Republic Day Wishes: ಗಣರಾಜ್ಯೋತ್ಸವದಂದು ಆತ್ಮೀಯರಿಗೆ ಶುಭಾಶಯ ಕೋರಲು ಇಲ್ಲಿದೆ ರಾಷ್ಟ್ರಭಕ್ತಿ ಹೆಚ್ಚಿಸುವ ಸಂದೇಶಗಳು
ಜನವರಿ 26, ಭಾರತವು ಗಣತಂತ್ರ ರಾಷ್ಟ್ರವಾದ ದಿನ. ಆ ಕಾರಣಕ್ಕೆ ಪ್ರತಿವರ್ಷ ಈ ದಿನದಂದು ಅದ್ಧೂರಿಯಾಗಿ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ಈ ಬಾರಿ ನಾವು 76ನೇ ಗಣರಾಜ್ಯೋತ್ಸವ ಆಚರಿಸುತ್ತಿದ್ದೇವೆ. ಈ ಸಲ ಗಣರಾಜ್ಯೋತ್ಸವಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ವಾಟ್ಸ್‌ಆಪ್, ಫೇಸ್‌ಬುಕ್‌ನಲ್ಲಿ ದೇಶಭಕ್ತಿ ಹೆಚ್ಚಿಸುವ ಸಂದೇಶ ಕಳುಹಿಸಿಬೇಕು ಎಂದಿದ್ದರೆ ಇಲ್ಲಿ ಗಮನಿಸಿ.
ಪ್ರತಿವರ್ಷ ಜನವರಿ ತಿಂಗಳು ಬಂತೆಂದರೆ ಎಲ್ಲೆಲ್ಲೂ ದೇಶಭಕ್ತಿ ಹೆಚ್ಚಿಸುವ ಅಂಶಗಳೇ ಕಣ್ಣಿಗೆ ಕಾಣುತ್ತವೆ. ಅದಕ್ಕೆ ಕಾರಣ ಗಣರಾಜ್ಯೋತ್ಸವ. ಪ್ರತಿ ವರ್ಷ ಜನವರಿ 26 ರಂದು ಭಾರತವು ಗಣರಾಜ್ಯೋತ್ಸವವನ್ನು ಬಹಳ ಅದ್ಧೂರಿಯಾಗಿ ಆಚರಿಸುತ್ತದೆ. 1950ರಲ್ಲಿ ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾದ ದಿನ ಸವಿ ನೆನಪಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ಭಾರತ ಸಂವಿಧಾನ ಅಂಗೀಕಾರಗೊಂಡು ಪ್ರಜೆಗಳೇ ಪ್ರಭುಗಳು ಎನ್ನುವ ಪ್ರಜಾತಂತ್ರ ರಾಷ್ಟ್ರವಾಗಿ ಭಾರತ ವಿಶ್ವದ ಮುಂದೆ ನಿಂತ ದಿನವಿದು. ಈ ಹಿನ್ನೆಲೆಯಲ್ಲಿ ಪ್ರತಿವರ್ಷ ಗಣರಾಜ್ಯೋತ್ಸವ ಆಚರಿಸಲಾಗುತ್ತದೆ.
ಭಾರತದ ಗಣತಂತ್ರ ರಾಷ್ಟ್ರವಾಗಿ 75 ವರ್ಷಗಳು ಕಳೆದಿವೆ. ಈ ವರ್ಷ ನಾವು 76ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಇನ್ನೇನು ಕೆಲವೇ ದಿನಗಳಲ್ಲಿ ಗಣರಾಜ್ಯೋತ್ಸವವಿದ್ದು ಈ ಸಮಯದಲ್ಲಿ ನಿಮ್ಮ ಪ್ರೀತಿಪಾತ್ರರಿಗೆ ವ್ಯಾಟ್ಸ್‌ಆಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂನಲ್ಲಿ ಶುಭಾಶಯ ಸಂದೇಶಗಳನ್ನು ಕಳುಹಿಸಬೇಕು ಅಂತಿದ್ದರೆ ಇಲ್ಲಿ ಗಮನಿಸಿ. ಈ ಶುಭಾಶಯ ಸಂದೇಶಗಳು ನಿಮಗೆ ಇಷ್ಟವಾಗಬಹುದು ನೋಡಿ.
ಗಣರಾಜ್ಯೋತ್ಸವ ಶುಭಾಶಯ ಸಂದೇಶಗಳು
- ಗಣರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ನಾವು ರಾಷ್ಟ್ರವನ್ನು ರಕ್ಷಿಸುವ ಪಣತೋಡೋಣ. ಭಾರತೀಯರಾಗಿದ್ದಕ್ಕೆ ಹೆಮ್ಮಪಡೋಣ. ನಿಮಗೆಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು.
- ಭಾರತ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ನೆನೆಯುತ್ತಾ ಗಣರಾಜ್ಯೋತ್ಸವ ಆಚರಿಸೋಣ. ದೇಶದ ಪ್ರಗತಿಗೆ ಶ್ರಮಿಸೋಣ. ಗಣರಾಜ್ಯೋತ್ಸವದ ಶುಭಾಶಯಗಳು
- ಗಣರಾಜ್ಯೋತ್ಸವದ ಶುಭಾಶಯಗಳು.ದೇಶದ ಸಂವಿಧಾನ ಜಾರಿಗೆ ಬರಲು ಶ್ರಮಿಸಿದ ಎಲ್ಲಾ ನಾಯಕರನ್ನು ಶ್ರಮಿಸೋಣ. ಅವರಂತೆ ರಾಷ್ಟ್ರದ ಪ್ರಗತಿಗೆ ಹಗಲಿರುಳು ದುಡಿಯೋಣ. ಜೈ ಹಿಂದ್.
- ಗಣರಾಜ್ಯದ ದಿನ ರಾಷ್ಟ್ರಧ್ವಜ ಹಾರುವಾಗ ನಮ್ಮ ವೀರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ನೆನಪಿಸಿಕೊಳ್ಳೋಣ, ಅವರಿಗೆ ಗೌರವ ಸಲ್ಲಿಸೋಣ. ನಿಮಗೆಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು.
ಇದನ್ನೂ ಓದಿ: Republic Day 2024: ಜ 26 ರಂದೇ ಗಣರಾಜ್ಯೋತ್ಸವ ಆಚರಿಸುವುದೇಕೆ? ಇತಿಹಾಸ, ಮಹತ್ವದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ - ನಮ್ಮ ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯೋಣ ಮತ್ತು ನಮ್ಮ ದೇಶದ ಪ್ರಗತಿಗೆ ಕೊಡುಗೆ ನೀಡೋಣ. ಗಣರಾಜ್ಯೋತ್ಸವದ ಶುಭಾಶಯಗಳು.
- ನಾವು ನಮ್ಮ ದೇಶದ ಶ್ರೀಮಂತ ಪರಂಪರೆಯನ್ನು ಮರೆಯಬಾರದು ಮತ್ತು ಈ ರಾಷ್ಟ್ರದ ಭಾಗವಾಗಿರುವುದಕ್ಕೆ ಹೆಮ್ಮೆ ಪಡೋಣ. ಗಣರಾಜ್ಯೋತ್ಸವದ ಶುಭಾಶಯಗಳು.
- ಭಾರತಕ್ಕೆ ಸುಲಭವಾಗಿ ಸ್ವಾತಂತ್ರ್ಯ ಸಿಕ್ಕಿಲ್ಲ. ಇದರಿಂದ ಹಿಂದೆ ಲಕ್ಷಾಂತರ ಹೋರಾಟಗಾರರ ಬಲಿದಾನದ ಕಥೆ ಎಂಬುದನ್ನು ಮರೆಯದಿರೋಣ. ರಾಷ್ಟ್ರಪ್ರೇಮ ಹೆಚ್ಚಿಸುವ ಕೆಲಸ ಮಾಡೋಣ. ಗಣರಾಜ್ಯೋತ್ಸವದ ಶುಭಾಶಯಗಳು.
- ನಮ್ಮ 76ನೇ ಗಣರಾಜ್ಯೋತ್ಸವದ ಆಚರಣೆಯ ಸಂದರ್ಭ, ನಾವೆಲ್ಲರೂ ಹೆಮ್ಮೆಯಿಂದ ನಿಂತು ನಮ್ಮ ರಾಷ್ಟ್ರಕ್ಕೆ ಗೌರವವನ್ನು ನೀಡೋಣ. ರಾಷ್ಟ್ರಪ್ರೇಮ ಮೆರೆಯೋಣ ಗಣರಾಜ್ಯೋತ್ಸವದ ಶುಭಾಶಯಗಳು.
- ಈ ಮಣ್ಣಿನಲ್ಲಿ ನಾವು ನೆಮ್ಮದಿಯಿಂದ ಉಸಿರಾಡುತ್ತಿದ್ದೇವೆ ಎಂದರೆ ಅದಕ್ಕೆ ಸ್ವಾತಂತ್ರ್ಯ ಮತ್ತು ಸಂವಿಧಾನವೇ ಕಾರಣ. ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು.
- ಗಣರಾಜ್ಯೋತ್ಸವದ ಶುಭಾಶಯಗಳು. ಗಣರಾಜ್ಯೋತ್ಸವದಂದು ಸಂವಿಧಾನ ಪಾಲಿಸುವ ಪಣ ತೊಡೋಣ. ಆ ಮೂಲಕ ರಾಷ್ಟ್ರಕ್ಕೆ, ಸಂವಿಧಾನ ಶಿಲ್ಪಿಗೆ ಗೌರವ ಕೊಡೋಣ.
- ಈ ವಿಶೇಷ ಸಂದರ್ಭದಲ್ಲಿ ತಾಯಿನಾಡಿಗೆ ನಮ್ಮ ಪರಂಪರೆಯನ್ನು ಸಂರಕ್ಷಿಸುವ, ರಾಷ್ಟ್ರದ ಅಭಿವೃದ್ಧಿ ಮತ್ತು ಪ್ರಗತಿಗೆ ಕೊಡುಗೆ ನೀಡುವ ಪ್ರತಿಜ್ಞೆ ಮಾಡೋಣ. ಗಣರಾಜ್ಯೋತ್ಸವದ ಶುಭಾಶಯಗಳು!
- ಈ ಗಣರಾಜ್ಯ ದಿನದಂದು, ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಿರುವ ತತ್ತ್ವಗಳನ್ನು ಪಾಲಿಸುವ ಪ್ರತಿಜ್ಞೆ ಮಾಡೋಣ- ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಎತ್ತಿಹಿಡಿಯೋಣ. ಗಣರಾಜ್ಯೋತ್ಸವದ ಶುಭಾಶಯಗಳು.
ಇದನ್ನೂ ಓದಿ: Quiz: ಗಣರಾಜ್ಯೋತ್ಸವದ ಮಹತ್ವವೇನು? ರಾಷ್ಟ್ರಧ್ವಜ ವಿನ್ಯಾಸಗೊಳಿಸಿದವರು ಯಾರು? ಈ 5 ಸರಳ ರಸಪ್ರಶ್ನೆಗಳಿಗೆ ಉತ್ತರಿಸಿ
ವಿಭಾಗ