Makar Sankranti: ಈ ವರ್ಷ ಜ 14ಕ್ಕೆ ಮಕರ ಸಂಕ್ರಾಂತಿ ಅಲ್ಲ; ಸಂಕ್ರಾಂತಿ ಆಚರಣೆ ಯಾವಾಗ, ಈ ದಿನದ ಮಹತ್ವವೇನು? ಇಲ್ಲಿದೆ ವಿವರ
ಕನ್ನಡ ಸುದ್ದಿ  /  ಜೀವನಶೈಲಿ  /  Makar Sankranti: ಈ ವರ್ಷ ಜ 14ಕ್ಕೆ ಮಕರ ಸಂಕ್ರಾಂತಿ ಅಲ್ಲ; ಸಂಕ್ರಾಂತಿ ಆಚರಣೆ ಯಾವಾಗ, ಈ ದಿನದ ಮಹತ್ವವೇನು? ಇಲ್ಲಿದೆ ವಿವರ

Makar Sankranti: ಈ ವರ್ಷ ಜ 14ಕ್ಕೆ ಮಕರ ಸಂಕ್ರಾಂತಿ ಅಲ್ಲ; ಸಂಕ್ರಾಂತಿ ಆಚರಣೆ ಯಾವಾಗ, ಈ ದಿನದ ಮಹತ್ವವೇನು? ಇಲ್ಲಿದೆ ವಿವರ

ಪ್ರತಿವರ್ಷ ಜನವರಿ ತಿಂಗಳಿನಲ್ಲಿ ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಆದರೆ ಆಚರಣೆಗೆ ಜನವರಿ 14 ಹಾಗೂ ಜನವರಿ 15 ಯಾವ ದಿನ ಸರಿಯಾದುದ್ದು ಎಂಬ ಬಗ್ಗೆ ಗೊಂದಲ ಇರುವುದು ಸಹಜ. ಹಾಗಾದ್ರೆ ಈ ವರ್ಷ ಮಕರ ಸಂಕ್ರಾಂತಿ ಯಾವಾಗ? ಈ ದಿನದ ಆಚರಣೆಯ ಮಹತ್ವವೇನು? ಈ ಕುರಿತ ವಿವರ ಇಲ್ಲಿದೆ.

ಮಕರ ಸಂಕ್ರಾಂತಿ
ಮಕರ ಸಂಕ್ರಾಂತಿ

ಜನವರಿ ತಿಂಗಳು ಬಂತೆಂದರೆ ನಾಡಿನಾದ್ಯಂತ ಮಕರ ಸಂಕ್ರಾಂತಿ ಸಂಭ್ರಮ ಕಳೆಗಟ್ಟುತ್ತದೆ. ಭಾರತದಾದ್ಯಂತ ಹಲವು ರಾಜ್ಯಗಳಲ್ಲಿ ಮಕರ ಸಂಕ್ರಾಂತಿಯನ್ನು ಬಹಳ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಮಕರ ಸಂಕ್ರಾತಿಯು ಉತ್ತರಾಯಣ ಆರಂಭ ಕಾಲವನ್ನು ಸೂಚಿಸುತ್ತದೆ. ಇದನ್ನು ಸುಗ್ಗಿ ಹಬ್ಬ ಎಂದೂ ಕರೆಯಲಾಗುತ್ತದೆ. ಪೊಂಗಲ್‌, ಎಳ್ಳುಂಡೆ ಸೇರಿದಂತೆ ಕೆಲವು ವಿಶೇಷ ಖಾದ್ಯಗಳನ್ನು ತಯಾರಿಸಿ ತಿನ್ನುವುದು ಈ ಹಬ್ಬದ ವಾಡಿಕೆ. ಉತ್ತರದ ರಾಜ್ಯಗಳಲ್ಲಿ ಗಾಳಿಪಟ ಹಾರಿಸುವ ಮೂಲಕ ಹಬ್ಬ ಆಚರಿಸುತ್ತಾರೆ.

ಭಾರತದಾದ್ಯಂತ ಈ ಹಬ್ಬವನ್ನು ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಕರ್ನಾಟಕದಲ್ಲಿ ಇದನ್ನು ಮಕರ ಸಂಕ್ರಮಣ ಅಂತಲೂ ಕರೆಯುತ್ತಾರೆ.

ಪ್ರತಿವರ್ಷ ಮಕರ ಸಂಕ್ರಾಂತಿಯನ್ನು ಒಂದು ಸಾಮಾಜಿಕ ಆಚರಣೆಯಂತೆ ಸಂಭ್ರಮಿಸಲಾಗುತ್ತದೆ. ಈ ಹಬ್ಬದ ಸಲುವಾಗಿ ಜಾತ್ರೆ, ಬಣ್ಣ ಬಣ್ಣದ ಅಲಂಕಾರ, ಸಂಗೀತ, ನೃತ್ಯ, ದೀಪೋತ್ಸವಗಳು ಕೂಡ ನಡೆಯುತ್ತದೆ.

ಇದನ್ನೂ ಓದಿ: Makara Sankranti: ಮಕರ ಸಂಕ್ರಾಂತಿಯಂದು ಪುಣ್ಯಸ್ನಾನ, ಶಿವಪೂಜೆ ಮಾಡುವುದರಿಂದ ಸಕಲ ಕಷ್ಟಗಳೂ ಪರಿಹಾರ, ಹೀಗಿರಲಿ ಕ್ರಮ

ಇನ್ನೇನು ಮಕರ ಸಂಕ್ರಾಂತಿಗೆ ದಿನಗಣನೆ ಆರಂಭವಾಗಿದೆ. ಈ ಹೊತ್ತಿನಲ್ಲಿ ಮಕರ ಸಂಕ್ರಾಂತಿಗೆ ಬಗ್ಗೆ ನೀವು ತಿಳಿಯಬೇಕಾದ ಒಂದಿಷ್ಟು ವಿಚಾರಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಜನವರಿ 14 ಅಥವಾ ಜನವರಿ 15, ಮಕರ ಸಂಕ್ರಾಂತಿ ಯಾವಾಗ?

ಸಾಮಾನ್ಯವಾಗಿ ಪ್ರತಿವರ್ಷ ಜನವರಿ 14 ರಂದು ಮಕರ ಸಂಕ್ರಾಂತಿ ಆಚರಣೆ ಮಾಡಲಾಗುತ್ತದೆ. ಅದಾಗ್ಯೂ ಅಧಿಕವರ್ಷಗಳು ಬಂದಾಗ ಮಕರ ಸಂಕ್ರಾಂತಿಯನ್ನು ಜನವರಿ 15 ರಂದು ಆಚರಿಸಲಾಗುತ್ತದೆ. ಈ ವರ್ಷ ಅಧಿಕ ವರ್ಷವಾಗಿರುವ ಕಾರಣ ಜನವರಿ 15ರಂದು ಮಕರ ಸಂಕ್ರಾಂತಿ ಆಚರಣೆ ಇದೆ. ದೃಕ್‌ ಪಂಚಾಂಗದ ಪ್ರಕಾರ ಬೆಳಿಗ್ಗೆ 7.15ಕ್ಕೆ ಪುಣ್ಯಕಾಲ ಆರಂಭವಾಗಲಿದೆ. ಸಂಜೆ 17.46ಕ್ಕೆ ಪುಣ್ಯಕಾಲ ಮುಕ್ತಾಯವಾಗಲಿದೆ. ಮಹಾ ಪುಣ್ಯಕಾಲ ಬೆಳಿಗ್ಗೆ 7.15ಕ್ಕೆ ಆರಂಭವಾದರೆ, ಜನವರಿ 15ರ ಬೆಳಿಗ್ಗೆ 9 ಗಂಟೆಗೆ ಮುಕ್ತಾಯವಾಗಲಿದೆ.

ಇದನ್ನೂ ಓದಿ: 77 ವರ್ಷಗಳ ಬಳಿಕ ಮಕರ ಸಂಕ್ರಾಂತಿಯಂದು ಸಂಭವಿಸಲಿದೆ ಅಪರೂಪದ ವರಿಯನ್‌ ಯೋಗ; ಅಂದು ಈ ವಸ್ತುಗಳನ್ನು ದಾನ ಮಾಡಿದರೆ ಶ್ರೇಯಸ್ಸು

ಮಹತ್ವ

ಹಿಂದೂ ಪುರಾಣಗಳ ಪ್ರಕಾರ ಮಕರ ಸಂಕ್ರಾಂತಿಯ ಮರುದಿನ ಶಂಕರಸುರ ಎಂಬ ರಾಕ್ಷಸನನ್ನು ದೇವತೆಗಳು ಕೊಲ್ಲುತ್ತಾರೆ. ಇದರಿಂದ ಲೋಕಕಲ್ಯಾಣವಾಗುತ್ತದೆ ಎಂದು ಹೇಳಲಾಗುತ್ತದೆ. ಇನ್ನೊಂದು ನಂಬಿಕೆ ಪ್ರಕಾರ ಮಕರ ಸಂಕ್ರಾಂತಿಯಂದು ಸತ್ತರೆ ಅವರು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ ಎಂಬ ನಂಬಿಕೆಯೂ ಇದೆ. ಮಕರ ಸಂಕ್ರಾಂತಿಯಂದು ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶ ಪಡೆಯುತ್ತಾನೆ. ಇದು ಸೂರ್ಯನು ಉತ್ತರ ದಿಕ್ಕಿಗೆ ಪ್ರಯಾಣ ಮಾಡುವುದರ ಜೊತೆಗೆ ಚಳಿಗಾಲದ ಅಂತ್ಯವನ್ನು ಸೂಚಿಸುತ್ತದೆ. ಈ ದಿನದಂದು ಜಾನುವಾರುಗಳನ್ನು ಕಿಚ್ಚಿಗೆ ಹಾಯಿಸುವುದು, ಎಳ್ಳು ಬೆಲ್ಲದಿಂದ ತಯಾರಿಸಿದ ಸಿಹಿ ತಿನಿಸುಗಳನ್ನು ತಿನ್ನುವುದು, ವಿವಿಧ ರೀತಿ ಆಚರಣೆಗಳು ಈ ಹಬ್ಬದ ಭಾಗವಾಗಿದೆ. ರೈತರು ಮಕರ ಉತ್ತಮ ಬೆಳೆಗಾಗಿ ಮಕರ ಸಂಕ್ರಾಂತಿಯಂದು ಸೂರ್ಯ ದೇವರನ್ನು ಪೂಜಿಸುತ್ತಾರೆ.

Whats_app_banner