ಕನ್ನಡ ಸುದ್ದಿ  /  ಜೀವನಶೈಲಿ  /  Relationship: ಸಂಗಾತಿಯ ಮುಂದೆ ತಪ್ಪೊಪ್ಪಿಕೊಳ್ಳುವ ಭರದಲ್ಲಿ ಈ 6 ವಿಚಾರಗಳನ್ನು ಎಂದಿಗೂ ಮರಿಬೇಡಿ

Relationship: ಸಂಗಾತಿಯ ಮುಂದೆ ತಪ್ಪೊಪ್ಪಿಕೊಳ್ಳುವ ಭರದಲ್ಲಿ ಈ 6 ವಿಚಾರಗಳನ್ನು ಎಂದಿಗೂ ಮರಿಬೇಡಿ

ಸಂಬಂಧ ಪಾರದರ್ಶಕವಾಗಿರಬೇಕು, ಆಗಷ್ಟೇ ಬಾಂಧವ್ಯ ವೃದ್ಧಿಯಾಗಲು ಸಾಧ್ಯ ಎಂಬುದನ್ನು ಕೇಳಿರುತ್ತೇವೆ. ಕೆಲವೊಮ್ಮೆ ನಾವು ಮಾಡಿದ ತಪ್ಪನ್ನು ಒಪ್ಪಿಕೊಳ್ಳುವ ಮೂಲಕವೂ ಸಂಬಂಧವನ್ನು ಗಟ್ಟಿಯಾಗಿಸಿಕೊಳ್ಳಬಹುದು. ಆದರೆ ತಪ್ಪು ಒಪ್ಪಿಕೊಳ್ಳುವ ಭರದಲ್ಲಿ ಈ 6 ತಪ್ಪುಗಳನ್ನು ಎಂದಿಗೂ ಮಾಡಬಾರದು.

ಸಂಗಾತಿಯ ಮುಂದೆ ತಪ್ಪೊಪ್ಪಿಕೊಳ್ಳುವ ಭರದಲ್ಲಿ ಈ 6 ವಿಚಾರಗಳನ್ನು ಎಂದಿಗೂ ಮರೆಯದಿರಿ
ಸಂಗಾತಿಯ ಮುಂದೆ ತಪ್ಪೊಪ್ಪಿಕೊಳ್ಳುವ ಭರದಲ್ಲಿ ಈ 6 ವಿಚಾರಗಳನ್ನು ಎಂದಿಗೂ ಮರೆಯದಿರಿ

ಸಂಬಂಧ ಎಂದ ಮೇಲೆ ಕೋಪ, ಜಗಳ, ಮನಸ್ತಾಪ ಎಲ್ಲವೂ ಇರುವುದು ಸಹಜ. ಒಮ್ಮೊಮ್ಮೆ ನಮಗೇ ಅರಿಯದಂತೆ ಕೆಲವು ತಪ್ಪುಗಳನ್ನು ಮಾಡಿ ಬಿಡುತ್ತೇವೆ. ಇದರಿಂದ ಸಂಗಾತಿಯ ಮನಸ್ಸಿಗೆ ಬೇಸರವಾಗುವುದು ಸಹಜ. ಕೆಲವೊಮ್ಮೆ ಸಂಗಾತಿಗೆ ತಿಳಿಯದಂತೆ ಮುಚ್ಚಿಡಬೇಕು ಎಂದುಕೊಂಡರೂ ನಮ್ಮಿಂದ ಸಾಧ್ಯವಾಗುವುದಿಲ್ಲ. ಆಗ ತಪ್ಪೊಪ್ಪಿಗೆಯ ಮೂಲಕ ಅವರನ್ನು ಸಮಾಧಾನ ಪಡಿಸಲು ಪ್ರಯತ್ನಿಸುತ್ತೇವೆ.ಅಲ್ಲದೇ ವಿರಸ ಮೂಡಿದ ಸಂಬಂಧವನ್ನು ಮತ್ತೆ ಜೋಡಿಸಲು ಪ್ರಯತ್ನ ಮಾಡುತ್ತೇವೆ. ಈ ಸಂಬಂಧದ ಅನುಬಂಧವನ್ನು ಗಟ್ಟಿಗೊಳಿಸಲು ಸಲುವಾಗಿಯೇ ಪ್ರೇಮಿಗಳ ದಿನವಾದ 5ನೇ ದಿನಕ್ಕೆ ಕನ್‌ಫೆಷನ್‌ ಡೇ ಆಚರಿಸಲಾಗುತ್ತದೆ.

ಟ್ರೆಂಡಿಂಗ್​ ಸುದ್ದಿ

ಆದರೆ ಸಂಗಾತಿಯನ್ನು ಮೆಚ್ಚಿಸುವ ಸಲುವಾಗಿ ತಪ್ಪೊಪ್ಪಿಕೊಳ್ಳುವ ಭರದಲ್ಲಿ ಈ ಕೆಲವು ತಪ್ಪನ್ನು ಎಂದಿಗೂ ಮಾಡಬಾರದು. ಇದರಿಂದ ಸಂಬಂಧ ಇನ್ನಷ್ಟು ಹದಗೆಡುವುದರಲ್ಲಿ ಅನುಮಾನವಿಲ್ಲ. ಹಾಗಾದ್ರೆ ತಪ್ಪೊಪ್ಪಿಕೊಳ್ಳುವಾಗ ಸಂಗಾತಿಯ ಮುಂದೆ ಯಾವ ವಿಚಾರ ಹೇಳಬಾರದು ನೋಡಿ.

ʼಯಾವುದೇ ಸಂಬಂಧವಿರಲಿ ಇಲ್ಲಿ ಪ್ರಾಮಾಣಿಕತೆ ಬಹಳ ಮುಖ್ಯ, ಪ್ರತಿ ವ್ಯಕ್ತಿಯು ತಮ್ಮ ಸಂಗಾತಿಯಿಂದ ಪ್ರಮಾಣಿಕತೆಯನ್ನು ನಿರೀಕ್ಷಿಸುವುದು ಸಹಜ. ಹಾಗಂತ ಯಾವುದೇ ವಿಚಾರವನ್ನಾಗಲಿ ಸಂಗಾತಿಯ ಮುಂದೆ ಮುಕ್ತವಾಗಿ ಹೇಳಿಕೊಳ್ಳುವುದು ಕೆಲವೊಮ್ಮೆ ಸಂಬಂಧದ ಹಾನಿಗೂ ಕಾರಣವಾಗಬಹುದುʼ ಎನ್ನುತ್ತಾರೆ ಗೇಟ್‌ವೇ ಆಫ್‌ ಹೀಲಿಂಗ್‌ನ ಸಂಸ್ಥಾಪಕಿ ಚಾಂದಿನಿ ತುಗ್ನೈಟ್‌.

ಈ 6 ವಿಚಾರಗಳ ಮೇಲೆ ಗಮನವಿರಲಿ

ಮಾಜಿ ಪ್ರೇಮಿಯೊಂದಿಗೆ ಹೋಲಿಕೆ ಮಾಡುವುದು: ಯಾವುದೇ ವಿಚಾರದಲ್ಲಿ ತೀರಾ ವೈಯಕ್ತಿಕಗಳಲ್ಲೂ ಮಾಜಿ ಪ್ರೇಮಿಯೊಂದಿಗೆ ಹೋಲಿಕೆ ಮಾಡುವುದನ್ನು ಯಾವುದೇ ಸಂಗಾತಿಯೂ ಮೆಚ್ಚುವುದಿಲ್ಲ. ನಿಮ್ಮ ಸಂಗಾತಿಯನ್ನು ಮಾಜಿ ಪ್ರೇಮಿಯ ಜೊತೆ ಹೋಲಿಕೆ ಮಾಡುವುದರಿಂದ ನಿಮ್ಮ ಸಂಬಂಧ ಇನ್ನಷ್ಟು ದುರ್ಬಲಗೊಳ್ಳಬಹುದು. ನಿಮ್ಮ ಯಾವುದೇ ಸಿಹಿ-ಕಹಿ ನೆನಪುಗಳನ್ನು ನಿಮ್ಮಲ್ಲಿಯೇ ಇರಿಸಿಕೊಳ್ಳಿ. ಇದು ನಿಮ್ಮ ಪ್ರಬುದ್ಧತೆಯನ್ನೂ ತೋರಿಸುತ್ತದೆ. ಪ್ರಾಮಾಣಿಕತೆ ನಂಬಿಕೆಯ ಅಡಿಪಾಯವಾಗಿದ್ದರೂ ಕೂಡ ಪ್ರಣಯ ಬದುಕಿಗೆ ಸಂಬಂಧಿಸಿದ ಅಂಶಗಳನ್ನು ಎಂದಿಗೂ ಬಹಿರಂಗ ಪಡಿಸಬಾರದು.

ಹಿಂದಿನ ದಾಂಪತ್ಯ ದ್ರೋಹ: ನಿಮ್ಮ ದಾಂಪತ್ಯ ಬದುಕಿನಲ್ಲಿನ ಹಿಂದಿನ ತಪ್ಪುಗಳನ್ನು ನೀವೇ ಕೆದಕಿ, ಅದನ್ನು ಒಪ್ಪಿಕೊಂಡು ಕ್ಷಮೆ ಕೇಳುವುದು ಕೂಡ ಕೆಲವೊಮ್ಮೆ ಅಪಾರ್ಥಕ್ಕೆ ದಾರಿಯಾಗಬಹುದು. ಇದರಿಂದ ಅನುಮಾನ ಹಾಗೂ ಅಸಾಮಾಧಾನ ಹೆಚ್ಚಬಹುದು. ಅದರ ಬದಲಾಗಿ ನಿಮ್ಮ ತಪ್ಪನ್ನು ನೀವೇ ತಿದ್ದಿಕೊಂಡು ಮುಂದೆ ಸಾಗಿ.

ದೈಹಿಕ ನೋಟಕ್ಕೆ ಸಂಬಂಧಿಸಿ ಅನಗತ್ಯ ಟೀಕೆ: ನೀವು ಸಂಗಾತಿಯ ಮುಂದೆ ಎಂದಿಗೂ ಅವರ ದೈಹಿಕ ನೋಟದ ಬಗ್ಗೆ ಟೀಕೆ ಮಾಡದಿರಿ. ಅನಗತ್ಯ ಟೀಕೆಯು ಅವರ ಮನಸ್ಸಿನಲ್ಲಿ ಶಾಶ್ವತ ಹಾನಿ ಉಂಟು ಮಾಡಬಹುದು. ತೂಕ, ವಯಸ್ಸು ಇಂತಹ ವಿಚಾರಗಳ ಮೇಲೆ ಕಾಮೆಂಟ್‌ ಮಾಡುವುದು ಸರಿಯಲ್ಲ. ಹಾಗೇ ಟೀಕೆ ಮಾಡಿದ ನಂತರ ನೀವು ತಪ್ಪೊಪ್ಪಿಕೊಂಡರೂ ಅದಕ್ಕೆ ಅರ್ಥವಿರುವುದಿಲ್ಲ. ಅಲ್ಲದೇ ಇದರಿಂದ ಅವರು ಬಾಯಿ ಮಾತಿಗೆ ನಿಮ್ಮನ್ನು ಕ್ಷಮಿಸಿದ್ದರೂ ಮನಸ್ಸಿನಲ್ಲಿ ಬೇಸರವಿದ್ದೇ ಇರುತ್ತದೆ.

ಸಂಗಾತಿಯ ಕುಟುಂಬ ಸದಸ್ಯರ ಮೇಲೆ ನರಕಾತ್ಮಕ ಅಭಿಪ್ರಾಯ ಹೊಂದಿರುವುದು: ಪ್ರಮಾಣಿಕತೆ ತೋರುವ ಭರದಲ್ಲಿ ನಿಮ್ಮ ಸಂಗಾತಿಯ ಕುಟುಂಬದವರ ಮೇಲೆ ಇಲ್ಲದ ಆರೋಪ ಮಾಡುವುದು, ನಕಾರಾತ್ಮಕ ಅಭಿಪ್ರಾಯ ಹೊಂದುವುದು ಸರಿಯಲ್ಲ. ಇದರಿಂದ ನಿಮ್ಮ ಸಂಬಂಧ ಇನ್ನಷ್ಟು ಹದಗೆಡಬಹುದು. ಕುಟುಂಬ ಸದಸ್ಯರ ಬಗ್ಗೆ ನೀವಾಡಿದ ಮಾತನ್ನು ಅವರು ಮನಸ್ಸಿಗೆ ತೆಗೆದುಕೊಳ್ಳಬಹುದು. ಈ ಬಗ್ಗೆ ಎಚ್ಚರ ವಹಿಸಿ, ಮಾತಿನ ಮೇಲೆ ನಿಗಾ ಇರಲಿ.

ಸಂಬಂಧದ ಭವಿಷ್ಯದ ಬಗ್ಗೆ ಅನುಮಾನ: ನಿಮ್ಮ ಸಂಬಂಧದ ಭವಿಷ್ಯದ ಬಗ್ಗೆ ತಾತ್ಕಾಲಿಕ ಚಿಂತೆಗಳು ಹಾಗೂ ಅನಿಶ್ಚಿತ ಭಾವನೆಗಳನ್ನು ವ್ಯಕ್ತಪಡಿಸುವುದರಿಂದ ಇನ್ನಷ್ಟು ಒತ್ತಡ ಉಂಟಾಗಬಹುದು. ಮುಕ್ತ ಸಂವಹನ ಅಗತ್ಯವಾದರೂ ಕೂಡ ಕೆಲವೊಮ್ಮೆ ಭವಿಷ್ಯವನ್ನು ನೀವು ಊಹಿಸಲು ಸಾಧ್ಯವಿಲ್ಲದ ಕಾರಣ ತಪ್ಪೊಪ್ಪಿಗೆಯ ನಡುವೆ ಅಂತಹ ಮಾತು, ಭಾವನೆ ನುಸುಳದಂತೆ ನೋಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ.

ಸ್ನೇಹಿತರ ವಿಚಾರ: ನಿಮ್ಮ ತಪ್ಪನ್ನು ಮುಚ್ಚಿಟ್ಟುಕೊಳ್ಳುವ ಅವಸರದಲ್ಲಿ ನಿಮ್ಮ ಸ್ನೇಹಿತರ ಬದುಕು, ಅವರ ಪ್ರೇಮ ವಿಚಾರಗಳನ್ನು ಪ್ರಸ್ತಾಪ ಮಾಡುವುದು ಸರಿಯಲ್ಲ. ಇದರಿಂದ ನಿಮ್ಮ ತಪ್ಪನ್ನು ನೀವು ಸಮರ್ಥಿಸಿಕೊಂಡಂತೆ ಆಗಬಹುದು.

ʼಸಂಬಂಧದಲ್ಲಿ ಪಾರದರ್ಶಕತೆ ಮುಖ್ಯವಾದರೂ ಕೂಡ ಮುಕ್ತವಾಗಿರುವುದು ಹಾಗೂ ವಿವೇಚನೆ ನಡುವೆ ಸಮತೋಲನವಿರುವುದು ಮುಖ್ಯವಾಗುತ್ತದೆ. ತಪ್ಪೊಪ್ಪಿಕೊಳ್ಳುತ್ತೇನೆ ಎಂಬ ಮನೋಭಾವದಲ್ಲಿ ಇಲ್ಲದ್ದನ್ನೂ ಮಾಡಲು ಹೊರಟರೆ ಅದರಿಂದ ನಿಮ್ಮ ಸಂಬಂಧ ಇನ್ನಷ್ಟು ಹಾಳಾಗುತ್ತದೆ ಹೊರತು ಸಾಮರಸ್ಯ ಮೂಡುವುದಿಲ್ಲ. ನಿಮ್ಮನ್ನು ನೀವು ಒಳ್ಳೆಯವರು ಅನ್ನಿಸಿಕೊಳ್ಳಲು ಯಾರ್ಯಾರನ್ನೋ ಉದಾಹರಣೆ ನೀಡುವುದು, ಅವರನ್ನು ಕೆಟ್ಟವರನ್ನಾಗಿಸುವುದು ಸರಿಯಲ್ಲ. ಯಾವುದೇ ವಿಚಾರವನ್ನು ಸಂಗಾತಿಯ ಮುಂದೆ ಹೇಳುವ ಮುನ್ನ ಎರಡು ಬಾರಿ ಯೋಚಿಸಿ, ಕೆಲವೊಮ್ಮೆ ಎಲ್ಲವನ್ನೂ ಹೇಳಿಕೊಳ್ಳುವುದಕ್ಕಿಂತ ಕೆಲವನ್ನು ನಿಮ್ಮ ಮನಸ್ಸಿನಲ್ಲೇ ಇರಿಸಿಕೊಳ್ಳುವುದು ಉತ್ತಮ.

(This copy first appeared in Hindustan Times Kannada website. To read more like this please logon to kannada.hindustantimes.com)

ವಿಭಾಗ