Shab e Barat: ಭಾರತದಲ್ಲಿ ಶಬ್‌ ಎ ಬರಾತ್‌ ಯಾವಾಗ, ಪ್ರಾಯಶ್ಚಿತ್ತದ ರಾತ್ರಿ ಎಂದು ಕರೆಯುವ ಈ ಆಚರಣೆಯ ಮಹತ್ವ ತಿಳಿಯಿರಿ-religion spiritual news when is shab e barat 2024 in india islamic calendar significance and ritual of this details rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Shab E Barat: ಭಾರತದಲ್ಲಿ ಶಬ್‌ ಎ ಬರಾತ್‌ ಯಾವಾಗ, ಪ್ರಾಯಶ್ಚಿತ್ತದ ರಾತ್ರಿ ಎಂದು ಕರೆಯುವ ಈ ಆಚರಣೆಯ ಮಹತ್ವ ತಿಳಿಯಿರಿ

Shab e Barat: ಭಾರತದಲ್ಲಿ ಶಬ್‌ ಎ ಬರಾತ್‌ ಯಾವಾಗ, ಪ್ರಾಯಶ್ಚಿತ್ತದ ರಾತ್ರಿ ಎಂದು ಕರೆಯುವ ಈ ಆಚರಣೆಯ ಮಹತ್ವ ತಿಳಿಯಿರಿ

ಇಸ್ಲಾಮಿಕ್‌ ಕ್ಯಾಲೆಂಡರ್‌ನ ಪವಿತ್ರ ರಾತ್ರಿಗಳಲ್ಲಿ ಶಬ್‌-ಎ-ಬರಾತ್‌ ಕೂಡ ಒಂದು. ಇದನ್ನು ಪ್ರಾಯಶ್ಚಿತದ ರಾತ್ರಿ ಎಂದೂ ಕರೆಯಲಾಗುತ್ತದೆ. ಈ ವರ್ಷ ಶಬ್‌-ಎ-ಬರಾತ್‌ ಆಚರಣೆ ಯಾವಾಗ, ಈ ದಿನದ ಮಹತ್ವದ ಕುರಿತ ವಿವರ ಇಲ್ಲಿದೆ.

ಭಾರತದಲ್ಲಿ ಶಬ್‌ ಎ ಬರಾತ್‌ ಯಾವಾಗ, ಪ್ರಾಯಶ್ಚಿತ್ತದ ರಾತ್ರಿ ಎಂದು ಕರೆಯುವ ಈ ಆಚರಣೆಯ ಮಹತ್ವ ತಿಳಿಯಿರಿ
ಭಾರತದಲ್ಲಿ ಶಬ್‌ ಎ ಬರಾತ್‌ ಯಾವಾಗ, ಪ್ರಾಯಶ್ಚಿತ್ತದ ರಾತ್ರಿ ಎಂದು ಕರೆಯುವ ಈ ಆಚರಣೆಯ ಮಹತ್ವ ತಿಳಿಯಿರಿ

ಶಬ್-ಎ-ಬರಾತ್ ಪ್ರಪಂಚದಾದ್ಯಂತ ಮುಸ್ಲಿಂ ಸಮುದಾಯವರು ಭಕ್ತಿ, ಭಾವದಿಂದ ಆಚರಿಸುವ ಪವಿತ್ರ ಹಬ್ಬಗಳಲ್ಲೊಂದು. ದಕ್ಷಿಣ ಏಷ್ಯಾ, ಮಧ್ಯ ಏಷ್ಯಾ, ಆಗ್ನೇಯ ಏಷ್ಯಾ ಹಾಗೂ ಮಧ್ಯಪ್ರಾಚ್ಯ ದೇಶಗಳಲ್ಲಿ ಈ ಆಚರಣೆಗೆ ವಿಶೇಷ ಮಹತ್ವವಿದೆ. ಭಾರತದಲ್ಲೂ ಮುಸ್ಲಿಮರು ಈ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾರೆ. ಇದನ್ನು ಪ್ರಾಯಶ್ಚಿತದ ರಾತ್ರಿ ಎಂದೂ ಕೂಡ ಕರೆಯಲಾಗುತ್ತದೆ. ಮಾಡಿದ ಪಾಪಗಳು ಹಾಗೂ ತಪ್ಪುಗಳಿಗೆ ಕ್ಷಮೆಯಾಚಿಸುವ ದಿನ ಇದಾಗಿದೆ. ಈ ವರ್ಷ ಶಬ್-ಎ-ಬರಾತ್ ಆಚರಣೆ ಯಾವಾಗ, ಈ ದಿನದ ಮಹತ್ವವೇನು ತಿಳಿಯಿರಿ.

ಶಬ್-ಎ-ಬರಾತ್ ಯಾವಾಗ?

ಶಬ್-ಎ-ಬರಾತ್ ಅನ್ನು ಶಾಬಾನ್ ತಿಂಗಳ ಹದಿನೈದನೇ ರಾತ್ರಿ ಆಚರಿಸಲಾಗುತ್ತದೆ. ಇಸ್ಲಾಮಿಕ್ ಕ್ಯಾಲೆಂಡರ್‌ನ ಎಂಟನೇ ತಿಂಗಳಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ ಫೆಬ್ರುವರಿ 25ಕ್ಕೆ ಶಬ್‌ ಎ ಬರಾತ್‌ ಆಚರಣೆ ಇದೆ.

ಮಹತ್ವ ಹಾಗೂ ಆಚರಣೆ

ಹಲವು ದೇಶಗಳಲ್ಲಿ ಶಬ್‌ ಎ ಬರಾತ್‌ ಆಚರಣೆ ರೂಢಿಯಲ್ಲಿದೆ. ಈ ದಿನ ರಾತ್ರಿ ಮುಸ್ಲಿಮರು ತಮ್ಮ ಮೃತ ಪೂರ್ವಜರ ತಪ್ಪುಗಳಿಗಾಗಿ ಸಾಮೂಹಿಕವಾಗಿ ಕ್ಷಮೆ ಕೋರುತ್ತಾರೆ. ಇದರಿಂದ ತಮ್ಮ ಭವಿಷ್ಯದ ದಿನಗಳು ಉತ್ತಮವಾಗಿರುತ್ತದೆ ಎಂಬ ನಂಬಿಕೆ ಇದೆ. ಈ ದಿನ ಅಲ್ಲಾಹು ಬಳಿ ಕ್ಷಮೆ ಕೇಳುವ ಮೂಲಕ ಆಶೀರ್ವಾದವನ್ನೂ ಬೇಡುತ್ತಾರೆ. ತಮ್ಮ ಮುಂದಿನ ಪೀಳಿಗೆಯ ಬದುಕು ಹಸನಾಗಿರಲಿ ಎಂದು ಪ್ರಾರ್ಥಿಸುತ್ತಾರೆ. ಇಸ್ಲಾಮಿಕ್ ಕ್ಯಾಲೆಂಡರ್‌ನ ಪವಿತ್ರ ರಾತ್ರಿಗಳಲ್ಲಿ ಶಬ್-ಎ-ಬರಾತ್ ಕೂಡ ಒಂದು. ಈ ರಾತ್ರಿಯಂದು ದೇವರು ಜನರ ಕೆಲಸಗಳು, ತಪ್ಪುಗಳನ್ನು ಗಣನೆಗೆ ತೆಗೆದುಕೊಂಡು ಅವರ ಭವಿಷ್ಯವನ್ನು ಬರೆಯುತ್ತಾನೆ ಎಂಬ ನಂಬಿಕೆ ಮುಸ್ಲಿಮರಲ್ಲಿದೆ. ಆ ಕಾರಣಕ್ಕಾಗಿಯೇ ಜನರು ಈ ದಿನ ದೇವರಲ್ಲಿ ಕ್ಷಮೆ ಕೇಳುತ್ತಾರೆ. ತಮ್ಮ ತಪ್ಪಿಗೆ ಪ್ರಾಯಶ್ಚಿತ ಮಾಡಿಕೊಳ್ಳಲು ದೇವರ ಮೊರೆ ಹೋಗುತ್ತಾರೆ. ಕೆಲವು ದೇಶಗಳಲ್ಲಿ ಈ ರಾತ್ರಿಯನ್ನು ಪಟಾಕಿ ಸಿಡಿಸುವ ಮೂಲಕ ಆಚರಿಸಲಾಗುತ್ತದೆ. ಒಂದೊಂದು ಭಾಗದಲ್ಲಿ ಒಂದೊಂದು ರೀತಿ ಆಚರಿಸುವುದು ವಾಡಿಕೆ.

ಆಚರಣೆಯ ಕ್ರಮ

ಈ ಶಬ್-ಎ-ಬರಾತ್‌ ರಾತ್ರಿ ಮುಸ್ಲಿಮರು ಅಲ್ಲಾಹುವನ್ನು ಪೂಜಿಸುತ್ತಾರೆ ಹಾಗೂ ಕ್ಷಮೆ ಕೇಳುತ್ತಾರೆ. ಈ ಪವಿತ್ರ ರಾತ್ರಿಯಲ್ಲಿ ಅಲ್ಲಾಹು ತನ್ನ ಪ್ರೀತಿಪಾತ್ರರಿಗೆ ಸ್ವರ್ಗದ ಬಾಗಿಲನ್ನು ತೆರೆಯುತ್ತಾನೆ ಎಂದು ನಂಬಲಾಗಿದೆ. ಈ ದಿನ ತಮ್ಮ ಪೂರ್ವಜರ ಸಮಾಧಿಯ ಮುಂದೆ ದೀಪ ಬೆಳಗಿಸುತ್ತಾರೆ ಹಾಗೂ ದೇವರನ್ನು ಪ್ರಾರ್ಥಿಸುತ್ತಾರೆ. ಶಬ್-ಎ-ಬರಾತ್ ಎರಡು ಪದಗಳಿಂದ ಬಂದಿದೆ - ಶಬ್ ಎಂದರೆ ರಾತ್ರಿ ಮತ್ತು ಬರಾತ್ ಎಂದರೆ ಖುಲಾಸೆ ಎಂಬುದಾಗಿದೆ. ಈ ದಿನದಂದು ಜಾಗರಣೆ, ಉಪವಾಸ ಮಾಡುವುದು ಹಾಗೂ ಕುರಾನ್‌ ಓದುವ ಮೂಲಕ ಆಚರಿಸಲಾಗುತ್ತದೆ.

ಇಸ್ಲಾಮಿಕ್‌ ಕ್ಯಾಲೆಂಡರ್‌ನಲ್ಲಿ ಬರುವ ಶಬಾನ್‌ ತಿಂಗಳಿಗೆ ವಿಶೇಷ ಮಹತ್ವವಿದೆ. ಇಸ್ಲಾಂ ಧರ್ಮದ ನಾಲ್ಕು ಪವಿತ್ರ ತಿಂಗಳುಗಳಲ್ಲಿ ಈ ತಿಂಗಳು ಕೂಡ ಒಂದು.

(This copy first appeared in Hindustan Times Kannada website. To read more like this please logon to kannada.hindustantimes.com)