ಸಂಗಾತಿ ಜೊತೆ ಸೇರಲು ಮನಸ್ಸಿದ್ದರೂ ಸಾಧ್ಯವಾಗುತ್ತಿಲ್ಲ: ಹಠಾತ್ ಕಾಡುವ ಲೈಂಗಿಕ ದೌರ್ಬಲ್ಯಕ್ಕೆ ಕಾರಣ, ಪರಿಹಾರ ಏನು ಇಲ್ಲಿದೆ ಮಾಹಿತಿ
ಕನ್ನಡ ಸುದ್ದಿ  /  ಜೀವನಶೈಲಿ  /  ಸಂಗಾತಿ ಜೊತೆ ಸೇರಲು ಮನಸ್ಸಿದ್ದರೂ ಸಾಧ್ಯವಾಗುತ್ತಿಲ್ಲ: ಹಠಾತ್ ಕಾಡುವ ಲೈಂಗಿಕ ದೌರ್ಬಲ್ಯಕ್ಕೆ ಕಾರಣ, ಪರಿಹಾರ ಏನು ಇಲ್ಲಿದೆ ಮಾಹಿತಿ

ಸಂಗಾತಿ ಜೊತೆ ಸೇರಲು ಮನಸ್ಸಿದ್ದರೂ ಸಾಧ್ಯವಾಗುತ್ತಿಲ್ಲ: ಹಠಾತ್ ಕಾಡುವ ಲೈಂಗಿಕ ದೌರ್ಬಲ್ಯಕ್ಕೆ ಕಾರಣ, ಪರಿಹಾರ ಏನು ಇಲ್ಲಿದೆ ಮಾಹಿತಿ

ಸಂಗಾತಿಗಳ ನಡುವಿನ ಲೈಂಗಿಕ ಕ್ರಿಯೆಯು ಅವರ ಸಂಬಂಧದ ಅನ್ಯೋನ್ಯತೆಯನ್ನು ನಿರ್ಧರಿಸುತ್ತದೆ. ಯಾವುದೇ ವ್ಯಕ್ತಿ ಲೈಂಗಿಕ ದೌರ್ಬಲ್ಯದಿಂದ ಬಳಲುತ್ತಿದ್ದರೆ, ಇದು ತನ್ನ ಸಂಗಾತಿಯ ಆನಂದವನ್ನು ಅಡ್ಡಿಪಡಿಸಲು ಕಾರಣವಾಗುತ್ತದೆ. ಇಂದು ಅತಿ ಹೆಚ್ಚು ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಕಾರಣ ಮತ್ತು ಪರಿಹಾರಗಳ ಬಗ್ಗೆ ಇಲ್ಲಿದೆ ಮಾಹಿತಿ. (ಬರಹ: ಪ್ರಿಯಾಂಕಾ ಗೌಡ)

ಸಂಗಾತಿ ಜೊತೆ ಸೇರಲು ಮನಸ್ಸಿದ್ದರೂ ಸಾಧ್ಯವಾಗುತ್ತಿಲ್ಲ: ಈ ಲೈಂಗಿಕ ದೌರ್ಬಲ್ಯಕ್ಕೆ ಕಾರಣ, ಪರಿಹಾರ ಏನು ಇಲ್ಲಿದೆ ಮಾಹಿತಿ
ಸಂಗಾತಿ ಜೊತೆ ಸೇರಲು ಮನಸ್ಸಿದ್ದರೂ ಸಾಧ್ಯವಾಗುತ್ತಿಲ್ಲ: ಈ ಲೈಂಗಿಕ ದೌರ್ಬಲ್ಯಕ್ಕೆ ಕಾರಣ, ಪರಿಹಾರ ಏನು ಇಲ್ಲಿದೆ ಮಾಹಿತಿ

ಲೈಂಗಿಕ ಸಂಬಂಧ ಅಂದರೆ ಇದು ಇಬ್ಬರು ವ್ಯಕ್ತಿಗಳ ನಡುವಿನ ದೈಹಿಕ ಅಥವಾ ಭಾವನಾತ್ಮಕ ಅನ್ಯೋನ್ಯತೆಯಿಂದ ಕೂಡಿರುತ್ತದೆ. ಗಂಡ-ಹೆಂಡತಿಯ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತಿದೆ. ಎಷ್ಟೇ ಜಗಳವಾಡಿದ್ರೂ ಗಂಡ-ಹೆಂಡತಿ ಒಟ್ಟು ಸೇರಿದಾಗ ಆ ಜಗಳವೆಲ್ಲಾ ಮರೆತು ಮತ್ತೆ ಒಂದಾಗುತ್ತಾರೆ. ಈ ಶಕ್ತಿ ಲೈಂಗಿಕತೆಗಿದೆ. ಲೈಂಗಿಕತೆಯು ಎಲ್ಲಾ ಸಂಬಂಧಗಳ ಪ್ರಮುಖ ಭಾಗವಾಗಿದ್ದರೂ, ಅನೇಕ ದಂಪತಿಗಳಿಗೆ ಈ ಕ್ರಿಯೆಯು ಹತಾಶೆ, ನಿರಾಶೆ ಮತ್ತು ನೋವಿನಿಂದ ಕೂಡಿರುತ್ತದೆ. ಇತ್ತೀಚೆಗೆ ಬಹಳಷ್ಟು ದಂಪತಿ ಈ ಲೈಂಗಿಕ ದೌರ್ಬಲ್ಯದಿಂದ (Sexual Dysfunction) ತೊಂದರೆ ಅನುಭವಿಸುತ್ತಿದ್ದಾರೆ.

ದೈಹಿಕ ಸಂತೋಷ, ಬಯಕೆ, ಪ್ರಚೋದನೆ ಅಥವಾ ಪರಾಕಾಷ್ಠೆ ಸೇರಿದಂತೆ ಸಾಮಾನ್ಯ ಲೈಂಗಿಕ ಚಟುವಟಿಕೆಯ ಯಾವುದೇ ಹಂತದಲ್ಲಿ ವ್ಯಕ್ತಿ ಅಥವಾ ಪಾಲುದಾರರು ಅನುಭವಿಸುವ ತೊಂದರೆ ಅಥವಾ ತೃಪ್ತಿಯ ಮೇಲೆ ಪರಿಣಾಮ ಬೀರಬಹುದು. ಯಾವುದೇ ವ್ಯಕ್ತಿಯು ಬಯಸಿದಂತೆ ಲೈಂಗಿಕ ಸಂಬಂಧದಲ್ಲಿ ಭಾಗವಹಿಸಲು ಅಸಮರ್ಥತೆ ಹೊಂದಿರುವುದನ್ನು ಲೈಂಗಿಕ ದೌರ್ಬಲ್ಯ ಎಂದು ಹೇಳಲಾಗುತ್ತದೆ. ಲೈಂಗಿಕತೆಯು ನಿಮ್ಮ ಆರೋಗ್ಯ ಮತ್ತು ಜೀವನದ ಪ್ರಮುಖ ಭಾಗವಾಗಿದೆ. ಹೀಗಾಗಿ ಲೈಂಗಿಕ ದೌರ್ಬಲ್ಯವನ್ನು ನಿಭಾಯಿಸುವುದು ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಕಠಿಣವಾಗಿರುತ್ತದೆ.

ವಿವಿಧ ಕಾರಣಗಳಿಗಾಗಿ ಲೈಂಗಿಕ ದೌರ್ಬಲ್ಯವನ್ನು ಅನುಭವಿಸಬಹುದು. ಹಾಗಂತ ಇದು ಅಲೈಂಗಿಕತೆಯಲ್ಲ. ಮೊದಲಿಗಿದ್ದ ಲೈಂಗಿಕ ಆಸಕ್ತಿ ಕಾಲಕ್ರಮೇಣ ಕಡಿಮೆಯಾಗುತ್ತದೆ. ಈ ಅಸ್ವಸ್ಥತೆಗಳ ಹಿಂದಿನ ಪ್ರಮುಖ ಅಂಶಗಳಲ್ಲಿ ಒತ್ತಡ ಕೂಡ ಒಂದು. ಆರೋಗ್ಯಕರ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುವ ಇತರ ಸಮಸ್ಯೆಗಳೆಂದರೆ ಲೈಂಗಿಕ ಆಘಾತ, ಹೃದ್ರೋಗ, ಮಧುಮೇಹ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳು.

ಲೈಂಗಿಕ ದೌರ್ಬಲ್ಯ ಎಂದರೇನು?

ಲೈಂಗಿಕ ದೌರ್ಬಲ್ಯವು, ಸಂಗಾತಿಯೊಂದಿಗೆ ಸೇರುವಾಗ ಅಥವಾ ಇತರ ಚಟುವಟಿಕೆಗಳ ಸಮಯದಲ್ಲಿ ಆನಂದವನ್ನು ಅನುಭವಿಸುವಾಗ ಈ ಸಮಸ್ಯೆಯುಂಟಾಗುತ್ತದೆ. ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಬಯಸುವುದು, ಆದರೆ ಅದನ್ನು ಆನಂದಿಸಲು ಸಾಧ್ಯವಾಗದಿರುವುದು ಲೈಂಗಿಕ ದೌರ್ಬಲ್ಯದ ಸಂಕೇತವಾಗಿದೆ. ಅಧ್ಯಯನವೊಂದರ ಪ್ರಕಾರ, ಪುರುಷರಿಗಿಂತ ಮಹಿಳೆಯರಲ್ಲಿ ಲೈಂಗಿಕ ಆಸಕ್ತಿ ಕಡಿಮೆ ಇರುತ್ತದೆ ಎಂದು ಹೇಳಲಾಗಿದೆ. ಆದರೆ, ಪುರುಷರಲ್ಲಿ ಲೈಂಗಿಕ ನಿಮಿರು ದೌರ್ಬಲ್ಯ ಹೆಚ್ಚಾಗಿ ಕಂಡುಬಂದಿದೆ ಎಂದು ಅಧ್ಯಯನವೊಂದರಿಂದ ತಿಳಿದು ಬಂದಿದೆ.

ಲೈಂಗಿಕ ಪ್ರತಿಕ್ರಿಯೆ ಚಕ್ರವು ಲೈಂಗಿಕ ಚಟುವಟಿಕೆಯ ಸಮಯದಲ್ಲಿ ಸಂಭವಿಸುವ ದೈಹಿಕ ಮತ್ತು ಭಾವನಾತ್ಮಕ ಬದಲಾವಣೆಗಳಾಗಿವೆ. ಇದು ಸಂಗಾತಿಯೊಂದಿಗೆ ಸೇರುವುದು ಮತ್ತು ಹಸ್ತಮೈಥುನವನ್ನು ಒಳಗೊಂಡಿರುತ್ತದೆ. ಇದು ಬಯಕೆ, ಪ್ರಚೋದನೆ, ಪರಾಕಾಷ್ಠೆ ಇತ್ಯಾದಿಯನ್ನು ಒಳಗೊಂಡಿರುತ್ತದೆ. ಈ ಯಾವುದೇ ಹಂತಗಳಲ್ಲಿ ನಿಮ್ಮ ದೇಹವು ವಿಭಿನ್ನವಾಗಿ ಪ್ರತಿಕ್ರಿಯಿಸಿದರೆ, ಅದು ಲೈಂಗಿಕ ದೌರ್ಬಲ್ಯವನ್ನು ಸೂಚಿಸುತ್ತದೆ.

ಲೈಂಗಿಕ ದೌರ್ಬಲ್ಯಕ್ಕೆ ಕಾರಣಗಳು

ಲೈಂಗಿಕ ದೌರ್ಬಲ್ಯಕ್ಕೆ ಕೆಲವು ದೈಹಿಕ ಮತ್ತು ಮಾನಸಿಕ ಕಾರಣಗಳಿವೆ. ದೈಹಿಕ ಕಾರಣಗಳಲ್ಲಿ ಮೂತ್ರಪಿಂಡ ಅಥವಾ ಪಿತ್ತಜನಕಾಂಗದ ವೈಫಲ್ಯ, ಮಧುಮೇಹ, ಹೃದ್ರೋಗಗಳು, ಹಾರ್ಮೋನ್ ಅಸಮತೋಲನ, ಕ್ಯಾನ್ಸರ್, ಗರ್ಭಧಾರಣೆ ಮತ್ತು ಋತುಬಂಧ ಸೇರಿವೆ.

ಇನ್ನು ಈ ಸಮಸ್ಯೆಗೆ ಮಾನಸಿಕ ಕಾರಣವೆಂದರೆ ಒತ್ತಡ, ಆತಂಕ, ವೈವಾಹಿಕ ಸಮಸ್ಯೆಗಳು, ಖಿನ್ನತೆ ಮತ್ತು ಲೈಂಗಿಕ ಆಘಾತಗಳಂತಹ ಅನೇಕ ಕಾರಣಗಳಿವೆ. ಲೈಂಗಿಕ ದೌರ್ಬಲ್ಯಕ್ಕೆ ಕಾರಣವಾಗುವ ಕೆಲವು ಔಷಧಿಗಳೂ ಇವೆ. ಹಲವಾರು ಖಿನ್ನತೆ ಹಾಗೂ ಶಮನಕಾರಿಗಳು ಕಡಿಮೆ ಕಾಮಾಸಕ್ತಿಗೆ ಕಾರಣವಾಗಬಹುದು. ಮೂತ್ರವರ್ಧಕಗಳು, ಆಲ್ಫಾ-ಬ್ಲಾಕರ್‌ಗಳು ಮತ್ತು ಬೀಟಾ-ಬ್ಲಾಕರ್‌ಗಳಂತಹ ಔಷಧಿಗಳು ಪುರುಷರಲ್ಲಿ ನಿಮಿರುವಿಕೆಯ ದೌರ್ಬಲ್ಯಕ್ಕೆ ಕಾರಣವಾಗಬಹುದು. ಇವು ಪ್ರಚೋದನೆಯನ್ನು ಅನುಭವಿಸುವ ಸಾಮರ್ಥ್ಯವನ್ನು ಅಡ್ಡಿಪಡಿಸಬಹುದು.

ಅಧ್ಯಯನವೊಂದರ ಪ್ರಕಾರ ನಾಲ್ಕು ರೀತಿಯ ಲೈಂಗಿಕ ದೌರ್ಬಲ್ಯಗಳಿವೆ, ಅವು ಇಂತಿವೆ:

ಲೈಂಗಿಕ ಬಯಕೆ ಅಥವಾ ಆಸಕ್ತಿಯ ಕೊರತೆ

ಇದು ವ್ಯಕ್ತಿಯ ಲೈಂಗಿಕ ಆಸಕ್ತಿಯ ಕೊರತೆಯನ್ನು ಸೂಚಿಸುತ್ತದೆ. ಇದು ಯಾವುದೇ ರೀತಿಯ ದೈಹಿಕ ಚಟುವಟಿಕೆಗೆ ಕಾರಣವಾಗಬಹುದು. ಕಡಿಮೆ ಕಾಮಾಸಕ್ತಿಯು ಹೆರಿಗೆ, ಸ್ತನ್ಯಪಾನ ಮತ್ತು ಋತುಬಂಧದ ಸಮಯದಲ್ಲಿ ಹಾರ್ಮೋನುಗಳ ಬದಲಾವಣೆಗಳಿಂದ ಉಂಟಾಗಬಹುದು. ಇತರ ಸಮಸ್ಯೆಗಳೆಂದರೆ ಅಧಿಕ ರಕ್ತದೊತ್ತಡ, ಮಧುಮೇಹ, ಒತ್ತಡ ಮತ್ತು ಆಯಾಸವನ್ನು ಒಳಗೊಂಡಿರಬಹುದು.

ಲೈಂಗಿಕ ಪ್ರಚೋದನೆಯ ಅಸ್ವಸ್ಥತೆ

ನೀವು ಲೈಂಗಿಕತೆಯನ್ನು ಹೊಂದುವ ಬಯಕೆಯನ್ನು ಹೊಂದಿರಬಹುದು. ಆದರೆ, ನೀವು ಪ್ರಚೋದನೆಯನ್ನು ಹೊಂದಲು ಸಾಧ್ಯವಾಗುವುದಿಲ್ಲ. ಲೈಂಗಿಕ ಚಟುವಟಿಕೆಯ ಸಮಯದಲ್ಲಿ ನೀವು ಪ್ರಚೋದನೆಯನ್ನು ಕಾಪಾಡಿಕೊಳ್ಳಲು ಸಹ ಸಾಧ್ಯವಿಲ್ಲ. ಲೈಂಗಿಕ ಪ್ರಚೋದನೆಯ ಅಸ್ವಸ್ಥತೆಗಳಲ್ಲಿ ಎರಡು ವಿಧಗಳಿವೆ. ವ್ಯಕ್ತಿನಿಷ್ಠ ಪ್ರಚೋದನೆಯ ಅಸ್ವಸ್ಥತೆ ಮತ್ತು ಸಂಯೋಜಿತ ಲೈಂಗಿಕ ಅಸ್ವಸ್ಥತೆ. ಮೊದಲ ವಿಧದಲ್ಲಿ, ಲೈಂಗಿಕ ಪ್ರಚೋದನೆಗೆ ಜನನಾಂಗದ ಪ್ರತಿಕ್ರಿಯೆ ಇರುತ್ತದೆ. ಆದರೆ, ಅದರ ಆನಂದದ ಬಗ್ಗೆ ಮಾನಸಿಕ ಅರಿವು ಇರುವುದಿಲ್ಲ. ಎರಡನೆಯ ವಿಧದಲ್ಲಿ, ಲೈಂಗಿಕ ಪ್ರಚೋದನೆಗೆ ಯಾವುದೇ ಜನನಾಂಗ ಮತ್ತು ಮಾನಸಿಕ ಪ್ರತಿಕ್ರಿಯೆ ಇರುವುದಿಲ್ಲ.

ಪರಾಕಾಷ್ಠೆಯ ಅಸ್ವಸ್ಥತೆ

ಸಾಕಷ್ಟು ಪ್ರಚೋದನೆಯ ಹೊರತಾಗಿಯೂ ಪರಾಕಾಷ್ಠೆಯನ್ನು ಸಾಧಿಸುವಲ್ಲಿ ಮರುಕಳಿಸುವ ಸಮಸ್ಯೆಯನ್ನು ಸೂಚಿಸುತ್ತದೆ. ಇದು ದೈಹಿಕ, ಭಾವನಾತ್ಮಕ ಅಥವಾ ಇತರ ಮಾನಸಿಕ ಅಂಶಗಳಿಂದಾಗಿರಬಹುದು. ಅಧ್ಯಯನವೊಂದರ ಪ್ರಕಾರ, 11 ರಿಂದ 41 ಪ್ರತಿಶತ ಮಹಿಳೆಯರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಲೈಂಗಿಕ ನೋವು ಅಥವಾ ಅಸ್ವಸ್ಥತೆ

ಲೈಂಗಿಕ ಪ್ರಚೋದನೆಯ ಸಮಯದಲ್ಲಿ ನೋವು ಮತ್ತು ಅಸ್ವಸ್ಥತೆಯಿಂದ ಕೂಡಿರುತ್ತದೆ. ಸಂಗಾತಿಯೊಂದಿಗೆ ಲೈಂಗಿಕ ಚಟುವಟಿಕೆಲ್ಲಿ ಸೇರುವಾಗ ಉಂಟಾಗುವ ಈ ನೋವಿಗೆ ಡಿಸ್ಪಾರುನಿಯಾ ಎಂದು ಕರೆಯುತ್ತಾರೆ. ಇದು ಲೈಂಗಿಕತೆ ಅನುಭವಿಸುವಾಗ ಉಂಟಾಗುವ ನೋವು, ಲೈಂಗಿಕತೆಯ ನಂತರವೂ ಮರುಕಳಿಸುವ ನೋವು ಆಗಿರುತ್ತದೆ. ಆತಂಕ, ಒತ್ತಡ ಅಥವಾ ಖಿನ್ನತೆಯಿಂದ ಈ ಸಮಸ್ಯೆ ಉಂಟಾಗಬಹುದು.

ಲೈಂಗಿಕ ದೌರ್ಬಲ್ಯಕ್ಕೆ ರೋಗನಿರ್ಣಯ ಮಾಡುವುದು ಸೂಕ್ತ

ಸಂಗಾತಿಗಳ ನಡುವಿನ ಲೈಂಗಿಕ ಸಮಸ್ಯೆಗಳು ಬಹಳಷ್ಟು ಆತಂಕ ಮತ್ತು ಸಂಬಂಧದ ಸಮಸ್ಯೆಗಳಿಗೆ ಕಾರಣವಾಗಬಹುದು. ಹೀಗಾಗಿ ಈ ಸಮಸ್ಯೆಗಳನ್ನು ಇಬ್ಬರೂ ಸೇರಿ ಚರ್ಚಿಸುವುದು ಮತ್ತು ಅಗತ್ಯವಿದ್ದರೆ ವೈದ್ಯಕೀಯ ಸಹಾಯವನ್ನು ಪಡೆಯುವುದು ಉತ್ತಮ. ಇದರಿಂದ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಿಕೊಳ್ಳಬಹುದು. ಕಾರಣವನ್ನು ಅವಲಂಬಿಸಿ ಚಿಕಿತ್ಸೆ ನೀಡಲಾಗುತ್ತದೆ. ಅನಾರೋಗ್ಯ ಸಮಸ್ಯೆ ಅಥವಾ ಇನ್ನಿತರೆ ಕಾರಣಗಳು ಲೈಂಗಿಕ ದೌರ್ಬಲ್ಯಕ್ಕೆ ಕಾರಣವಾಗಿರಬಹುದು. ಇದನ್ನು ಔಷಧಿಗಳಿಂದ ಪರಿಹರಿಸಬಹುದು. ಲೂಬ್ರಿಕೇಟಿಂಗ್ ಜೆಲ್‌ಗಳು ಮತ್ತು ಕ್ರೀಮ್‌ಗಳು ಯೋನಿ ಶುಷ್ಕತೆಗೆ ಸಹಾಯ ಮಾಡುತ್ತದೆ. ಸೋಂಕುಗಳಿಗೆ ಚಿಕಿತ್ಸೆ ನೀಡಲು ಆಂಟಿಬಯೋಟಿಕ್ಸ್ ಗಳಂತಹ ಔಷಧಿಗಳನ್ನು ಬಳಸಬಹುದು.

ಲೈಂಗಿಕ ದೌರ್ಬಲ್ಯಕ್ಕೆ ಚಿಕಿತ್ಸೆ

ಲೈಂಗಿಕ ದೌರ್ಬಲ್ಯಕ್ಕೆ ಚಿಕಿತ್ಸೆ ನೀಡಲು ಹಲವಾರು ಮಾರ್ಗಗಳಿವೆ. ನಿಮ್ಮ ವೈದ್ಯರು ಇದಕ್ಕೆ ಕಾರಣವನ್ನು ಪತ್ತೆಹಚ್ಚಿದ ನಂತರ ಅವರು ನಿಮಗೆ ಸೂಕ್ತ ಔಷಧಿಗಳನ್ನು ಸೂಚಿಸಬಹುದು. ಹಾರ್ಮೋನುಗಳ ಅಸಮತೋಲನದಿಂದ ಉಂಟಾಗುವ ಲೈಂಗಿಕ ದೌರ್ಬಲ್ಯಕ್ಕೆ ಮಾತ್ರೆಗಳು ಕೆಲಸ ಮಾಡಬಹುದು. ಋತುಚಕ್ರದ ಸಮಸ್ಯೆಯನ್ನು ಅನುಭವಿಸುತ್ತಿರುವ ಮಹಿಳೆಯರಿಗೆ ಹಾರ್ಮೋನ್ ಚಿಕಿತ್ಸೆಯು ಸಹಾಯ ಮಾಡುತ್ತದೆ. ಇತರ ಚಿಕಿತ್ಸೆಗಳಲ್ಲಿ ಹಾರ್ಮೋನ್ ರಿಪ್ಲೇಸ್‌ಮೆಂಟ್ ಥೆರಪಿ, ಪೆಲ್ವಿಕ್ ಫ್ಲೋರ್ ಫಿಸಿಕಲ್ ಥೆರಪಿ, ಕೆಗೆಲ್ ವ್ಯಾಯಾಮಗಳು ಮತ್ತು ಮಾನಸಿಕ ಆರೋಗ್ಯ ಚಿಕಿತ್ಸೆ ಸೇರಿವೆ.

ಕಿರಿದಾದ ಯೋನಿಗಳಿಗೆ ಡಿಲೇಟರ್‌ಗಳಂತಹ ಸಾಧನಗಳನ್ನು ಬಳಸಬಹುದು. ಅಲ್ಲದೆ, ಶಸ್ತ್ರಚಿಕಿತ್ಸೆಯ ಜೊತೆಗೆ ಅನೇಕ ಯೋನಿ ಹಿಗ್ಗುವಿಕೆ ವ್ಯಾಯಾಮಗಳನ್ನು ಶಿಫಾರಸು ಮಾಡಬಹುದು.

ಈ ಸಮಸ್ಯೆಯನ್ನು ತಡೆಯಬಹುದೇ?

ದುರದೃಷ್ಟವಶಾತ್, ಈ ಸಮಸ್ಯೆಯನ್ನು ತಡೆಯಲು ಯಾವುದೇ ಮಾರ್ಗವಿಲ್ಲ. ಆದರೆ, ಅದರ ಪರಿಣಾಮವನ್ನು ಕಡಿಮೆ ಮಾಡಲು ಮತ್ತು ಅದನ್ನು ಗುಣಪಡಿಸಲು ಕ್ರಮಗಳನ್ನು ತೆಗೆದುಕೊಳ್ಳಬಹುದು. ಸರಿಯಾದ ಚಿಕಿತ್ಸೆಯನ್ನು ಕೈಗೊಳ್ಳುವುದರಿಂದ ಈ ಸಮಸ್ಯೆಯನ್ನು ಸರಿಪಡಿಸಬಹುದು.

 

Whats_app_banner