ಕನ್ನಡ ಸುದ್ದಿ  /  Lifestyle  /  Relationship Story Ways To Help Your Partner Feel Secure In Relationship Love Marriage Trust Kannada News Rst

Relationship: ಪ್ರೀತಿ ಪ್ರೇಮ ಬಲು ಮಧುರ; ಸಂಗಾತಿಯ ಮನದಲ್ಲಿ ಸಂಬಂಧದ ಸುರಕ್ಷತೆ ಮೂಡಿಸುವುದು ಹೇಗೆ; ಇಲ್ಲಿದೆ ತಜ್ಞರ ಸಲಹೆ

Relationship: ಪ್ರೀತಿ ಪ್ರೇಮದ ಸಂಬಂಧ ಎನ್ನುವುದು ಇಂದು ಆರಂಭವಾಗಿ ನಾಳೆ ಮುಗಿಯುವುದಲ್ಲ. ಆದರೆ ಸಂಗಾತಿಗಳ ನಡುವಿನ ಪ್ರೀತಿಗೆ ಕೆಲವೊಮ್ಮೆ ಸುರಕ್ಷತೆಯ ಭಾವ ಅಡ್ಡಿ ಪಡಿಸಬಹುದು. ಸಂಗಾತಿಯ ಮೇಲೆ ಮೂಡುವ ಅಸುರಕ್ಷತೆಯ ಭಾವ ಸಂಬಂಧದ ಬಿರುಕಿಗೆ ಕಾರಣವಾಗಬಹುದು. ಹಾಗಾದರೆ ಸಂಬಂಧದಲ್ಲಿ ಸುರಕ್ಷತೆ ಮೂಡಿಸುವುದು ಹೇಗೆ? ಇಲ್ಲಿದೆ ತಜ್ಞರ ಸಲಹೆ.

ಸಂಬಂಧದಲ್ಲಿ ಸುರಕ್ಷತೆಯ ಭಾವ ಇರುವುದು ಬಹಳ ಮುಖ್ಯ
ಸಂಬಂಧದಲ್ಲಿ ಸುರಕ್ಷತೆಯ ಭಾವ ಇರುವುದು ಬಹಳ ಮುಖ್ಯ

ಪ್ರೀತಿ, ಪ್ರೇಮದ ಸಂಬಂಧ ಬಲು ಮಧುರ. ಪ್ರೀತಿ ಹಾಗೂ ಪ್ರೀತಿಸುವ ಜೀವ ಜೊತೆಗಿದ್ದರೆ ಸಾಕು, ಪ್ರಪಂಚದಲ್ಲಿ ಇನ್ನೇನು ಬೇಡ ಎನ್ನುವಂತೆ ಪ್ರೀತಿಸುವವರು ನಮ್ಮ ನಡುವೆ ಇದ್ದಾರೆ. ಆದರೆ ಕೆಲವೊಮ್ಮೆ ಸಂಬಂಧದಲ್ಲಿ ಅಸುರಕ್ಷತೆಯ ಭಾವ ಕಾಡುತ್ತದೆ. ಇದಕ್ಕೆ ಕಾರಣಗಳು ಹಲವಿರಬಹುದು.

ಸಂಬಂಧದಲ್ಲಿ ಸಂಗಾತಿಯೊಂದಿಗಿನ ಬದ್ಧತೆಯ ಮೇಲಿನ ಭದ್ರತೆಯ ಕೊರತೆಯಿಂದ ಹಿಡಿದು ಈ ಹಿಂದೆ ನಮ್ಮ ಸ್ವಂತ ಅನುಭವದವರೆಗೆ ಸಂಬಂಧದಲ್ಲಿ ಅಸುರಕ್ಷತೆಯ ಭಾವ ಮೂಡಲು ಹಲವು ಕಾರಣಗಳು ಇರಬಹುದು. ಆದರೆ ಆ ಕಾರಣಕ್ಕಾಗಿ ಸಂಬಂಧವನ್ನು ಹಾಳು ಮಾಡಿಕೊಳ್ಳಬೇಕು ಎಂದೇನಿಲ್ಲ. ಅದನ್ನು ಅರ್ಥ ಮಾಡಿಕೊಂಡು ಸಂಗಾತಿಯ ಸರಿ, ತಪ್ಪುಗಳನ್ನು ಸರಿ ಪಡಿಸಿಕೊಂಡು ಹೋಗುವ ಮೂಲಕ ಸಂಬಂಧವನ್ನು ಆರೋಗ್ಯಕರವಾಗಿ ಇರಿಸಿಕೊಳ್ಳಬಹುದು.

ರಿಲೇಷನ್‌ಶಿಫ್‌ ಗೈಡ್‌ ಸದಾಫ್‌ ಸಿದ್ದಿಕಿ ಸಂಗಾತಿಯ ಮನದಲ್ಲಿ ನಿಮ್ಮ ಸಂಬಂಧದ ಬಗ್ಗೆ ಸುರಕ್ಷತೆಯ ಭಾವ ಮೂಡಲು ನೆರವಾಗುವ ಕೆಲವು ಅಂಶಗಳನ್ನು ಇಲ್ಲಿ ತಿಳಿಸಿದ್ದಾರೆ.

ಸಂಗಾತಿಯ ನ್ಯೂನತೆಗಳನ್ನು ಗೌರವಿಸಿ

ಪ್ರತಿಯೊಬ್ಬರಲ್ಲೂ ಒಳ್ಳೆಯ ಗುಣ ಹಾಗೂ ಕೆಟ್ಟ ಗುಣ ಎರಡೂ ಇರುತ್ತದೆ. ಆದರೆ ಪ್ರೀತಿಯ ವಿಚಾರಕ್ಕೆ ಬಂದಾಗ ಒಳ್ಳೆಯ ಗುಣವನ್ನಷ್ಟೇ ನೋಡುವುದು ತಪ್ಪಾಗುತ್ತದೆ. ಕೆಲವೊಮ್ಮೆ ನಿಮ್ಮ ಮೇಲಿನ ಅತಿಯಾದ ಪ್ರೀತಿಯಿಂದ ಅವರು ತಮ್ಮ ತಪ್ಪು ಗೊತ್ತಿದ್ದರೂ ಅದನ್ನು ಮುಚ್ಚಿ ಇಡಲು ನೋಡಬಹುದು. ಅಂತಹ ಸಂದರ್ಭದಲ್ಲಿ ಅವರ ಮನಸ್ಸನ್ನು ಅರ್ಥ ಮಾಡಿಕೊಳ್ಳಿ. ಅವರನ್ನು ಹೀಯಾಳಿಸುವುದು, ತೆಗಳುವುದು ಮಾಡದಿರಿ. ಅವರ ನ್ಯೂನತೆಗಳನ್ನು ಜರಿಯುವುದಕ್ಕಿಂತ ಗೌರವಿಸಿ. ಆಗ ಅವರು ನಿಮ್ಮ ಮೇಲೆ ನಂಬಿಕೆ ಉಳಿಸಿಕೊಳ್ಳುತ್ತಾರೆ.

ಸಂವಹನ

ಯಾವುದೇ ಸಂಬಂಧದಲ್ಲಿ ಭದ್ರತೆ ಮೂಡಲು ಸಂವಹನ ಪ್ರಮುಖ ಅಂಶವಾಗಿದೆ. ನಿಮ್ಮ ಸಣ್ಣ ಹೊಗಳಿಕೆ ಕೂಡ ನಿಮ್ಮ ಸಂಗಾತಿಯ ಮನಸ್ಸು ಗಾಳಿಯಲ್ಲಿ ಹಾರುವಂತೆ ಮಾಡಬಹುದು. ನಾನು ನಿನ್ನನ್ನು ಪಡೆಯಲು ಎಷ್ಟು ಪುಣ್ಯ ಮಾಡಿದ್ದೇನೆ ಎಂದು ಆಗಾಗ ಸಂಗಾತಿಗೆ ಹೇಳುತ್ತಿರಿ. ಇದು ಬಹಳ ಮುಖ್ಯವಾಗುತ್ತದೆ. ನೀವು ಒಬ್ಬರೊನ್ನಬ್ಬರು ಚಿಕ್ಕ ಚಿಕ್ಕ ಸಂಗತಿಗಳಲ್ಲೂ ಮೆಚ್ಚುಗೆ ಸೂಚಿಸಿವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಇಬ್ಬರ ನಡುವಿನ ಪ್ರೀತಿ ಹಾಗೂ ಗೌರವ ಹೆಚ್ಚುತ್ತದೆ. ಇದು ಸಂಬಂಧದಲ್ಲಿ ಇನ್ನಷ್ಟು ಅನ್ಯೂನ್ಯತೆ ಮೂಡಲು ಸಹಕಾರಿ.

ಅಗತ್ಯ

ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ಅಗತ್ಯ ಮತ್ತು ನಿರೀಕ್ಷೆಗಳನ್ನು ಹೊಂದಿರುತ್ತಾನೆ. ನಿಮ್ಮ ಸಂಗಾತಿಯ ಅಗತ್ಯಗಳು ನಿಮಗೆ ಅವಶ್ಯ ಎನ್ನಿಸಿದರೆ ಮಾತ್ರ ಅದಕ್ಕೆ ಪ್ರತಿಕ್ರಿಯೆ ನೀಡುವುದು ಸರಿಯಲ್ಲ. ಅವರ ಅಗತ್ಯಗಳನ್ನು ಗೌರವಿಸಬೇಕು. ಅಗತ್ಯಗಳನ್ನು ಕೇಳಿ, ಅವುಗಳನ್ನು ಪೂರೈಸಲು ಪ್ರಯತ್ನಿಸಬೇಕು. ಇದರಿಂದ ಸಂಬಂಧದಲ್ಲಿ ಗೌರವ ಹಾಗೂ ಪ್ರೀತಿ ಎರಡೂ ಉಳಿಯುತ್ತದೆ.

ಗಡಿಗಳು

ಸಂಬಂಧದಲ್ಲಿ ಗಡಿ ಹಾಕಿಕೊಳ್ಳುವುದು ಸರಿಯಲ್ಲ, ಇದು ಸಂಬಂಧವನ್ನು ಕೆಡಿಸಬಹುದು. ವಿಷಯಗಳು ಎಷ್ಟೇ ಕೆಟ್ಟದ್ದಿರಲಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ವಿಷಯವನ್ನು ಹಂಚಿಕೊಂಡು ಮುಂದುವರಿಯಬೇಕು. ಸಂಗಾತಿಗೆ ಸಂಬಂಧಿಸಿದ ಯಾವುದೇ ವಿಚಾರವಾಗಲಿ ಅದನ್ನು ಅರ್ಥ ಮಾಡಿಕೊಂಡು ನಂತರ ಪ್ರತಿಕ್ರಿಯಿಸಬೇಕು.

ಕಷ್ಟಗಳಲ್ಲಿ ಜೊತೆಯಾಗಿ

ಸಂಗಾತಿಯ ಕಷ್ಟಗಳಲ್ಲಿ ಜೊತೆಯಾಗುವ ನಿಲ್ಲುವ ಮೂಲಕ ಅವರಲ್ಲಿ ನಿನ್ನೊಂದಿಗೆ ನಾನಿದ್ದೇನೆ, ಎಂತಹ ಸಮಯದಲ್ಲೂ ನಿಮ್ಮ ಕೈ ಬಿಡುವುದಿಲ್ಲ ಎಂಬ ಭಾವ ಮೂಡಿಸಲು ಸಾಧ್ಯ. ಬರೀ ನಿಮ್ಮ ಖುಷಿಯಲ್ಲಿ ಸಂಗಾತಿಯ ಪಾಲು ಕೇಳದೆ ಅವರ ಕಷ್ಟದಲ್ಲೂ ಭಾಗಿಯಾಗುವ ಮೂಲಕ ಅವರಲ್ಲಿ ಸುರಕ್ಷತೆ ಮೂಡಿಸಿ.

ವಿಭಾಗ