Honemoon Destinations: ಜಸ್ಟ್‌ ಮ್ಯಾರೀಡ್ ಜೋಡಿಗಳ ಗಮನಕ್ಕೆ, ವಿದೇಶಕ್ಕೆ ಹನಿಮೂನ್ ಹೋಗೋ ಆಸೆ ಇರೋರಿಗೆ ಇಲ್ಲಿದೆ ಬೊಂಬಾಟ್ ಮಾಹಿತಿ
ಕನ್ನಡ ಸುದ್ದಿ  /  ಜೀವನಶೈಲಿ  /  Honemoon Destinations: ಜಸ್ಟ್‌ ಮ್ಯಾರೀಡ್ ಜೋಡಿಗಳ ಗಮನಕ್ಕೆ, ವಿದೇಶಕ್ಕೆ ಹನಿಮೂನ್ ಹೋಗೋ ಆಸೆ ಇರೋರಿಗೆ ಇಲ್ಲಿದೆ ಬೊಂಬಾಟ್ ಮಾಹಿತಿ

Honemoon Destinations: ಜಸ್ಟ್‌ ಮ್ಯಾರೀಡ್ ಜೋಡಿಗಳ ಗಮನಕ್ಕೆ, ವಿದೇಶಕ್ಕೆ ಹನಿಮೂನ್ ಹೋಗೋ ಆಸೆ ಇರೋರಿಗೆ ಇಲ್ಲಿದೆ ಬೊಂಬಾಟ್ ಮಾಹಿತಿ

ವಿದೇಶಕ್ಕೆ ಮಧುಚಂದ್ರಕ್ಕೆ ತೆರಳಬೇಕು, ಆದರೆ ಬಜೆಟ್ ಸ್ನೇಹಿಯಾಗಿರಬೇಕು ಎಂಬ ಹುಡುಕಾಟ ನಿಮ್ಮದೇ? ಹಾಗಾದ್ರೆ ನಿಮಗೆ ಹೇಳಿ ಮಾಡಿಸಿದಂತಿರುವ ಟಾಪ್ 5 ಬಜೆಟ್ ಸ್ನೇಹಿ ದೇಶಗಳ ಪಟ್ಟಿ ಇಲ್ಲಿದೆ ನೋಡಿ.

ಜಸ್ಟ್‌ ಮ್ಯಾರೀಡ್ ಜೋಡಿಗಳ ಗಮನಕ್ಕೆ, ವಿದೇಶಕ್ಕೆ ಹನಿಮೂನ್ ಹೋಗೋ ಆಸೆ ಇರೋರಿಗೆ ಇಲ್ಲಿದೆ ಬೊಂಬಾಟ್ ಮಾಹಿತಿ
ಜಸ್ಟ್‌ ಮ್ಯಾರೀಡ್ ಜೋಡಿಗಳ ಗಮನಕ್ಕೆ, ವಿದೇಶಕ್ಕೆ ಹನಿಮೂನ್ ಹೋಗೋ ಆಸೆ ಇರೋರಿಗೆ ಇಲ್ಲಿದೆ ಬೊಂಬಾಟ್ ಮಾಹಿತಿ

ಹನಿಮೂನ್ ಖುಷಿಗೆ ಬೆಸ್ಟ್ ದೇಶಗಳು: ಮದುವೆ ಎನ್ನುವುದು ಸುಂದರವಾದ ಸಂಬಂಧ. ಎಲ್ಲೋ ಇದ್ದ ಎರಡು ಜೀವಗಳು ಒಂದಾಗಿ ಪರಸ್ಪರ ಪ್ರೀತಿಯಿಂದ ಬದುಕುವುದು ಎಂದರೆ ಸುಲಭವಲ್ಲ. ಪತಿ-ಪತ್ನಿ ನಡುವಿನ ಅಮೂಲ್ಯ ಕ್ಷಣಗಳು ಅವರ ಬಂಧವನ್ನು ಇನ್ನಷ್ಟು ಬಿಗಿಗೊಳಿಸುತ್ತದೆ. ಮದುವೆ ಎಂದಮೇಲೆ ಹನಿಮೂನ್ ಹೋಗದೇ ಇದ್ದರೆ ಹೇಗೆ..? ನಿಮ್ಮ ಸಂಗಾತಿಯೊಂದಿಗಿನ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸುವಲ್ಲಿ ಮಧುಚಂದ್ರ ಪ್ರಮುಖ ಪಾತ್ರ ವಹಿಸುತ್ತದೆ. ಈಗಿನ ದುಬಾರಿ ದುನಿಯಾದಲ್ಲಿ ಬಜೆಟ್ ಸ್ನೇಹಿಯಾದ ಮಧುಚಂದ್ರದ ಜಾಗವನ್ನು ಹುಡುಕುವುದೇ ಒಂದು ಸಾಹಸಮಯ ಕೆಲಸ. ಮದುವೆಯಾದ ಬಳಿಕ ನೀವೇನಾದರೂ ವಿದೇಶದಲ್ಲಿ ಹನಿಮೂನ್‌ ಎಂಜಾಯ್ ಮಾಡಬೇಕು ಎಂದು ಕನಸು ಕಂಡಿದ್ದರೆ ಬಜೆಟ್ ಸ್ನೇಹಿ ಎನಿಸುವ ದೇಶಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಭಾರತವನ್ನು ಹೊರತುಪಡಿಸಿ ಹನಿಮೂನ್‌ಗೆ ಬಜೆಟ್ ಸ್ನೇಹಿ ಎನಿಸುವ ಟಾಪ್ 5 ದೇಶಗಳ ಬಗ್ಗೆ ಮಾಹಿತಿ ಇಲ್ಲಿದೆ

1) ಕತಾರ್: ಮಧುಚಂದ್ರದ ಆಹ್ಲಾದ ಹೆಚ್ಚಿಸುವ ದೇಶ

ಭಾರತೀಯರು ಹನಿಮೂನ್ಗೆಂದು ಆಯ್ಕೆ ಮಾಡಿಕೊಳ್ಳುವ ಸಾಮಾನ್ಯ ದೇಶಗಳ ಪೈಕಿ ಕತಾರ್ ಕೂಡ ಒಂದು. ಇಲ್ಲಿ ನಿಮಗೆ ಸಾಕಷ್ಟು ಸುಂದರವಾದ ಸ್ಥಳಗಳನ್ನು ನೋಡಬಹುದಾಗಿದೆ. ಆಧುನಿಕ ಸೌಂದರ್ಯದ ಜೊತೆಯಲ್ಲಿ ಪಾರಂಪರಿಕ ಅದ್ಭುತಗಳು ಖಂಡಿತವಾಗಿಯೂ ನಿಮ್ಮ ಮಧುಚಂದ್ರದ ಅನುಭವವನ್ನು ಆಹ್ಲಾದಕರವಾಗಿ ಇಡಬಲ್ಲದು. ಇಲ್ಲಿನ ಪಾಕ ಪದ್ಧತಿ, ವಿವಿಧ ಪ್ರಸಿದ್ಧ ಬಜಾರ್‌ಗಳು, ವಸ್ತು ಸಂಗ್ರಹಾಲಯಗಳು , ಮರುಭೂಮಿಗಳ ಸೌಂದರ್ಯ ಹೀಗೆ ಸಾಕಷ್ಟು ಮಜಾ ನಿಮಗೆ ಇಲ್ಲಿ ಅನ್ವೇಷಿಸಲು ಸಿಗುತ್ತದೆ.

2) ಬ್ಯಾಂಕಾಕ್: ಬಜೆಟ್ ಸ್ನೇಹಿ ಶಾಪಿಂಗ್‌ಗೆ ಹೆಸರುವಾಸಿ

ಭಾರತೀಯರಿಗೆ ಬಜೆಟ್ ಸ್ನೇಹಿ ಮಧುಚಂದ್ರಕ್ಕೆ ತೆರಳಲು ಇನ್ನೊಂದು ಉತ್ತಮ ಆಯ್ಕೆಯೆಂದರೆ ಅದು ಬ್ಯಾಂಕಾಕ್. ದಕ್ಷಿಣ ಏಷ್ಯಾದ ಅತ್ಯಂತ ಜನಪ್ರಿಯ ತಾಣವಾದ ಬ್ಯಾಂಕಾಕ್ ಥಾಯ್ಲೆಂಡ್‌ನ ರಾಜಧಾನಿ. ಇಲ್ಲಿನ ರೋಮಾಂಚಕ ನೈಟ್‌ಗಳು, ದೇಸಿ ಸಂಸ್ಕೃತಿ, ವಿವಿಧ ಜನಪ್ರಿಯ ಶಾಪಿಂಗ್ ಕೇಂದ್ರಗಳು ನವ ದಂಪತಿಗೆ ಹೇಳಿ ಮಾಡಿಸಿದಂತೆ ಇವೆ. ಥಾಯ್ಲೆಂಡ್‌ನ ಪ್ರಾಚೀನ ಪರಂಪರೆಯನ್ನೂ ಸಹ ನೀವು ಕಣ್ತುಂಬಿಕೊಳ್ಳಬಹುದಾಗಿದೆ. ಚಾವೋ ಪ್ರಯಾ ನದಿಯಲ್ಲಿ ರೊಮ್ಯಾಂಟಿಕ್ ಕ್ರೂಸ್‌ನಲ್ಲಿ ತೆರಳುವ ಖುಷಿಯನ್ನಂತೂ ವರ್ಣಿಸಲು ಆಗುವುದಿಲ್ಲ.

3) ಶ್ರೀಲಂಕಾ: ಅತಿಥಿ ದೇವೋಭವ ಎನ್ನುವ ನೆರೆ ದೇಶ

ಭಾರತಕ್ಕೆ ಅತ್ಯಂತ ಸಮೀಪದಲ್ಲಿರುವ, ಭಾರತೀಯರಿಗೆ ಮಧುಚಂದ್ರಕ್ಕೆ ಸರಿ ಹೊಂದುವ ಮತ್ತೊಂದು ದೇಶವೆಂದರೆ ಅದು ಶ್ರೀಲಂಕಾ. ಶ್ರೀಲಂಕಾದ ಪ್ರವಾಸೋದ್ಯಮ ಇತ್ತೀಚಿನ ದಿನಗಳಲ್ಲಿ ಇನ್ನಷ್ಟು ಸುಧಾರಿಸಿದೆ. ಇಲ್ಲಿನ ಗುಣಮಟ್ಟದ ಆತಿಥ್ಯ ಹಾಗೂ ಶ್ರೀಮಂತ ಪರಂಪರೆ ದ್ವೀಪ ರಾಷ್ಟ್ರದ ಮೇಲೆ ಇನ್ನಷ್ಟು ಆಸಕ್ತಿ ಹುಟ್ಟಿಸುತ್ತದೆ. ಶಾಂತ ಕಡಲ ತೀರಗಳು ಮಧುಚಂದ್ರಕ್ಕೆ ಹೇಳಿ ಮಾಡಿಸಿದ ಸ್ಥಳ. ಇಲ್ಲಿನ ಪಾಕ ಪದ್ಧತಿ, ಪುರಾತನ ಡಾಗೋಬಾಗಳು, ಸಫಾರಿ, ಚಹಾ ತೋಟ, ಡಾಲ್ಫಿನ್‌ಗಳ ನೋಟ ಖುಷಿ ಕೊಡುತ್ತದೆ.

4) ದುಬೈ: ಐಷಾರಾಮಿ ಜಗತ್ತಿಗೆ ಇಣುಕುನೋಟ

ಮಧ್ಯಪ್ರಾಚ್ಯದ ಮತ್ತೊಂದು ಸುಂದರವಾದ, ಮಧುಚಂದ್ರಕ್ಕೆ ಹೇಳಿ ಮಾಡಿಸಿದ ಸ್ಥಳವೆಂದರೆ ದುಬೈ. ತನ್ನ ಐಷಾರಾಮಿ ಹಾಗೂ ವರ್ಣರಂಜಿತ ಅನುಭವಗಳಿಂದಾಗಿ ದುಬೈ ಸಹ ಮಧುಚಂದ್ರಕ್ಕೆ ಭಾರತೀಯ ಜೋಡಿಗಳನ್ನು ಕೈ ಬೀಸಿ ಕರೆಯುತ್ತದೆ. ವಿಶ್ವದ ಅತಿದೊಡ್ಡ ಶಾಪಿಂಗ್ ಮಾಲ್ ಕೂಡ ಇಲ್ಲಿಯೇ ಇದೆ. ಮರುಭೂಮಿ ಸಫಾರಿ, ಒಂಟೆ ಸವಾರಿ, ನೌಕೆ ವಿಹಾರ ಹೇಳುತ್ತಾ ಹೋದರೆ ದುಬೈನಲ್ಲಿ ನವದಂಪತಿಗೆ ಖುಷಿ ಕೊಡುವ ಸಾಕಷ್ಟು ವಿಚಾರಗಳಿವೆ.

5) ಮಾಲ್ಡೀವ್ಸ್: ಸ್ವಚ್ಛ ನೀರು, ಇಷ್ಟವಾಗುವ ಏಕಾಂತ

ಹನಿಮೂನ್ ಎಂದಾಕ್ಷಣ ಮೊದಲು ನೆನಪಾಗುವುದೇ ಮಾಲ್ಡೀವ್ಸ್ ದ್ವೀಪ. ಇತ್ತೀಚೆಗೆ ರಾಜತಾಂತ್ರಿಕ ವಿಚಾರಗಳಿಂದ ಭಾರತೀಯರು ಮಾಲ್ಡೀವ್ಸ್‌ ಬಗ್ಗೆ ಆಕ್ಷೇಪ ತೋರುತ್ತಿದ್ದಾರೆ. ಆದರೆ ಭಾರತೀಯರಿಗೆ ಪ್ರವಾಸದ ತಾಣಗಳ ಪಟ್ಟಿಯಲ್ಲಿ ಹಲವು ವರ್ಷಗಳಿಂದ ಮಾಲ್ಡೀವ್ಸ್ ಮೊದಲು ಸಾಲಿನಲ್ಲಿತ್ತು. ಇದು ಭಾರತೀಯರ ಅಚ್ಚುಮೆಚ್ಚಿನ ಹನಿಮೂನ್ ತಾಣ. ಇಲ್ಲಿನ ಹೋಟೆಲ್‌ಗಳು, ರೆಸಾರ್ಟ್, ಸ್ವಚ್ಛ ನೀರು, ಶಾಂತ ವಾತಾವರಣ, ಏಕಾಂತ ಎಲ್ಲವೂ ನವ ದಂಪತಿಯ ಮನಕ್ಕೆ ಮುದ ಕೊಡುತ್ತವೆ.

Whats_app_banner