ಕನ್ನಡ ಸುದ್ದಿ  /  Lifestyle  /  Relationship-first Date Tips: Women Should Observe This Behavior From Men's In Their First Date- Rst

Relationship-First date tips: ಫಸ್ಟ್‌ಡೇಟ್‌ನಲ್ಲಿ ಹೆಣ್ಣುಮಕ್ಕಳು ಪುರುಷರಲ್ಲಿ ಗಮನಿಸಬೇಕಾದ ಕೆಲವು ಪ್ರಮುಖ ಅಂಶಗಳಿವು

Relationship-First date tips: ಪ್ರೇಮಿ ಅಥವಾ ಮದುವೆಯಾಗುವ ಹುಡುಗನನ್ನು ಮೊದಲ ಬಾರಿ ಭೇಟಿ ಮಾಡುವಾಗ ಹೆಣ್ಣುಮಕ್ಕಳಲ್ಲಿ ಹೇಳಿಕೊಳ್ಳಲಾಗದ ಖುಷಿ ಇರುತ್ತದೆ. ಆದರೆ ಖುಷಿಯ ನಡುವೆ ಆ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ಅರಿಯುವುದನ್ನು ಮರೆಯಬಾರದು. ಮೊದಲ ಭೇಟಿಯಲ್ಲೇ ಈ ಕೆಲವು ಅಂಶಗಳನ್ನು ಗಮನಿಸುವ ಮೂಲಕ ವ್ಯಕ್ತಿಯ ಸಂಪೂರ್ಣ ಜಾತಕವನ್ನು ತಿಳಿಯಬಹುದು.

ಫಸ್ಟ್‌ಡೇಟ್‌
ಫಸ್ಟ್‌ಡೇಟ್‌

ಫಸ್ಟ್‌ ಡೇಟ್‌ ಅಥವಾ ಮೊದಲ ಬಾರಿ ಪ್ರೇಮಿಯನ್ನು ಭೇಟಿ ಮಾಡಲು ಹೋಗುವುದು ನಿಜಕ್ಕೂ ಒಂಥರಾ ಖುಷಿ. ಅದರೊಂದಿಗೆ ಆತಂಕ ಹಾಗೂ ಗೊಂದಲವೂ ಸಹಜ. ಆದರೆ ಸಂಭ್ರಮದೊಂದಿಗೆ ಎಚ್ಚರವಿರುವುದೂ ಅವಶ್ಯವಾಗುತ್ತದೆ.

ಅದರಲ್ಲೂ ಯುವತಿಯೊಬ್ಬಳು ಪುರುಷನೊಂದಿಗೆ ಮೊದಲ ಬಾರಿ ಡೇಟಿಂಗ್‌ಗೆ ಹೋಗುವಾಗ ಈ ಕೆಲವು ಅಂಶಗಳನ್ನು ಗಮನಿಸಲೇಬೇಕು. ಇದರಿಂದ ಆ ವ್ಯಕ್ತಿಯ ವ್ಯಕ್ತಿತ್ವ ಚಿತ್ರಣ ಸಿಗುವುದು ಮಾತ್ರವಲ್ಲ, ಅವರೊಂದಿಗೆ ಮುಂದಿನ ಜೀವನ ನಡೆಸುವುದು ಸಾಧ್ಯವೋ, ಇಲ್ಲವೋ ಎಂಬ ಬಗ್ಗೆಯೂ ತಿಳಿದುಕೊಳ್ಳಬಹುದು. ಸಂಬಂಧದಲ್ಲಿ ಮುಂದುವರಿಯಲು ಅರ್ಹನೋ ಅಥವಾ ಅನರ್ಹನೋ ಎಂಬುದನ್ನು ಅರಿತುಕೊಳ್ಳಬಹುದು.

ಹಾಗಾದರೆ ಮೊದಲ ಭೇಟಿಯಲ್ಲಿ ಗಮನ ವಹಿಸಬೇಕಾದ ಅಂಶಗಳು ಯಾವುವು; ಇಲ್ಲಿದೆ ನೋಡಿ ಉತ್ತರ

ಸಂವಹನ ಕೌಶಲ

ಆ ವ್ಯಕ್ತಿ ನಿಮ್ಮೊಂದಿಗೆ ಯಾವ ರೀತಿ ಸಂವಹನ ನಡೆಸುತ್ತಿದ್ದಾನೆ ಎಂಬುದನ್ನು ಗಮನಿಸುವುದು ಬಹಳ ಮುಖ್ಯವಾಗುತ್ತದೆ. ಅವನು ನಿಮ್ಮ ಮಾತನ್ನು ಕೇಳಿಸಿಕೊಳ್ಳುತ್ತಿದ್ದಾನೆಯೇ, ನಿಮ್ಮ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದಾನೆಯೇ, ನೀವು ಮಾತನಾಡುತ್ತಿರುವ ವಿಷಯಗಳ ಬಗ್ಗೆ ಅವನಲ್ಲಿ ಆಸಕ್ತಿ ಇದೆಯೇ, ನಿಮ್ಮ ಮಾತಿಗೆ ಅಡ್ಡಿ ಪಡಿಸುವುದು, ನಿಮಗೆ ಮಾತನಾಡಲು ಬಿಡದೆ ಒಬ್ಬನೇ ಮಾತನಾಡುವುದು ಇವೆಲ್ಲವೂ ಅವನ ಸಂವಹನ ಶೈಲಿಯನ್ನು ತಿಳಿಸುತ್ತದೆ. ಇದರಿಂದ ಅವನು ನಿಮ್ಮ ಮೌಲ್ಯಗಳಿಗೆ ಬೆಲೆ ಕೊಡುತ್ತಾನೋ ಇಲ್ಲವೋ, ನಿಮ್ಮ ಅಭಿಪ್ರಾಯಗಳ ಮೇಲೆ ಗೌರವ ಹೊಂದಿದ್ದಾನೋ ಇಲ್ಲವೋ ಎಂಬುದನ್ನು ಅರಿಯಬಹುದು. ಇದರೊಂದಿಗೆ ನೀವು ಬಂದಾಗ ಬಾಗಿಲು ತೆರೆದು ಸ್ವಾಗತಿಸುವುದು, ಕುರ್ಚಿಯನ್ನು ಎಳೆದು ಕುಳಿತುಕೊಳ್ಳಲು ಸಹಾಯ ಮಾಡುವುದು ಇದೂ ಕೂಡ ಮುಖ್ಯವಾಗುತ್ತದೆ.

ಆಂಗಿಕ ಭಾಷೆಗಳು

ಮೊದಲ ದಿನದ ಡೇಟಿಂಗ್‌ ವೇಳೆ ಬಾಡಿ ಲ್ಯಾಗ್ವೆಂಜ್‌ ಅಥವಾ ಆಂಗಿಕ ಭಾಷೆಗಳ ಮೇಲೆ ಗಮನ ಹರಿಸುವುದು ಬಹಳ ಮುಖ್ಯವಾಗುತ್ತದೆ. ನಿಮ್ಮ ಜೊತೆ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವುದು, ನಿಮ್ಮ ಮಾತನ್ನು ಕೇಳಿಸಿಕೊಳ್ಳುವುದು ಹಾಗೂ ನಿಮ್ಮೊಂದಿಗೆ ಆರಾಮವಾಗಿ ಕುಳಿತು ಮಾತನಾಡುವುದು ಈ ಎಲ್ಲಾ ಅಂಶಗಳನ್ನು ಗಮನಿಸುವುದು ಬಹಳ ಮುಖ್ಯವಾಗುತ್ತದೆ. ಈ ಸಂಕೇತಗಳು ಅವನು ನಿಮ್ಮ ಕಂಪನಿಯನ್ನು ಎಂಜಾಯ್‌ ಮಾಡುತ್ತಿದ್ದಾನೆ ಹಾಗೂ ನಿಮ್ಮ ಬಗ್ಗೆ ತಿಳಿದುಕೊಳ್ಳಲು ಹಾಗೂ ಸಂಬಂಧದಲ್ಲಿ ಮುಂದುವರಿಯಲು ಅವನಿಗೆ ಆಸಕ್ತಿ ಇದೆ ಎಂದು ಅರ್ಥ.

ಇತರರೊಂದಿಗಿನ ವರ್ತನೆ

ನೀವು ಡೇಟ್‌ ಮಾಡುತ್ತಿರುವ ವ್ಯಕ್ತಿ ಇತರರೊಂದಿಗೆ ವರ್ತನೆ, ಬೇರೆಯವರ ಜೊತೆ ಮಾತನಾಡುತ್ತಿರುವ ರೀತಿ ಇದನ್ನೂ ಗಮನಿಸಿ. ಗಾರ್ಡ್‌ಗಳು, ಸೆಕ್ಯೂರಿಟಿ ಇವರೊಂದಿಗೆ ಅವರ ವರ್ತನೆ ಹೇಗಿದೆ ಎಂಬುದನ್ನು ಗಮನಿಸಿ. ಅಂತಹವರ ಜೊತೆಗೆ ಚೆನ್ನಾಗಿ ಮಾತನಾಡದ ಹಾಗೂ ಒರಟಾಗಿ ವರ್ತಿಸುವ ವ್ಯಕ್ತಿಗಳು ನಂಬಲು ಅರ್ಹರಲ್ಲದವರು. ಈ ರೀತಿ ವ್ಯಕ್ತಿಗಳು ಮದುವೆಯಾದ ಕೆಲವ ದಿನಗಳಲ್ಲಿ ನಿಮ್ಮೊಂದಿಗೂ ಅದೇ ರೀತಿಯ ವರ್ತನೆ ತೋರಬಹುದು.

ಕುಟುಂಬದ ಬಗೆಗಿನ ಮಾತು

ಆ ವ್ಯಕ್ತಿ ತನ್ನ ಕುಟುಂಬ ಹಾಗೂ ತಾಯಿಯ ಬಗ್ಗೆ ಯಾವ ರೀತಿಯ ಭಾವನೆಗಳನ್ನು ಹೊಂದಿದ್ದಾನೆ ಎಂಬುದರ ಮೇಲೆ ಅವನ ವ್ಯಕ್ತಿತ್ವವನ್ನು ಅಳೆಯಬಹುದು. ತಾಯಿಯ ಬಗ್ಗೆ ಒಲವಿನಿಂದ ಮಾತನಾಡುವ ವ್ಯಕ್ತಿಯ ಬಗ್ಗೆ ನಂಬಿಕೆ ಇರಿಸಬಹುದು.

ಫೋನ್‌ನಲ್ಲಿ ಮುಳುಗಿರುವುದು

ನಿಮ್ಮ ಜೊತೆ ಡೇಟಿಂಗ್‌ಗೆಂದು ಬಂದ ವ್ಯಕ್ತಿ ಸದಾ ಫೋನ್‌ನಲ್ಲಿ ಮುಳುಗಿರುವುದು, ಚಾಟಿಂಗ್‌ ಮಾಡುವುದು, ಬ್ರೌಸ್‌ ಮಾಡುವುದು ಮಾಡುತ್ತಿದ್ದರೆ ಅವರ ಮೇಲೆ ಅಂತಹವರು ನಂಬಿಕೆಗೆ ಹಾಗೂ ಸಂಬಂಧ ಮುಂದುವರಿಸಲು ಅರ್ಹರಲ್ಲ.

ಉಗುರು ಹಾಗೂ ಕೂದಲು

ನೀವು ಫಸ್ಟ್‌ಡೇಟ್‌ನಲ್ಲಿ ಭೇಟಿ ಮಾಡಲು ಹೋದ ವ್ಯಕ್ತಿಯ ಕೂದಲು ಹಾಗೂ ಉಗುರುಗಳನ್ನು ಗಮನಿಸಿ. ಇದು ಇವರ ನೈರ್ಮಲ್ಯವನ್ನು ಸೂಚಿಸುತ್ತದೆ. ಒಂದು ವೇಳೆ ಉಗುರು ಹಾಗೂ ಕೂದಲನ್ನು ನೀಟಾಗಿ ಇರಿಸಿಕೊಂಡಿದರೆ ಅವರ ತನ್ನ ಒಟ್ಟಾರೆ ಸ್ವಚ್ಛತೆಯ ಬಗ್ಗೆ ಗಮನ ಹರಿಸುತ್ತಾನೆ ಎಂಬ ಅರ್ಥ.

ವಿಭಾಗ