Republic Day 2025: ಗಣರಾಜ್ಯೋತ್ಸವಕ್ಕೆ ಧ್ವಜಾರೋಹಣ ಮಾಡುವ ಮುನ್ನ ಈ ನಿಯಮಗಳ ಬಗ್ಗೆ ತಿಳಿದುಕೊಂಡಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  Republic Day 2025: ಗಣರಾಜ್ಯೋತ್ಸವಕ್ಕೆ ಧ್ವಜಾರೋಹಣ ಮಾಡುವ ಮುನ್ನ ಈ ನಿಯಮಗಳ ಬಗ್ಗೆ ತಿಳಿದುಕೊಂಡಿರಿ

Republic Day 2025: ಗಣರಾಜ್ಯೋತ್ಸವಕ್ಕೆ ಧ್ವಜಾರೋಹಣ ಮಾಡುವ ಮುನ್ನ ಈ ನಿಯಮಗಳ ಬಗ್ಗೆ ತಿಳಿದುಕೊಂಡಿರಿ

ಭಾರತದೆಲ್ಲೆಡೆ ಗಣರಾಜ್ಯೋತ್ಸವ ಸಂಭ್ರಮ ಶುರುವಾಗಿದೆ. ಜನವರಿ 26 ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾದ ದಿನ. ಈ ಹಿನ್ನೆಲೆಯಲ್ಲಿ ಪ್ರತಿವರ್ಷ ಈ ದಿನ ಗಣರಾಜ್ಯೋತ್ಸವ ಆಚರಿಸುತ್ತೇವೆ. ಈ ಸಂದರ್ಭ ಧ್ವಜರೋಹಣ ಮಾಡುವಾಗ ಅನುಸರಿಸಬೇಕಾದ ಹಾಗೂ ಮಾಡಬಾರದಂತಹ ಕೆಲವು ನಿಯಮಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ಧ್ವಜಾರೋಹಣ ಮಾಡುವ ಮುನ್ನ ಅನುಸರಿಸಬೇಕಾದ ನಿಯಮಗಳು
ಧ್ವಜಾರೋಹಣ ಮಾಡುವ ಮುನ್ನ ಅನುಸರಿಸಬೇಕಾದ ನಿಯಮಗಳು

1950 ಜನವರಿ 26 ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾದ ದಿನ. ಈ ದಿನ ಗೌರವಾರ್ಥವಾಗಿ ಪ್ರತಿ ವರ್ಷ ಗಣರಾಜ್ಯೋತ್ಸವವನ್ನು ಬಹಳ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ದಿನ ದೆಹಲಿಯ ಇಂಡಿಯಾ ಗೇಟ್ ಬಳಿ, ಬೆಂಗಳೂರಿನ ಮಾಣೆಕ್ ಷಾ ಪೆರೇಡ್ ಗ್ರೌಂಡ್ ಸೇರಿದಂತೆ ದೇಶದ ಪ್ರಮುಖ ಸ್ಥಳಗಳಲ್ಲಿ ದೇಶಭಕ್ತಿ ಸಾರುವ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ದೆಹಲಿಯಲ್ಲಿ ಗಣರಾಜ್ಯೋತ್ಸವಕ್ಕೆ ನಡೆಯುವ ಪಥ ಸಂಚಲನವನ್ನು ನೋಡಲು ಎರಡು ಕಣ್ಣು ಸಾಲುವುದಿಲ್ಲ. ಈ ದಿನ ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಸಾಂಸ್ಕೃತಿಕ ವೈಭವ ಸಾರುವ ಟ್ಯಾಬ್ಲೋಗಳ ಮೆರವಣಿಗೆ, ಆಕರ್ಷಕ ಪಥ ಸಂಚಲನ ನಡೆಯುತ್ತದೆ. ರಾಷ್ಟ್ರೀಯ ಹಬ್ಬಗಳು ಎಂದರೆ ಧ್ವಜಾರೋಹಣ ಇಲ್ಲದಿರುವುದಿಲ್ಲ. ಗಣರಾಜ್ಯೋತ್ಸವ ಸಂದರ್ಭ ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿಗಳು, ಸಂಘ ಸಂಸ್ಥೆಗಳ ಮುಂದೆ ಧ್ವಜಾರೋಹಣ ಮಾಡಲಾಗುತ್ತದೆ.

ದೇಶಭಕ್ತಿ ಮೆರೆಯುವ ಧ್ವಜಾರೋಹಣ ಸಂದರ್ಭ ಕೆಲವು ತಪ್ಪುಗಳನ್ನು ಮಾಡಬಾರದು. ರಾಷ್ಟ್ರಧ್ವಜ ಹಾರಿಸಲು ಕೆಲವು ನಿಯಮಗಳಿದ್ದು, ಆ ನಿಯಮಗಳನ್ನು ತಪ್ಪದೇ ಪಾಲಿಸಬೇಕು. ಹಾಗಾದರೆ ಧ್ವಜಾರೋಹಣ ಮಾಡುವಾಗ ಅನುಸರಿಸಬೇಕಾದ ನಿಯಮಗಳು ಏನು ಎಎಂದು ತಿಳಿಯೋಣ.

ಧ್ವಜಾರೋಹಣದ ನಿಯಮಗಳು

  • ಧ್ವಜ ಸಂಹಿತೆಗೆ ಅನುಗುಣವಾಗಿ ರಾಷ್ಟ್ರಧ್ವಜ ಹಾರಿಸಿದಾಗ ಅದಕ್ಕೆ ಗೌರವಪೂರ್ವಕವಾಗಿ ಉಚ್ಛ ಸ್ಥಾನವನ್ನು ನೀಡಬೇಕು. ಎಲ್ಲರಿಗೂ ಕಾಣಿಸುವ ರೀತಿ ಎತ್ತರದಲ್ಲಿ ಧ್ವಜವನ್ನು ಹಾರಿಸಬೇಕು.
  • ರಾಷ್ಟ್ರಧ್ವಜವನ್ನು ಯಾವಾಗಲೂ ಸ್ಫೂರ್ತಿಯಿಂದ ಏರಿಸಿ, ಗೌರವದಿಂದ ಇಳಿಸಬೇಕು.
  • ಯಾವುದೇ ಸ್ಥಳದಲ್ಲಿ ರಾಷ್ಟ್ರಧ್ವಜ ಹಾರಿಸುವುದಿದ್ದರೂ ಕೇಸರಿ ಬಣ್ಣ ಮೇಲಿರಬೇಕು. ಹಸಿರು ಕೆಳಗಡೆ ಇರಬೇಕು.
  • ಧ್ವಜಾರೋಹಣ ಮಾಡಿದವರು ಧ್ವಜಸ್ತಂಭದ ಬಲಭಾಗದಲ್ಲಿ ಸಭಿಕರ ಕಡೆ ಮುಖ ಮಾಡಿ ನಿಲ್ಲಬೇಕು.
  • ಯಾವುದೇ ಮೆರವಣಿಗೆ ಅಥವಾ ಪೆರೆಡ್‌ನಲ್ಲಿ ವ್ಯಕ್ತಿಯ ಬಲಗೈಯಲ್ಲಿ ರಾಷ್ಟ್ರಧ್ವಜ ಇರಬೇಕು. ಇತರ ಧ್ವಜಗಳಿದ್ದರೆ ರಾಷ್ಟ್ರಧ್ವಜ ಮಧ್ಯದಲ್ಲಿರಬೇಕು.
  • ಇತರ ಪತಾಕೆ, ಧ್ವಜಗಳಿದ್ದರೆ ಅವುಗಳಿಗಿಂತ ಎತ್ತರದಲ್ಲಿ ರಾಷ್ಟ್ರಧ್ವಜವಿರಬೇಕು.
  • ಬೇರೆ ದೇಶಗಳ ಧ್ವಜ ಇದ್ದರೆ ನಮ್ಮ ರಾಷ್ಟ್ರಧ್ವಜದ ಎಡಭಾಗದಲ್ಲಿ ಅವುಗಳನ್ನು ಇರಿಸಬೇಕು.
  • ಹರಿದ, ಮುದ್ದೆಯಾದ ಧ್ವಜವನ್ನು ಹಾರಿಸುವಂತಿಲ್ಲ.

ಇದನ್ನೂ ಓದಿ: ಗಣರಾಜ್ಯೋತ್ಸವ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದೀರಾ? ಭಾರತ ಸಂವಿಧಾನದ ಇತಿಹಾಸ, ಮಹತ್ವದ ಕುರಿತ ಈ ವಿಚಾರಗಳು ನಿಮಗೆ ತಿಳಿದಿರಲಿ

  • ಬಲವಂತವಾಗಿ ರಾಷ್ಟ್ರಧ್ವಜಕ್ಕೆ ನೀರು, ಮಣ್ಣು ತಾಕಿಸುವಂತಿಲ್ಲ.
  • ವಾಹನದಲ್ಲಿ ಧ್ವಜ ಹಾಕುವಂತಿದ್ದರೆ, ಬ್ಯಾನೆಟ್‌ ಮೇಲೆ ಹಾಕಬೇಕು.
  • ಧ್ವಜಾರೋಹಣ ಮಾಡುವಾಗ ಧ್ವಜ ಹರಿಯದಂತೆ ನೋಡಿಕೊಳ್ಳಬೇಕು.
  • ಧ್ವಜವನ್ನು ಅಲಂಕಾರಕ್ಕಾಗಿ ಅಥವಾ ಮನೆಯ ಇತರ ಬಳಕೆಗೆ ಬಳಸುವಂತಿಲ್ಲ.
  • ಧ್ವಜದ ಮೇಲೆ ಯಾವುದೇ ಬರವಣಿಗೆ, ಜಾಹೀರಾತು ಇರಬಾರದು. ಧ್ವಜಸ್ತಂಭದ ಮೇಲೆಯೂ ಜಾಹೀರಾತು, ಬರಹ ಇರುವಂತಿಲ್ಲ.
  • ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವದ ದಿನ ಧ್ವಜದ ಒಳಗೆ ಹೂವಿನ ಎಸಳುಗಳನ್ನು ಇರಿಸಿ ಧ್ವಜಾರೋಹಣ ಮಾಡಬೇಕು.
  • ಸಾಧ್ಯವಾದಷ್ಟು ಬಟ್ಟೆಯ ಧ್ವಜಗಳನ್ನೇ ಬಳಸುವುದು ಉತ್ತಮ.

ಇದನ್ನೂ ಓದಿ: Republic Day Wishes: ಗಣರಾಜ್ಯೋತ್ಸವದಂದು ಆತ್ಮೀಯರಿಗೆ ಶುಭಾಶಯ ಕೋರಲು ಇಲ್ಲಿದೆ ರಾಷ್ಟ್ರಭಕ್ತಿ ಹೆಚ್ಚಿಸುವ ಸಂದೇಶಗಳು

Whats_app_banner