ಕನ್ನಡ ಸುದ್ದಿ  /  ಜೀವನಶೈಲಿ  /  Relationship: ಪುರುಷರು ಹೇಳುವ 5 ಸಾಮಾನ್ಯ ಸುಳ್ಳುಗಳಿವು; ಸಂಬಂಧ ಕೆಡದಿರಲಿ ಎಚ್ಚರ

Relationship: ಪುರುಷರು ಹೇಳುವ 5 ಸಾಮಾನ್ಯ ಸುಳ್ಳುಗಳಿವು; ಸಂಬಂಧ ಕೆಡದಿರಲಿ ಎಚ್ಚರ

Relationship Tips: ಸಂಬಂಧದಲ್ಲಿ ಕೆಲವೊಮ್ಮೆ ಸುಳ್ಳು ಹೇಳಬೇಕಾಗುತ್ತದೆ. ಸುಳ್ಳು ಆ ಕ್ಷಣಕ್ಕೆ ಸಂಬಂಧವನ್ನು ಉಳಿಸಿದರೂ ಮುಂದೆ ಅದು ಸಂಬಂಧಕ್ಕೆ ಮಾರಕವಾಗಬಹುದು. ಪುರುಷರು ಮಹಿಳೆಯರಿಗೆ ಹೇಳುವ 5 ಸಾಮಾನ್ಯ ಸುಳ್ಳುಗಳು ಇವೇ ಅಂತೆ. ಇದು ಸಂಗಾತಿಯನ್ನು ಮೆಚ್ಚಿಸಲು ಹೇಳಿದ್ರು, ನಿಜ ಸಂಗತಿ ತಿಳಿದರೆ ಸಂಬಂಧ ಕೆಡಬಹುದು ಎಚ್ಚರ.

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ನಮ್ಮ ಪ್ರೀತಿಪಾತ್ರರನ್ನು ಮೆಚ್ಚಿಸುವ ಸಲುವಾಗಿ ಕೆಲವೊಮ್ಮೆ ಸುಳ್ಳು ಹೇಳಲೇಬೇಕಾಗುತ್ತದೆ. ಯಾವಾಗಲೂ ಸತ್ಯದಿಂದಲೇ ಎಲ್ಲವನ್ನೂ ಸಾಧಿಸಲು ಸಾಧ್ಯವಿಲ್ಲ. ಪುರುಷರು, ಮಹಿಳೆಯರು ಇಬ್ಬರೂ ಸುಳ್ಳು ಹೇಳುತ್ತಾರೆ. ಆದರೆ ಪುರುಷರು ಕೆಲವು ವಿಚಾರಗಳಿಗೆ ಆಗಾಗ ಸುಳ್ಳು ಹೇಳುತ್ತಾರಂತೆ. ಆ ಮೂಲಕ ಸಂಗಾತಿಯ ಜೊತೆ ಮನಸ್ತಾಪ ಬರದಂತೆ ನೋಡಿಕೊಳ್ಳುತ್ತಾರೆ. ಇನ್ನೂ ಕೆಲವರು ಪದೇ ಪದೇ ಸುಳ್ಳು ಹೇಳುತ್ತಾ ಸತ್ಯವನ್ನೇ ಹೇಳುತ್ತಿದ್ದೇವೆ ಎಂದು ಬಿಂಬಿಸುತ್ತಾರಂತೆ. ಅದೇನೇ ಇರಲಿ, ಒಮ್ಮೆ ನೀವು ಹೇಳುತ್ತಿರುವುದು ಸುಳ್ಳು ಎಂದು ತಿಳಿದರೆ ಶಾಶ್ವತವಾಗಿ ನಂಬಿಕೆಯನ್ನು ಕಳೆದುಕೊಳ್ಳಬೇಕಾಗುತ್ತದೆ. ಇದರಿಂದ ನಿಮ್ಮ ದಾಂಪತ್ಯ, ಜೀವನ ನಾಶವಾಗಬಹುದು.

ಟ್ರೆಂಡಿಂಗ್​ ಸುದ್ದಿ

ಮದುವೆಗೆ ಮುಂಚೆ ಹೇಳುವ ಸಣ್ಣ ಸುಳ್ಳು ಕೂಡ ಮನಸ್ಸಿನ ಮೇಲೆ ಬಹಳ ಪ್ರಭಾವ ಬೀರುತ್ತದೆ. ಈ ರೀತಿ ಸುಳ್ಳು ಹೇಳುವ ಅಭ್ಯಾಸ ಮಾಡಿಕೊಂಡರೆ ಮತ್ತೆ ಸತ್ಯ ಹೇಳಿದರೂ ಯಾರೂ ಒಪ್ಪಿಕೊಳ್ಳುವುದಿಲ್ಲ.

ಪುರುಷರು ಸಾಮಾನ್ಯವಾಗಿ ಮಹಿಳೆಯರಿಗೆ ಕೆಲವು ವಿಚಾರಗಳಲ್ಲಿ ಸುಳ್ಳು ಹೇಳುತ್ತಾರಂತೆ. ಈ ಸುಳ್ಳುಗಳನ್ನು ಪದೇ ಪದೇ ಹೇಳುತ್ತಲೇ ಇರುತ್ತಾರೆ. ಹಾಗಾದರೆ ಪುರುಷರು ಸಾಮಾನ್ಯವಾಗಿ ಹೇಳು 5 ಸುಳ್ಳುಗಳು ಯಾವುವು ನೋಡಿ.

1) ಗಂಡ ಆಫೀಸಿಗೆ ಹೋದ ಮೇಲೆ ಹೆಂಡತಿ ಗಂಡ ಮನೆಗೆ ಬರುವುದನ್ನೇ ಕಾಯುತ್ತಿರುತ್ತಾಳೆ. ಎಷ್ಟೋ ಸಲ ಸಾಯಂಕಾಲ ಹೊರಗೆ ಹೋಗೋಣ ಎಂದು ಹೇಳಿದ ಗಂಡ ಬೇಗ ಮನೆಗೆ ಬರುವುದಿಲ್ಲ. ಆಗ ಹೆಂಡತಿ ಫೋನ್ ಮಾಡಿ ತಡ ಯಾಕೆ ಎಂದು ಕೇಳಿದಾಗ ಪತಿ ಹೇಳುವ ಪ್ರಮುಖ ಸುಳ್ಳು ನಾನು ಟ್ರಾಫಿಕ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆ ಎಂದು. ಸಾಮಾನ್ಯವಾಗಿ ನೀವು ಪ್ರತಿದಿನ ಒಂದೇ ರಸ್ತೆಯಲ್ಲಿ ಓಡಾಡುತ್ತೀರಿ. ಹಲವು ಬಾರಿ ಅದೇ ಮಾರ್ಗದಲ್ಲಿ ನಿಮ್ಮ ಪತ್ನಿಯನ್ನು ಕರೆದುಕೊಂಡು ಹೋಗಿರುತ್ತೀರಿ. ಟ್ರಾಫಿಕ್ ಇದ್ದರೂ ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ನಿಮ್ಮ ಸಂಗಾತಿಗೆ ತಿಳಿದಿರುತ್ತದೆ. ಅದಕ್ಕಾಗಿಯೇ ನೀವು ಸುಳ್ಳು ಹೇಳಬಾರದು. ಹೆಂಡತಿ ಇದನ್ನು ಒಪ್ಪುವುದಿಲ್ಲ.

2) ಕೆಲವರು ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ಎಂದು ಹೇಳುತ್ತಾರೆ. ಹೆಂಡತಿಯನ್ನು ಮನವೊಲಿಸಲು ಅಥವಾ ಮೆಚ್ಚಿಸಲು ಈ ಸುಳ್ಳು ಹೇಳುವುದು ಸ್ವಲ್ಪ ಮಟ್ಟಿಗೆ ಒಳ್ಳೆಯದು. ಆದರೆ ಇದು ಅಕ್ಷರಶಃ ಸುಳ್ಳು ಎಂದು ಹೆಂಡತಿಗೆ ತಿಳಿದರೆ, ದಾಂಪತ್ಯದಲ್ಲಿ ತೊಂದರೆಗಳು ಎದುರಾಗಬಹುದು. ಹೆಂಡತಿಯ ಹೊರತಾಗಿ ತಾಯಿ ಮತ್ತು ಸಹೋದರಿಯನ್ನು ಪ್ರೀತಿಸುವ ಅನೇಕ ಜನರಿದ್ದಾರೆ. ಆದರೆ ತನ್ನ ಹೆಂಡತಿಯನ್ನು ಮೆಚ್ಚಿಸಲು ನೀನು ನನ್ನ ಮನಸ್ಸಿಗೆ ತುಂಬಾ ಹತ್ತಿರವಾದವಳು ಎಂದು ಹೇಳುವುದು ಸುಳ್ಳು ಎಂದು ಅವಳಿಗೆ ತಿಳಿದಾಗ ನಿಮ್ಮ ಮೇಲಿನ ನಂಬಿಕೆಯನ್ನು ಶಾಶ್ವತವಾಗಿ ಕಳೆದುಕೊಳ್ಳಬಹುದು ಎಚ್ಚರ.

3) ಕೆಲವು ಗಂಡಸರು ಹೆಂಡತಿ ಹೇಳಿದ ಕೆಲಸ ಮಾಡಲು ತಡಮಾಡುತ್ತಾರೆ. ಈ ಕೆಲಸವನ್ನು ನಾಳೆ ಮಾಡುತ್ತೇನೆ ಎನ್ನುತ್ತಾರೆ. ನಾಳೆ ಖಂಡಿತ ಮಾಡುತ್ತೇನೆ ಎನ್ನುತ್ತಾರೆ. ಪ್ರತಿ ಬಾರಿಯೂ ಕೆಲಸವನ್ನು ಮುಂದೂಡುವುದು ಒಳ್ಳೆಯದಲ್ಲ. ಇದರಿಂದ ನಿಮ್ಮ ಮಾತಿಗೆ ಬೆಲೆ ಇಲ್ಲದಂತಾಗುತ್ತದೆ. ಕ್ರಮೇಣ ನಾಳೆ ಮಾಡುತ್ತೇನೆ ಎಂದು ಗಂಡ ಹೇಳಿದರೆ ಹೆಂಡತಿ ನಂಬುವುದೇ ಇಲ್ಲ.

4) ಮದುವೆಯ ನಂತರವೂ ಪುರುಷರು ತಮ್ಮ ಸ್ನೇಹಿತರೊಂದಿಗೆ ಹೊರಗೆ ಹೋಗಿ ಪಾರ್ಟಿ ಮಾಡುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ಅವನ ಹೆಂಡತಿಗೆ ಅದು ಇಷ್ಟವಿಲ್ಲ ಎಂದು ಅವನಿಗೆ ಚೆನ್ನಾಗಿ ತಿಳಿದಿರುತ್ತದೆ. ನಾನು ಹೆಚ್ಚು ಕುಡಿಯುವುದಿಲ್ಲ ಎಂದು ಆಗಾಗ ಸುಳ್ಳು ಹೇಳುವುದು ಸಹಜ. ಸ್ನೇಹಿತರೊಂದಿಗೆ ಸೇರಿಕೊಂಡಾಗ ಹೆಂಡತಿಗೆ ಗೊತ್ತಾಗದಂತೆ ಗೆಳೆಯರ ಜೊತೆ ತುಂಬಾ ಪಾರ್ಟಿ ಮಾಡುತ್ತಾರೆ. ಆದರೆ ಅವರು ಕೇವಲ ಸಾಂದರ್ಭಿಕವಾಗಿ ಮಾತ್ರ ಕುಡಿಯುತ್ತೇವೆ ಎಂದು ಸುಳ್ಳು ಹೇಳುತ್ತಾರೆ. ಆದರೆ ಎಷ್ಟೋ ಸಲ ಕುಡಿದು ಮನೆಗೆ ಬರುತ್ತಾರೆ. ಅದು ಹೆಂಡತಿಗೆ ಇಷ್ಟವಾಗುವುದಿಲ್ಲ.

5) ಎಷ್ಟೋ ಸಲ ಗಂಡ, ಹೆಂಡತಿ ಎಷ್ಟು ಬಾರಿ ಕರೆ ಮಾಡಿದರೂ ಸ್ವೀಕರಿಸುವುದಿಲ್ಲ. ಹೆಂಡತಿಯ ಕರೆಗೆ ನಿರ್ಲಕ್ಷ ತೋರುತ್ತಾರೆ. ಸ್ನೇಹಿತರೊಂದಿಗೆ ಇರುವಾಗ ಅವಳ ಕರೆಯನ್ನು ನಿರ್ಲಕ್ಷಿಸಿ, ಕರೆ ನೋಡಲಿಲ್ಲ ಮತ್ತು ಫೋನ್ ಸೈಲೆಂಟ್‌ನಲ್ಲಿತ್ತು ಎಂದು ಅವರು ಸುಳ್ಳು ಹೇಳುತ್ತಾರೆ. ಇದನ್ನು ಯಾವ ಮಹಿಳೆಯೂ ಒಪ್ಪಿಕೊಳ್ಳುವುದಿಲ್ಲ. ಸಣ್ಣ ಸುಳ್ಳು ಕೂಡ ಹೆಂಡತಿಯ ಮನಸ್ಸಿನ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ ಎಂಬುದನ್ನು ಪುರುಷರು ನೆನಪಿನಲ್ಲಿಡಬೇಕು.

ಕೆಲವು ಸಂದರ್ಭಗಳಲ್ಲಿ ಚಿಕ್ಕ ಪುಟ್ಟ ಸುಳ್ಳುಗಳನ್ನು ಹೇಳಿದರೂ ಅದಕ್ಕೆ ಕಾರಣ ನೀಡಿ ಪರಿಸ್ಥಿತಿಯನ್ನು ಸರಿದೂಗಿಸಿಕೊಳ್ಳುವುದು ಉತ್ತಮ. ಆದರೆ ಎಲ್ಲವೂ ಸುಳ್ಳಾಗಬಾರದು. ಅದು ಖಂಡಿತವಾಗಿಯೂ ನಿಮ್ಮ ಸಂಬಂಧಕ್ಕೆ ಒಳ್ಳೆಯದಲ್ಲ.

ವಿಭಾಗ