ಕನ್ನಡ ಸುದ್ದಿ  /  Lifestyle  /  Relationship Tips To Newly Married Couple Ultimate Sex Tips For Newly Married Couples Importance Of Sex In Marriage Rst

Relationship Tips: ಈಗಷ್ಟೇ ಮದುವೆಯಾಗಿದ್ದೀರಾ, ಹಾಗಿದ್ರೆ ಈ 6 ಟಿಪ್ಸ್ ನಿಮಗಾಗಿ; ಓದಿ, ಬದುಕು ಎಂಜಾಯ್ ಮಾಡಿ

ಇತ್ತೀಚಿಗಷ್ಟೇ ಮದುವೆ ಆಗಿದ್ದು, ಲೈಂಗಿಕ ಜೀವನದ ಬಗ್ಗೆ ಗೊಂದಲ, ಆತಂಕ ನಿಮ್ಮಲ್ಲಿದ್ಯಾ? ನಿಮ್ಮೆಲ್ಲಾ ಭಯವನ್ನು ದೂರಾಗಿಸಿ, ಉತ್ತಮ ದಾಂಪತ್ಯ ಜೀವನ ನಿಮ್ಮದಾಗಲು ನವ ವಿವಾಹಿತರಿಗೆ ನೆರವಾಗುವ ಒಂದಿಷ್ಟು ಸಲಹೆಗಳು ಇಲ್ಲಿವೆ. ಈ ಸಲಹೆಗಳನ್ನು ಪಾಲಿಸಿ ವೈವಾಹಿಕ ಜೀವನವನ್ನು ಆನಂದಿಸಿ.

ಈಗಿನ್ನೂ ಮದುವೆಯಾಗಿದ್ರೆ ಈ 6 ಟಿಪ್ಸ್ ನಿಮಗಾಗಿ; ಓದಿ, ಬದುಕು ಎಂಜಾಯ್ ಮಾಡಿ
ಈಗಿನ್ನೂ ಮದುವೆಯಾಗಿದ್ರೆ ಈ 6 ಟಿಪ್ಸ್ ನಿಮಗಾಗಿ; ಓದಿ, ಬದುಕು ಎಂಜಾಯ್ ಮಾಡಿ

ಮದುವೆ ಎಂದರೆ ಕೇವಲ ಮೂರು ಗಂಟಲ್ಲ, ಮದುವೆ ಎಂಬ ಬಂಧನದಲ್ಲಿ ಗಂಡು-ಹೆಣ್ಣಿನ ಬಾಂಧವ್ಯವೂ ಬಹಳ ಮುಖ್ಯವೆನ್ನಿಸುತ್ತದೆ. ಲೈಂಗಿಕ ಜೀವನವು ಮದುವೆಯ ಭಾಗ. ಕೆಲವೊಮ್ಮೆ ಲೈಂಗಿಕ ವಿಚಾರದಲ್ಲಿ ಹಲವರು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಅದರಲ್ಲೂ ಹೊಸತಾಗಿ ಮದುವೆ ಆದವರಿಗೆ ಸೆಕ್ಸುವಲ್‌ ಲೈಫ್‌ ಅಥವಾ ಲೈಂಗಿಕ ಜೀವನದ ಬಗ್ಗೆ ಗೊಂದಲ, ಆತಂಕ, ಭಯ ಇರುವುದು ಸಹಜ. ಅರೇಂಜ್‌ ಮ್ಯಾರೇಜ್‌ ಆದರೆ ಇಬ್ಬರ ನಡುವೆ ಆತ್ಮೀಯತೆ ಕೊಂಚ ಕಡಿಮೆಯೇ ಇರುತ್ತದೆ. ಹಾಗಾಗಿ ದೈಹಿಕವಾಗಿ ಒಂದಾಗಲು ಕೊಂಚ ಸಮಯ ಬೇಕಾಗುತ್ತದೆ. ಯಾವುದೇ ಸಂಬಂಧದಲ್ಲಿ ಆತ್ಮೀಯತೆ ಹೆಚ್ಚಲು ಉತ್ತಮ ಸಂವಹನ ಬಹಳ ಮುಖ್ಯ. ನೀವು ಇತ್ತೀಗಷ್ಟೇ ಮದುವೆಯಾಗಿದ್ದು, ಲೈಂಗಿಕ ಜೀವನಕ್ಕೆ ತೆರೆದುಕೊಳ್ಳುವ ವಿಚಾರದಲ್ಲಿ ನಿಮ್ಮಲ್ಲಿ ಗೊಂದಲಗಳಿದ್ದರೆ ಈ ಸಲಹೆಗಳು ನಿಮಗೆ ಸಹಾಯ ಮಾಡಬಹುದು.

ಮದುವೆಯಲ್ಲಿ ಲೈಂಗಿಕ ಜೀವನದ ಮಹತ್ವವೇನು?

ʼಮದುವೆ ಎಂಬ ಬಂಧನದಲ್ಲಿ ಎರಡು ದೇಹಗಳು ಒಂದಾಗುವುದರಿಂದ ಕಾಲಾನಂತರದಲ್ಲಿ ಅನ್ಯೋನ್ಯತೆ ಹಾಗೂ ನಿಕಟತೆ ಬೆಳೆಯಲು ಸಹಾಯವಾಗುತ್ತದೆ. ಇದು ಇಬ್ಬರ ನಡುವಿನ ಬೆಸುಗೆಗೆ ಕಾರಣವಾಗುತ್ತದೆ. ಜೊತೆಗೆ ಗಂಡ-ಹೆಂಡತಿ ಇಬ್ಬರನ್ನೂ ದೈಹಿಕವಾಗಿ, ಭಾವನಾತ್ಮಕವಾಗಿ ಹಾಗೂ ಮಾನಸಿಕವಾಗಿ ಇಬ್ಬರನ್ನೂ ಹತ್ತಿರ ಮಾಡುತ್ತದೆʼ ಎನ್ನುತ್ತಾರೆ ಮನೋವೈದ್ಯ ಹಾಗೂ ಲೈಂಗಿಕ ಶಿಕ್ಷಣತಜ್ಞರಾದ ಡಾ. ರಾಶಿ ಅಗರ್ವಾಲ್‌.

ಆರೋಗ್ಯವಾಗಿರಲು ಉತ್ತಮ ಲೈಂಗಿಕ ಜೀವನ ಹೇಗೆ ಸಹಾಯ ಮಾಡುತ್ತದೆ?

ಸೆಕ್ಸ್‌ ಅಥವಾ ಲೈಂಗಿಕತೆಯಿಂದ ಹಲವು ಪ್ರಯೋಜನಗಳಿವೆ. ಇದು ಒತ್ತಡ ನಿವಾರಣೆಗೆ ಸಹಾಯ ಮಾಡುವ ನೈಸರ್ಗಿಕ ಮಾರ್ಗವಾಗಿದೆ. ಸೈಕೋಸೊಮ್ಯಾಟಿಕ್ ಮೆಡಿಸಿನ್‌ನಲ್ಲಿ ಪ್ರಕಟವಾದ 2019 ರ ಅಧ್ಯಯನದ ಪ್ರಕಾರ, ಸೆಕ್ಸ್‌ ಸೇರಿದಂತೆ ಇಬ್ಬರ ನಡುವಿನ ಅನ್ಯೋನ್ಯತೆಯು ಕಾರ್ಟಿಸೋಲ್‌ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕಾರ್ಟಿಸೋಲ್‌ ಹಾರ್ಮೋನ್‌ ಒತ್ತಡಕ್ಕೆ ಸಂಬಂಧಿಸಿದ ಹಾರ್ಮೋನ್‌ ಆಗಿದೆ. ಸೆಕ್ಸ್‌ ಮಾಡಿದ ಸಮಾಧಾನ, ತೃಪ್ತಿ ಹಾಗೂ ಸಂತೋಷ ಸಿಗುತ್ತದೆ. ಆ ಮೂಲಕ ದೈಹಿಕ ಒತ್ತಡ ನಿವಾರಣೆಯಾಗುತ್ತದೆ.

ನವವಿವಾಹಿತ ದಂಪತಿಗಳಿಗೆ ಲೈಂಗಿಕ ಸಲಹೆಗಳು

ಮೊದಲ ರಾತ್ರಿಯ ಬಗ್ಗೆ ಮೊದಲಿನಿಂದಲೂ ಜನರಲ್ಲಿ ತಪ್ಪು ಕಲ್ಪನೆಯಿದೆ. ಆದರೆ ಮದುವೆಯಾದ ದಿನವೇ ಮೊದಲ ದಂಪತಿಗಳ ನಡುವೆ ಸಮಾಗಮ ನಡೆಯಬೇಕು ಎಂದೇನಿಲ್ಲ. ನವದಂಪತಿಗಳು ಮೊದಲು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಬೇಕು. ಇಬ್ಬರೂ ದೈಹಿಕವಾಗಿ ಒಂದಾಗಲು ಸಿದ್ಧರಾದಾಗ ಮಾತ್ರ ಇಬ್ಬರ ನಡುವೆ ಉತ್ತಮ ಬಾಂಧವ್ಯ ಬೆಳೆಯುತ್ತದೆ. ಆಗ ಮಾತ್ರ ಲೈಂಗಿಕ ಜೀವನ ಚೆನ್ನಾಗಿರಲು ಸಾಧ್ಯ. ಒತ್ತಾಯಪೂರ್ವಕವಾಗಿ ಎಂದಿಗೂ ಒಂದಾಗಬಾರದು. ನವವಿವಾಹಿತರು ಈ ಅಂಶವನ್ನು ಮೊದಲು ಪಾಲಿಸಬೇಕು.

ಲೈಂಗಿಕ ಜೀವನದ ಬಗ್ಗೆ ಮಾತನಾಡಿ: ದಂಪತಿಗಳಿಬ್ಬರು ಒಂದಾಗುವ ಮೊದಲು ಸಂವಹನ ಬಹಳ ಮುಖ್ಯ. ಮೊದಲು ಒಪ್ಪಿಗೆ ಪಡೆದು ನಂತರ ಲೈಂಗಿಕ ವಿಚಾರಗಳಲ್ಲಿ ಇಬ್ಬರಿಗೂ ಇಷ್ಟವಾಗುವ ವಿಚಾರಗಳನ್ನು ಪರಸ್ಪರ ಹಂಚಿಕೊಳ್ಳಿ. ಆರೋಗ್ಯಕರ ಸಂವಹನವು ನೀವು ಮುಂದೆ ಅಡಿ ಇಡಲು ಬುನಾದಿಯಾಗಬೇಕು. ಇದರಿಂದ ಲೈಂಗಿಕ ವಿಚಾರದಲ್ಲಿ ವೈಮನಸ್ಸು ಮೂಡಲು ಅವಕಾಶ ಇರುವುದಿಲ್ಲ. ಲೈಂಗಿಕ ವಿಚಾರದಲ್ಲಿನ ಸಂವಹನವು ಸಂಬಂಧಗಳು ಹಾಗೂ ಲೈಂಗಿಕ ತೃಪ್ತಿಯೊಂದಿಗೆ ಧನಾತ್ಮಕ ಸಂಬಂಧ ಹೊಂದಿದೆ. ನಿಮ್ಮ ಸಂಗಾತಿ ನಿಮ್ಮ ಬಯಸುವುದು ಏನು, ಅದು ಎಷ್ಟು ಒಳ್ಳೆಯದು ಎಂಬುದರ ಬಗ್ಗೆ ತಿಳಿದುಕೊಳ್ಳಿ.

ರೊಮ್ಯಾಂಟಿಕ್‌ ವಾತಾವರಣ ಸೃಷ್ಟಿಸಿ: ಲೈಂಗಿಕ ಜೀವನದ ಆರಂಭ ಅದ್ಭುತವಾಗಿ ಇರಬೇಕು ಎಂದರೆ ನೀವಿರುವ ಕೋಣೆ ಹೇಗಿದೆ ಎನ್ನುವುದು ಮುಖ್ಯವಾಗುತ್ತದೆ. ಮೊದಲು ನೀವು ಮಲಗುವ ಕೋಣೆ ಸ್ವಚ್ಛವಾಗಿರಬೇಕು. ಕೋಣೆಯಲ್ಲಿ ಮೇಣದ ಬತ್ತಿಗಳನ್ನು ಬೆಳಗಿಸಿ, ರೊಮ್ಯಾಂಟಿಕ್‌ ವಾತವರಣ ಸೃಷ್ಟಿಸಿ. ಮದುವೆಯ ಒತ್ತಡದಿಂದ ನಿಮ್ಮ ದೇಹ ಹಾಗೂ ಮನಸ್ಸು ಎರಡೂ ದಣಿದಿರುತ್ತದೆ. ಆ ಕಾರಣಕ್ಕೆ ಒಂದು ಪಾಸಿಟಿವ್‌ ವೈಬ್‌ ಇರುವುದು ಬಹಳ ಮುಖ್ಯ.

ಇಬ್ಬರೂ ಕ್ರಿಯೆಗಳಲ್ಲಿ ತೊಡಗಿ: ಮೊದಲೇ ಹೇಳಿದಂತೆ ಇಬ್ಬರಿಗೂ ಒಪ್ಪಿಗೆ ಇದ್ದು ಸಮಾನ ಮನಸ್ಸಿನಿಂದ ಒಪ್ಪಿಕೊಂಡಾಗ ಮಾತ್ರ ನಿಮ್ಮ ಲೈಂಗಿಕ ಜೀವನ ಸಂತೋಷದಿಂದಿರಲು ಸಾಧ್ಯ. ಇಬ್ಬರೂ ಲೈಂಗಿಕ ಕ್ರಿಯೆಗಳಲ್ಲಿ ತೊಡಗಿದಾಗ ಮಾತ್ರ ಖುಷಿ ಸಿಗುತ್ತದೆ.

ಸಿನಿಮಾ, ಕಥೆಗಳನ್ನು ಓದುವುದು: ಲೈಂಗಿಕ ಜೀವನಕ್ಕೆ ತೆರೆದುಕೊಳ್ಳುವ ಮೊದಲು ಇಬ್ಬರೂ ಒಂದಾಗಿ ಅದಕ್ಕೆ ಸಂಬಂಧಿಸಿದ ಸಿನಿಮಾ ನೋಡುವುದು, ಕಥೆಗಳನ್ನು ಓದುವುದು ಮಾಡಿ. ಇದರಿಂದ ಇಬ್ಬರಿಗೂ ಲೈಂಗಿಕತೆಯ ಬಗ್ಗೆ ಇರುವ ಭಾವ ಬದಲಾಗಬಹುದು.

ಪ್ರತಿಕ್ರಿಯೆ: ಲೈಂಗಿಕ ಉನ್ಮಾದದ ಸಮಯದಲ್ಲಿ ಪ್ರತಿಕ್ರಿಯೆ ನೀಡುವುದು ಕೂಡ ಮುಖ್ಯವಾಗುತ್ತದೆ. ಇದರಿಂದ ನಿಮ್ಮ ಸಂಗಾತಿಯೂ ನಿಮ್ಮಿಂದ ಖುಷಿಯಾಗಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಕಣ್ಣಿನ ಸಂಪರ್ಕ: ದೈಹಿಕ ಸಂಪರ್ಕ ನಡೆಸುವಾಗ ಒಬ್ಬರಿಗೊಬ್ಬರು ಕಣ್ಣಲ್ಲಿ ಕಣ್ಣಿಟ್ಟು ನೋಡುವುದು ಕೂಡ ಮುಖ್ಯವಾಗುತ್ತದೆ. ಇದು ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ.

ಪರಸ್ಪರ ಹೊಗಳಿಕೆ: ಇಬ್ಬರು ಒಂದಾದ ವೇಳೆ ಒಬ್ಬರಿಗೊಬ್ಬರು ಹೊಗಳುವುದು ಕೂಡ ಖುಷಿ ನೀಡುತ್ತದೆ. ಇದರಿಂದ ಇನ್ನಷ್ಟು ಉತ್ಸಾಹ ಮೂಡುವುದು ಮಾತ್ರವಲ್ಲ, ಬಾಂಧವ್ಯ ವೃದ್ಧಿಯಾಗುತ್ತದೆ.

ಹೊಸತಾಗಿ ಮದುವೆಯಾದವರು ಈ ಎಲ್ಲಾ ಅಂಶಗಳನ್ನು ಗಮನದಲ್ಲಿ ಇರಿಸಿಕೊಂಡು ನಮ್ಮ ದಾಂಪತ್ಯ ಜೀವನ ಮುಂದಿನ ಭಾಗಕ್ಕೆ ಅಡಿ ಇಡಬೇಕು. ಈ ಎಲ್ಲದ್ದಕ್ಕಿಂತಲೂ ಜೀವನದಲ್ಲಿ ಬಹಳ ಮುಖ್ಯವಾದುದು ಹೊಂದಾಣಿಕೆ. ಹೊಂದಾಣಿಕೆ ಇಲ್ಲ ಎಂದಾದರೆ ಬದುಕಿನಲ್ಲಿ ಎಲ್ಲವೂ ಇದ್ದು ಏನೂ ಇಲ್ಲದಂತಾಗುತ್ತದೆ. ಹಾಗಾಗಿ ಹೊಂದಾಣಿಕೆಗೆ ಮೊದಲ ಪ್ರಾಶಸ್ತ್ಯ ನೀಡಿ.

ವಿಭಾಗ