ಚಳಿಗಾಲ ಮತ್ತು ದಾಂಪತ್ಯ: ಸಂಗಾತಿಯೊಂದಿಗೆ ಕಳೆಯುವ ಕ್ಷಣಗಳನ್ನು ಮಧುರವಾಗಿಸಲು ವಿಶೇಷ ಟಿಪ್ಸ್
ಕನ್ನಡ ಸುದ್ದಿ  /  ಜೀವನಶೈಲಿ  /  ಚಳಿಗಾಲ ಮತ್ತು ದಾಂಪತ್ಯ: ಸಂಗಾತಿಯೊಂದಿಗೆ ಕಳೆಯುವ ಕ್ಷಣಗಳನ್ನು ಮಧುರವಾಗಿಸಲು ವಿಶೇಷ ಟಿಪ್ಸ್

ಚಳಿಗಾಲ ಮತ್ತು ದಾಂಪತ್ಯ: ಸಂಗಾತಿಯೊಂದಿಗೆ ಕಳೆಯುವ ಕ್ಷಣಗಳನ್ನು ಮಧುರವಾಗಿಸಲು ವಿಶೇಷ ಟಿಪ್ಸ್

ಚಳಿಗಾಲ ಎಂದರ ಬೆಚ್ಚಗೆ ಹೊದ್ದು ಮಲಗಬೇಕು ಎನ್ನುವ ಭಾವವಷ್ಟೇ ಅಲ್ಲ, ಇದೊಂಥರ ರೊಮ್ಯಾಂಟಿಕ್ ಫೀಲ್ ಕೊಡುವ ದಿನಗಳೂ ಹೌದು. ಈ ಚಳಿಗಾಲದಲ್ಲಿ ನೀವು ನಿಮ್ಮ ಸಂಗಾತಿಯೊಂದಿಗೆ ಕಳೆಯುವ ಕ್ಷಣಗಳನ್ನು ವಿಶೇಷನ್ನಾಗಿಸಿಕೊಳ್ಳಬಹುದು. ಚಳಿಗಾಲದ ಕ್ಷಣಗಳನ್ನು ಅತಿ ಮಧುರವಾಗಿಸಿಕೊಳ್ಳಲು ನೀವು ಈ ಕೆಲವು ಟಿಪ್ಸ್‌ಗಳನ್ನು ಅನುಸರಿಸಿ, ಇದರಿಂದ ನಿಮ್ಮ ಬಾಂಧವ್ಯವೂ ವೃದ್ಧಿಯಾಗುತ್ತೆ.

ಚಳಿಗಾಲ ಮತ್ತು ದಾಂಪತ್ಯ (ಸಾಂಕೇತಿಕ ಚಿತ್ರ)
ಚಳಿಗಾಲ ಮತ್ತು ದಾಂಪತ್ಯ (ಸಾಂಕೇತಿಕ ಚಿತ್ರ) (PC: Canva )

ಸಂಬಂಧ, ದಾಂಪತ್ಯ ಎಂದರೆ ನಿತ್ಯನೂತನ. ಒಂದು ದಿನ ಅಥವಾ ತಿಂಗಳಿಗೆ ಸಂಬಂಧಿಸಿದ್ದಲ್ಲ. ಸಂಬಂಧದಲ್ಲಿ ಪ್ರತಿದಿನವೂ ವಿಶೇಷವಾಗಿರಬೇಕು. ಪ್ರತಿ ಕ್ಷಣವನ್ನು ಹೊಸತಾಗಿ ಅನುಭವಿಸಬೇಕು. ಆಗ ಮಾತ್ರ ಸಂಬಂಧ ಸದಾ ಹಸಿರಾಗಿಲು ಸಾಧ್ಯ. ಸಂಗಾತಿಗಳ ನಡುವೆ ಬಾಂಧವ್ಯ ವೃದ್ಧಿಯಾಗಲು ವಿಶೇಷ ಕ್ಷಣಗಳು ಸೃಷ್ಟಿಯಾಗಬೇಕು. ನಿರಂತರ ಬದುಕಿನಲ್ಲೂ ಹೊಸತನವನ್ನ ಸೃಷ್ಟಿಸಿಕೊಂಡು ಬದುಕು ಸಾಗಿಸಬೇಕು.

ಸಂಗಾತಿಗಳಿಗೆ ತಮ್ಮ ಬದುಕಿನಲ್ಲಿ ವಿಶೇಷ ಕ್ಷಣಗಳನ್ನು ಸೃಷ್ಟಿಸಿಕೊಳ್ಳಲು ಚಳಿಗಾಲಕ್ಕಿಂತ ಉತ್ತಮ ಇನ್ನೊಂದಿಲ್ಲ. ಚಳಿಗಾಲವು ರೊಮ್ಯಾಂಟಿಕ್ ಫೀಲ್ ಕೊಡುವ ಸಮಯ. ಈ ಸಮಯದಲ್ಲಿ ನೀವು ಸಂಗಾತಿಯೊಂದಿಗೆ ಕೆಲವು ವಿಶೇಷ ಕ್ಷಣಗಳನ್ನು ಸೃಷ್ಟಿಸಬಹುದು. ಆ ಮೂಲಕ ನಿಮ್ಮ ದಾಂಪತ್ಯ ಜೀವನವನ್ನು ಸುಂದರವಾಗಿಸಿಕೊಳ್ಳಬಹುದು. ಈ ಚಳಿಗಾಲದಲ್ಲಿ ಸಂಗಾತಿಯೊಂದಿಗೆ ಕಳೆಯುವ ಕ್ಷಣಗಳ ಮಧುರವಾಗಿರಬೇಕು ಅಂದ್ರೆ ಈ ಟಿಪ್ಸ್ ಪಾಲಿಸಿ.

ಚಳಿಗಾಲದ ಪ್ರವಾಸ

ಚಳಿಗಾಲದಲ್ಲಿ ಸಂಗಾತಿಯೊಂದಿಗೆ ರೊಮ್ಯಾಂಟಿಕ್ ಕ್ಷಣಗಳನ್ನು ಕಳೆಯಲು ಬೆಸ್ಟ್ ದಾರಿ ಎಂದರೆ ಟ್ರಿಪ್ ಹೋಗುವುದು. ಕರ್ನಾಟಕ, ಭಾರತದಲ್ಲೂ ಚಳಿಗಾಲದ ಟ್ರಿಪ್‌ಗೆ ಹೇಳಿ ಮಾಡಿಸಿದ ಸಾಕಷ್ಟು ತಾಣಗಳವೆ. ನೀವು ವಿದೇಶ ಪ್ರವಾಸಕ್ಕೂ ಹೋಗಬಹುದು. ಪ್ರವಾಸಿತಾಣದಲ್ಲಿ ಸಂಗಾತಿಯೊಂದಿಗೆ ಕೈಕೈ ಹಿಡಿದು ನಡೆಯುತ್ತಾ ಪ್ರವಾಸಿ ತಾಣದಲ್ಲಿ ನಿಮ್ಮ ಕ್ಷಣಗಳನ್ನು ಎಂಜಾಯ್ ಮಾಡಬಹುದು. ಹಿಮ ಸುರಿಯುವ ತಾಣಗಳಲ್ಲಿ ನೀವು ನಿಮ್ಮ ಖಾಸಗಿ ಕ್ಷಣಗಳನ್ನು ಎಂಜಾಯ್ ಮಾಡಬಹುದು. ಚಳಿಗಾಲದಲ್ಲಿ ಟ್ರಿಪ್ ನಿಮಗೆ ಖಂಡಿತ ಮರೆಯಲಾಗದ ಅನುಭವ ನೀಡುತ್ತದೆ. 

ಲಾಂಗ್ ರೈಡ್

ಚಳಿಗಾಲದ ಇಳಿ ಸಂಜೆ ಅಥವಾ ರಾತ್ರಿ ವೇಳೆ ಲಾಂಗ್ ಡ್ರೈವ್ ಹೋಗುವುದು ಕೂಡ ನಿಮ್ಮ ಕ್ಷಣಗಳನ್ನು ವಿಶೇಷವನ್ನಾಗಿಸುತ್ತದೆ. ನೀವು ಹಾಗೂ ನಿಮ್ಮ ಸಂಗಾತಿ ಇಬ್ಬರೂ ಟ್ರಾವೆಲ್ ಪ್ರಿಯರಾದರೆ ಚಳಿಗಾಲದ ಲಾಂಗ್ ರೈಡ್‌ ಖಂಡಿತ ನಿಮಗೆ ಇಷ್ಟವಾಗುತ್ತದೆ. ಲಾಂಗ್‌ ಡ್ರೈವ್ ಹೋಗಿ ಮಧ್ಯದಲ್ಲಿ ಎಲ್ಲಾದರೂ ನಿಲ್ಲಿಸಿ ಟೀ ಕುಡಿದು ಕೈಹಿಡಿದು ಒಂದಿಷ್ಟು ದೂರ ನಡೆದು ಹೋಗಿ. ಇದರಿಂದ ನಿಮ್ಮ ಕ್ಷಣ ಸಖತ್ ರೊಮ್ಯಾಂಟಿಕ್ ಆಗಿರುತ್ತದೆ. ಚಳಿಗಾಲದಲ್ಲಿ ರಾತ್ರಿ ಹೊತ್ತು ಬೈಕ್‌ ರೈಡ್‌ ಮಾಡುವ ಮಜಾವೇ ಬೇರೆ. 

ರೊಮ್ಯಾಂಟಿಕ್ ಡೇಟಿಂಗ್ ಪ್ಲಾನ್

ಮೊದಲೇ ಹೇಳಿದಂತೆ ಸಂಬಂಧಗಳು ಹಳಸಬಾರದು ಎಂದರೆ ಸರ್ಪ್ರೈಸ್‌ಗಳು ಇರಲೇಬೇಕು. ಈ ಚಳಿಗಾಲದಲ್ಲಿ ನಿಮ್ಮ ಸಂಗಾತಿಯನ್ನು ಸರ್ಪ್ರೈಸ್ ಆಗಿ ಡಿನ್ನರ್ ಡೇಟ್‌ಗೆ ಕರೆದುಕೊಂಡು ಹೋಗಿ. ವಿಶೇಷವಾಗಿರುವ ತಾಣದಲ್ಲಿ ಡಿನ್ನರ್ ಪಾರ್ಟಿಯನ್ನು ಎಂಜಾಯ್ ಮಾಡುತ್ತಾ ಒಟ್ಟಿಗೆ ಸಮಯ ಕಳೆಯಿರಿ. ಚಳಿಗಾಲದ ಚಳಿಯು ನಿಮ್ಮ ರೊಮ್ಯಾಂಟಿಕ್‌ ಡಿನ್ನರ್ ಅನ್ನು ಇನ್ನಷ್ಟು ವಿಶೇಷವಾಗಿಸುವುದು ಖಂಡಿತ.

ಮೂವಿ ನೈಟ್‌

ಚಳಿಗಾಲದಲ್ಲಿ ಮೂವಿ ನೈಟ್ ಆಯೋಜಿಸುವುದರ ಮೂಲಕ ದಂಪತಿಗಳು ರೊಮ್ಯಾಂಟಿಕ್‌ ಕ್ಷಣಗಳನ್ನು ಜೊತೆಯಾಗಿ ಕಳೆಯಬಹುದು. ಮನೆಯಲ್ಲಿ ಟಿವಿ ಅಥವಾ ಪ್ರೊಜೆಕ್ಟರ್‌ನಲ್ಲಿ ಸಿನಿಮಾ ನೋಡುವ ಮೂಲಕ ನಿಮ್ಮ ಕ್ಷಣಗಳನ್ನು ಅವಿಸ್ಮರಣೀಯವನ್ನಾಗಿಸಿಕೊಳ್ಳಬಹುದು. ನೀವು ಥಿಯೇಟರ್‌ಗೆ ಹೋಗಿ ಸಿನಿಮಾ ನೋಡುವ ಮೂಲಕವು ನಿಮ್ಮ ದಿನವನ್ನು ಎಂಜಾಯ್ ಮಾಡಬಹುದು. 

ರೊಮ್ಯಾಂಟಿಕ್ ವಾಕ್

ನಿಮಗೆ ಹೆಚ್ಚು ಹಣ ಖರ್ಚು ಮಾಡುವುದು ಸಾಧ್ಯವಿಲ್ಲ ಎಂದರೆ ಸಂಗಾತಿಯ ಜೊತೆ ರೊಮ್ಯಾಂಟಿಕ್ ಆಗಿ ಇಳಿ ಸಂಜೆ ಹೊತ್ತಿನಲ್ಲಿ ವಾಕಿಂಗ್ ಹೋಗಿ. ಬೀಚ್‌, ಪಾರ್ಕ್‌ನಲ್ಲಿ ಕೈ ಕೈ ಹಿಡಿದು ಸುತ್ತಾಡುತ್ತಾ ನಿಮ್ಮ ಕ್ಷಣಗಳನ್ನು ಅನುಭವಿಸಿ. ಸಂಗಾತಿಗೆ ನೀವು ಕೈಕೈ ಹಿಡಿದು ನಡೆಯುವುದೇ ಖುಷಿ ಕೊಡಬಹುದು. 

ಜೊತೆಗೆ ಅಡುಗೆ ಮಾಡುವುದು 

ಚಳಿಗಾಲದಲ್ಲಿ ಖಾರಖಾರವಾಗಿ ವಿಶೇಷ ತಿನಿಸುಗಳನ್ನು ತಿನ್ನಬೇಕು ಎನ್ನಿಸವುದು ಸಹಜ. ಆಗ ನೀವು ಸಂಗಾತಿಯ ಜೊತೆ ಸೇರಿ ವಿಶೇಷವಾದ ಅಡುಗೆ ಮಾಡಿ. ಇಬ್ಬರು ಜೊತೆಯಾಗಿ ಅಡುಗೆ ಮಾಡಿ. ನಂತರ ವಿಶೇಷ ತಿನಿಸನ್ನು ಜೊತೆಗೆ ಕೂತು ತಿನ್ನಿ. ಇದಕ್ಕಿಂತ ರೊಮ್ಯಾಂಟಿಕ್ ಹಾಗೂ ಸುಂದರ ಅನುಭವ ನಿಮಗೆ ಸಿಗಲಿಕ್ಕಿಲ್ಲ.

Whats_app_banner