Deepawali 2023: ಬೆಳಕಿನ ಹಬ್ಬದ ಸಂಭ್ರಮ ಹೆಚ್ಚಿಸಲಿ ಸಾಂಪ್ರದಾಯಿಕ ಉಡುಪುಗಳು; ದೀಪಾವಳಿಗೆ ಸ್ಟೈಲಿಶ್‌ ಆಗಿ ಕಾಣಲು ಈ ಡ್ರೆಸ್‌ ಆಯ್ಕೆ ಮಾಡಿ
ಕನ್ನಡ ಸುದ್ದಿ  /  ಜೀವನಶೈಲಿ  /  Deepawali 2023: ಬೆಳಕಿನ ಹಬ್ಬದ ಸಂಭ್ರಮ ಹೆಚ್ಚಿಸಲಿ ಸಾಂಪ್ರದಾಯಿಕ ಉಡುಪುಗಳು; ದೀಪಾವಳಿಗೆ ಸ್ಟೈಲಿಶ್‌ ಆಗಿ ಕಾಣಲು ಈ ಡ್ರೆಸ್‌ ಆಯ್ಕೆ ಮಾಡಿ

Deepawali 2023: ಬೆಳಕಿನ ಹಬ್ಬದ ಸಂಭ್ರಮ ಹೆಚ್ಚಿಸಲಿ ಸಾಂಪ್ರದಾಯಿಕ ಉಡುಪುಗಳು; ದೀಪಾವಳಿಗೆ ಸ್ಟೈಲಿಶ್‌ ಆಗಿ ಕಾಣಲು ಈ ಡ್ರೆಸ್‌ ಆಯ್ಕೆ ಮಾಡಿ

ಭಾರತದಲ್ಲಿ ದೀಪಾವಳಿ 5 ದಿನಗಳ ಕಾಲ ಆಚರಿಸುವ ಬಹುದೊಡ್ಡ ಹಬ್ಬ. ಈ ಹಬ್ಬದಲ್ಲಿ ದಿನಕ್ಕೊಂದು ಹೊಸ ಬಟ್ಟೆ ಧರಿಸಿ ಸಂಭ್ರಮಿಸಬಹುದು. ಹಬ್ಬ ಎಂದ ಮೇಲೆ ಸಾಂಪ್ರದಾಯಿಕ ಉಡುಗೆಗಳಿಲ್ಲ ಎಂದರೆ ಏನು ಚಂದ ಅಲ್ವಾ? ದೀಪಾವಳಿ ಹಬ್ಬಕ್ಕೆ ಮನೆಮಂದಿಯೆಲ್ಲರಿಗೂ ಒಪ್ಪುವ ಸಾಂಪ್ರದಾಯಿಕ ಉಡುಪುಗಳ ಬಗ್ಗೆ ನಾವು ನಿಮಗೆ ತಿಳಿಸುತ್ತೇವೆ.

ಬೆಳಕಿನ ಹಬ್ಬದ ಸಂಭ್ರಮ ಹೆಚ್ಚಿಸಲಿ ಸಾಂಪ್ರದಾಯಿಕ ಉಡುಪುಗಳು
ಬೆಳಕಿನ ಹಬ್ಬದ ಸಂಭ್ರಮ ಹೆಚ್ಚಿಸಲಿ ಸಾಂಪ್ರದಾಯಿಕ ಉಡುಪುಗಳು

ಯಾವುದೇ ಭಾರತೀಯ ಹಬ್ಬಗಳಲ್ಲಿ ಆಚರಣೆ, ಸಂಪ್ರದಾಯದ ಜೊತೆಗೆ ಹೊಸ ಬಟ್ಟೆಯು ಪ್ರಮುಖವಾಗಿರುತ್ತದೆ. ಹಬ್ಬದ ದಿನಗಳಲ್ಲಿ ಸಾಂಪ್ರದಾಯಿಕ ಉಡುಪುಗಳು ಯಾವಾಗಲೂ ಅಗ್ರಸ್ಥಾನ ಪಡೆಯುತ್ತವೆ. ಹೊಟ್ಟೆ ಬಟ್ಟೆ ಧರಿಸುವ ಖುಷಿಯು ಹಬ್ಬದ ಸಂಭ್ರಮವನ್ನೂ ಹೆಚ್ಚು ಮಾಡುವುದು ಸುಳ್ಳಲ್ಲ. ಇನ್ನು ಸಾಂಪ್ರದಾಯಿಕ ಉಡುಪುಗಳು ದೇಶದ ಇತಿಹಾಸವನ್ನು ಎತ್ತಿ ಹಿಡಿಯುವುದು ಸುಳ್ಳಲ್ಲ.

ಈ ದೀಪಾವಳಿ ಹಬ್ಬಕ್ಕೆ ಮನೆಮಂದಿಯೆಲ್ಲಾ ಸಾಂಪ್ರದಾಯಿಕ ಉಡುಗೆ ತೊಟ್ಟು ಮಿಂಚಬೇಕು ಅಂತಿದ್ರೆ ನಿಮಗಾಗಿ ಇಲ್ಲಿದೆ ಒಂದಿಷ್ಟು ಐಡಿಯಾಗಳು. ಮಕ್ಕಳು, ಮಹಿಳೆಯರು, ಪುರುಷರು ಯಾವ ರೀತಿಯ ಉಡುಪುಗಳನ್ನು ಧರಿಸಬಹುದು ಎಂಬುದನ್ನು ನೋಡೋಣ.

ಮಹಿಳೆಯರ ಸಾಂಪ್ರದಾಯಿಕ ಉಡುಪುಗಳು

ಚೂಡಿದಾರ್‌

ಬಹಳ ಹಿಂದಿನಿಂದಲೂ ಹೆಣ್ಣುಮಕ್ಕಳು ಮೆಚ್ಚುವ ಸಾಂಪ್ರದಾಯಿಕ ದಿರಿಸು ಚೂಡಿದಾರ್‌. ಇದು ಧರಿಸಲು ಆರಾಮದಾಯಕ. ಚೂಡಿದಾರದೊಂದಿಗೆ ಅಗಲದ ಕಿವಿಯೋಲೆ, ಕೈತುಂಬಾ ಬಳೆ, ನೆಕ್ಲೇಸ್‌ ಧರಿಸುವ ಮೂಲಕ ಅಂದ ಹೆಚ್ಚಿಸಿಕೊಳ್ಳಬಹುದು. ಸ್ವಲ್ಪ ಗ್ರ್ಯಾಂಡ್‌ ಲುಕ್‌ ಇರುವ ಚೂಡಿದಾರ್‌ ದೀಪಾವಳಿ ಹಬ್ಬಕ್ಕೆ ಹೇಳಿ ಮಾಡಿಸಿದ್ದು.

ಪಟಿಯಾಲಾ ಸ್ಯೂಟ್‌

ಪಟಿಯಾಲಾ ಡ್ರೆಸ್‌ಗಳಿಗೆ ಇತ್ತೀಚೆಗೆ ಬೇಡಿಕೆ ಕಡಿಮೆಯಾದರೂ ಕೂಡ ಇವು ಹಬ್ಬದ ದಿನಗಳಲ್ಲಿ ಧರಿಸಲು ಹೇಳಿ ಮಾಡಿಸಿದಂಥದ್ದು. ನೆರಿಗೆ ಇರುವ ಅಗಲವಾದ ಪಟಿಯಾಲಾ ಪ್ಯಾಂಟ್‌ನೊಂದಿಗೆ ತ್ರೀ ಫೋರ್ಥ್‌ ತೋಳಿನ ಟಾಪ್‌ ಧರಿಸುವುದರಿಂದ ಅಂದ ಹೆಚ್ಚಿಸಿಕೊಳ್ಳಬಹುದು. ಇದರೊಂದಿಗೆ ಗ್ರ್ಯಾಂಡ್‌ ಇರುವ ಶಾಲ್‌ ಧರಿಸುವ ಮೂಲಕ ಹಬ್ಬದ ಲುಕ್‌ ಬರುವಂತೆ ಮಾಡಬಹುದು.

ಲೆಹಂಗಾ ಚೋಲಿ

ಲೆಹಂಗಾ ಚೋಲಿ ಭಾರತೀಯರ ಹೆಣ್ಣುಮಕ್ಕಳ ಫೇವರಿಟ್‌ ಅಂತಲೇ ಹೇಳಬಹುದು. ಹಬ್ಬ, ಫಂಕ್ಷನ್‌ ಯಾವುದೇ ಇರಲಿ ಇದು ಅಂದ ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ. ಈ ದೀಪಾವಳಿ ಹಬ್ಬಕ್ಕೆ ನೀವು ತೀರಾ ಗ್ರ್ಯಾಂಡ್‌ ಅಲ್ಲದ ಲೆಹಂಗಾ ಚೋಲಿಯನ್ನು ಧರಿಸಬಹುದು. ಎಂಬ್ರಾಡಿಯರಿ, ಗ್ಲಾಸ್‌ ವರ್ಕ್‌ ಇರುವ ಲೆಹಂಗಾ ದೀಪಾವಳಿಗೆ ಬೆಸ್ಟ್‌.

ಅರ್ನಾಕಲಿ

ಅರ್ನಾಕಲಿ ಇದು ಎತ್ತರ, ಕುಳ್ಳ, ದಪ್ಪ, ತೆಳ್ಳಗೆ ಇರುವವರು ಹೀಗೆ ಎಲ್ಲಾ ವಯೋಮಾನದವರಿಗೂ ಒಪ್ಪುವ ಸಾಂಪ್ರದಾಯಿಕ ದಿರಿಸು. ಇದನ್ನು ಧರಿಸಿದಾಗ ಲುಕ್‌ ಬದಲಾಗುವುದು ಖಂಡಿತ. ಹಬ್ಬಕ್ಕೆ ಸಿಂಪಲ್‌ ಆಗಿಯೂ ಸುಂದರವಾಗಿಯೂ ಕಾಣಬೇಕು ಅಂತಿದ್ರೆ ಅರ್ನಾಕಲಿ ಡ್ರೆಸ್‌ ಧರಿಸಿ.

ಪುರುಷರಿಗೆ ಹೀಗಿರಲಿ ಡ್ರೆಸ್‌

ಕುರ್ತಾ ಸಲ್ವಾರ್‌

ಕುರ್ತಾ ಸಲ್ವಾರ್‌ ದೀಪಾವಳಿಗೆ ಹೇಳಿ ಮಾಡಿಸಿದ್ದು. ಇದು ಸಾಂಪ್ರದಾಯಿಕ ಲುಕ್‌ನೊಂದಿಗೆ ಸ್ಟೈಲಿಶ್‌ ಆಗಿಯೂ ಕಾಣುವಂತೆ ಮಾಡುತ್ತದೆ.

ಖಾದಿ ಜಾಕೆಟ್‌

ತುಂಬು ತೋಳಿನ ಶರ್ಟ್‌ ಮೇಲೆ ಖಾದಿ ಜಾಕೆಟ್‌ ಧರಿಸುವ ಮೂಲಕ ಸಾಂಪ್ರದಾಯಿಕವಾಗಿ ಕಾಣಿಸಬಹುದು. ಹಬ್ಬದ ದಿನಗಳಿಗೆ ಇದು ಬೆಸ್ಟ್‌ ಟ್ರೆಡೀಷನಲ್‌ ಉಡುಪು ಎನ್ನಬಹುದು. ಇದರ ಜೊತೆಗೆ ಫಾರ್ಮಲ್‌ ಡ್ರೆಸ್‌ ಹಾಕಬಹುದು.

ಶೇರ್ವಾನಿ

ಶೇರ್ವಾನಿ ಎಲ್ಲ ವಯೋಮಾನದವರಿಗೂ ಒಪ್ಪುವ ಡ್ರೆಸ್.‌ ಇದು ಸಂಪ್ರದಾಯಿಕ ಲುಕ್‌ ನೀಡುವುದಲ್ಲದೇ ಧರಿಸಲು ಕಂಪರ್ಟ್‌ ಎನ್ನಿಸುತ್ತದೆ. ಗಾಢ ಬಣ್ಣದ ಶೇರ್ವಾನಿ ಡ್ರೆಸ್‌ ಹಬ್ಬಕ್ಕೆ ಹೆಚ್ಚು ಹೊಂದುತ್ತದೆ.

ಧೋತಿ ಪ್ಯಾಂಟ್‌

ಧೋತಿ ಪ್ಯಾಂಟ್‌ ಟ್ರೆಂಡ್‌ ಅನ್ನು ಇತ್ತೀಚೆಗೆ ಹುಡುಗರು ಮೆಚ್ಚುತ್ತಿದ್ದಾರೆ. ಇದರ ಮೇಲೆ ಗಿಡ್ಡನೆಯ ಕುರ್ತಾ ಧರಿಸುವುದರಿಂದ ಸೂಪರ್‌ ಆಗಿ ಕಾಣಿಸಬಹುದು.

ಮಕ್ಕಳಿಗೆ ಡ್ರೆಸ್‌

ಮಕ್ಕಳಿಗೂ ಗಂಡು ಮಕ್ಕಳಿಗೆ ಧೋತಿ ಕುರ್ತಾ, ಶೇರ್ವಾನಿ, ಪಂಚೆ ಶರ್ಟ್‌ ಸೆಟ್‌ ಈ ರೀತಿ ಉಡುಪು ಧರಿಸುವ ಮೂಲಕ ಸಾಂಪ್ರದಾಯಿಕ ನೋಟ ಸಿಗುವಂತೆ ಮಾಡಬಹುದು.

ಹೆಣ್ಣುಮಕ್ಕಳಿಗೆ ಲೆಹಂಗಾ ಚೋಲಿ, ಚೂಡಿದಾರ್‌ ಸೆಟ್‌, ಸೀರೆ ಸೆಟ್‌, ಘಾಗ್ರಾ ಚೋಲಿ, ಸಾಂಪ್ರದಾಯಿಕ ಲಂಗ ರವಿಕೆ ಇಂತಹ ಡ್ರೆಸ್‌ಗಳು ಹಬ್ಬದ ಸಂಭ್ರಮವನ್ನು ಹೆಚ್ಚಿಸಬಹುದು.

Whats_app_banner