ಲೈಂಗಿಕ ಕ್ರಿಯೆ ಎಷ್ಟು ನಿಮಿಷ ನಡೆಸಿದ್ರೆ ಒಳ್ಳೆಯದು? ದೀರ್ಘಾವಧಿ ಸಂಭೋಗದ ಪರಿಣಾಮ ಇಲ್ಲಿದೆ
Relationship tips: ದಾಂಪತ್ಯ ಜೀವನಕ್ಕೆ ಮಿಲನ ಕ್ರಿಯೆ ಮುಖ್ಯ. ಆದರೆ ಎಷ್ಟು ಸಮಯದವರೆಗೆ ಲೈಂಗಿಕ ಕ್ರಿಯೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎಂದು ಎಂದಾದರೂ ಯೋಚಿಸಿದ್ದೀರೇ..? ದೀರ್ಘಾವಧಿ ಸೆಕ್ಸ್ನಿಂದ ಎಂಥಾ ಅಪಾಯಗಳು ಕಾದಿವೆ ಎಂಬುದಕ್ಕೆ ಇಲ್ಲಿದೆ ಮಾಹಿತಿ.
ದಾಂಪತ್ಯ ಜೀವನದಲ್ಲಿ ಮಿಲನ ಕ್ರಿಯೆ ಎನ್ನುವುದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ದೈಹಿಕ ಸಂಬಂಧವು ಪತಿ - ಪತ್ನಿಯ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ ಎಂದು ಈಗಾಗಲೇ ಸಾಕಷ್ಟು ಅಧ್ಯಯನಗಳು ಸಾಬೀತುಪಡಿಸಿವೆ. ಆದರೆ ಪುರುಷರು ಲೈಂಗಿಕ ಕ್ರಿಯೆಯನ್ನು ಬೇಗನೇ ಮುಗಿಸಿಬಿಡುತ್ತಾರೆ ಎಂಬ ಅಪವಾದ ಕೂಡ ಇದೆ. ಮಹಿಳೆಯರು ಲೈಂಗಿಕ ಕ್ರಿಯೆಯನ್ನು ದೀರ್ಘಕಾಲದವರೆಗೆ ಆನಂದಿಸುತ್ತಾರೆ. ಆದರೆ ಪುರುಷರು ಒಮ್ಮೆ ಸ್ಖಲನವಾದ ಬಳಿಕ ವಿಶ್ರಾಂತಿಯ ಮೊರೆ ಹೋಗಿಬಿಡುತ್ತಾರೆ. ಈಗಾಗಲೇ ಈ ಬಗ್ಗೆ ಸಾಕಷ್ಟು ಕಾಮಿಡಿ ದೃಶ್ಯಗಳು ಸಹ ಸಿನಿಮಾಗಳಲ್ಲಿ ಬಂದಿವೆ.
ಆದರೆ ಎಲ್ಲಿಯೂ ಕೂಡ ಲೈಂಗಿಕ ಕ್ರಿಯೆ ಎನ್ನುವುದು ನಿರ್ದಿಷ್ಟವಾಗಿ ಎಷ್ಟು ಸಮಯದವರೆಗೆ ನಡೆಯಬೇಕು ಎಂಬ ಪ್ರಶ್ನೆಗೆ ಇನ್ನೂ ಎಲ್ಲಿಯೂ ಸಿಕ್ಕಿಲ್ಲ. ಆದರೆ ಕಡಿಮೆ ಅವಧಿಯಲ್ಲಿ ನಡೆಯುವ ಲೈಂಗಿಕ ಕ್ರಿಯೆಯು ನಿಮಗೆ ಹೆಚ್ಚು ಸಂತೋಷವನ್ನು ನೀಡದೇ ಇದ್ದರೂ ಸಹ ದೀರ್ಘಕಾಲದ ಲೈಂಗಿಕತೆಯು ಹೆಚ್ಚಿನ ಸಮಸ್ಯೆಯನ್ನು ತಂದೊಡ್ಡುತ್ತದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ಹಾಗಾದರೆ ಲೈಂಗಿಕ ಕ್ರಿಯೆಯನ್ನು ಎಷ್ಟು ಗಂಟೆಗಳ ಕಾಲ ನಡೆಸುವುದು ಸೂಕ್ತ ಎಂಬ ಪ್ರಶ್ನೆ ಉದ್ಭವಿಸಬಹುದು. ಲೈಂಗಿಕ ಆರೋಗ್ಯ ತಜ್ಞರು ನೀಡುವ ಮಾಹಿತಿಯ ಪ್ರಕಾರ, 7-15 ನಿಮಿಷದವರೆಗೆ ಲೈಂಗಿಕ ಕ್ರಿಯೆಯನ್ನು ನಡೆಸಬಹುದಾಗಿದೆ. ಲೈಂಗಿಕ ಕ್ರಿಯೆ ಎಂದರೆ ಕೇವಲ ಸಂಭೋಗ ಕ್ರಿಯೆ ಮಾತ್ರವಲ್ಲ. ಇದು ಪ್ರಣಯವನ್ನೂ ಒಳಗೊಂಡಿರುತ್ತದೆ. ಸಂಶೋಧನೆಗಳ ಪ್ರಕಾರ, ಪುರುಷರು ಸಾಮಾನ್ಯವಾಗಿ 5-10 ನಿಮಿಷಗಳ ಲೈಂಗಿಕ ಕ್ರಿಯೆಯ ಬಳಿಕ ಸ್ಖಲನ ಮಾಡುತ್ತಾರೆ. ದಿ ಜರ್ನಲ್ ಆಫ್ ಸೆಕ್ಷುಯಲ್ ಮೆಡಿಸಿನ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, 7-13 ನಿಮಿಷಗಳ ಲೈಂಗಿಕ ಕ್ರಿಯೆಯು ಆರೋಗ್ಯಕರ ಎಂದು ತಿಳಿಯಬಹುದಾಗಿದೆ.
ಲೈಂಗಿಕ ಕ್ರಿಯೆ ಎಷ್ಟು ದೀರ್ಘಾವಧಿ ಸಮಯವದವರೆಗೆ ಇರುತ್ತದೆ ಎನ್ನುವುದು ಮುಖ್ಯವಲ್ಲ. ಲೈಂಗಿಕ ಕ್ರಿಯೆಯನ್ನು ನೀವು ಎಷ್ಟು ಆನಂದಿಸುತ್ತೀರಿ ಎನ್ನುವುದು ಮುಖ್ಯ. ಉತ್ತಮ ಲೈಂಗಿಕ ಕ್ರಿಯೆಯನ್ನು ಅನುಭವಿಸಬೇಕು ಎಂದರೆ ಪತಿ - ಪತ್ನಿ ಈ ವಿಚಾರವಾಗಿ ಮುಕ್ತವಾಗಿ ಮಾತನಾಡಿಕೊಳ್ಳಬೇಕು. ಇಬ್ಬರ ಇಷ್ಟಗಳ ಬಗ್ಗೆ ಪರಸ್ಪರ ಚರ್ಚಿಸಬೇಕು. ಲೈಂಗಿಕ ಕ್ರಿಯೆ ಎಂದರೆ ಅದು ಕೇವಲ ಲೈಂಗಿಕ ಕ್ರಿಯೆ ಮಾತ್ರವಲ್ಲ. ಅದು ಪ್ರೀತಿ. ಹೀಗಾಗಿ ಪರಸ್ಪರ ರೊಮ್ಯಾನ್ಸ್ ಮಾಡುವುದು ಕೂಡ ತುಂಬಾನೇ ಮುಖ್ಯ. ಹೀಗಾಗಿ ಹೆಚ್ಚಿನ ಸಮಯವನ್ನು ಪರಸ್ಪರ ಪ್ರೀತಿಸಿಕೊಳ್ಳುವುದರಲ್ಲಿ ಕಳೆಯಿರಿ.
ಲೈಂಗಿಕ ಕ್ರಿಯೆ ದೀರ್ಘಾವಧಿಯವರೆಗೆ ಇರುವಂತೆ ನೋಡಿಕೊಳ್ಳುವುದು ಹೇಗೆ ಎಂಬ ಗೊಂದಲ ನಿಮಗಿದ್ದರೆ ನೀವು ಈ ಕೆಳಗಿನ ಸಲಹೆಗಳನ್ನು ಪಾಲಿಸಬಹುದಾಗಿದೆ.
1 . ರೊಮ್ಯಾನ್ಸ್ಗೆ ಮಹತ್ವ ನೀಡಿ
ಲೈಂಗಿಕ ಕ್ರಿಯೆಯ ಆನಂದವನ್ನು ಹೆಚ್ಚಿಸುವುದೇ ಪ್ರಣಯ. ಇದು ಇಬ್ಬರ ನಡುವಿನ ಪ್ರೀತಿಯನ್ನು ಹೆಚ್ಚಿಸುತ್ತದೆ. ಅಲ್ಲದೇ ಇದು ನಿಮ್ಮ ಸಂಭೋಗಕ್ಕೆ ಭದ್ರ ಬುನಾದಿಯನ್ನು ಹಾಕುತ್ತದೆ.
2. ಅವಸರ ಬೇಡ
ಲೈಂಗಿಕ ಕ್ರಿಯೆ ಒರಟು ಎನಿಸಬಾರದು. ನಿಧಾನವಾಗಿ , ಮೃದುವಾಗಿ ಮುದ್ದಿಸಿದರೆ ಮಾತ್ರ ನಿಮ್ಮ ಮಿಲನ ಕ್ರಿಯೆ ಸುಂದರವಾಗಿ ಇರುತ್ತದೆ.
3. ಸಂಗಾತಿಯೊಂದಿಗೆ ಚರ್ಚಿಸಿ
ನಿಮ್ಮ ಸಂಗಾತಿಯು ನಿಮ್ಮಿಂದ ಏನನ್ನು ನಿರೀಕ್ಷಿಸುತ್ತಿದ್ದಾರೆ ಎಂಬುದರ ಅರಿವು ನಿಮಗಿದ್ದರೆ ನಿಮ್ಮ ಮಿಲನ ಕ್ರಿಯೆ ಫ್ಲಾಪ್ ಆಗಲು ಸಾಧ್ಯವೇ ಇಲ್ಲ. ಪರಸ್ಪರ ಇಬ್ಬರೂ ಚರ್ಚಿಸಿ. ಯಾವ ರೀತಿಯ ದೈಹಿಕ ಸಂಪರ್ಕ ಇಬ್ಬರಿಗೂ ಖುಷಿ ನೀಡುತ್ತದೆ ಎಂಬುದನ್ನು ಇಬ್ಬರೂ ಅರ್ಥ ಮಾಡಿಕೊಳ್ಳಿ.
ಲೈಂಗಿಕ ಕ್ರಿಯೆ ತುಂಬಾ ದೀರ್ಘವಾದರೆ ಏನಾಗುತ್ತದೆ ..?
ಲೈಂಗಿಕ ಕ್ರಿಯೆ ದೀರ್ಘವಾಗಿದ್ದಷ್ಟೂ ಉತ್ತಮ ಎಂಬ ಅಭಿಪ್ರಾಯ ಅನೇಕರಲ್ಲಿದೆ. ಆದರೆ ಇದು ನಿಜವಲ್ಲ. ದೀರ್ಘ ಲೈಂಗಿಕತೆಯು ಅನೇಕ ದೋಷಗಳನ್ನು ಹೊಂದಿರುತ್ತದೆ. ಅತೀ ಹೆಚ್ಚಿನ ಸಂಭೋಗ ಕ್ರಿಯೆ ಲೈಂಗಿಕ ಕಾಯಿಲೆಗಳಿಗೆ ನಾಂದಿ ಹಾಡಬಹುದು. ಯೋನಿಯಲ್ಲಿ ಸೋಂಕು ಉಂಟಾಗಬಹುದು. ಜನನಾಂಗದಲ್ಲಿ ಊತ ಕೂಡ ಸಂಭವಿಸಬಹುದು. ಹೀಗಾಗಿ ದೀರ್ಘವಾದಿ ಲೈಂಗಿಕ ಕ್ರಿಯೆಯಿಂದ ದೂರವಿರುವುದೇ ಉತ್ತಮ ಎಂದು ಲೈಂಗಿಕ ಆರೋಗ್ಯ ತಜ್ಞರು ಮಾಹಿತಿ ನೀಡಿದ್ದಾರೆ.