ಕನ್ನಡ ಸುದ್ದಿ  /  ಜೀವನಶೈಲಿ  /  Relationship: ಮುನಿಸಿಕೊಂಡ ಪತ್ನಿಯನ್ನು ಸಮಾಧಾನಿಸುವುದು ಹೇಗೆ? ಇಲ್ಲಿವೆ ಬೆಸ್ಟ್​ ಸಲಹೆಗಳು

Relationship: ಮುನಿಸಿಕೊಂಡ ಪತ್ನಿಯನ್ನು ಸಮಾಧಾನಿಸುವುದು ಹೇಗೆ? ಇಲ್ಲಿವೆ ಬೆಸ್ಟ್​ ಸಲಹೆಗಳು

Relationship: ಪತ್ನಿ ಮುನಿಸಿಕೊಂಡಳು ಎಂದರೆ ಮುಗೀತು ಮನೆಯೇ ಜ್ವಾಲಾಮುಖಿಯಂತೆ ಬದಲಾಗಿಬಿಡುತ್ತದೆ. ಇಂತಹ ಸಂದರ್ಭಗಳಲ್ಲಿ ಪತಿ ಏನು ಮಾಡಬೇಕು..? ಪತ್ನಿಯನ್ನು ಸಮಾಧಾನಪಡಿಸಲು ಯಾವೆಲ್ಲ ಅಸ್ತ್ರಗಳನ್ನು ಪ್ರಯೋಗಿಸಬಹುದು ಎಂಬುದಕ್ಕೆ ಇಲ್ಲೊಂದಿಷ್ಟು ಸಲಹೆಗಳನ್ನು ನೀಡಲಾಗಿದೆ.

ಮುನಿಸಿಕೊಂಡ ಪತ್ನಿಯನ್ನು ಸಮಾಧಾನ ಮಾಡಲು ಟಿಪ್ಸ್‌
ಮುನಿಸಿಕೊಂಡ ಪತ್ನಿಯನ್ನು ಸಮಾಧಾನ ಮಾಡಲು ಟಿಪ್ಸ್‌ (PC: Unsplash)

Relationship: ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂದು ಹೇಳುತ್ತಾರೆ. ಆದರೆ ಈ ಮಾತು ಎಲ್ಲಾ ಬಾರಿಯೂ ನಿಜವಾಗಬೇಕು ಎಂದೇನಿಲ್ಲ. ಕೆಲವೊಮ್ಮೆ ಪತಿಗೆ ತನ್ನ ಪತ್ನಿ ಏಕೆ ತನ್ನ ಮೇಲೆ ಮುನಿಸಿಕೊಂಡಿದ್ದಾಳೆ ಎಂಬುದರ ಅರಿವೇ ಇರುವುದಿಲ್ಲ. ಈ ಪತ್ನಿಯಂದಿರು ಮುನಿಸಿಕೊಳ್ಳಲು ಪತಿಯೇ ಕಾರಣ ಎಂದೂ ಸಂಪೂರ್ಣವಾಗಿ ಹೇಳಲು ಸಾಧ್ಯವಿಲ್ಲ. ಏಕೆಂದರೆ ಒಮ್ಮೊಮ್ಮೆ ಅವರ ಕೋಪಕ್ಕೆ ಕಾರಣವೇ ಇರುವುದಿಲ್ಲ. ಆದರೆ ಹೆಂಡತಿ ಕೋಪ ಮಾಡಿಕೊಂಡಾಗ ಮನೆಯ ವಾತಾವರಣವೇ ತಲೆ ಕೆಳಗಾಗುವುದು ಪಕ್ಕಾ..!

ಟ್ರೆಂಡಿಂಗ್​ ಸುದ್ದಿ

ಹೆಂಡತಿಯಂತೂ ತಮಗೆ ಏಕೆ ಕೋಪ ಬಂತು ಎಂದೂ ಹೇಳುವುದಿಲ್ಲ. ಸೀದಾ ಮೌನವೃತಕ್ಕೆ ಜಾರಿ ಬಿಡುತ್ತಾರೆ. ಈ ಸಂದರ್ಭದಲ್ಲಿ ಪತಿಯಂದಿರು ಅವರ ಕೋಪಕ್ಕೆ ಪ್ರಚೋದನೆ ನೀಡುವಂತಹ ಯಾವುದೇ ಕೆಲಸಗಳನ್ನು ಮಾಡದೇ ಇರುವುದು ಬುದ್ಧಿವಂತಿಕೆಯ ನಡೆಯಾಗಿರುತ್ತದೆ. ಮುನಿಸಿಕೊಂಡ ಪತ್ನಿಯನ್ನು ಹೇಗೆ ಸಮಾಧಾನ ಪಡಿಸಬೇಕು ಎಂಬುದರ ಬಗ್ಗೆ ನೀವು ಯೋಚಿಸಬೇಕು. ಒಂದು ವೇಳೆ ಇದಕ್ಕೆ ನಿಮಗೆ ಪರಿಹಾರ ತಿಳಿದಿಲ್ಲ ಎಂದಾದಲ್ಲಿ ಇಲ್ಲೊಂದಿಷ್ಟು ಐಡಿಯಾಗಳನ್ನು ನೀಡಲಾಗಿದೆ. ಇವುಗಳನ್ನು ನೀವು ಬಳಸಿಕೊಂಡು ಮುನಿಸಿಕೊಂಡಿರುವ ಪತ್ನಿಯನ್ನು ಸಮಾಧಾನಿಸಬಹುದಾಗಿದೆ.

ಭಾವನೆಗಳನ್ನು ಅರ್ಥ ಮಾಡಿಕೊಳ್ಳಿ

ನಿಮ್ಮ ಪತ್ನಿ ನಿಮ್ಮ ಮೇಲೆ ಸದಾ ಮುನಿಸಿಕೊಂಡಿರುತ್ತಾರೆ. ಮಾತಿನ ಜಾಗದಲ್ಲಿ ಮನೆಯಲ್ಲಿ ಮೌನವೇ ಹೆಚ್ಚಾಗುತ್ತಿದೆ ಎಂದಾದಾಗ ನೀವು ಈ ಬಗ್ಗೆ ಗಂಭೀರವಾಗಿ ಯೋಚಿಸುವ ಸಮಯ ಬಂದಿದೆ ಎಂದೇ ಅರ್ಥ. ಸಾಮಾನ್ಯವಾಗಿ ಹೆಣ್ಣು ಮಕ್ಕಳು ಹೆಚ್ಚು ಭಾವಾನಾತ್ಮಕವಾಗಿ ಯೋಚಿಸುತ್ತಾರೆ. ಅವರ ಭಾವನೆಗಳಿಗೆ ನಿಮ್ಮ ವ್ಯಕ್ತಿತ್ವದಿಂದ ಪೆಟ್ಟು ಬೀಳುತ್ತಿದ್ಯಾ ಎಂಬುದನ್ನು ನೀವು ಮೊದಲು ಕಂಡುಕೊಳ್ಳಬೇಕಿದೆ.

ನೀವು ಮಾಡಿದ ತಪ್ಪಿಗೆ ಕ್ಷಮೆ ಕೇಳುವ ತನಕವೂ ಹೆಣ್ಣು ಮಕ್ಕಳು ನಿಮ್ಮನ್ನು ಮಾತಾಡಿಸುವ ಚಾನ್ಸೇ ಇರುವುದಿಲ್ಲ. ಹೀಗಾಗಿ ನಿಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದನ್ನು ಕಲಿತುಕೊಳ್ಳಿ. ದಾಂಪತ್ಯದಲ್ಲಿ ಇಬ್ಬರೂ ಸೋಲನ್ನು ಒಪ್ಪಿಕೊಳ್ಳಲು ತಯಾರಿಲಿಲ್ಲದಿದ್ದರೆ ಜೀವನ ತುಂಬಾನೇ ಕಷ್ಟ. ಹೀಗಾಗಿ ನಿಮ್ಮ ಪತ್ನಿ ಹಟದ ಸ್ವಭಾವದವರಾಗಿದ್ದರೆ ನೀವು ಕ್ಷಮೆ ಕೇಳಿದರೆ ಜಗಳ ಅಲ್ಲಿಯೇ ಅಂತ್ಯ ಕಾಣುತ್ತವೆ.

ಸಮಾಧಾನದಿಂದ ಮಾತನಾಡಿ

ಗಂಡ - ಹೆಂಡತಿ ನಡುವೆ ಏನೋ ಜಗಳವಾಗ್ತಿದೆ ಎಂದುಕೊಳ್ಳೋಣ. ಆಗ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಬದಲು ನೀವೇ ಬೆಂಕಿ ಆರಿಸುವುದನ್ನು ಆಯ್ಕೆ ಮಾಡಿಕೊಳ್ಳಬಹುದು. ಇಬ್ಬರೂ ಕುಳಿತುಕೊಂಡು ಸಮಾಧಾನದಿಂದ ಮಾತನಾಡುವ ಮೂಲಕ ತಪ್ಪನ್ನು ತಿದ್ದಿಕೊಳ್ಳಬಹುದಾಗಿದೆ . ಅಲ್ಲದೇ ಕೋಪ ಮರೆತು ಮೊದಲು ನೀವಾಗಿಯೇ ಮಾತನಾಡಿದರೆ ನೀವು ಸಣ್ಣವರಂತೂ ಆಗುವುದಿಲ್ಲ. ಬದಲಾಗಿ ಪ್ರಬುದ್ಧರಂತೆ ಕಾಣುತ್ತೀರಿ.

ನಿಮ್ಮ ಪತ್ನಿಯು ನಿಮ್ಮ ಮೇಲೆ ಕೋಪಗೊಂದಿದ್ದಾಗ ನೀವೂ ಅವಳ ಮೇಲೆ ರೇಗಾಡಿದರೆ ಯಾವುದೂ ಸರಿಯಾಗುವುದಿಲ್ಲ. ಆಕೆಯ ಸಮಸ್ಯೆಗಳೇನು..? ಆಕೆಯ ಮನಸ್ಸಿನಲ್ಲಿ ಯಾವೆಲ್ಲ ಗೊಂದಲಗಳಿವೆ ಎಂಬುದನ್ನು ತಾಳ್ಮೆಯಿಂದ ಆಲಿಸಿ. ಆಕೆಯ ಮಾತುಗಳಿಗೆ ನೀವು ಕಿವಿಯಾದಷ್ಟೂ ನಿಮ್ಮ ಬಂಧ ಇನ್ನಷ್ಟು ಬೆಸೆಯುತ್ತಾ ಹೋಗುತ್ತದೆ.

ಮಲಗುವ ಮುನ್ನ ಗೊಂದಲ ಪರಿಹರಿಸಿಕೊಳ್ಳಿ

ಯಾರದ್ದೇ ಜೊತೆಯಲ್ಲಿ ಜಗಳ ನಡೆದಾಗ ಮನುಷ್ಯನಿಗೆ ಆತನ ಸ್ವಾಭಿಮಾನ ಅಡ್ಡ ಬರುವುದು ಸಹಜ. ಆದರೆ ಸ್ವಾಭಿಮಾನ ಯಾವಾಗ ಅಹಂಕಾರವಾಗಿ ಬದಲಾಗುತ್ತೆ ಅನ್ನೋದು ನಮಗೆ ತಿಳಿಯುವುದೇ ಇಲ್ಲ. ಇದು ನಿಮ್ಮ ಸಂಬಂಧದಲ್ಲಿ ದೊಡ್ಡ ಕಂದಕವನ್ನೇ ಮಾಡಿಬಿಡಬಹುದು. ಹೀಗಾಗಿ ಇಬ್ಬರೂ ಜಗಳವನ್ನು ಸುಧಾರಿಸಿಕೊಳ್ಳದೇ ಮಲಗಬೇಡಿ. ಈ ರೀತಿಯ ನಿಯಮವನ್ನು ನಿಮಗೆ ನೀವೇ ಹಾಕಿಕೊಳ್ಳಿ.

ಕೆಲವೊಮ್ಮೆ ಮಾತು, ಸಮಾಧಾನ ಮಾತ್ರವಲ್ಲ ಮಗುವಿನಂತೆ ನೋಡಿಕೊಳ್ಳುವುದು ಕೂಡ ಮುಖ್ಯವಾಗುತ್ತದೆ. ಕೋಪಗೊಂಡ ಹೆಂಡತಿಯನ್ನು ಸಮಾಧಾನ ಪಡಿಸಲು ಆಕೆಗೆ ಇಷ್ಟವಾದ ವಸ್ತುಗಳನ್ನು ಗಿಫ್ಟ್​ ಮಾಡಿ ಅಥವಾ ಆಕೆಯೊಂದಿಗೆ ಹೋಟೆಲ್​ಗೆ ತೆರಳಿ. ಇಬ್ಬರೂ ಒಳ್ಳೆಯ ಸಮಯವನ್ನು ಎಂಜಾಯ್​ ಮಾಡಿ. ಈ ರೀತಿ ಮಾಡುವ ಮೂಲಕವೂ ನೀವು ಪತ್ನಿಯನ್ನು ಸಮಾಧಾನ ಪಡಿಸಬಹುದಾಗಿದೆ.

ವಿಭಾಗ