Republic Day Special: ಗಣರಾಜ್ಯೋತ್ಸವ ಸಂಭ್ರಮ ಹೆಚ್ಚಿಸಲು ಮನೆಯಲ್ಲಿ ಮಾಡಿ ವಿಶೇಷವಾದ ತ್ರಿವರ್ಣ ಪೇಡಾ, ಇಲ್ಲಿದೆ ರೆಸಿಪಿ
ಕನ್ನಡ ಸುದ್ದಿ  /  ಜೀವನಶೈಲಿ  /  Republic Day Special: ಗಣರಾಜ್ಯೋತ್ಸವ ಸಂಭ್ರಮ ಹೆಚ್ಚಿಸಲು ಮನೆಯಲ್ಲಿ ಮಾಡಿ ವಿಶೇಷವಾದ ತ್ರಿವರ್ಣ ಪೇಡಾ, ಇಲ್ಲಿದೆ ರೆಸಿಪಿ

Republic Day Special: ಗಣರಾಜ್ಯೋತ್ಸವ ಸಂಭ್ರಮ ಹೆಚ್ಚಿಸಲು ಮನೆಯಲ್ಲಿ ಮಾಡಿ ವಿಶೇಷವಾದ ತ್ರಿವರ್ಣ ಪೇಡಾ, ಇಲ್ಲಿದೆ ರೆಸಿಪಿ

ನೀವು ದೇಶಭಕ್ತಿಯೊಂದಿಗೆ ಗಣರಾಜ್ಯೋತ್ಸವವನ್ನು ಆಚರಿಸಲು ಬಯಸಿದರೆ, ನಾವು ನಿಮಗಾಗಿ ತ್ರಿವರ್ಣ ಪೇಡಾ ಪಾಕವಿಧಾನವನ್ನು ಇಲ್ಲಿ ನೀಡಿದ್ದೇವೆ. ಇದು ತುಂಬಾ ಸರಳ ಪಾಕವಿಧಾನವಾಗಿದ್ದು, ಬಹಳ ಬೇಗನೆ ಸಿದ್ಧವಾಗು ಸಿಹಿಭಕ್ಷ್ಯ. ಇದನ್ನು ತಯಾರಿಸಲು ಕೇವಲ ಮೂರು ಪದಾರ್ಥವಿದ್ದರೆ ಸಾಕು. ಹಾಗಿದ್ದರೆ ತ್ರಿವರ್ಣ ಪೇಡ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಗಣರಾಜ್ಯೋತ್ಸವ ಸಂಭ್ರಮ ಹೆಚ್ಚಿಸಲು ಮನೆಯಲ್ಲಿ ಮಾಡಿ ವಿಶೇಷವಾದ ತ್ರಿವರ್ಣ ಪೇಡಾ
ಗಣರಾಜ್ಯೋತ್ಸವ ಸಂಭ್ರಮ ಹೆಚ್ಚಿಸಲು ಮನೆಯಲ್ಲಿ ಮಾಡಿ ವಿಶೇಷವಾದ ತ್ರಿವರ್ಣ ಪೇಡಾ (Pinterest )

ಜನವರಿ ಬಂತೆಂದರೆ ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ಗಣರಾಜ್ಯೋತ್ಸವದ ವಿಶೇಷ ಅಲೆಯೊಂದು ಮೂಡುತ್ತದೆ. ಜನವರಿ 26ನೇ ದಿನಾಂಕವು ದೇಶಕ್ಕೆ ಅತ್ಯಂತ ಮಹತ್ವ ಹಾಗೂ ಐತಿಹಾಸಿಕ ದಿನವಾಗಿದೆ. ಈ ದಿನ ನಮ್ಮ ಗಣರಾಜ್ಯದ ಭವ್ಯ ಇತಿಹಾಸವನ್ನು ನೆನಪಿಸುತ್ತದೆ. ಪ್ರತಿ ಭಾರತೀಯ ಮನೆಗಳಲ್ಲೂ ದೇಶಭಕ್ತಿಯ ಮನೋಭಾವವು ಪ್ರತಿಬಿಂಬಿಸುವ ಸಮಯ ಇದು.

ಗಣರಾಜ್ಯೋತ್ಸವ ಎಂದರೆ ಕಚೇರಿ ಕೆಲಸಕ್ಕೆ ರಜೆ ಸಿಗುತ್ತದೆ, ಆ ರಜೆಯನ್ನು ಸಂಭ್ರಮಿಸುವುದಲ್ಲ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಕರುಣಿಸಿದ ಮಹನೀಯರನ್ನು ನೆನಪಿಸುವ ದಿನವೂ ಹೌದು. ಗಣರಾಜ್ಯೋತ್ಸವದ ಸಂದರ್ಭದಲ್ಲಿ ತ್ರಿವರ್ಣ ಧ್ವಜ ಹಾರಿಸಿ ಸಂಭ್ರಮಿಸಲಾಗುತ್ತದೆ. ಈ ದಿನವು ನಮ್ಮ ಸಂವಿಧಾನ ಮತ್ತು ನಾವು ಪಡೆಯುವ ಹಕ್ಕುಗಳನ್ನು ನೆನಪಿಸುತ್ತದೆ. ಆದ್ದರಿಂದ ಪ್ರತಿ ಮನೆಯಲ್ಲೂ ದೇಶಭಕ್ತಿ ಗೀತೆಗಳು ಪ್ರತಿಧ್ವನಿಸಲು ಪ್ರಾರಂಭಿಸುತ್ತವೆ. ಇದು ಜವಾಬ್ದಾರಿಯುತ ನಾಗರಿಕನ ಕರ್ತವ್ಯಗಳನ್ನು ನೆನಪಿಸುತ್ತದೆ.

ಈ ದಿನ ಪ್ರತಿಯೊಬ್ಬ ನಾಗರಿಕನಲ್ಲೂ ದೇಶಭಕ್ತಿ ಉಕ್ಕಿ ಹರಿಯುತ್ತದೆ. ಕೆಲವರು ಕೇಸರಿ, ಬಿಳಿ, ಹಸಿರು ಬಣ್ಣದ ಉಡುಪು ತೊಟ್ಟು ಸಂಭ್ರಮಿಸಿದ್ರೆ, ಇನ್ನೂ ಕೆಲವರು ತಮ್ಮ ಮುಖದಲ್ಲಿ, ಎದೆಯಲ್ಲಿ ತ್ರಿವರ್ಣ ಧ್ವಜದ ಚಿತ್ರ ಬಿಡಿಸಿ ದೇಶಭಕ್ತಿ ಮೆರೆಯುತ್ತಾರೆ. ತ್ರಿವರ್ಣ ಪೇಡಾ ತಯಾರಿಸಬಹುದು. ಈ ಸಿಹಿ ಖಾದ್ಯವನ್ನು ಮನೆಯಲ್ಲಿಯೇ ಸುಲಭವಾಗಿ ಮಾಡಬಹುದು. ಇದಕ್ಕಾಗಿ ಕೆಲವು ಸಲಹೆಗಳನ್ನು ಅನುಸರಿಸಿದರೆ ಸಾಕು. ಹಾಗಿದ್ದರೆ ತ್ರಿವರ್ಣ ಪೇಡಾ ಮಾಡುವುದು ಹೇಗೆ ಅನ್ನುವುದನ್ನು ಇಲ್ಲಿ ತಿಳಿದುಕೊಳ್ಳಿ.

ತ್ರಿವರ್ಣ ಪೇಡಾ ತಯಾರಿಸುವ ವಿಧಾನ ಇಲ್ಲಿದೆ

ಬೇಕಾಗುವ ಪದಾರ್ಥಗಳು: ಹಾಲು- 1 ಲೀಟರ್, ಹಾಲಿನ ಪುಡಿ- 1 ಕಪ್, ಆಹಾರ ಬಣ್ಣಗಳು (ಹಸಿರು, ಕೇಸರಿ).

ಮಾಡುವ ವಿಧಾನ: ಮೊದಲನೆಯದಾಗಿ, ಒಂದು ಲೀಟರ್ ಹಾಲು ತೆಗೆದುಕೊಂಡು ಅದನ್ನು ಒಲೆ ಮೇಲೆ ಇರಿಸಿ, ಮಧ್ಯಮ ಉರಿಯಲ್ಲಿ ಬಿಸಿ ಮಾಡಬೇಕು. ಹಾಲು ತುಂಬಾ ಮಂದವಾಗುವವರೆಗೆ ಅದನ್ನು ಚಮಚದಿಂದ ಮಿಶ್ರಣ ಮಾಡುತ್ತಿರಬೇಕು. ಈ ರೀತಿ ಆಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಹಾಲು ಮಂದವಾದ ಬಳಿಕ ಅದಕ್ಕೆ ಹಾಲಿನ ಪುಡಿ ಬೆರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು.

ಇದನ್ನು ನಿರಂತರವಾಗಿ ಬೆರೆಸಿ. ಕಡಿಮೆ ಉರಿಯಲ್ಲಿ ಬೇಯಿಸಬೇಕು. ಮಿಶ್ರಣವು ಹಿಟ್ಟಿನ ರೂಪಕ್ಕೆ ಬಂದಾಗ ಗ್ಯಾಸ್ ಆಫ್ ಮಾಡಿ. ಈಗ ಮಿಶ್ರಣವನ್ನು ತಣ್ಣಗಾಗಲು ಬಿಡಿ. ಸ್ವಲ್ಪ ತಣ್ಣಗಾದಾಗ ಅದನ್ನು ಮೂರು ಭಾಗಗಳಾಗಿ ವಿಂಗಡಿಸಬಹುದು. ಮಿಶ್ರಣದ ಒಂದು ಭಾಗಕ್ಕೆ ಹಸಿರು ಬಣ್ಣವನ್ನು ಬೆರಿಸಿ ಅದನ್ನು ಚೆನ್ನಾಗಿ ಮಿಶ್ರಣ ಮಾಡಿ. ಇನ್ನೊಂದು ಭಾಗವನ್ನು ಬಣ್ಣವಿಲ್ಲದೆ ಬಿಡಿ. ನಂತರ ಇನ್ನೊಂದು ಭಾಗಕ್ಕೆ ಕೇಸರಿ ಮಿಶ್ರಣವನ್ನು ಬೆರಿಸಿ. ಈಗ ಎಲ್ಲಾ ಮೂರು ಭಾಗಗಳಿಂದ ಸಣ್ಣ ಚೆಂಡುಗಳನ್ನು ಮಾಡಿ.

ನೀವು ಬೇರೆ ಆಕಾರವನ್ನು ಮಾಡಲು ಬಯಸಿದರೆ, ನಿಮಗಿಷ್ಟವಾದ ಆಕಾರವನ್ನು ಸಹ ಮಾಡಬಹುದು. ತ್ರಿವರ್ಣ ಧ್ವಜದ ರೀತಿ ಪೇಡಾ ಮಾಡಲು ಮೊದಲು ಹಸಿರು ವೃತ್ತವನ್ನು ಸ್ವಲ್ಪ ಚಪ್ಪಟೆಗೊಳಿಸಿ. ನಂತರ ಬಿಳಿ ಚೆಂಡನ್ನು ಅದರ ಮೇಲೆ ಇರಿಸಿ ಅದನ್ನು ಲಘುವಾಗಿ ಒತ್ತಿ. ನಂತರ ಕೇಸರಿ ಬಣ್ಣದ ಚೆಂಡನ್ನು ಮೇಲೆ ಇರಿಸಿ, ಪೇಡಾದ ಆಕಾರವನ್ನು ನೀಡಿ. ಇದನ್ನು ತಟ್ಟೆಯಲ್ಲಿ ಅಲಂಕರಿಸಿದರೆ ರುಚಿಕರವಾದ ತ್ರಿವರ್ಣ ಪೇಡಾ ಸವಿಯಲು ಸಿದ್ಧ.

Whats_app_banner