Valentine's Week 2024: ರೋಸ್ ಡೇಯಿಂದ ಕಿಸ್ ಡೇವರೆಗೆ; ಪ್ರೇಮಿಗಳ ವಾರದ ಸಂಪೂರ್ಣ ವಿವರ ಇಲ್ಲಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  Valentine's Week 2024: ರೋಸ್ ಡೇಯಿಂದ ಕಿಸ್ ಡೇವರೆಗೆ; ಪ್ರೇಮಿಗಳ ವಾರದ ಸಂಪೂರ್ಣ ವಿವರ ಇಲ್ಲಿದೆ

Valentine's Week 2024: ರೋಸ್ ಡೇಯಿಂದ ಕಿಸ್ ಡೇವರೆಗೆ; ಪ್ರೇಮಿಗಳ ವಾರದ ಸಂಪೂರ್ಣ ವಿವರ ಇಲ್ಲಿದೆ

ಪ್ರೇಮಿಗಳ ದಿನಾಚರಣೆಗೆ ಇನ್ನ ಕೆಲವೇ ದಿನಗಳು ಮಾತ್ರ ಬಾಕಿ ಇವೆ. ರೋಸ್‌ ಡೇಯಿಂದ ಹಿಡಿದು ಕಿಸ್ ಡೇವರೆಗೆ ಪ್ರೇಮಿಗಳ ವಾರವನ್ನು ಹೇಗೆ ಆಚರಿಸುತ್ತಾರೆ ಅನ್ನೋದನ್ನು ತಿಳಿಯೋಣ.

ಪ್ರೇಮಿಗಳ ವಾರದ ವಿವರ ಇಲ್ಲಿದೆ
ಪ್ರೇಮಿಗಳ ವಾರದ ವಿವರ ಇಲ್ಲಿದೆ

ಪ್ರೇಮಿಗಳು ಕಾತುರದಿಂದ ಕಾಯುವ ವ್ಯಾಲೆಂಟ್ಸ್ ಡೇ ಬಂದೇ ಬಿಡ್ತು. ಪ್ರತಿ ವರ್ಷ ಈ ವಿಶೇಷ ದಿನಕ್ಕಾಗಿ ಪ್ರೇಮಿಗಳು ಎದುರು ನೋಡುತ್ತಾರೆ. ಕೆಲವರಿಗೆ ಇದು ಬಹಳ ವಿಶೇಷವಾದ ದಿನ ಅಂತಲೇ ಹೇಳಬಹದುದು. ಫೆಬ್ರವರಿ 14 ರಂದು ಎಷ್ಟೋ ಮಂದಿ ತಮ್ಮ ಪ್ರೇಮ ನಿವೇದನೆಯನ್ನು ಮಾಡಿಕೊಳ್ಳುತ್ತಾರೆ. ಪ್ರೇಮಿಗಳ ದಿನ ಕೇವಲ 1 ದಿನಕ್ಕೆ ಮಾತ್ರ ಸಮೀತವಾಗಿರುವುದಿಲ್ಲ. ಒಂದು ವಾರ ಆಚರಿಸಲಾಗುತ್ತದೆ. ಫೆಬ್ರವರಿ 7 ರಿಂದ ಪ್ರೇಮಿಗಳ ವಾರ ಆರಂಭವಾಗಿ ಫೆಬ್ರವರಿ 14 ರವರೆಗೆ ನಡೆಯುತ್ತದೆ. ರೋಸ್ ಡೇಯಿಂದ ಹಿಡಿದು ಕಿಸ್‌ ಡೇವರೆಗಿನ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಫೆಬ್ರವರಿ 7, ರೋಸ್ ಡೇ: ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಿಲು ಯೋಜಿಸಿದರೆ ಮೊದಲು ನೆನಪಾಗುವುದೇ ಗುಲಾಬಿ. ಈ ಸಂದರ ಹೂ ಪ್ರೀತಿಗೆ ವಿಶೇಷ ಅರ್ಥವನ್ನು ನೀಡುತ್ತದೆ. ಒಂದು ವೇಳೆ ನೀವೇನಾದರೂ ಮೊದಲು ಬಾರಿಗೆ ಪ್ರಪೋಸ್ ಮಾಡುತ್ತಿದ್ದರೆ ನಿಮ್ಮ ಹುಡುಗಿಗೆ ಕೆಂಪು ಗುಲಾಬಿ ನೀಡಿ ಪ್ರೇಮ ನಿವೇದನೆ ಮಾಡಿಕೊಳ್ಳಬಹುದು. ಈಗಾಗಲೇ ಪ್ರೀತಿಯಲ್ಲಿದ್ದು ನಿಮ್ಮ ಪ್ರೇಮಿಯೊಂದಿಗೆ ಮನಸ್ತಾಪವಾಗಿದ್ದರೆ ಆಕೆಗೆ ಗುಲಾಬಿಯನ್ನು ನೀಡುವ ಮೂಲಕ ಮತ್ತೆ ಪ್ರೀತಿಯನ್ನು ಮುಂದುವರಿಸಿ.

ಫೆಬ್ರವರಿ 8, ಪ್ರಪೋಸ್ ಡೇ: ಈ ದಿನ ನಿಮ್ಮ ಮನಸ್ಸಿನ ಭಾವನೆಯನ್ನು ನೀವು ಇಷ್ಟಪಟ್ಟವರಿಗೆ ಹೇಳಿಕೊಳ್ಳುವ ದಿನ. ನಿಮ್ಮ ಪ್ರೀತಿ ಪಾತ್ರರಿಗೆ ಇಷ್ಟವಾದ ಗಿಫ್ಟ್ ನೀಡಿ ಅವರನ್ನುು ಪ್ರಪೋಸ್ ಮಾಡಬಹುದು. ನಿಮ್ಮ ಪ್ರೀತಿ ಪಾತ್ರರನ್ನು ಡಿನ್ನರ್‌ಗೆ ಕರೆದೊಯ್ಯುವ ಮೂಲಕ ಅವರ ಖುಷಿಯನ್ನು ಹೆಚ್ಚಿಸಬಹುದು.

ಫೆಬ್ರವರಿ 9, ಚಾಕೊಲೇಟ್ ದಿನ: ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಎಲ್ಲಾ ವಯೋಮಾನದವರು ಇಷ್ಟ ಪಟ್ಟು ತಿನ್ನುವ ಸಿಹಿ ಎಂದರೆ ಅದು ಚಾಕೊಲೇಟ್. ಈ ವಿಶೇಷ ದಿನದಂದು ನಿಮ್ಮ ಪ್ರೀತಿ ಪಾತ್ರರಿಗೆ ಚಾಕೊಲೇಟ್ ಕೊಟ್ಟ ಇಂಪ್ರೆಸ್ ಮಾಡಬಹುುದು.

ಫೆಬ್ರವರಿ 10, ಟೆಡ್ಡಿ ಡೇ: ಟೆಡ್ಡಿ ಬೇರ್, ಮುಗ್‌ಧ ಪ್ರೀತಿಯ ಸಂಕೇತವಾಗಿದೆ. ನಿಮ್ಮ ಸಂಗಾತಿಗೆ ಟೆಡ್ಡಿಯನ್ನು ಉಡುಗೊರೆಯಾಗಿ ನೀಡುವ ಮೂಲಕ ನೀವು ಪ್ರೀತಿಯನ್ನು ಸಂಭ್ರಮಿಸಬಹುದು. ವಿಶೇಷವಾಗಿ ಹುಡುಗಿಯರು ಟೆಡ್ಡಿ ಬೇರ್‌ಗಳನ್ನು ಹೆಚ್ಚು ಇಷ್ಟಪಡುತ್ತಾರೆ.

ಫೆಬ್ರವರಿ 11, ಪ್ರಾಮಿಸ್ ಡೇ: ಪ್ರಾಮಿಸ್ ದಿನದಂದು ನಿಮ್ಮ ಪ್ರೇಮಿಗಳಿಗೆ ನೀವು ವಾಗ್ದಾನ ನೀಡಬಹುದು. ನಿನ್ನ ಕಷ್ಟ ಸುಖಗಳಲ್ಲಿ ಕೊನೆಯವರೆಗೂ ನಿನ್ನ ಜೊತೆಯಾಗಿರುತ್ತೇನೆ ಎಂದು ಹೇಳುವ ಮೂಲಕ ನಿಮ್ಮಾಕೆಗೆ ಧೈರ್ಯ ತುಂಬಹುದು. ನಿಮ್ಮ ಭಾವನೆಯನ್ನು ಪತ್ರದ ಮುಖಾಂತವೂ ಅರ್ಥೈಸಬಹುದು.

ಫೆಬ್ರವರಿ 12, ಅಪ್ಪುಗೆಯ ದಿನ: ಹಗ್‌ ಡೇ ಪ್ರೀತಿಯ ಅತ್ಯಂತ ಸುಂದರವಾದ ರೂಪವಾಗಿದೆ. ಇದು ಇಬ್ಬರಿಗೂ ಸುರಕ್ಷಿತ ಭಾವನೆಯನ್ನು ನೀಡುತ್ತದೆ. ಜೊತೆಗೆ ಮುಕ್ತವಾಗಿ ಎಲ್ಲಾ ವಿಚಾರಗಳನ್ನು ಹಂಚಿಕೊಳ್ಳುವ ಭಾವನೆಯನ್ನು ಹೆಚ್ಚಿಸುತ್ತದೆ.

ಫೆಬ್ರವರಿ 13, ಕಿಸ್ ಡೇ: ಚುಂಬನವು ಪ್ರೀತಿಯ ಅತ್ಯಂತ ನಿಕಟ ಹಂತವಾಗಿದೆ. ನಿಮ್ಮ ಪ್ರೀತಿ ಪಾತ್ರರಿಗೆ ಚುಂಬಿಸಿದಾಗ ಅವರು ಮತ್ತಷ್ಟು ಹತ್ತಿರವಾಗುತ್ತಾರೆ. ನೀವು ಕೆನ್ನೆ, ತುಟಿ ಅಥವಾ ಹಣೆಗೆ ಮುತ್ತಿಟ್ಟು ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಬಹುದು.

ಫೆಬ್ರವರಿ 14, ವ್ಯಾಲೆಂಟೈನ್ಸ್ ಡೇ: ಇದು ಪ್ರೇಮಿಗಳಿಗೆ ಬಹಳ ಪ್ರಮುಖವಾದ ದಿನ. ಇಷ್ಟು ದಿನದ ಪ್ರೀತಿಯನ್ನು ನೀವು ಒಟ್ಟಿಗೆ ಈ ದಿನದಂದು ಆಚರಿಸಬಹುದು. ಪ್ರೇಮಿಗಳ ದಿನವನ್ನು ಹೇಗೆ ಆಚರಿಸಿಕೊಳ್ಳಬೇಕೆಂದು ಮೊದಲೇ ಪ್ಲಾನ್ ಮಾಡಿಕೊಳ್ಳಿ. ಪ್ರವಾಸ ಹೋಗುವುದು, ಗಿಫ್ಟ್ ಕೊಡಿಸುವುದು, ನಿಮ್ಮ ಸಂಗಾತಿಗೆ ಇಷ್ಟವಾಗುವ ಆಹಾರ, ಬಟ್ಟೆ ಇತರೆ ಉಸ್ತುಗಳನ್ನು ಗಿಫ್ಟ್ ಮಾಡುವ ಮೂಲಕ ಪ್ರೇಮಿಗಳ ದಿನವನ್ನು ಸ್ಮರಣೀಯವಾಗಿಸಿಕೊಳ್ಳಬಹುದು. (This copy first appeared in Hindustan Times Kannada website. To read more like this please logon to kannada.hindustantime.com).

Whats_app_banner