ಕನ್ನಡ ಸುದ್ದಿ  /  ಜೀವನಶೈಲಿ  /  ಅರೇಂಜ್ಡ್‌ ಮ್ಯಾರೇಜ್‌ಗೆ ಓಕೆ ಹೇಳುವ ಮೊದಲು ನಿಮ್ಮ ಸಂಗಾತಿಗೆ ಈ 21 ಪ್ರಶ್ನೆ ಕೇಳಿ; ಮನಸ್ಸು ಅರ್ಥ ಮಾಡಿಕೊಳ್ಳುವ ಮೊದಲು ಒಪ್ಪಬೇಡಿ

ಅರೇಂಜ್ಡ್‌ ಮ್ಯಾರೇಜ್‌ಗೆ ಓಕೆ ಹೇಳುವ ಮೊದಲು ನಿಮ್ಮ ಸಂಗಾತಿಗೆ ಈ 21 ಪ್ರಶ್ನೆ ಕೇಳಿ; ಮನಸ್ಸು ಅರ್ಥ ಮಾಡಿಕೊಳ್ಳುವ ಮೊದಲು ಒಪ್ಪಬೇಡಿ

ಅರೇಂಜ್ಡ್‌ ಮ್ಯಾರೇಜ್‌ ಎಂದಾಗ ಒಂದಿಷ್ಟು ಗೊಂದಲ, ಪ್ರಶ್ನೆಗಳು ಮನದಲ್ಲಿ ಮೂಡುವುದು ಸಹಜ. ಯಾಕೆಂದರೆ ಒಂದು ಹೊಸ ಸಂಬಂಧದೊಂದಿಗೆ ಬಂಧ ಬೆಸೆಯುವ ಪ್ರಕ್ರಿಯೆಯದು. ಆದರೆ ಆರೆಂಜ್ಡ್‌ ಮ್ಯಾರೇಜ್‌ಗೆ ಒಪ್ಪಿಗೆ ನೀಡುವ ಮೊದಲು ಸಂಗಾತಿಗೆ ಈ 21 ಪ್ರಶ್ನೆಗಳನ್ನು ಕೇಳಬೇಕು.

ಅರೇಂಜ್ಡ್‌ ಮ್ಯಾರೇಜ್‌ಗೆ ಓಕೆ ಹೇಳುವ ಮೊದಲು ನಿಮ್ಮ ಸಂಗಾತಿಗೆ ಈ 21 ಪ್ರಶ್ನೆ ಕೇಳಿ; ಮನಸ್ಸು ಅರ್ಥ ಮಾಡಿಕೊಳ್ಳುವ ಮೊದಲು ಒಪ್ಪಬೇಡಿ
ಅರೇಂಜ್ಡ್‌ ಮ್ಯಾರೇಜ್‌ಗೆ ಓಕೆ ಹೇಳುವ ಮೊದಲು ನಿಮ್ಮ ಸಂಗಾತಿಗೆ ಈ 21 ಪ್ರಶ್ನೆ ಕೇಳಿ; ಮನಸ್ಸು ಅರ್ಥ ಮಾಡಿಕೊಳ್ಳುವ ಮೊದಲು ಒಪ್ಪಬೇಡಿ

ಮದುವೆ ಪ್ರತಿಯೊಬ್ಬರ ಜೀವನದ ಬಹುಮುಖ್ಯ ಘಟ್ಟ. ಮದುವೆಯಾಗುವ ಮೊದಲು ನಿಮ್ಮ ಸಂಗಾತಿಯವಾಗುವರ ಜೊತೆ ಸ್ವಷ್ಟ ಸಂವಹನ ನಡೆಸಬೇಕು. ಅದರಲ್ಲೂ ನೀವು ಅರೆಂಜ್ಡ್‌ ಮ್ಯಾರೇಜ್‌ ಆಗುತ್ತಿದ್ದರೆ, ಮದುವೆಯ ವಿಚಾರದಲ್ಲಿ ಸಾಕಷ್ಟು ಎಚ್ಚರ ವಹಿಸಬೇಕು. ಪೋಷಕರು ನೋಡಿ, ಮಾತನಾಡಿ, ಮಾಡಿದ ಮದುವೆ ಎನ್ನುವ ಧೈರ್ಯವಿದ್ದರು ನಾಳೆ ಅವರೊಂದಿಗೆ ಬದುಕುಬೇಕಾದವರು ನೀವು, ಆ ಕಾರಣಕ್ಕೆ ಅರೆಂಜ್ಡ್‌ ಮ್ಯಾರೇಜ್‌ ಆದರೂ ಮದುವೆಯಾಗುವವರ ಜೊತೆ ಮನ ಬಿಚ್ಚಿ ಮಾತನಾಡಬೇಕು.

ಟ್ರೆಂಡಿಂಗ್​ ಸುದ್ದಿ

ಅವರ ನಿರೀಕ್ಷೆಗಳು, ಮೌಲ್ಯಗಳು, ಅಕಾಂಕ್ಷೆಗಳಂತಹ ವಿಚಾರಗಳನ್ನು ಮುಕ್ತವಾಗಿ ಚರ್ಚಿಸಬೇಕು. ನೀವಿಬ್ಬರದ್ದೂ ಒಂದೇ ರೀತಿ ಮನೋಭಾವ, ಒಂದೇ ದೋಣಿಯಲ್ಲಿ ಸಾಗಲು ನೀವು ಸಮರ್ಥರಿದ್ದೀರಾ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಬೇಕು. ಅದಕ್ಕಾಗಿ ಆರೆಂಜ್ಡ್‌ ಮ್ಯಾರೇಜ್‌ಗೆ ನೀವು ಒಪ್ಪಿಕೊಂಡಾಗ ಮದುವೆಗೂ ಮೊದಲು ಈ 21 ಪ್ರಶ್ನೆಗಳನ್ನು ನಿಮ್ಮ ಸಂಗಾತಿಗೆ ಕೇಳಬೇಕು.

1. ನಿಮ್ಮ ವೈಯಕ್ತಿಕ ನಂಬಿಕೆಗಳು ಹಾಗೂ ಮೌಲ್ಯಗಳೇನು?

2. ಮದುವೆಯ ಸಂಬಂಧದಲ್ಲಿ ನಿಮ್ಮ ಪಾತ್ರ ಹಾಗೂ ಜವಾಬ್ದಾರಿಗಳ ಬಗ್ಗೆ ನಿಮ್ಮಲ್ಲಿ ಯಾವ ರೀತಿಯ ಭಾವನೆಗಳಿವೆ?

3. ನಮ್ಮ ಸಂಬಂಧದಲ್ಲಿ ಕುಟುಂಬದ ಪಾತ್ರವನ್ನು ನೀವು ಹೇಗೆ ನಿಭಾಯಿಸಬಲ್ಲಿರಿ?

4. ನಿಮ್ಮ ವೃತ್ತಿಜೀವನದ ಅಕಾಂಕ್ಷೆಗಳೇನು? ಅವುಗಳನ್ನು ಸಾಧಿಸಲು ನೀವು ಹೇಗೆ ಯೋಜನೆಗಳನ್ನು ರೂಪಿಸುತ್ತೀರಿ?

5. ಜೀವನದಲ್ಲಿ ಎದುರಾಗುವ ಒತ್ತಡ ಹಾಗೂ ಸವಾಲುಗಳನ್ನು ನೀವು ಹೇಗೆ ಎದುರಿಸುತ್ತೀರಿ?

6. ಸಂಬಂಧದಲ್ಲಿ ಜಗಳ, ಭಿನ್ನಾಭಿಪ್ರಾಯ ಬಂದಾಗ ಅದನ್ನು ನೀವು ಹೇಗೆ ನಿಭಾಯಿಸುತ್ತೀರಿ?

7. ನೀವು ಹಣಕಾಸು ನಿರ್ವಹಣೆ ಹೇಗೆ ಮಾಡುತ್ತೀರಿ, ಭವಿಷ್ಯ ಪ್ಲಾನ್‌ಗಳೇನು?

8. ಉದ್ಯೋಗ ಹೊರತುಪಡಿಸಿ ನಿಮ್ಮ ಹವ್ಯಾಸ ಹಾಗೂ ಆಸಕ್ತಿಗಳೇನು?

9. ಕುಟುಂಬ ಹಾಗೂ ಸ್ನೇಹಿತರೊಂದಿಗೆ ಸಮಯ ಕಳೆಯಲು ನೀವು ಹೇಗೆ ಆದ್ಯತೆ ನೀಡುತ್ತೀರಿ?

10. ಸಂಬಂಧದಲ್ಲಿ ಸಂವಹನ ಮತ್ತು ಮುಕ್ತವಾಗಿ ಮಾತನಾಡುವುದರ ಬಗ್ಗೆ ನಿಮ್ಮ ನಿರೀಕ್ಷೆಗಳೇನು?

11. ನಿಮ್ಮ ಧಾರ್ಮಿಕ ಸಂಸ್ಕೃತಿ ಹಾಗೂ ನಂಬಿಕೆಗಳ ಬಗ್ಗೆ ತಿಳಿಸಿ, ಇವು ನಿಮ್ಮ ಜೀವನದ ಮೇಲೆ ಹೇಗೆ ಪ್ರಭಾವ ಬೀರಿವೆ?

12. ಸಮಯ ಕಳೆಯದಂತೆ ನಿಮ್ಮ ಸಂಬಂಧದಿಂದ ನಿಮ್ಮ ನಿರೀಕ್ಷೆ ಏನು? ಒಂದು ಕುಟುಂಬ ಆರಂಭವಾಗುವ ಬಗ್ಗೆ ನಿಮ್ಮ ನಿರೀಕ್ಷೆಗಳೇನು?

13. ನಿಮಗೆ ಯಾವುದೇ ನಿರ್ದಿಷ್ಟ ಮೌಲ್ಯ ಹಾಗೂ ಸಂಪ್ರದಾಯಗಳಿವೆಯೇ, ಅವುಗಳನ್ನು ನಿಮ್ಮಿಬ್ಬರ ಜೀವನದಲ್ಲಿ ಒಟ್ಟಿಗೆ ಸೇರಿಸುವ ಬಗ್ಗೆ ನಿಮ್ಮ ಯೋಚನೆಗಳೇನು?

14. ಸಂಬಂಧದಲ್ಲಿ ವೈಯಕ್ತಿಕ ಬೆಳವಣಿಗೆ ಹಾಗೂ ಸ್ವ ಸುಧಾರಣೆಗೆ ನೀವು ಹೇಗೆ ಆದ್ಯತೆ ನೀಡುತ್ತೀರಿ?

15. ಆರೋಗ್ಯಕರ ವೃತ್ತಿಜೀವನ ಹಾಗೂ ಜೀವನದ ಸಮತೋಲನವನ್ನು ಹೇಗೆ ನಿರ್ವಹಿಸುತ್ತೀರಿ?

16. ಸಂಬಂಧದಲ್ಲಿ ಪ್ರೀತಿ ಹಾಗೂ ಆಕರ್ಷಣೆಯನ್ನು ಹೇಗೆ ವ್ಯಕ್ತಪಡಿಸುತ್ತೀರಿ?

17. ಸಾಂಸ್ಕೃತಿಕ ಹಿನ್ನೆಲೆ ಹಾಗೂ ಅಭಿಪ್ರಾಯಗಳ ಭಿನ್ನತೆಯನ್ನು ನೀವು ಹೇಗೆ ನಿಭಾಯಿಸುತ್ತೀರಿ?

18. ಮನೆಕೆಲಸಗಳು ಹಾಗೂ ಜವಾಬ್ದಾರಿಗಳ ಬಗ್ಗೆ ನಿಮ್ಮ ನಿರೀಕ್ಷೆಗಳೇನು?

19. ಕುಟುಂಬದ ಜವಾಬ್ದಾರಿಗಳೊಂದಿಗೆ ವೈಯಕ್ತಿಕ ಜೀವನವನ್ನು ಹೇಗೆ ಸಮತೋಲನಗೊಳಿಸುತ್ತೀರಿ?

20. ಮದುವೆಯ ಸಂಬಂಧದಲ್ಲಿ ಲಿಂಗ ಸಮಾನತೆ ಹಾಗೂ ಪರಸ್ಪರ ಒಬ್ಬರಿಗೊಬ್ಬರು ಗೌರವ ನೀಡುವ ಬಗ್ಗೆ ನಿಮ್ಮ ಅಭಿಪ್ರಾಯಗಳೇನು?

21. ಜೀವನದಲ್ಲಿ ಏರಿಳಿತಗಳು ಬಂದಾಗ ಒಬ್ಬರಿಗೊಬ್ಬರು ಹೇಗೆ ಸಹಾಯ ಮಾಡಬೇಕು ಎಂದು ನೀವು ಭಾವಿಸುತ್ತೀರಿ?

ನೀವು ಅರೆಂಜ್‌ ಮ್ಯಾರೇಜ್‌ ಆಗುವ ಪ್ಲಾನ್‌ ಮಾಡಿದ್ದರೆ ನಿಮ್ಮ ಸಂಗಾತಿಗೆ ಈ ಪ್ರಶ್ನೆಗಳನ್ನು ಕೇಳಿ. ಮುಕ್ತ ಸಂವಹನ ನಡೆಸಿ ಜೀವನದ ಬಗ್ಗೆ ಅವರಿಗಿರುವ ಆಸೆ, ಆಕಾಂಕ್ಷೆಗಳ ಗುರಿಗಳ ಬಗ್ಗೆ ತಿಳಿದುಕೊಳ್ಳಿ. ಆ ಮೂಲಕ ನಿಮಗೆ ಅವರು ಹೊಂದಿಕೆಯಾಗುತ್ತಾರೋ ಇಲ್ಲವೋ ಎಂಬುದನ್ನು ತಿಳಿದುಕೊಂಡು ನಂತರ ಮುಂದುವರಿಯಿರಿ. ಇಲ್ಲ ಎಂದರೆ ಮದುವೆಯ ನಂತರ ತೊಂದರೆಗಳು ಎದುರಾಗಬಹುದು ಎಚ್ಚರ.

ವಿಭಾಗ