ್ಲಿನ 10 ಲಕ್ಷಣಗಳಿವು.
ನಾಯಕತ್ವ ಗುಣ: ಹೆಚ್ಚಿನ ಹೆಣ್ಣುಮಕ್ಕಳು ಜವಾಬ್ದಾರಿಯುತ ಗಂಡುಮಕ್ಕಳನ್ನು ಮೆಚ್ಚುತ್ತಾರೆ. ಅಲ್ಲದೆ ಅಚಲವಾಗಿ ನಂಬಿಕೆ ಉಳಿಸಿಕೊಳ್ಳುವವರತ್ತ ಹೆಚ್ಚು ಆಕರ್ಷಿತರಾಗುತ್ತಾರೆ. ಯಾವುದೇ ಪರಿಸ್ಥಿತಿಯನ್ನು ಪ್ರಬುದ್ಧತೆಯಿಂದ ಮುನ್ನಡೆಸುವ ಮನೋಭಾವ ಹೊಂದಿರಬೇಕು. ನಮ್ಮ ನಿರ್ಧಾರಗಳನ್ನು ಅನುಸರಿಸುವ ಹುಡುಗರತ್ತ ಹೆಣ್ಣುಮಕ್ಕಳು ಹೆಚ್ಚು ಆಕರ್ಷಿರಾಗುತ್ತಾರೆ. ದೀರ್ಘಾವಧಿಯ ಯೋಜನೆಗಳನ್ನು ರೂಪಿಸುವುದು, ಬದುಕಿನ ಗುರಿಗಳ ಅನ್ವೇಷಣೆಯಲ್ಲಿ ದೃಢ ನಿಶ್ಚಯ ಹೊಂದಿರುವುದು ಈ ಗುಣಗಳನ್ನು ದುಂಬಿಯಂತೆ ಹೆಣ್ಣುಮಕ್ಕಳನ್ನು ಸೆಳೆಯುತ್ತವೆ.
ಭಾವನೆಗಳನ್ನು ವ್ಯಕ್ತಪಡಿಸುವುದು
ಇತಿಹಾಸ ಕಾಲದಿಂದಲೂ ನೋಡುವುದಾದರೆ ಪುರುಷರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಮಹಿಳೆಯರಷ್ಟು ಪರಿಪೂರ್ಣರಲ್ಲ. ಭಾವನೆಗಳನ್ನು ವ್ಯಕ್ತಪಡಿಸುವ ಸಾಮರ್ಥ್ಯ ಪುರುಷರಲ್ಲಿ ವಿಕಸನಗೊಂಡಿಲ್ಲ. ಆದರೆ ಸಮಾಜವು ಬಹಳ ಬೇಗ ಬದಲಾಗುತ್ತಿದೆ. ಜನರು ಭಾವನೆಗಳನ್ನು ಅಂಗೀಕರಿಸುತ್ತಾರೆ ಮತ್ತು ಅದನ್ನು ಅಸ್ತಿತ್ವಕ್ಕೆ ತರುತ್ತಾರೆ. ಮಾತನಾಡುವ ಹಾಗೂ ಭಾವನೆಗಳನ್ನು ಹಂಚಿಕೊಳ್ಳುವ ಪುರುಷರು ಮಹಿಳೆಯರಿಗೆ ಹೆಚ್ಚು ಇಷ್ಟವಾಗುತ್ತದೆ. ಯಾವುದೇ ಸಂಬಂಧದಲ್ಲಿ ಸಂವಹನ ಬಹಳ ಮುಖ್ಯ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ.
ಹಾಸ್ಯ ಮನೋಭಾವ
ಸಂಬಂಧಗಳನ್ನು ಯಾವಾಗಲೂ ಗಂಭೀರವಾಗಿ ಪರಿಗಣಿಸಬಾರದು. ಯಾವುದೇ ಸಂಬಂಧ ಲವಲವಿಕೆಯಿಂದ ಕೂಡಿರಬೇಕು ಅಂದರೆ ಹಾಸ್ಯಪ್ರಜ್ಞೆ ಹೊಂದಿರುವುದು ಮುಖ್ಯವಾಗುತ್ತದೆ. ಎಲ್ಲದ್ದಕ್ಕೂ ಗೊಣಗುವುದು, ಸಿಡಿಮಿಡಿ ಮಾಡುವುದು ಪುರುಷರ ಲಕ್ಷಣ. ಆದರೆ ಇದು ಹೆಣ್ಣುಮಕ್ಕಳಿಗೆ ಇಷ್ಟವಾಗುವುದಿಲ್ಲ. ಎಲ್ಲರೊಂದಿಗೆ ಮುಕ್ತವಾಗಿ ಸಂವಹನ ನಡೆಸುವ ಮೂಲಕ, ಎಲ್ಲರನ್ನೂ ನಗಿಸುತ್ತಾ, ನಗುತ್ತಾ ಇರುವ ಹುಡುಗ ಹುಡುಗಿಗೆ ಬಹಳ ಇಷ್ಟವಾಗುತ್ತಾನೆ.
ಫಿಟ್‌ನೆಸ್ ಫ್ರೀಕ್
ಹುಡುಗಿಯನ್ನು ಮೆಚ್ಚಿಸಲು ಫಿಟ್ ಆಗಿರುವುದು, ಸಿಕ್ಸ್ ಪ್ಯಾಕ್ ಹೊಂದಿರಬೇಕು ಎಂದೇನಿಲ್ಲ. ಆದರೆ ತಮ್ಮ ಆರೋಗ್ಯದ ಕಾಳಜಿ ವಹಿಸುವ, ಒಟ್ಟಾರೆ ನೀಟಾದ ಫಿಸಿಕಲ್ ಫಿಟ್ನೆಸ್ ಹೊಂದಿರುವ ಹುಡುಗರು ಹುಡುಗಿಯರಿಗೆ ಹೆಚ್ಚು ಇಷ್ಟವಾಗುತ್ತಾರೆ. ಆರೋಗ್ಯಕರ ಆಹಾರ ಸೇವಿಸುವುದು, ದುರಾಭ್ಯಾಸಗಳಿಂದ ದೂರವಿರುವುದು ಇಂತಹವು ಹೆಣ್ಣುಮಕ್ಕಳಿಗೆ ಇಷ್ಟವಾಗುತ್ತದೆ. ಇದರೊಂದಿಗೆ ಸಕಾರಾತ್ಮಕ ದೃಷ್ಟಿಕೋನ ಹೊಂದಿರುವುದು ಮುಖ್ಯವಾಗುತ್ತದೆ.
ನಮ್ರತೆ
ನಮ್ರತೆ ಇರುವ ಹುಡುಗರನ್ನು ಹುಡುಗಿಯರು ಹೆಚ್ಚು ಮೆಚ್ಚುತ್ತಾರೆ. ಮುಕ್ತವಾಗಿ ಮಾತನಾಡುವುದು, ದಾನ ಮತ್ತು ಪ್ರಾಮಾಣಿಕತೆಯು ಮಹಿಳೆಯರನ್ನು ಆಕರ್ಷಿಸುವ ಗುಣಗಳಾಗಿವೆ. ಸ್ವಯಂಪ್ರಜ್ಞೆ ಹೊಂದಿರುವ ಹುಡುಗರು ಕೂಡ ಮಹಿಳೆಯರನ್ನು ಆಕರ್ಷಿಸುತ್ತಾರೆ.
ಪುಸ್ತಕದ ಹುಳು
ಓದುವ, ಹೊಸ ಹೊಸ ವಿಚಾರಗಳನ್ನು ತಿಳಿಯಲು ಆಸಕ್ತಿ ಹೊಂದಿರುವ, ಕಲಿಕೆಯಲ್ಲಿ ತೊಡಗುವ ಹಾಗೂ ಅಪ್‌ಡೇಟ್ ಆಗಿರುವ ಹುಡುಗರ ಬಗ್ಗೆ ಹುಡುಗಿಯರಿಗೆ ಒಲವು ಹೆಚ್ಚಿರುತ್ತದೆ.
ತಪ್ಪುಗಳನ್ನು ಒಪ್ಪಿಕೊಳ್ಳುವುದು
ಒಬ್ಬ ವ್ಯಕ್ತಿ ಹೊಂದಿರಬಹುದಾದ ಮೊದಲ ಮತ್ತು ಪ್ರಮುಖ ಬಾಧ್ಯತೆ ಪಾರದರ್ಶಕವಾಗಿರುವುದಾಗಿದೆ. ತಪ್ಪು ಮಾಡಿದಾಗ ತಾನು ಮಾಡಿದ ತಪ್ಪನ್ನು ಒಪ್ಪಿಕೊಳ್ಳುವ ಮನೋಭಾವ ಹೊಂದಿರುವುದು ಬಹಳ ಮುಖ್ಯವಾಗುತ್ತದೆ. ಇದು ಆ ವ್ಯಕ್ತಿಯ ಬಗೆಗಿನ ದೃಷ್ಟಿಕೋನವನ್ನೇ ಬದಲಿಸಬಹುದು.
ಸ್ಟೈಲಿಂಗ್
ಹುಡುಗರ ಉಡುಗೆ ತೊಡುಗೆ, ಸ್ಟೈಲ್ ಕೂಡ ಹೆಣ್ಣುಮಕ್ಕಳ ಮೇಲೆ ಪ್ರಭಾವ ಬೀರುತ್ತದೆ. ಚೆನ್ನಾಗಿರುವ ಉಡುಪು ಧರಿಸುವುದು, ಸ್ಟೈಲಿಶ್ ಆಗಿ ಕಾಣುವ ಹುಡುಗರ ಮೇಲೆ ಹುಡುಗಿಯರು ಹೆಚ್ಚು ಆಕರ್ಷಿತರಾಗುತ್ತಾರೆ. ಫ್ಯಾಶನ್ ಸೆನ್ಸ್ ಖಂಡಿತ ಮುಖ್ಯವಾಗುತ್ತದೆ.
ಪ್ರಬುದ್ಧತೆ
ಪ್ರಬದ್ಧತೆ ಹಾಗೂ ತಿಳುವಳಿಕೆ ಹೊಂದಿರುವ ಹುಡುಗರನ್ನು ಹೆಣ್ಣುಮಕ್ಕಳು ಹೆಚ್ಚು ಮೆಚ್ಚುತ್ತಾರೆ. ವಯಸ್ಸಿಗೆ ತಕ್ಕ ಪ್ರಬದ್ಧತೆ ಇರುವುದು ಮುಖ್ಯವಾಗುತ್ತದೆ. ಸ್ಥಿರ ಮನೋಭಾವದ ಹುಡುಗರು ಹುಡುಗಿಯರಿಗೆ ಹೆಚ್ಚು ಇಷ್ಟವಾಗುತ್ತಾರೆ.
ರೊಮ್ಯಾಂಟಿಕ್
ಹೆಚ್ಚು ರೊಮ್ಯಾಂಟಿಕ್ ಆಗಿರುವ ಹುಡುಗರನ್ನು ಹುಡುಗಿಯರು ಹೆಚ್ಚು ಇಷ್ಟಪಡುತ್ತಾರೆ. ರೊಮ್ಯಾಂಟಿಕ್ ವಿಷಯದಲ್ಲಿ ಬೇಸರ ಮೂಡಿಸುವ ಹುಡುಗರ ಮೇಲೆ ಹುಡುಗಿಯರು ಮುನಿಸಿಕೊಳ್ಳಬಹುದು. ನೀವು ಬೇರೆ ಊರಿಗೆ ಹೋದಾಗ ಆಕರ್ಷಕ ಉಡುಗೊರೆ ತರುವುದು, ದೂರದಲ್ಲಿದ್ದಾಗ ಲೆಟರ್ ಬರೆಯವುದು, ಪ್ರತಿದಿನ ಕರೆ ಮಾಡಿ ಮಾತನಾಡುವುದು, ಯೋಗಕ್ಷೇಮ ವಿಚಾರಿಸುವುದು ಈ ರೀತಿ ಮಾಡುವ ಹುಡುಗರ ಮೇಲೆ ಹುಡುಗಿಯರ ಒಲವು ಹೆಚ್ಚಿರುತ್ತದೆ.
ಒಟ್ಟಾರೆ ಈ 10 ಗುಣಗಳು ಹೆಣ್ಣುಮಕ್ಕಳು ತಮ್ಮ ಸಂಗಾತಿಯಿಂದ ನಿರೀಕ್ಷೆ ಮಾಡುವ ಗುಣಗಳು. ಈ ಎಲ್ಲದರ ಜೊತೆಗೆ ನಂಬಿಕೆ ಹೊಂದಿರುವುದು ಬಹಳ ಮುಖ್ಯ. ನಂಬಿಕೆ ಇಲ್ಲದೆ ಯಾವುದೇ ಸಂಬಂಧ ಮುಂದುವರಿಯಲು ಸಾಧ್ಯವಿಲ್ಲ.
ಇದನ್ನೂ ಓದಿ
Relationship: ಸಂಬಂಧದಲ್ಲಿ ಮನಸ್ತಾಪ ಮೂಡಲೇಬಾರದು ಅಂದ್ರೆ ಸಂಗಾತಿಯ ಮುಂದೆ ಈ 12 ವಿಚಾರಗಳನ್ನು ಎಂದಿಗೂ ಹೇಳ್ಬೇಡಿ
Relationship: ಸ್ವಾರ್ಥ ತುಂಬಿದ ನಿಮ್ಮ ಸಂಗಾತಿಯ ಮನಸ್ಸು ಬದಲಿಸಲು ಇಲ್ಲಿದೆ 6 ಟಿಪ್ಸ್, ಈ ಸಲಹೆ ಪಾಲಿಸಿ ಸಂಬಂಧ ಸರಿಪಡಿಸಿಕೊಳ್ಳಿ
Relationship: ರಿಲೇಷನ್ಶಿಪ್ ಬೋರ್ ಆದ್ರೆ ಬ್ರೇಕ್ಅಪ್ ಬೇಡ ಬ್ರೇಕ್ ತಗೊಳ್ಳಿ; ಆದ್ರೆ ಈ ರೂಲ್ಸ್ ಫಾಲೋ ಮಾಡೋದು ಮಾತ್ರ ಮರಿಬೇಡಿ
Relationship: ದಾಂಪತ್ಯ ಜೀವನವನ್ನು ಸದಾ ಸಂತೋಷವಾಗಿಡುವ 8 ರಹಸ್ಯಗಳಿವು; ನೀ ನನಗೆ, ನಾ ನಿನಗೆ ಎನ್ನುತ್ತಾ ಸಾಗಲಿ ಸಂಸಾರದ ದೋಣಿ
ವಿಭಾಗ