Relationship Tips: ಸಂಬಂಧ, ಅನುಬಂಧದಲ್ಲೂ ಹೆಣ್ಮಕ್ಕಳೇ ಸ್ಟ್ರಾಂಗು ಗುರು; ರಿಲೇಷನ್‌ಶಿಪ್‌ ವ್ಯಾಖ್ಯಾನ ಬದಲಾಗಲು ಕಾರಣ ಹೀಗಿದೆ ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  Relationship Tips: ಸಂಬಂಧ, ಅನುಬಂಧದಲ್ಲೂ ಹೆಣ್ಮಕ್ಕಳೇ ಸ್ಟ್ರಾಂಗು ಗುರು; ರಿಲೇಷನ್‌ಶಿಪ್‌ ವ್ಯಾಖ್ಯಾನ ಬದಲಾಗಲು ಕಾರಣ ಹೀಗಿದೆ ನೋಡಿ

Relationship Tips: ಸಂಬಂಧ, ಅನುಬಂಧದಲ್ಲೂ ಹೆಣ್ಮಕ್ಕಳೇ ಸ್ಟ್ರಾಂಗು ಗುರು; ರಿಲೇಷನ್‌ಶಿಪ್‌ ವ್ಯಾಖ್ಯಾನ ಬದಲಾಗಲು ಕಾರಣ ಹೀಗಿದೆ ನೋಡಿ

Relationship Tips: ಮದುವೆ, ಪ್ರೀತಿಯ ಸಂಬಂಧದಲ್ಲಿ ಗಂಡು ಮೇಲು ಎನ್ನುವ ಮನೋಭಾವ ಈಗ ಬದಲಾಗಿದೆ. ಸಂಬಂಧದಲ್ಲೂ ಹೆಣ್ಣುಮಕ್ಕಳೇ ಸ್ಟ್ರಾಂಗ್ ಆಗಿದ್ದಾರೆ. ರಿಲೇಷನ್‌ನ ಈ ವ್ಯಾಖ್ಯಾನ ಬದಲಾಗಲು ಕಾರಣವಾದ ಅಂಶಗಳು ಹೀಗಿವೆ ನೋಡಿ.

ಸಂಬಂಧದಲ್ಲೂ ಹೆಣ್ಮಕ್ಕಳೇ ಸ್ಟ್ರಾಂಗೂ ಗುರು; ರಿಲೇಷನ್‌ಶಿಪ್‌ ವ್ಯಾಖ್ಯಾನ ಬದಲಾಗಿದ್ದು ಹೀಗೆ
ಸಂಬಂಧದಲ್ಲೂ ಹೆಣ್ಮಕ್ಕಳೇ ಸ್ಟ್ರಾಂಗೂ ಗುರು; ರಿಲೇಷನ್‌ಶಿಪ್‌ ವ್ಯಾಖ್ಯಾನ ಬದಲಾಗಿದ್ದು ಹೀಗೆ (PC: Canva)

Relationship Tips: ಹಿಂದೆಲ್ಲಾ ಮದುವೆ, ಪ್ರೀತಿ ಈ ರೀತಿಯ ಸಂಬಂಧಗಳಲ್ಲಿ ಗಂಡಿನ ಮಾತೇ ಹೆಚ್ಚು ನಡೆಯುತ್ತಿತ್ತು. ಅಂದರೆ ಗಂಡ ಹೇಳಿದ್ದನ್ನು ಹೆಂಡತಿ ಕೇಳಬೇಕಿತ್ತು, ಕೇಳುತ್ತಿದ್ದಳು ಕೂಡ. ಪುರುಷ ಪ್ರಧಾನ ಸಮಾಜದಲ್ಲಿ ಸಂಬಂಧದಲ್ಲೂ ಪುರುಷನ ಮಾತೇ ನಡೆಯಬೇಕಿತ್ತು, ನಡೆಯುತಿತ್ತು. ಸಾಂಪ್ರದಾಯಿಕವಾಗಿಯೂ ಗಂಡೇ ಸಂಬಂಧದ ಮುಂದಾಳತ್ವ ವಹಿಸಿಕೊಳ್ಳಬೇಕಿತ್ತು. ಆದರೆ ಈಗ ಕಾಲ ಬದಲಾಗಿದೆ, ಅದರೊಂದಿಗೆ ಸಂಬಂಧದಲ್ಲಿ ಗಂಡು ಮೇಲು ಎನ್ನುವ ಮನೋಭಾವವೂ ಬದಲಾಗಿದೆ.

ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಆರ್ಥಿಕ ಸ್ವಾತಂತ್ರ್ಯವನ್ನು ಪಡೆಯುತ್ತಿದ್ದಾರೆ, ವೃತ್ತಿಜೀವನದಲ್ಲೂ ಸಾಕಷ್ಟು ಯಶಸ್ಸು ಗಳಿಸುತ್ತಿದ್ದಾರೆ. ಹೆಣ್ಣುಮಕ್ಕಳಲ್ಲಿ ಆತ್ಮವಿಶ್ವಾಸವೂ ಹೆಚ್ಚಿದೆ. ಈ ಎಲ್ಲ ಅಂಶಗಳೊಂದಿಗೆ ಸಂಬಂಧದಲ್ಲಿನ ಅಧಿಕಾರದ ಹೊಣೆಗಾರಿಕೆಯೂ ಬದಲಾಗಿದೆ ಎನ್ನುವುದು ಹಲವರ ವಾದ, ಅಂದರೆ ಸಂಬಂಧವನ್ನು ಹೆಣ್ಣುಮಕ್ಕಳೇ ಹೆಚ್ಚು ನಿಯಂತ್ರಣ ಮಾಡುತ್ತಿದ್ದಾರೆ ಎಂಬುದು ಅವರ ಅಭಿಪ್ರಾಯ. ಇದನ್ನು ಹಲವರು ನಿಜ ಎನ್ನುತ್ತಿದ್ದಾರೆ. ಹಾಗಾದರೆ ಸಂಬಂಧದಲ್ಲಿ ಹೆಣ್ಣು ಮೇಲುಗೈ ಸಾಧಿಸಲು ಕಾರಣವಾಗಿರುವ ಅಂಶಗಳು ಯಾವುವು ನೋಡೋಣ.

ಮಹಿಳೆಯ ಆಯ್ಕೆ, ಪುರುಷನ ಅನುಕರಣೆ

ಡೇಟಿಂಗ್ ಆಪ್ಲಿಕೇಷನ್‌ಗಳು, ಸಾಮಾಜಿಕ ಮಾಧ್ಯಮಗಳ ಪ್ರಭಾವ

ಡೇಟಿಂಗ್ ಅಪ್ಲಿಕೇಷನ್‌ಗಳು ಹಾಗೂ ಸಾಮಾಜಿಕ ಮಾಧ್ಯಮಗಳ ಪ್ರಭಾವವು ಸಮಾಜದ ಮನೋಭಾವವನ್ನು ಬದಲಿಸಿದೆ. ಹಿಂದೆಲ್ಲಾ ಗಂಡು, ಹೆಣ್ಣು ನೋಡಲು ಹೋಗುವ ಸಂಪ್ರದಾಯವಿತ್ತು. ಪ್ರಪೋಸ್ ಮಾಡುವುದು ಕೂಡ ಮೊದಲು ಗಂಡೇ ಆಗಿರುತ್ತಿದ್ದನು. ಪ್ರಣಯ ಸಂಬಂಧ ಮುಂದುವರಿಯಲು ಗಂಡೇ ಮುಂದಡಿ ಇಡಬೇಕಿತ್ತು. ಆದರೆ ಈಗ ಎಲ್ಲವೂ ಬದಲಾಗಿದೆ. ಟಿಂಡರ್, ಬಂಬಲ್ ಮತ್ತು ಹಿಂಜ್‌ನಂತಹ ಡೇಟಿಂಗ್ ಆ್ಯಪ್‌ಗಳು ಹೆಣ್ಣುಮಕ್ಕಳಿಗೆ ಸ್ವಾತಂತ್ರ್ಯದ ಆಯ್ಕೆಯನ್ನು ನೀಡಿದೆ. ತಮಗೆ ಇಷ್ಟ ಬಂದ, ಅಭಿರುಚಿಗೆ ಹೊಂದುವ ಹುಡುಗನನ್ನು ತಾನೇ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇಂತಹ ಆ್ಯಪ್‌ಗಳು ಹೆಣ್ಣುಮಕ್ಕಳು ತಮಗೆ ಸೂಕ್ತವಾಗಿರುವವರನ್ನು ಆಯ್ಕೆ ಮಾಡಲು ಅವಕಾಶ ಒದಗಿಸುತ್ತಿವೆ. ಗಂಡು ಈಗ ಆಯ್ಕೆ ವಸ್ತುವಾಗಿರುವುದ್ದಾನೆ.

ಸಂಬಂಧಗಳಲ್ಲಿ ಅತಿಯಾದ ನಿರೀಕ್ಷೆ

ಹೆಣ್ಣುಮಕ್ಕಳು ಈಗ ಆರ್ಥಿಕವಾಗಿ ಸಬಲನಾಗಿರುವ ಹುಡುಗನನ್ನು ನೋಡುತ್ತಿಲ್ಲ. ಯಾಕೆಂದರೆ ಅವರು ಕೂಡ ದುಡಿಯುತ್ತಿದ್ದಾರೆ, ಆರ್ಥಿಕವಾಗಿ ಸಬಲರಾಗಿದ್ದಾರೆ. ಭಾವನಾತ್ಮಕ ಬುದ್ಧಿವಂತಿಕೆ, ಮಹತ್ವಾಕಾಂಕ್ಷೆ ಹಾಗೂ ಸಂಬಂಧಗಳಲ್ಲಿ ಹೊಂದಾಣಿಕೆಗೆ ಇರುವ ವ್ಯಕ್ತಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಸಾಂಪ್ರದಾಯಿಕ ಪಾತ್ರವನ್ನು ನಿರ್ವಹಿಸುವ ಗಂಡಿಗಿಂತ ವೈಯಕ್ತಿಕ ಮಾನದಂಡಗಳನ್ನು ಪೂರೈಸುವ ಸಂಗಾತಿಯನ್ನು ಹುಡುಕುವುದಕ್ಕೆ ಹೆಣ್ಣುಮಕ್ಕಳು ಹೆಚ್ಚಿನ ಗಮನ ನೀಡುತ್ತಿದ್ದಾರೆ. ಆದರೆ ಈ ನಿರೀಕ್ಷೆಗಳನ್ನು ಪೂರೈಸಲು ಸಾಧ್ಯವಾಗದ ಗಂಡುಮಕ್ಕಳು ದೀರ್ಘವಧಿಯ ಸಂಬಂಧದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳುವಲ್ಲಿ ಹೆಣಗಾಡಬೇಕಾಗಬಹುದು.

ಭಾವನಾತ್ಮಕ ಮತ್ತು ಸಾಮಾಜಿಕ ಶಕ್ತಿ

ಭಾವನಾತ್ಮಕ ಬುದ್ಧಿವಂತಿಕೆ ಮತ್ತು ಸಂಬಂಧ ನಿಯಂತ್ರಣ

ಪುರುಷರಿಗಿಂತ ಮಹಿಳೆಯರು ಹೆಚ್ಚಿನ ಭಾವನಾತ್ಮಕ ಬುದ್ಧಿವಂತಿಕೆಯನ್ನು ಹೊಂದಿರುತ್ತಾರೆ, ಇದು ಸಂಬಂಧದಲ್ಲಿ ಮನಸ್ತಾಪಕ್ಕೂ ಮತ್ತು ನಿರ್ಧಾರ ತೆಗೆದುಕೊಳ್ಳುವಲ್ಲಿ ಹೆಣ್ಣುಮಕ್ಕಳು ಮೇಲುಗೈ ಸಾಧಿಸಲು ಕಾರಣವಾಗುತ್ತಿದೆ. ಭಾವನಾತ್ಮಕ ಬುದ್ಧಿವಂತಿಕೆಯು ಪರಿಣಾಮಕಾರಿ ಸಂವಹನ, ಸಹಾನುಭೂತಿ ಮತ್ತು ಮೌಖಿಕವಲ್ಲದ ಸೂಚನೆಗಳನ್ನು ಅರ್ಥಮಾಡಿಕೊಳ್ಳುವಂತಹ ಕೌಶಲಗಳನ್ನು ಒಳಗೊಂಡಿದೆ . ಇವೆಲ್ಲವೂ ಸಂಬಂಧಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನ್ಯಾವಿಗೇಟ್ ಮಾಡುವ ಮತ್ತು ನಿಯಂಸಲು ಮಹಿಳೆಗೆ ಸಹಾಯವಾಗುತ್ತಿವೆ.

ಆರ್ಥಿಕ ಸ್ವಾತಂತ್ರ್ಯ ಮತ್ತು ಕಡಿಮೆಯಾದ ಅವಲಂಬನೆ

ಹಿಂದಿನಿಂದಲೂ ಹೆಣ್ಣುಮಕ್ಕಳು ಆರ್ಥಿಕ ಸ್ಥಿರತೆಗಾಗಿ ಗಂಡುಮಕ್ಕಳ ಮೇಲೆ ಅವಲಂಬಿತರಾಗಿರುತ್ತಿದ್ದರು. ಪ್ರೀತಿಗಿಂತ ಹೆಚ್ಚಾಗಿ ಆರ್ಥಿಕ ಅವಲಂಬನೆ ಮದುವೆಯಲ್ಲಿ ಪ್ರಮುಖಾಂಶವಾಗಿರುತ್ತಿತ್ತು. ಈಗ ಮಹಿಳೆಯರು ತಮ್ಮದೇ ಆದ ಷರತ್ತುಗಳ ಮೇಲೆ ಆರ್ಥಿಕ ಯಶಸ್ಸನ್ನು ಸಾಧಿಸುತ್ತಿದ್ದಾರೆ. ಉನ್ನತ ಶಿಕ್ಷಣ, ಯಶಸ್ವಿ ವೃತ್ತಿಜೀವನ ಮತ್ತು ವೈಯಕ್ತಿಕ ಹೂಡಿಕೆಗಳ ಅವಕಾಶ ಮಹಿಳೆಯರಿಗೆ ಇನ್ನು ಮುಂದೆ ಪುರುಷನ ಅವಶ್ಯಕತೆಯಿಲ್ಲ ಎನ್ನುವುದನ್ನು ಅರ್ಥ ಮಾಡಿಸಿದೆ. ಆರ್ಥಿಕ ಸ್ವಾತಂತ್ರ್ಯವು ಮಹಿಳೆಯರಿಗೆ ಸಂಬಂಧಗಳಲ್ಲಿ ತಮ್ಮದೇ ಆದ ಷರತ್ತುಗಳನ್ನು ಹೊಂದಿಸಲು ಅನುವು ಮಾಡಿಕೊಡುತ್ತದೆ. ಆರ್ಥಿಕ ಅವಶ್ಯಕತೆಗಿಂತ ಭಾವನಾತ್ಮಕ ಮತ್ತು ವೈಯಕ್ತಿಕ ಹೊಂದಾಣಿಕೆಯ ಆಧಾರದ ಮೇಲೆ ಸಂಗಾತಿಯನ್ನು ಪರಿಗಣಿಸುತ್ತಾರೆ. ಪರಿಣಾಮವಾಗಿ, ಮಹಿಳೆಯರು ಆರ್ಥಿಕ ಅಸ್ಥಿರತೆಯ ಭಯವಿಲ್ಲದೆ ತಮಗೆ ಇಷ್ಟವಿಲ್ಲದ ಸಂಬಂಧದಿಂದ ದೂರಾಗುತ್ತಾರೆ.

ಮಹಿಳೆಯರ ಮಾನದಂಡಗಳು vs ಪುರುಷರ ನಿರೀಕ್ಷೆಗಳು

ಆಧುನಿಕ ಡೇಟಿಂಗ್‌ನ ಅತ್ಯಂತ ವಿವಾದಾತ್ಮಕ ಅಂಶವೆಂದರೆ ಸಂಬಂಧದ ನಿರೀಕ್ಷೆಗಳನ್ನು ಸುತ್ತುವರೆದಿರುವ ದ್ವಂದ್ವ ಮಾನದಂಡ. ಮೇಲೆ ಹೇಳಿದಂತೆ ಸಮಾಜ ಕೂಡ ಮಹಿಳೆಯರಿಗೆ ಆರ್ಥಿಕ ಸಬಲತೆ ನೀಡುವ ಪುರುಷನಿಗಿಂತ ಭಾವನಾತ್ಮಕವಾಗಿ ಹತ್ತಿರವಾಗುವವರು ಸಿಕ್ಕರೆ ಉತ್ತಮ ಎನ್ನುವ ಭಾವನೆಯನ್ನು ಹೊಂದಿದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಪುರುಷರ ಈ ರೀತಿಯ ನಿರೀಕ್ಷೆಗಳನ್ನು ಹೇಳಿದರೆ ಅವನನ್ನು ಟೀಕೆ ಮಾಡಲಾಗುತ್ತದೆ. ಆರ್ಥಿಕವಾಗಿ ಸ್ಥಿರವಾಗಿರುವ, ಭಾವನಾತ್ಮಕವಾಗಿ ಪ್ರಬುದ್ಧವಾಗಿರುವ, ಆಕರ್ಷಕ ಸಂಗಾತಿಯನ್ನು ಹುಡುಕಿದರೆ ಅವನಿಗೆ ಬೇರೆಯದ್ದೇ ಹಣೆಪಟ್ಟಿಯನ್ನು ನೀಡಲಾಗುತ್ತದೆ.

ಕೆಲವು ಪುರುಷರಲ್ಲಿ ಹೆಚ್ಚುತ್ತಿರುವ ಅಸಮಾಧಾನ

ಇತ್ತೀಚಿನ ಹೆಣ್ಣುಮಕ್ಕಳ ನಡವಳಿಕೆ, ಡೇಟಿಂಗ್ ಜಗತ್ತಿನಲ್ಲಿ ಹೆಣ್ಣುಮಕ್ಕಳ ಹೆಚ್ಚಿನ ನಿಯಂತ್ರಣ ಈ ಎಲ್ಲವೂ ಕೆಲವು ಪುರುಷರಲ್ಲಿ ಅಸಮಾಧಾನಕ್ಕೆ ಕಾರಣವಾಗುತ್ತಿದೆ. ಅಲ್ಲದೇ ಇದು ಕೊನೆಗೆ ಹತಾಶೆಯಾಗಿಯೂ ಬದಲಾಗುತ್ತಿದೆ. ಮಹಿಳೆಯರು ಅವಾಸ್ತವಿಕ ನಿರೀಕ್ಷೆಗಳನ್ನು ಹೊಂದಿದ್ದಾರೆ ಎಂದು ದೂರುವ ಪುರುಷರೂ ಇದ್ದಾರೆ. ಹೆಣ್ಣುಮಕ್ಕಳು ಎಲ್ಲದರಲ್ಲೂ ಪರ್ಫೆಕ್ಟ್ ಎನ್ನಿಸುವ ಸಂಗಾತಿಯನ್ನು ಹುಡುಕುತ್ತಿದ್ದಾರೆ ಎಂಬ ದೂರು ಇದೆ.

ಯಾವುದು ತಪ್ಪು ಯಾವುದು ಸರಿ?

ನಿಯಂತ್ರಣಕ್ಕಿಂತ ಸಮತೋಲನಕ್ಕಾಗಿ ಶ್ರಮಿಸಿ

ಸಂಬಂಧಗಳ ವ್ಯಾಖ್ಯಾನವು ಬದಲಾಗಿದೆ ಎಂಬುದನ್ನು ಅಲ್ಲಗೆಳೆಯುವಂತಿಲ್ಲ. ಆದರೆ ನಿಜವಾದ ಸಂಬಂಧ ಯಶಸ್ಸು ಇರುವುದು ಪ್ರಾಬಲ್ಯಕ್ಕಿಂತ ಸಮತೋಲನದಲ್ಲಿ. ಪರಸ್ಪರ ಗೌರವ, ತಿಳುವಳಿಕೆ ಮತ್ತು ಹಂಚಿಕೆಯ ಜವಾಬ್ದಾರಿಗಳು ಸಂಬಂಧವನ್ನು ಇನ್ನಷ್ಟು ಚಿಗುರುವಂತೆ ಮಾಡುತ್ತವೆ. ಹೆಣ್ಣಾಗಲಿ, ಗಂಡಾಗಲಿ ತನ್ನ ಸಂಗಾತಿಯ ಮೇಲೆ ನಿಯಂತ್ರಣ ಹೊಂದಿರುವುದು ಸರಿಯಲ್ಲ.

ಮುಕ್ತ ಸಂವಹನದ ಅಗತ್ಯ

ಲಿಂಗ ಪಾತ್ರಗಳು ವಿಕಸನಗೊಳ್ಳುತ್ತಲೇ ಇರುವುದರಿಂದ, ಆರೋಗ್ಯಕರ ಸಂಬಂಧಗಳನ್ನು ಕಾಪಾಡಿಕೊಳ್ಳಲು ಮುಕ್ತ ಸಂವಹನವು ಪ್ರಮುಖವಾಗಿದೆ. ಹೆಣ್ಣು ಹಾಗೂ ಗಂಡು ಇಬ್ಬರೂ ಇಬ್ಬರ ಮೌಲ್ಯಕ್ಕೂ ಬೆಲೆ ಕೊಡಬೇಕು. ಭಾವನಾತ್ಮಕ, ಆರ್ಥಿಕ ಅಥವಾ ಸಾಮಾಜಿಕ ಮೌಲ್ಯಗಳನ್ನು ಗೌರವಿಸಬೇಕು.

ಸಂಬಂಧಗಳನ್ನು ಯಾರು ಹೆಚ್ಚಾಗಿ ಕೊನೆಗೊಳಿಸುತ್ತಾರೆ?

ಸಂಬಂಧದಿಂದ ದೂರಾಗುವುದು ಅಂದರೆ ಬ್ರೇಕಪ್‌ಅಪ್ ಅಥವಾ ಡಿವೋರ್ಸ್‌ಗೆ ಮುನ್ನುಡಿ ಬರೆಯುವುದು ಹೆಣ್ಣುಮಕ್ಕಳೇ ಎನ್ನುವುದನ್ನು ಹಲವು ಸಂಶೋಧನೆಗಳು ಸೂಚಿಸಿವೆ. ಸುಮಾರು ಶೇ 70ರಷ್ಟು ಪ್ರಕರಣಗಳಲ್ಲಿ ಮಹಿಳೆಯರೇ ಮೊದಲು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುತ್ತಾರೆ ಎಂದು ಅಧ್ಯಯನಗಳು ಸೂಚಿಸುತ್ತವೆ. ಈ ಅಂಕಿ–ಅಂಶವು ಮಹಿಳೆಯರು ಅತೃಪ್ತಿ, ಸಂತೋಷ ಕೊರತೆ, ಮೌಲ್ಯದ ಕೊರತೆ ಕಾರಣದಿಂದ ಸಂಬಂಧದಿಂದ ದೂರಾಗುವ ನಿರ್ಧಾರ ಮಾಡುತ್ತಾರೆ ಎಂಬುದನ್ನೂ ಹೇಳುತ್ತವೆ.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner