ಕನ್ನಡ ಸುದ್ದಿ  /  ಜೀವನಶೈಲಿ  /  Relationship Tips: ದಾಂಪತ್ಯದಲ್ಲಿ ಕಲಹವೇ; ತಪ್ಪಿಯೂ ಈ 7 ತಪ್ಪುಗಳನ್ನು ಮಾಡದಿರಿ

Relationship Tips: ದಾಂಪತ್ಯದಲ್ಲಿ ಕಲಹವೇ; ತಪ್ಪಿಯೂ ಈ 7 ತಪ್ಪುಗಳನ್ನು ಮಾಡದಿರಿ

ದಾಂಪತ್ಯದಲ್ಲಿ ಸಂವಹನವು ಆಮ್ಲಜನಕವಿದ್ದಂತೆ. ನಿಮ್ಮ ಮನಸಿನಲ್ಲಿ ಇರುವ ಭಾವನೆಗಳನ್ನು ಹಂಚಿಕೊಂಡರೆ ತುಂಬಾ ಒಳ್ಳೆಯದು. ಅಹಂ ಬಿಟ್ಟು ನೀವು ಸಂವಹನ ನಡೆಸಿ ಮತ್ತು ಒಳ್ಳೆಯ ವಿಚಾರಗಳನ್ನು ಯಾವತ್ತಿಗೂ ಮುಚ್ಚಿಡಲು ಹೋಗಬೇಡಿ. ಸಂಗಾತಿಯ ಮಾತನ್ನು ಕೇಳಿ ಸರಿಯಾದ ನಿರ್ಧಾರ ತೆಗೆದುಕೊಂಡರೆ ಸುಖೀ ಸಂಸಾರ ನಿಮ್ಮದಾಗುತ್ತದೆ.

ದಾಂಪತ್ಯದಲ್ಲಿ ಕಲಹವೇ; ತಪ್ಪಿಯೂ ಈ 7 ತಪ್ಪುಗಳನ್ನು ಮಾಡದಿರಿ
ದಾಂಪತ್ಯದಲ್ಲಿ ಕಲಹವೇ; ತಪ್ಪಿಯೂ ಈ 7 ತಪ್ಪುಗಳನ್ನು ಮಾಡದಿರಿ

ಪತಿ ಪತ್ನಿಯ ಸಂಬಂಧ ಬಹಳ ವಿಶೇಷವಾದದ್ದು. ಇಬ್ಬರೂ ಒಬ್ಬರಿಗೊಬ್ಬರೂ ಗೌರವಿಸುತ್ತಾ, ಪ್ರೀತಿ, ವಿಶ್ವಾಸದಿಂದ ಸಂಸಾರ ನಡೆಸಿದರೆ ಬಾಳು ಸ್ವರ್ಗವಾಗಿಬಿಡುತ್ತದೆ. ಆದರೆ ಈಗಂತೂ ಸುಖೀ ಸಂಸಾರಗಳೇ ಕಡಿಮೆಯಾಗಿಬಿಟ್ಟಿವೆ. ಅನೇಕ ಕಾರಣಗಳಿಗಾಗಿ ಸಂಬಂಧಗಳ ನಡುವೆ ವಿರಸ ಹುಟ್ಟಿಕೊಂಡು ಭಾವನೆಗಳನ್ನು ನೋಯಿಸಿ, ಹತಾಶೆಗೆ ಕಾರಣವಾಗಿ ಸಂಬಂಧದ ಅಡಿಪಾಯವನ್ನೇ ಹಾಳುಮಾಡಿಕೊಳ್ಳುತ್ತಾರೆ.

ಟ್ರೆಂಡಿಂಗ್​ ಸುದ್ದಿ

ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳದೆ, ಸಂವಹನ ಸಾಧಿಸಲು ವಿಫಲವಾಗುವುದರಿಂದ ಮತ್ತು ಪರಸ್ಪರ ಅಗತ್ಯಗಳನ್ನು ನಿರ್ಲಕ್ಷಿಸುವ ದಂತಿಗಳಿರುತ್ತಾರೆ. ಒಬ್ಬರನ್ನೊಬ್ಬರು ಲಘುವಾಗಿ ಪರಿಗಣಿಸುವುದು ಮತ್ತು ಅಸೂಯೆಗೆ ಅವಕಾಶ ನೀಡುವುದು, ಸೇರಿದಂತೆ ಕೆಲವೊಂದು ತಪ್ಪುಗಳು ಅದೆಷ್ಟೋ ಕುಂಟುಂಬಗಳಲ್ಲಿ ಸರ್ವೇ ಸಾಮಾನ್ಯವಾಗಿದೆ. ಈ ತಪ್ಪುಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ಮತ್ತು ಅವುಗಳಿಂದ ಹೇಗೆ ಹೊರಬರಬೇಕೆಂದು ಕಲಿಯಬೇಕು. ಆ ಮೂಲಕ ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಬಂಧವನ್ನು ನೀವು ಬಲಪಡಿಸಬಹುದು.

ಇದನ್ನೂ ಓದಿ | Chanakya Neeti: ಪತ್ನಿಯನ್ನು ಸಂತೋಷಪಡಿಸಲು ಪತಿ ಏನು ಮಾಡಬೇಕು; ಮಧುರ ದಾಂಪತ್ಯಕ್ಕೆ ಚಾಣಕ್ಯ ನೀತಿ

ಹಾಗಾದರೆ ಸಾಮಾನ್ಯವಾಗಿ ದಂಪತಿಗಳು ತಮ್ಮ ಸತಿ ಪತಿ ಸಂಬಂಧಗಳಲ್ಲಿ ಮಾಡುವ ತಪ್ಪುಗಳ್ಯಾವುವು ? ಅವುಗಳನ್ನು ಸರಿಪಡಿಸಿಕೊಳ್ಳುವ ವಿಧಾನ ಹೇಗೆ? ಇಲ್ಲಿದೆ ಮಾಹಿತಿ.

1. ಹೊಂದಾಣಿಕೆಯ ಕೊರತೆ

ಯಾರೂ ಪರಿಪೂರ್ಣರಲ್ಲ ಮತ್ತು ಯಾವುದೇ ಸಂಬಂಧವೂ ಪರಿಪೂರ್ಣವಾಗಿರುವುದಿಲ್ಲ. ಎಲ್ಲಾ ಸಂಬಂಧಗಳಲ್ಲಿಯೂ ಕೆಲವಾದರೂ ಸರಿಹೊಂದದ, ತೃಪ್ತಿಕರವಲ್ಲದ ಅಂಶಗಳು ಇದ್ದೇಇರುತ್ತವೆ. ನೀವು ನಿಮ್ಮ ವ್ಯಕ್ತಿತ್ವದೊಂದಿಗೆ ಹೊಂದಾಣಿಕೆಯಾಗದ ವ್ಯಕ್ತಿಯೊಂದಿಗೆ ಜೀವನ ನಡೆಸುತ್ತಿದ್ದೀರಿ ಎಂದು ಭಾವಿಸಿದರೆ ಸಂಬಂಧದದಲ್ಲಿ ಒಡಕು ಬರಲು ಪ್ರಾರಂಭವಾಗುತ್ತದೆ. ಆದರೆ ಅದಕ್ಕೆ ಬದಲಾಗಿ ನಿಮ್ಮ ಸಂಗಾತಿಯ ಮಿತಿಗಳನ್ನು ಅರಿತುಕೊಂಡು, ಅವನ್ನು ಸ್ವೀಕರಿಸಿ ಹೊಂದಾಣಿಕೆಯಿಂದ ಸಹಬಾಳ್ವೆ ನಡೆಸಿದರೆ ತೃಪ್ತಿಕರ ಜೀವನ ನಿಮ್ಮದಾಗುತ್ತದೆ.

2. ಅಗತ್ಯಗಳ ಬಗ್ಗೆ ಗೀಳನ್ನು ನಿಲ್ಲಿಸಿ

ನೀವು ಯೋಚಿಸುವ ಎಲ್ಲವೂ ನಿಮಗೆ ಅಗತ್ಯವಿರುವುದಿಲ್ಲ. ಅದನ್ನು ಅರಿತುಕೊಂಡು ಜೀವನ ನಡೆಸುವ ಕೌಶಲ್ಯವನ್ನು ರೂಢಿಸಿಕೊಳ್ಳಬೇಕು. ಅಗತ್ಯಗಳ ಬಗ್ಗೆ ಅತಿಯಾದ ನಿರೀಕ್ಷೆಗಳು ನಿಮ್ಮ ಸಂಗಾತಿಯೊಂದಿಗೆ ಸುಂದರ ಕ್ಷಣಗಳನ್ನು ಹಾಳುಗೆಡವಬಲ್ಲದು.

3. ಜೀವನಕ್ಕೆ ಹೆಚ್ಚಿನ ಆದ್ಯತೆ ನೀಡಿ

ನಿಮ್ಮ ಸಂಬಂಧವನ್ನು ನಿಮ್ಮ ಇಡೀ ಜೀವನವನ್ನಾಗಿ ಮಾಡಿಕೊಳ್ಳಬೇಡಿ. ಮನಸ್ಸಿಗೆ ಖುಷಿಯೆನ್ನಿಸುವ ಅನೇಕ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ಆಪ್ತರೊಂದಿಗೆ, ಕುಟುಂಬ, ಸ್ನೇಹಿತರೊಂದಿಗೂ ಸಮಯ ಕಳೆಯುವ ಅಭ್ಯಾಸ ಮಾಡಿಕೊಳ್ಳಿ. ಇದು ನಿಮ್ಮ ಸಂಗಾತಿಯೊಂದಿಗೆ ಮನಸ್ತಾಪಗಳನ್ನು ದೂರ ಮಾಡಲು ಹಾಗೂ ಸಂಬಂಧಗಳ ನಡುವೆ ಉಸಿರಾಡಲು ಸಮಯ ಕೊಡುತ್ತದೆ.

ಇದನ್ನೂ ಓದಿ | Chanakya Niti: ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ಈ ಐದು ರೀತಿಯ ಸ್ನೇಹಿತರಿಂದ ದೂರವಿರಿ; ಚಾಣಕ್ಯ ನೀತಿ

4. ಒಬ್ಬರ ಮೇಲೊಬ್ಬರು ಆರೋಪಿಸದಿರಿ

ನಿಮ್ಮ ಸಂಗಾತಿಯನ್ನು ದೂಷಿಸುತ್ತಾ ಕೂರುವುದರಿಂದ ಇಬ್ಬರ ಮನಸ್ಸು ಕೆಡುವುದೇ ಹೊರತು ಬೇರೇನೂ ಇಲ್ಲ. ಕಷ್ಟಕರ ಸಂದರ್ಭಗಳಲ್ಲಿ ನಿಮ್ಮ ಕೆಲಸ ಕಾರ್ಯಗಳ ಜವಾಬ್ದಾರಿಯನ್ನು ನೀವೇ ತೆಗೆದುಕೊಳ್ಳುವುದು ಮುಖ್ಯ. ಯಾಕೆಂದರೆ ಇದು ಸಂಬಂಧದಲ್ಲಿ ಬದಲಾವಣೆಯನ್ನು ತರಬಹುದು. ನಿಮ್ಮನ್ನು ಬದಲಾಯಿಸುವ ನಿಮ್ಮ ಶಕ್ತಿಯನ್ನು ಒಪ್ಪಿಕೊಳ್ಳುವ ಮೂಲಕ, ನಿಮ್ಮ ಸಂಬಂಧ ಇನ್ನೂ ಬಿಗಿಯಾಗಬಹುದು.

5. ಆಸೆಯನ್ನು ನಿರೀಕ್ಷಿಸದಿರಿ

ಪ್ರತಿಯೊಂದು ಸಂಬಂಧಗಳಲ್ಲಿಯೂ ಬಯಕೆ ಸ್ವಾಭಾವಿಕ. ಬಯಕೆಯನ್ನು ಈಡೇರಿಸುವ ನಡುವೆ ಸಂಬಂಧಗಳು ಹಾಳಾಗಬಾರದು. ಆದರೆ ಧನಾತ್ಮಕ ಬಯಕೆಗಳು ಅನೇಕ ಬಾರಿ ಸಂಬಂಧಗಳ ಬೆಸುಗೆಗೂ ಕಾರಣವಾಗುತ್ತದೆ.

6. ದಾಂಪತ್ಯ ಸಮಾಲೋಚನೆಯನ್ನು ತಳ್ಳಿಹಾಕದಿರಿ

ದಾಂಪತ್ಯದಲ್ಲಿ ವಿರಸ ಹೆಚ್ಚುವ ಮುನ್ನ ಆಪ್ತ ಸಮಾಲೋಚನೆಗೆ ಹೋಗಿ. ಒಟ್ಟಿಗೆ ಇದ್ದು ಸಂಬಂಧಗಳಲ್ಲಿ ಚೇತರಿಕೆ ಕಾಣುದು ಹೇಗೆ ಎಂಬುದರ ಕುರಿತು ಜೊತೆಯಾಗಿ ಕುಳಿತು ಚರ್ಚಿಸಿ.

7. ಪ್ರಚೋದಕರಿಂದ ದೂರವಿರಿ

ಸಂಬಂಧಗಳ ಬಗ್ಗೆ ಕೊಂಕು ನುಡಿಯುವ ಮಂದಿ, ಕೆಟ್ಟದಾಗಿ ಹೇಳುವ ಮೂರನೇಯವರ ಮಾತಿಗೆ ಬೆಲೆ ಕೊಡದಿರಿ. ಅವರ ಮುಂದೆ ನಿಮ್ಮ ಸತಿ ಪತಿ ಕಲಹವನ್ನು ತಪ್ಪಿಯೂ ತೋರಿಸಿಕೊಳ್ಳದಿರಿ. ಸಂಬಂಧಗಳು ಇನ್ನಷ್ಟು ದೂರವಾಗುವುದು ಇಂತಹ ಪರಿಸ್ಥಿತಿಯಲ್ಲಿ.

ಇದನ್ನೂ ಓದಿ | ಪೋಷಕರೇ ಮುಟ್ಟಿನ ಬಗ್ಗೆ ಮುಚ್ಚುಮರೆ ಬೇಡ, ಮಕ್ಕಳಿಗೆ ನೀಡಿ ಆರೋಗ್ಯಕರ ಮಾಹಿತಿ; ಮುಕ್ತ ಮಾತಿಗೆ ಈ ವಯಸ್ಸು ಸೂಕ್ತ

ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತಿನಂತೆ ಪತಿ- ಪತ್ನಿಯ ನಡುವೆ ಬರುವ ಯಾವುದೇ ಮನಸ್ತಾಪಗಳನ್ನೂ ಕುಳಿತು ಬಗೆಹರಿಸಲು ಸಾಧ್ಯವಿದೆ. ಮುಕ್ತವಾಗಿ ಮಾತನಾಡಿಕೊಳ್ಳುವುದರಿಂದ, ಪರಸ್ಪರ ಹೊಂದಾಣಿಕೆ ಹಾಗೂ ಬದ್ಧತೆಯಿಂದ ಇರುವ ಮೂಲಕ ಸುಖ ಸಂಸಾರ ನಡೆಸಲು ಸಾಧ್ಯವಾಗುತ್ತದೆ.

(This copy first appeared in Hindustan Times Kannada website. To read more like this please logon to kannada.hindustantimes.com)

ವಿಭಾಗ