ಗಣರಾಜ್ಯೋತ್ಸವ ಭಾಷಣ 2025: ವಿದ್ಯಾರ್ಥಿಗಳಿಗಾಗಿ ಜನವರಿ 26ರ ರಿಪಬ್ಲಿಕ್‌ ಡೇ ಮಾದರಿ ಭಾಷಣ ಇಲ್ಲಿದೆ ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ಗಣರಾಜ್ಯೋತ್ಸವ ಭಾಷಣ 2025: ವಿದ್ಯಾರ್ಥಿಗಳಿಗಾಗಿ ಜನವರಿ 26ರ ರಿಪಬ್ಲಿಕ್‌ ಡೇ ಮಾದರಿ ಭಾಷಣ ಇಲ್ಲಿದೆ ನೋಡಿ

ಗಣರಾಜ್ಯೋತ್ಸವ ಭಾಷಣ 2025: ವಿದ್ಯಾರ್ಥಿಗಳಿಗಾಗಿ ಜನವರಿ 26ರ ರಿಪಬ್ಲಿಕ್‌ ಡೇ ಮಾದರಿ ಭಾಷಣ ಇಲ್ಲಿದೆ ನೋಡಿ

Republic Day Speech in Kannada: ಭಾರತದಲ್ಲಿ ಜನವರಿ 26 ಅನ್ನು ಗಣರಾಜ್ಯೋತ್ಸವ ಎಂದು ಆಚರಿಸಲಾಗುತ್ತದೆ. ಈ ಬಾರಿ ನಾವು 76ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಈ ಸಲದ ಗಣರಾಜ್ಯೋತ್ಸವಕ್ಕೆ ನಿಮ್ಮ ಮಗುವಿಗೆ ಶಾಲೆಯಲ್ಲಿ ಭಾಷಣ ಸ್ಪರ್ಧೆ ಇದ್ದರೆ ಈ ಅಂಶಗಳನ್ನು ಗಮನಿಸಿ. ಮಕ್ಕಳಿಗಾಗಿ ಗಣರಾಜ್ಯೋತ್ಸವ ಭಾಷಣ ಇಲ್ಲಿದೆ.

ಗಣರಾಜ್ಯೋತ್ಸವ ಭಾಷಣ
ಗಣರಾಜ್ಯೋತ್ಸವ ಭಾಷಣ (PC: Canva)

1950ರಲ್ಲಿ ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾದ ಸವಿನೆನಪಿನಲ್ಲಿ ಪ್ರತಿವರ್ಷ ಜನವರಿ 26 ರಂದು ಗಣರಾಜ್ಯೋತ್ಸವ ಆಚರಿಸಲಾಗುತ್ತದೆ. ಈ ವರ್ಷ 76ನೇ ಗಣರಾಜ್ಯೋತ್ಸವ ಆಚರಿಸಲಾಗುತ್ತಿದ್ದು, ಈಗಾಗಲೇ ಸಿದ್ಧತೆಗಳು ಆರಂಭವಾಗಿವೆ. ದೇಶದ ವಿವಿಧ ಭಾಗಗಳಲ್ಲಿ ಗಣರಾಜ್ಯೋತ್ಸವವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಶಾಲೆಗಳಲ್ಲಿ ಧ್ವಜಾರೋಹಣದ ಜೊತೆಗೆ ಮಕ್ಕಳಿಗಾಗಿ ದೇಶಭಕ್ತಿ ಹೆಚ್ಚಿಸುವ ಭಾಷಣ, ಪ್ರಬಂಧ, ಚಿತ್ರಕಲೆಯಂತಹ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಮಕ್ಕಳು ಗಣರಾಜ್ಯೋತ್ಸವ ಭಾಷಣಕ್ಕಾಗಿ ತಿಂಗಳಿರುವಾಗಲೇ ತಯಾರಿ ನಡೆಸುತ್ತಿರುತ್ತಾರೆ. ನಿಮ್ಮ ಮಗು ಕೂಡ ಈ ಬಾರಿ ಗಣರಾಜ್ಯೋತ್ಸವಕ್ಕೆ ಭಾಷಣ ಮಾಡುವ ಯೋಚನೆಯಲ್ಲಿದ್ದರೆ ಈ ಕೆಳಗಿನ ಅಂಶಗಳನ್ನು ಸೇರಿಸಿಕೊಳ್ಳಲು ಹೇಳಿ. ಶಾಲಾ ಮಕ್ಕಳಿಗಾಗಿ ಇಲ್ಲಿದೆ ಗಣರಾಜ್ಯೋತ್ಸವ ಭಾಷಣ.  

ಗಣರಾಜ್ಯೋತ್ಸವ ಭಾಷಣ

‘ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯ, ನಾವಿಂದು 76ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾದ ದಿನ ಹಾಗೂ ಭಾರತದ ಸಂವಿಧಾನ ಅಸ್ತಿತ್ವಕ್ಕೆ ಬಂದ ದಿನವನ್ನು ಗಣರಾಜ್ಯೋತ್ಸವ ಎಂದು ಆಚರಿಸಲಾಗುತ್ತದೆ. ಪ್ರತಿ ವರ್ಷ ಜನವರಿ 26 ರಂದು ಗಣರಾಜ್ಯೋತ್ಸವವಿರುತ್ತದೆ. 1950ರಲ್ಲಿ ಭಾರತದ ಸಂವಿಧಾನವನ್ನು ಅಂಗೀಕರಿಸಿದ ದಿನದ ನೆನಪಿನಲ್ಲಿ ಈ ಗಣರಾಜ್ಯೋತ್ಸವ ಆಚರಿಸಲಾಗುತ್ತದೆ. ಈ ದಿನದಂದು ಭಾರತವು ತನ್ನನ್ನು ತಾನು ಸಾರ್ವಭೌಮ, ಪ್ರಜಾಪ್ರಭುತ್ವ ಮತ್ತು ಗಣರಾಜ್ಯ ರಾಜ್ಯವೆಂದು ಘೋಷಿಸಿಕೊಂಡಿತು.

ಪ್ರಜಾಪ್ರಭುತ್ವಕ್ಕೆ ಇನ್ನೊಂದು ಹೆಸರೇ ಭಾರತ. ವಿಶ್ವದಲ್ಲೇ ಅತಿ ದೊಡ್ಡ ಲಿಖಿತ ಸಂವಿಧಾನ ಹೊಂದಿರುವ ದೇಶ ನಮ್ಮ ಭಾರತ ಎಂಬುದು ನಮಗೆ ಹೆಮ್ಮೆ. 

ಪ್ರಜಾಪ್ರಭುತ್ವ ಎಂದರೆ ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಇರುವ ಆಡಳಿತ. ಭಾರತ ಸಂವಿಧಾನವು ಪ್ರಜಾಪ್ರಭುತ್ವ ಹಾಗೂ ಜಾತ್ಯಾತೀತ ರಾಷ್ಟ್ರವನ್ನು ಪ್ರತಿಪಾಧಿಸುತ್ತದೆ. ಸಂವಿಧಾನವು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳನ್ನು ಸರ್ಕಾರದ ಮೂರು ಮುಖ್ಯ ಅಂಗಗಳಾಗಿ ವಿಭಜಿಸುತ್ತದೆ. ಸರ್ಕಾರ ಮಾಡುವ ಪ್ರತಿಯೊಂದು ಕಾನೂನೂ ಸಂವಿಧಾನಕ್ಕೆ ಅನುಗುಣವಾಗಿರಬೇಕು ಎಂಬ ನಿಯಮವಿದೆ.  

ಮೊದಲೇ ಹೇಳಿದಂತೆ 1950ರ ಜನವರಿ 26 ರಂದು ಭಾರತದ ಸಂವಿಧಾನವು ಜಾರಿಗೆ ಬರುತ್ತದೆ. ಭಾರತ ಸಂವಿಧಾನದ ಪಿತಾಮಹಾ ಎಂದೇ ಕರೆಸಿಕೊಳ್ಳುವ ಡಾ. ಬಿ. ಆರ್. ಅಂಬೇಡ್ಕರ್ ಭಾರತ ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿದ್ದರು. ಭಾರತ ಸಂವಿಧಾನವನ್ನು ರೂಪಿಸುವಲ್ಲಿ ಅಂಬೇಡ್ಕರ್ ಅವರ ಪಾತ್ರ ಮಹತ್ವದ್ದು. ಭಾರತ ಸಂವಿಧಾನವನ್ನು ಕೈಯಲ್ಲಿ ಬರೆಯಲಾಗಿದೆ. ಭಾರತದ ಸಂವಿಧಾನದ ಪ್ರತಿಯು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಸಂಸತ್‌ ಭವನದಲ್ಲಿದೆ. ಆರಂಭದಲ್ಲಿ, ಅಂದರೆ ಸಂವಿಧಾನ ರಚನೆಯಾಗಿ ಜಾರಿಗೆ ಬಂದಾಗ ಅದರಲ್ಲಿ 8 ಅನುಚ್ಛೇದಗಳು ಹಾಗೂ 22 ಭಾಗಗಳು ಹಾಗೂ 395 ವಿಧಿಗಳು ಇದ್ದವು. ಆ ಬಳಿಕ ಇಲ್ಲಿಯವರೆಗೆ ಒಟ್ಟು 105 ಬಾರಿ ಸಂವಿಧಾನವನ್ನು ತಿದ್ದುಪಡಿ ಮಾಡಲಾಗಿದೆ. ಹೀಗಾಗಿ ಈಗ ಭಾರತ ಸಂವಿಧಾನದಲ್ಲಿ 12 ಅನುಚ್ಛೇದಗಳು ಹಾಗೂ 25 ಭಾಗಗಳು ಹಾಗೂ 470 ವಿಧಿಗಳಿವೆ.

ಗಣಾರಾಜ್ಯೋತ್ಸವದಂದು, ದೇಶದ ಪ್ರಥಮ ಪ್ರಜೆಯಾದ ರಾಷ್ಟ್ರಪತಿ ದೆಹಲಿಯ ರಾಜಪಥದಲ್ಲಿ ಧ್ವಜಾರೋಹಣ ನೆರವೇರಿಸುತ್ತಾರೆ. ಅದಕ್ಕೂ ಒಂದು ದಿನ ಮುಂಚಿತವಾಗಿ, ಅಂದರೆ ಜನವರಿ 25ರಂದು ರಾಷ್ಟ್ರಪತಿ ಭಾಷಣ ಮಾಡುತ್ತಾರೆ.

ಸಂವಿಧಾನ ಏಕೆ ಬೇಕು?

ಭಾರತ ಸಂವಿಧಾನವು ಸಮಾನತೆಯನ್ನು ಎತ್ತಿ ಹಿಡಿಯುತ್ತದೆ. ನಮ್ಮ ದೇಶದಲ್ಲಿ ಎಲ್ಲರೂ ಸಮಾನರು, ಪ್ರಜೆಗಳು ಎಲ್ಲಿ ಪ್ರಭುಗಳು. ದೇಶದ ಕಾನೂನು ಸುವವಸ್ಯೆ ಕಾಪಾಡುವಲ್ಲೂ ಸಂವಿಧಾನದ ಪಾತ್ರ ಮಹತ್ವದ್ದು. ಸಂವಿಧಾನ ನಿಯಮಗಳನ್ನು ಪ್ರತಿಯೊಬ್ಬರು ಪಾಲಿಸಬೇಕು. ಆ ಮೂಲಕ ದೇಶಸೇವೆಗಾಗಿ ನಮ್ಮನ್ನು ನಾವು ಮುಡಿಪಾಗಿಡಬೇಕು. ಎಲ್ಲರಿಗೂ ಮತ್ತೊಮ್ಮೆ ಗಣರಾಜ್ಯೋತ್ಸವದ ಶುಭಾಶಯಗಳು.

---

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope

Whats_app_banner