ದೀಪಾವಳಿ vs ದಿವಾಳಿ: ದಯಮಾಡಿ ದೀಪಾವಳಿ ಅನ್ನಿ ಎಂದಿದ್ದ ರಂಗಸ್ವಾಮಿ ಮೂಕನಹಳ್ಳಿ, ಹಳೇ ಪೋಸ್ಟ್ ನೆನಪು
ದಿವಾಳಿ ಅಲ್ಲ ದೀಪಾವಳಿ. ದಯಮಾಡಿ ದೀಪಾವಳಿ ಅನ್ನಿ. ಬೆಳಿಗ್ಗೆಯಿಂದ ಇದನ್ನ ಹೇಳಿ ಹೇಳಿ ಸಾಕಾಯ್ತು. ಒಂದೆರೆಡು ಸಾಲು ದೀಪಾವಳಿ ಹಬ್ಬದ ಶುಭಾಶಯಗಳು ಅಂತ ಬರೆಯಲಿಕ್ಕೆ ಆಗದವರು ಅದೇಕೆ ದಿವಾಳಿ ಅಂತ ರೆಡಿ ಇರುವ ಪೋಸ್ಟರ್‌ಗಳನ್ನ ಕಳಿಸುತ್ತೀರಿ? ವಾಟ್ಸಆಪ್‌ನಲ್ಲಂತೂ ಈ ಪದದ ಪೋಸ್ಟರ್ ನೋಡಿ ಸಾಕಾಗಿದೆ.
ಹಬ್ಬಗಳ ಸಮಯದಲ್ಲಿ ಸ್ನೇಹಿತರು, ಕುಟುಂಬದವರು, ಸಹೋದ್ಯೋಗಿಗಳು ವಿಶ್ ಮಾಡುವುದು ಸಾಮಾನ್ಯ. ಎಲ್ಲ ಹಬ್ಬಗಳಲ್ಲೂ ವಾಟ್ಸ್‌ಆಪ್ ಮೂಲಕ ಸಂದೇಶ ಬಂದರೆ ಖುಷಿ ಎನ್ನಿಸಿದರೆ ದೀಪಾವಳಿ ಸಮಯದಲ್ಲಿ ಮಾತ್ರ ಖೇದ ಎನ್ನಿಸುತ್ತದೆ. ಇದಕ್ಕೆ ಕಾರಣ ಹ್ಯಾಪಿ ದೀವಾಳಿ ಎಂದು ವಿಶ್ ಮಾಡುವುದು. ಈ ಕುರಿತು 2020ರಲ್ಲೇ ರಂಗಸ್ವಾಮಿ ಮೂಕನಹಳ್ಳಿ ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು. ದಯವಿಟ್ಟು ದೀಪಾವಳಿ ಎಂದು ಫೇಸ್‌ಬುಕ್ ಬರಹದ ಮೂಲಕ ವಿನಂತಿಸಿಕೊಂಡಿದ್ದರು.
ದೀಪಾವಳಿ ಹೋಗಿ ಇಂಗ್ಲಿಷ್‌ನಲ್ಲಿ ದಿವಾಳಿ ಎಂದಾಗಿರುವುದು ಹೊಸ ವಿಷಯವೇನಲ್ಲ. ಆದರೆ ದಿವಾಳಿ ಪದಕ್ಕೆ ಅರ್ಥವೇ ಬೇರೆ ಇದೆ. ದೀಪಾವಳಿ ಎನ್ನುವುದು ಬೆಳಕಿನ ಹಬ್ಬ, ಅಜ್ಞಾನ ಕತ್ತಲೆಯನ್ನು ದೂರ ಮಾಡಿ, ಜ್ಞಾನ ಬೆಳಕು ಬೆಳಗಿಸುವ ಕಾಲ. ಇಂತಹ ಸಮಯದಲ್ಲಿ ನಾವು ಹಬ್ಬಕ್ಕೆ ವಿಶ್ ಮಾಡುವಾಗ ಬಾಯ್ತುಂಬ ಹ್ಯಾಪಿ ದೀಪಾವಳಿಯೋ ಅಥವಾ ದೀಪಾವಳಿ ಹಬ್ಬದ ಶುಭಾಶಯಗಳೋ ಎನ್ನುವ ಬದಲು ಹ್ಯಾಪಿ ದೀವಾಳಿ ಎನ್ನುವುದು ಎಷ್ಟು ಸರಿ ಅಲ್ವಾ?
ಕನ್ನಡದಲ್ಲೇ ಹಬ್ಬಕ್ಕೆ ಶುಭಾಶಯ ಕೋರುವುದರಿಂದ ಈ ರೀತಿಯ ಪದಗಳ ಬಳಕೆ ಸಾಧ್ಯವೇ ಇಲ್ಲ. ಆದರೆ ಜನಕ್ಕೆ ಆಂಗ್ಲ ವ್ಯಾಮೋಹ ಬಿಡುವುದಿಲ್ಲ. ಆ ಕಾರಣದಿಂದಲೇ ದೀವಾಳಿ ಪದ ಹೆಚ್ಚು ಬಳಕೆಗೆ ಬಂದು ಬಿಟ್ಟಿದೆ. ಇನ್ನು ಹಬ್ಬಕ್ಕೆ ವಿಶ್ ಮಾಡುವ ಪೋಸ್ಟರ್, ಸಿಕ್ಟರ್ಸ್‌ಗಳಲೆಲ್ಲಾ ದೀವಾಳಿ ಎಂದೇ ಇರುತ್ತದೆ. ಇನ್ನಾದರೂ ದೀವಾಳಿ ಅನ್ನುವುದನ್ನು ಬಿಟ್ಟು ದೀಪಾವಳಿ ಎಂದು ಹೇಳೋಣ.
ರಂಗಸ್ವಾಮಿ ಮೂಕನಹಳ್ಳಿ ಅವರ ಬರಹ ಹೀಗಿದೆ
ದಿವಾಳಿ ಅಲ್ಲ ದೀಪಾವಳಿ. ದಯಮಾಡಿ ದೀಪಾವಳಿ ಅನ್ನಿ. ಬೆಳಿಗ್ಗೆಯಿಂದ ಇದನ್ನ ಹೇಳಿ ಹೇಳಿ ಸಾಕಾಯ್ತು. ಒಂದೆರೆಡು ಸಾಲು ದೀಪಾವಳಿ ಹಬ್ಬದ ಶುಭಾಶಯಗಳು ಅಂತ ಬರೆಯಲಿಕ್ಕೆ ಆಗದವರು ಅದೇಕೆ ದಿವಾಳಿ ಅಂತ ರೆಡಿ ಇರುವ ಪೋಸ್ಟರ್‌ಗಳನ್ನ ಕಳಿಸುತ್ತೀರಿ? ವಾಟ್ಸಆಪ್‌ನಲ್ಲಂತೂ ಈ ಪದದ ಪೋಸ್ಟರ್ ನೋಡಿ ಸಾಕಾಗಿದೆ.
ದೋಶ, ದೋಸಾ ಎಲ್ಲವನ್ನೂ ಸಹಿಸಿಕೊಳ್ಳಬಹದು ಆದರೆ ಈ ದಿವಾಳಿ...
ಬೇಸರಿಸಬೇಡಿ, ದಯವಿಟ್ಟು ದೀಪಾವಳಿ ಎಂದು ಬಳಸಿ. ದಯವಿಟ್ಟು ಯಾರೂ ಎಮೋಜಿಗಳನ್ನ, ಪಿಚ್ಚರ್, ಪೋಸ್ಟರ್‌ಗಳನ್ನ ಕಾಮೆಂಟ್‌ನಲ್ಲಿ ಹಾಕಬೇಡಿ. ಸಾಧ್ಯವಿದ್ದರೆ ಒಂದು ಸಾಲು ಬರೆಯಿರಿ. ಇಲ್ಲದಿದ್ದರೆ ಪರವಾಗಿಲ್ಲ. ಆದರೆ ನೋ ರೆಡಿಮೇಡ್ ಸ್ಟಿಕ್ಕರ್ಸ್ ಪ್ಲೀಸ್. ಶುಭವಾಗಲಿ.
ಇವರ ಈ ಪೋಸ್ಟ್‌ಗೆ ಹಲವರು ಲೈಕ್, ಕಾಮೆಂಟ್ ಮಾಡಿದ್ದಾರೆ. 251 ಮಂದಿ ಲೈಕ್ ಮಾಡಿದ್ದರೆ 75 ಜನರು ಕಾಮೆಂಟ್ ಮಾಡಿದ್ದಾರೆ. 5 ಜನ ಇವರ ಪೋಸ್ಟ್ ಅನ್ನು ಶೇರ್ ಮಾಡಿದ್ದರು.
ದೀಪಾವಳಿಗೆ ಸಂಬಂಧಿಸಿದ ಈ ಲೇಖನಗಳನ್ನೂ ಓದಿ
Deepawali 2023: ಹತ್ತಿರ ಬರ್ತಿದೆ ದೀಪಾವಳಿ, ಶುರುವಾಗಲಿ ಸಿದ್ಧತೆ: ಪ್ರಮುಖ ದಿನ, ಆಚರಣೆ, ಮುಹೂರ್ತದ ವಿವರಗಳು ಇಲ್ಲಿವೆ
Deepawali 2023: ದೀಪಾವಳಿ ಹಬ್ಬದ ದಿನಾಂಕ, ಪೂಜಾ ಮುಹೂರ್ತ ಸೇರಿದಂತೆ, ಬೆಳಕಿನ ಹಬ್ಬದ ಸಂಭ್ರಮ ಹೆಚ್ಚಿಸುವ ಸಿಹಿ ತಿನಿಸುಗಳ ವಿವರ ಇಲ್ಲಿದೆ
Muhurat Trading: ಏನಿದು ಮುಹೂರ್ತ ಟ್ರೇಡಿಂಗ್; ದೀಪಾವಳಿ ಟ್ರೇಡಿಂಗ್ನ ಸಮಯ, ಪ್ರಯೋಜನಗಳ ಕುರಿತ ವಿವರ ಇಲ್ಲಿದೆ
ವಿಭಾಗ