ದಂಪತಿ ನಡುವೆ ಮೂಡದಿರಲಿ ಬಿರುಕು: ಮುನಿಸು, ಕೋಪವನ್ನು ಬಿಟ್ಟು ಸುಮಧುರ ಬಾಂಧವ್ಯಕ್ಕೆ ಈ ಸಲಹೆ ಅನುಸರಿಸಿ
ಮುನಿಸು, ಕೋಪವನ್ನು ಬಿಟ್ಟು ಸಮಸ್ಯೆಗಳನ್ನು ಪರಿಹರಿಸುವುದು ಬಹಳ ಮುಖ್ಯ. ಹೀಗಾಗಿ ದಂಪತಿ ಮಧ್ಯೆ ಅಡ್ಡಗೋಡೆಯನ್ನು ಇಡಬಾರದು. ಒಂದುವೇಳೆ ಬಿರುಕು ಮೂಡಿದರೂ ಅದನ್ನು ಪರಿಹರಿಸಲು ಪ್ರಯತ್ನಿಸಬೇಕು. ಸುಮಧುರ ಬಾಂಧವ್ಯಕ್ಕೆ ಏನು ಮಾಡಬೇಕು, ಇಲ್ಲಿದೆ ಟಿಪ್ಸ್.

ಗಂಡ-ಹೆಂಡತಿಯ ಜಗಳ ಉಂಡು ಮಲಗುವ ತನಕ ಅನ್ನೋ ಗಾದೆ ಮಾತಿದೆ. ಉಂಡು ಮಲಗಿದ ಮೇಲೂ ಜಗಳ ಮುಂದುವರಿದರೆ ಅದು ವಿಕೋಪಕ್ಕೆ ಹೋಗಬಹುದು. ದಾಂಪತ್ಯದಲ್ಲಿ ಜಗಳವಾಗುವುದು ಸಹಜ. ಆದರೆ, ನೀವು ನಿಮ್ಮ ಜಗಳಗಳನ್ನು ಸರಿಯಾಗಿ ಪರಿಹರಿಸಿಕೊಳ್ಳದೆ ಮುಂದುವರಿದರೆ, ತಿಳಿದೋ ಅಥವಾ ತಿಳಿಯದೆಯೋ ನಿಮ್ಮ ಮತ್ತು ಸಂಗಾತಿಯ ನಡುವೆ ಅಂತರವನ್ನು ಸೃಷ್ಟಿಸುತ್ತೀರಿ. ದಾಂಪತ್ಯದಲ್ಲಿ ತಪ್ಪು ತಿಳುವಳಿಕೆ ಮೂಡುವುದು, ಜಗಳವಾಗುವುದು ಸರ್ವೇ ಸಾಮಾನ್ಯ. ಆದರೆ, ಇದನ್ನು ಹೆಚ್ಚು ಮುಂದುವರೆಸಲು ಬಿಡಬಾರದು. ಮುನಿಸು, ಕೋಪವನ್ನು ಬಿಟ್ಟು ಸಮಸ್ಯೆಗಳನ್ನು ಪರಿಹರಿಸುವುದು ಬಹಳ ಮುಖ್ಯ. ಹೀಗಾಗಿ ದಂಪತಿ ಮಧ್ಯೆ ಅಡ್ಡಗೋಡೆಯನ್ನು ಇಡಬಾರದು. ಒಂದುವೇಳೆ ಬಿರುಕು ಮೂಡಿದರೂ ಅದನ್ನು ಪರಿಹರಿಸಲು ಪ್ರಯತ್ನಿಸಬೇಕು. ಸುಮಧುರ ಬಾಂಧವ್ಯಕ್ಕೆ ಏನು ಮಾಡಬೇಕು, ಇಲ್ಲಿದೆ ಟಿಪ್ಸ್.
ಸುಮಧುರ ಬಾಂಧವ್ಯಕ್ಕೆ ಇಲ್ಲಿದೆ ಸಲಹೆ
ಮುಕ್ತವಾಗಿ ಮಾತನಾಡಬೇಕು: ದಂಪತಿಗಳು ತಮ್ಮ ಹಳೆಯ ಕುಂದುಕೊರತೆಗಳನ್ನು ತೆಗೆದುಹಾಕಲು ಮುಕ್ತ ಸಂಭಾಷಣೆಗಳನ್ನು ನಡೆಸುವುದು ಬಹಳ ಮುಖ್ಯ. ನಿಮ್ಮಿಬ್ಬರ ನಡುವೆ ಯಾವ ಅಂತರ ಉಂಟಾಗಿದೆಯೋ ಆ ಎಲ್ಲಾ ಸಮಸ್ಯೆಗಳನ್ನು ನಿಮ್ಮ ಸಂಗಾತಿಯೊಂದಿಗೆ ಮುಕ್ತವಾಗಿ ಚರ್ಚಿಸಬೇಕು. ಯಾವುದೇ ಸಂಬಂಧವನ್ನು ಬಲಪಡಿಸಲು, ನಿಮ್ಮ ದೃಷ್ಟಿಕೋನವನ್ನು ಸರಿಯಾಗಿ ಪ್ರಸ್ತುತಪಡಿಸುವುದು ಮತ್ತು ಸಂಗಾತಿಯ ಬಳಿ ಏನು ಸಮಸ್ಯೆಯಾಯಿತು ಎಂಬಿತ್ಯಾದಿ ಬಗ್ಗೆ ಸರಿಯಾಗಿ ಕೇಳುವುದು ಬಹಳ ಮುಖ್ಯ. ಈ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ಈ ಸಲಹೆಯನ್ನು ಅನುಸರಿಸುವುದನ್ನು ನೀವು ಅಭ್ಯಾಸ ಮಾಡಿಕೊಳ್ಳುವುದು ಬಹಳ ಮುಖ್ಯ.
ಜತೆಯಲ್ಲೇ ಸಮಯ ಕಳೆಯುವುದು: ದಂಪತಿ ನಡುವೆ ಪರಸ್ಪರ ಕಲಹವುಂಟಾದಾಗ ಮಾತು ಬಿಡುವ ಬದಲು, ಆದಷ್ಟು ಜತೆಯಲ್ಲಿ ಸಮಯ ಕಳೆಯಬೇಕು. ಈ ಸಮಯದಲ್ಲಿ ನೀವು ಖಂಡಿತವಾಗಿಯೂ ಪರಸ್ಪರ ಸಮಯ ಕಳೆಯುವತ್ತ ಗಮನ ಹರಿಸಬೇಕು. ನಿಮ್ಮ ಸಂಗಾತಿಗೆ ಕಡಿಮೆ ಸಮಯವನ್ನು ನೀಡುವುದರಿಂದ ಸಂಬಂಧದಲ್ಲಿ ಅಂತರವನ್ನು ಸೃಷ್ಟಿಸಬಹುದು. ಒಟ್ಟಿಗೆ ಸಮಯ ಕಳೆಯಲು, ನೀವು ನಿಮ್ಮ ಸಂಗಾತಿಯೊಂದಿಗೆ ಅಡುಗೆ ಮಾಡಬಹುದು. ವಾಕಿಂಗ್ ಮಾಡಲು ಜತೆಯಲ್ಲೇ ಹೋಗಬಹುದು. ಅಥವಾ ಮನೆಯಲ್ಲೇ ಕುಳಿತು ಒಟ್ಟಿಗೆ ಚಲನಚಿತ್ರವನ್ನು ವೀಕ್ಷಿಸಬಹುದು.
ಅಹಂಕಾರಕ್ಕೆ ವಿದಾಯ ಹೇಳಿ: ದಂಪತಿ ಮಧ್ಯೆ ಅಹಂಕಾರವು ಬಂದರೆ ಅದು ಸಂಬಂಧವನ್ನು ದುರ್ಬಲಗೊಳಿಸಲು ಕಾರಣವಾಗುತ್ತದೆ. ವೈವಾಹಿಕ ಜೀವನವನ್ನು ಸುಖಕರವಾಗಿ, ಸಂತೋಷದಲ್ಲಿಡಲು ದ್ವೇಷಗಳನ್ನು ತೊಲಗಿಸುವುದು ಅತ್ಯಗತ್ಯ. ಕೇವಲ ಅಹಂಕಾರವಷ್ಟೇ ಅಲ್ಲ, ಹಿಂದಿನ ಎಲ್ಲಾ ದ್ವೇಷಗಳನ್ನು ಮರೆತು ಸುಖಮಯ ದಾಂಪತ್ಯ ಜೀವನ ನಡೆಸಲು ದುರಹಂಕಾರಕ್ಕೆ ವಿದಾಯ ಹೇಳುವುದು ಬಹಳ ಮುಖ್ಯ.
ಕ್ಷಮೆಯಾಚಿಸುವುದು ಬಹಳ ಮುಖ್ಯ: ನಿಮ್ಮ ತಪ್ಪು ತಿಳಿವಳಿಕೆ ಬಗ್ಗೆ ತಿಳಿದುಕೊಳ್ಳಿ. ಆತ್ಮಾವಲೋಕನ ಮಾಡಿಕೊಳ್ಳುವುದು ಬಹಳ ಮುಖ್ಯ. ಎಲ್ಲಾ ಜಗಳಕ್ಕೂ ತನ್ನ ಸಂಗಾತಿಯೇ ಕಾರಣ ಎಂದು ದೂರದಿರಿ. ನೀವು ಏನು ತಪ್ಪು ಮಾಡಿದ್ರಿ ಅನ್ನೋದನ್ನು ಮೊದಲು ತಿಳಿದುಕೊಂಡು ಪ್ರಾಮಾಣಿಕವಾಗಿ ಕ್ಷಮೆ ಕೇಳಿ. ಧನಾತ್ಮಕವಾಗಿ ಮುನ್ನಡೆಯಲು ಪರಸ್ಪರ ಕ್ಷಮೆಯಾಚನೆ ಮಾಡುವುದು ಬಹಳ ಮುಖ್ಯ.
ಧನಾತ್ಮಕತೆಯನ್ನು ಬೆಳೆಸಿಕೊಳ್ಳಿ: ಏನೇ ಜಗಳಗಳೂ ನಡೆದರೂ ಕ್ಷಣಾರ್ಧದಲ್ಲಿ ಅದನ್ನು ಮರೆತು, ಸಣ್ಣ-ಪುಟ್ಟ ವಿಚಾರವನ್ನು ಕೂಡ ಸಂಭ್ರಮಿಸಿ. ದಾಂಪತ್ಯದಲ್ಲಿನ ಸಕಾರಾತ್ಮಕ ಅಂಶಗಳನ್ನು ಪ್ರಶಂಸಿಸಿ. ಬಂಧವನ್ನು ಬಲಪಡಿಸಲು ಮೋಜಿನ ಚಟುವಟಿಕೆಗಳಲ್ಲಿ ತೊಡಗಿಸಿ, ಒಟ್ಟಿಗೆ ಗುಣಮಟ್ಟದ ಸಮಯವನ್ನು ಕಳೆಯಿರಿ.
ಇಲ್ಲಿ ತಿಳಿಸಿರುವ ದಾಂಪತ್ಯದ ಸಲಹೆಗಳು ನಿಮ್ಮ ಸಂಬಂಧವನ್ನು ಬಲಪಡಿಸುವುದಲ್ಲದೆ, ನಿಮ್ಮ ಸಂಗಾತಿಯೊಂದಿಗೆ ಉತ್ತಮ ದಾಂಪತ್ಯ ಜೀವನವನ್ನು ನಡೆಸಬಹುದು.
ವಿಭಾಗ