Deepawali Decoration: ದೀಪಾವಳಿಗೆ ಹೀಗಿರಲಿ ನಿಮ್ಮ ಮನೆ ಅಲಂಕಾರ; ಮನೆ ಅಂದ ಹೆಚ್ಚಿಸಲು ನಿಮಗಾಗಿ ಇಲ್ಲಿದೆ ಒಂದಿಷ್ಟು ಸಿಂಪಲ್‌ ಐಡಿಯಾಗಳು
ಕನ್ನಡ ಸುದ್ದಿ  /  ಜೀವನಶೈಲಿ  /  Deepawali Decoration: ದೀಪಾವಳಿಗೆ ಹೀಗಿರಲಿ ನಿಮ್ಮ ಮನೆ ಅಲಂಕಾರ; ಮನೆ ಅಂದ ಹೆಚ್ಚಿಸಲು ನಿಮಗಾಗಿ ಇಲ್ಲಿದೆ ಒಂದಿಷ್ಟು ಸಿಂಪಲ್‌ ಐಡಿಯಾಗಳು

Deepawali Decoration: ದೀಪಾವಳಿಗೆ ಹೀಗಿರಲಿ ನಿಮ್ಮ ಮನೆ ಅಲಂಕಾರ; ಮನೆ ಅಂದ ಹೆಚ್ಚಿಸಲು ನಿಮಗಾಗಿ ಇಲ್ಲಿದೆ ಒಂದಿಷ್ಟು ಸಿಂಪಲ್‌ ಐಡಿಯಾಗಳು

House Decoration Tips For Deepawali: ದೀಪಾವಳಿ ಹಬ್ಬದಂದು ಹಣತೆಯ ದೀಪಗಳೊಂದಿಗೆ ಮನೆ ಬೆಳಗಿಸುವ ಜೊತೆಗೆ ಮನೆಯು ಇನ್ನಷ್ಟು ಅಂದವಾಗಿ ಕಾಣಬೇಕು ಎಂದುಕೊಳ್ಳುವುದು ಸಹಜ. ದೀಪಾವಳಿ ಸಮಯದಲ್ಲಿ ಮನೆಯನ್ನು ಇನ್ನಷ್ಟು ಸುಂದರವಾಗಿ ಅಲಂಕಾರ ಮಾಡಲು ನಿಮಗಾಗಿ ಇಲ್ಲಿದೆ ಒಂದಿಷ್ಟು ಟಿಪ್ಸ್‌.

ದೀಪಾವಳಿ ಹಬ್ಬದ ಮನೆ ಅಲಂಕಾರ
ದೀಪಾವಳಿ ಹಬ್ಬದ ಮನೆ ಅಲಂಕಾರ

ಕತ್ತಲೆಯನ್ನು ಹೊಡೆದೋಡಿಸಿ ಬೆಳಕು ಮೂಡಿಸುವ ಹಬ್ಬ ದೀಪಾವಳಿ. ನಾಡಿದಾದ್ಯಂತ ಈ ಹಬ್ಬದ ಸಂಭ್ರಮ ಕಳೆಗಟ್ಟಲು ಆರಂಭವಾಗಿದೆ. ಮಕ್ಕಳು, ದೊಡ್ಡವರು, ಹಿರಿಯರೆನ್ನದೆ ಎಲ್ಲರೂ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗುವುದು ಈ ಬೆಳಕಿನ ಹಬ್ಬದ ವಿಶೇಷ. ಹಣತೆಯ ದೀಪಗಳು, ಪಟಾಕಿ, ಎಲ್ಲೆಲ್ಲಿ ನೋಡಿದರೂ ವಿದ್ಯುತ್‌ ದೀಪದ ಅಲಂಕಾರ ಇವೆಲ್ಲವೂ ತಮ್ಮ ಮನಸ್ಸಿಗೆ ಸಾಕಷ್ಟು ಖುಷಿ ನೀಡುತ್ತವೆ. ಬೆಳಕಿನ ಮೂಲಕ ಸಂಭ್ರಮ ಹೆಚ್ಚಿಸುವ ಈ ಹಬ್ಬದಂದು ಮನೆಯನ್ನು ಸುಂದರವಾಗಿ ಅಲಂಕರಿಸಬೇಕು ಎಂದುಕೊಳ್ಳುವುದು ಸಹಜ ಆಸೆ. ನಿಮ್ಮ ಆಸೆಗೆ ಉತ್ತರವಾಗಿ ಇಲ್ಲಿದೆ ಒಂದಿಷ್ಟು ಐಡಿಯಾಗಳು. ಇವು ದೀಪಾವಳಿ ಸಮಯದಲ್ಲಿ ನಿಮ್ಮ ಮನೆ ಅಲಂಕರಿಸುವ ಮೂಲಕ ಮನಸ್ಸಿಗೆ ಖುಷಿ ಕೊಡುವುದರಲ್ಲಿ ಎರಡು ಮಾತಿಲ್ಲ.

ದೀಪಾವಳಿ ಅಲಂಕಾರ ಒಂದಿಷ್ಟು ಟಿಪ್ಸ್‌

  • ದೀಪಾವಳಿ ಹಬ್ಬದ ಸಮಯದಲ್ಲಿ ಗೋಡೆಗಳ ಮೇಲೆ ದೀಪ ಹಚ್ಚುವುದು ಸಾಮಾನ್ಯ. ಆದರೆ ದೀಪಕ್ಕೆ ಸುರಿಯುವ ಎಣ್ಣೆಯು ಗೋಡೆಯ ಮೇಲೆ ಬಿದ್ದು ಗೋಡೆ ಕಲೆಯಾಗಬಹುದು. ಅದಕ್ಕಾಗಿ ದೀಪಗಳ ಕೆಳಗೆ ಎಲೆಯನ್ನು ಹಾಸಿ, ಅದರ ಮೇಲೆ ಸ್ವಲ್ಪ ಮರಳನ್ನು ಹಾಕಿ ದೀಪಗಳನ್ನು ಇಡಬೇಕು. ಆಗ ಎಣ್ಣೆಯಿಂದ ಯಾವುದೇ ತೊಂದರೆಯಾಗುವುದಿಲ್ಲ. ಎಣ್ಣೆ ಸುರಿದರೂ ಮರಳು ಅದನ್ನು ಹೀರಿಕೊಳ್ಳುತ್ತದೆ.
  • ದೀಪಗಳಿಂದ ಮನೆ ಅಲಂಕರಿಸುವ ಮುನ್ನ ದೀಪ ಹಚ್ಚಲು ಮನೆಯನ್ನು ಅಣಿಗೊಳಿಸುವುದು ಮುಖ್ಯವಾಗುತ್ತದೆ. ದೀಪ ಬೆಳಗುವ ಮುನ್ನ ಮನೆಯನ್ನು ಸಂಪೂರ್ಣವಾಗಿ ಸ್ವಚ್ಛ ಮಾಡುವುದು ಮುಖ್ಯ. ಇದರಿಂದ ಮನೆಯ ಅಂದ ಹೆಚ್ಚುವ ಜೊತೆಗೆ ವಾತಾವರಣವು ಧನಾತ್ಮಕ ರೀತಿಯಲ್ಲಿ ಬದಲಾಗುತ್ತದೆ. ಆದರೆ ದೀಪ ಹಚ್ಚುವ ಮುನ್ನ ಕರ್ಟನ್‌, ನೆಲಹಾಸುಗಳ ಮೇಲೆ ಗಮನವಿರಲಿ. ಕರ್ಟನ್‌ಗಳು ದೀಪಕ್ಕೆ ತಾಕುವಂತೆ ಇಡಬೇಡಿ ಅಥವಾ ಕೆಲವು ದಿನಗಳವರೆಗೆ ಅಂದರೆ ದೀಪಾವಳಿ ಮುಗಿಯುವವರೆಗೆ ಕರ್ಟನ್‌ಗಳನ್ನು ತೆಗೆದು ಇರಿಸಬಹುದು. ಆಗ ಯಾವುದೇ ಅಪಾಯದ ಭಯವಿಲ್ಲದೆ, ಮನೆಯ ಅಲಂಕಾರದೊಂದಿಗೆ ಹಬ್ಬದ ಸಂಭ್ರಮವನ್ನು ಹೆಚ್ಚಿಸಬಹುದು.
  • ರಂಗೋಲಿ ಹಾಗೂ ವಿವಿಧ ಹೂವಿನ ಪಕಳೆಗಳ ಮಧ್ಯೆ ದೀಪ ಇರಿಸುವುದರಿಂದ ಅಂದ ಇನ್ನಷ್ಟು ಹೆಚ್ಚುತ್ತದೆ. ನೀರಿನಲ್ಲಿ ಹೂವಿನ ಎಸಳುಗಳನ್ನು ಹಾಕಿ ಅದರ ಮಧ್ಯೆ ದೀಪ ಹಚ್ಚುವುದರಿಂದ ಕೂಡ ಮನೆಯ ಅಂದ ಹೆಚ್ಚುತ್ತದೆ.
  • ತೇಲುವ ಮೇಣ ಬತ್ತಿಗಳು ಕೂಡ ಈಗ ಮಾರುಕಟ್ಟೆಯಲ್ಲಿ ಲಭ್ಯವಿವೆ. ಅಗಲ ಬಾಯಿ ಇರುವ ಹಿತ್ತಾಳೆಯ ಪಾತ್ರೆಯಲ್ಲಿ ಹೂಗಳನ್ನು ಸುಂದರವಾಗಿ ಜೋಡಿಸಿ ಮತ್ತು ಮಧ್ಯದಲ್ಲಿ ಈ ರೀತಿಯ ತೇಲುವ ಮೇಣದಬತ್ತಿಗಳನ್ನು ಬೆಳಗಿಸಿ. ಇದನ್ನು ಮನೆಯ ಹಾಲ್‌ ಮಧ್ಯೆ ಇರಿಸಿದರೆ ದೀಪದ ಬೆಳಕಿನಲ್ಲಿ ಮನೆ ಬೆಳಗುತ್ತದೆ. ಇದು ಮನೆಯ ಅಲಂಕಾರ ಹೆಚ್ಚುವ ಜೊತೆಗೆ ಮನಸ್ಸಿಗೂ ಖುಷಿ ನೀಡುತ್ತದೆ.
  • ಮಾರುಕಟ್ಟೆಯಲ್ಲಿ ವಿವಿಧ ರೀತಿಯ ವಿದ್ಯುತ್ ದೀಪಗಳು, ಸೀರಿಯಲ್ ದೀಪಗಳು, ಹಣತೆಯ ದೀಪಗಳು ಲಭ್ಯವಿವೆ. ವಿವಿಧ ಬಣ್ಣಗಳಲ್ಲಿ ಆ ದೀಪಗಳನ್ನು ಖರೀದಿಸಿ ಮತ್ತು ನಿಮಗೆ ಇಷ್ಟವಾದಂತೆ ಅಲಂಕರಿಸಿ. ನೀವು ಅದನ್ನು ಆನ್ ಮಾಡಿದರೆ, ನೀವು ಮುಂಚಿತವಾಗಿ ಹಬ್ಬದ ದೀಪಗಳನ್ನು ಪಡೆಯುತ್ತೀರಿ.
  • ಹಬ್ಬದ ಹಿಂದಿನ ದಿನ ಮನೆ ಬಾಗಿಲಿಗೆ ಹೂವಿನ ಅಲಂಕಾರ ಮಾಡಿ. ಹೂಗಳ ಜೊತೆಗೆ ಮಾವಿನಎಲೆಗಳಿಂದ ತೋರಣ ಕಟ್ಟಿ. ಮಧ್ಯೆ ಚೆಂಡು ಹೂ ಸೇರಿಸಿ ಅಲಂಕಾರ ಹೆಚ್ಚಿಸಿ. ಇದು ಹಬ್ಬದ ಸಮಯದಲ್ಲಿ ಮನೆಗೆ ಹೊಸ ಲುಕ್‌ ನೀಡುವುದರಲ್ಲಿ ಎರಡು ಮಾತಿಲ್ಲ.
  • ನೀವು ಮನೆಯಲ್ಲಿ ಖಾಲಿ ಗಾಜಿನ ಬಾಟಲಿಗಳನ್ನು ಹೊಂದಿದ್ದರೆ, ಅವುಗಳಲ್ಲಿ ಸರಣಿ ದೀಪಗಳ ಗುಂಪನ್ನು ಇರಿಸಿ. ಅದನ್ನು ಪ್ಲಗ್ ಇನ್ ಮಾಡಲು ಪ್ರಯತ್ನಿಸಿ.
  • ಬಣ್ಣದ ಕಾಗದಗಳಿಂದ ಹೂವುಗಳು ಮತ್ತು ದೀಪಗಳನ್ನು ರಚಿಸಿ. ಕಮಾನುಗಳಂತೆ ದಾರದ ಮೇಲೆ ಅವುಗಳನ್ನು ಅಂಟಿಸಿ ಅಥವಾ ಗೋಡೆಯನ್ನು ಬಣ್ಣದ ಕಾಗದಗಳಿಂದ ಅಲಂಕರಿಸಿ. ಅದರೊಂದಿಗೆ ಕೆಲವು ಸೀರಿಯಲ್ ಲೈಟ್‌ಗಳನ್ನು ಜೋಡಿಸಿ, ಇದರಿಂದ ಮನೆಯ ಅಂದ ಇನ್ನಷ್ಟು ಹೆಚ್ಚುವುದರಲ್ಲಿ ಎರಡು ಮಾತಿಲ್ಲ.
  • ಬಣ್ಣದ ಕಾಗದಗಳಿಂದ ವಿವಿಧ ರೀತಿಯ ಲ್ಯಾಂಟರ್ನ್‌ಗಳನ್ನು ಮಾಡಲು ಪ್ರಯತ್ನಿಸಿ ಮತ್ತು ಅದರೊಳಗೆ ದೀಪಗಳನ್ನು ಬೆಳಗಿಸಿ. ಇದರಿಂದ ಮನೆಯ ನೋಟವೇ ಬದಲಾಗುತ್ತದೆ.

ದೀಪಾವಳಿಗೆ ಸಂಬಂಧಿಸಿದ ಈ ಸುದ್ದಿಗಳನ್ನೂ ಓದಿ

ದೀಪಾವಳಿ ಧನಲಕ್ಷ್ಮೀ ಪೂಜೆ ವೇಳೆ ಎಂದಿಗೂ ಈ ತಪ್ಪುಗಳನ್ನು ಮಾಡದಿರಿ; ಇಲ್ಲದಿದ್ರೆ ಲಕ್ಷ್ಮಿಯನ್ನು ನೀವು ಮನೆಯಿಂದ ಹೊರ ಕಳಿಸಿದಂತೆ!

KSRTC Updates: ದೀಪಾವಳಿ ನಿಮಿತ್ತ ಕರ್ನಾಟಕದ ವಿವಿಧೆಡೆಗೆ ಬೆಂಗಳೂರಿಂದ 2000 ಹೆಚ್ಚುವರಿ ವಿಶೇಷ ಬಸ್‌ ವ್ಯವಸ್ಥೆ ಮಾಡಿದೆ ಕೆಎಸ್‌ಆರ್‌ಟಿಸಿ

Deepawali 2023: ದೀಪಾವಳಿ ಹಬ್ಬದ ದಿನಾಂಕ, ಪೂಜಾ ಮುಹೂರ್ತ ಸೇರಿದಂತೆ, ಬೆಳಕಿನ ಹಬ್ಬದ ಸಂಭ್ರಮ ಹೆಚ್ಚಿಸುವ ಸಿಹಿ ತಿನಿಸುಗಳ ವಿವರ ಇಲ್ಲಿದೆ

Whats_app_banner