ಕನ್ನಡ ಸುದ್ದಿ  /  ಜೀವನಶೈಲಿ  /  ರೈಡರ್ಸ್ ಗಳ ಮೌಲ್ಯಮಾಪನಗಳು: ಅವಧಿ ವಿಮೆ ಕ್ಯಾಲ್ಕುಲೇಟರ್ ನ ಮೂಲಕ ನಿಮ್ಮ ವ್ಯಾಪ್ತಿಯನ್ನು ವೃದ್ಧಿಗೊಳಿಸುವುದು

ರೈಡರ್ಸ್ ಗಳ ಮೌಲ್ಯಮಾಪನಗಳು: ಅವಧಿ ವಿಮೆ ಕ್ಯಾಲ್ಕುಲೇಟರ್ ನ ಮೂಲಕ ನಿಮ್ಮ ವ್ಯಾಪ್ತಿಯನ್ನು ವೃದ್ಧಿಗೊಳಿಸುವುದು

ಟರ್ಮ್ ಇನ್ಶೂರೆನ್ಸ್ ಎನ್ನುವುದು ಒಂದು ವಿಧದ ಜೀವ ವಿಮಾ ಯೋಜನೆಯಾಗಿದ್ದು ಅದು ಪಾಲಿಸಿದಾರರಿಗೆ ನಿರ್ದಿಷ್ಟ ಅವಧಿಗೆ ಮರಣದ ರಕ್ಷಣೆಯನ್ನು ಒದಗಿಸುತ್ತದೆ.

Insurance
Insurance

ನಿಮ್ಮ ಸಾವಿನ ನಂತರದ ದಿನಗಳಲ್ಲಿ ನಿಮ್ಮವರ ಆರ್ಥಿಕ ಭವಿಷ್ಯದ ಬಗ್ಗೆ ಚಿಂತಿಸುತ್ತಿದ್ದೀರೇ? ಹೌದು ಎಂದಾದರೆ, ಅವಧಿ ವಿಮೆ ಅನ್ನು ತೆಗೆದು ಕೊಳ್ಳುವುದು ನಿಮ್ಮ ಸಾವಿನ ನಂತರದ ದಿನಗಳಲ್ಲಿ ನಿಮ್ಮ ಕುಟುಂಬಕ್ಕೆ ಸುರಕ್ಷತೆಯನ್ನು ಒದಗಿಸುವ ಒಂದು ಹಾದಿಯಾಗಿದೆ. ನಾಮಿನಿಗೆ ದೊರೆಯುವ ಮರಣದ ಪ್ರಯೋಜನಗಳು ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ, ಅವರ ಮದುವೆಗೆ, ಮಾಡಿಟ್ಟ ಸಾಲವನ್ನು ತೀರಿಸಲು ಸಹಾಯ ಮಾಡುತ್ತದೆ. ಅವಧಿ ಯೋಜನೆಗಳು ಒಬ್ಬ ರೈಡರ್ ಗೆ ಹೆಚ್ಚುವರಿ ವ್ಯಾಪ್ತಿಯನ್ನು ಮತ್ತು ಆಡ್ ಆನ್ ಪ್ರಯೋಜನಗಳನ್ನು ನೀಡುತ್ತದೆ. ಅವಧಿ ವಿಮೆ ಕ್ಯಾಲ್ಕುಲೇಟರ್ ನ ಮೂಲಕ ಅತ್ಯಧಿಕ ವ್ಯಾಪ್ತಿಯನ್ನು ಪಡೆಯಲು ವಿವಿಧ ರೈಡರ್ ಗಳನ್ನು ಹೇಗೆ ಮೌಲ್ಯಮಾಪನ ಮಾಡಬಹುದು ಎಂದು ಮುಂದಕ್ಕೆ ತಿಳಿದುಕೊಳ್ಳೋಣ.

ಟ್ರೆಂಡಿಂಗ್​ ಸುದ್ದಿ

ಅವಧಿ ವಿಮೆ ಎಂದರೇನು?

ಅವಧಿ ವಿಮೆ ಒಂದು ರೀತಿಯ ಜೀವ ವಿಮಾ ಯೋಜನೆ, ಅದು ಪಾಲಿಸಿದಾರರಿಗೆ ಒಂದು ನಿರ್ಧಿಷ್ಟ ಸಮಯಕ್ಕೆ ಮರಣ ರಕ್ಷಣೆಯನ್ನು ಒದಗಿಸುತ್ತದೆ. ಅಂದರೆ ಪಾಲಿಸಿ ಅವಧಿಯಲ್ಲಿ ಒಂದು ವೇಳೆ ಪಾಲಿಸಿದಾರನು ಮೃತನಾದರೆ ಆ ಸಂದರ್ಭದಲ್ಲಿ ನಾಮಿನಿಗೆ ಒಂದು ನಿಗಧಿತ ಮೊತ್ತವನ್ನು ಕೊಡಲಾಗುತ್ತದೆ. ವಿಶೇಷವಾಗಿ, ಅವಧಿ ಯೋಜನೆಗಳು ಸಾಂಪ್ರದಾಯಕ, ಹಣ ವಾಪಸು ಮಾರುಕಟ್ಟೆ ಸಂಯೋಜಿತ ಜೀವ ವಿಮಾ ಪಾಲಿಸಿಯಂತಹ ಪ್ರಬುದ್ಧತೆಯ ಪ್ರಯೋಜನಗಳನ್ನು ನೀಡುವುದಿಲ್ಲ. ಆದರೆ ಅವು ಕಡಿಮೆ ಮೊತ್ತದಲ್ಲಿ ಅತ್ಯಧಿಕ ವ್ಯಾಪ್ತಿಯನ್ನು ನೀಡುತ್ತದೆ.

ಅವಧಿ ಜೀವ ವಿಮೆಯ ಬಗ್ಗೆ ಮಾತನಾಡುವಾಗ ಈ ಪಾಲಿಸಿಯು ನೀಡುವ ತೆರಿಗೆಯ ಅನುಕೂಲಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಹಳೆಯ ತೆರಿಗೆ ಪದ್ದತಿಯನ್ನು ಅನುಸರಿಸುವ ಪಾಲಿಸಿದಾರರು ಸೆಕ್ಷನ್ 80ಸಿ, 80ಡಿ ಮತ್ತು 10 (10ಡಿ) ಯ ಅಡಿಯಲ್ಲಿ ತೆರಿಗೆಯನ್ನು ಉಳಿಸಬಹುದು. ಅದಲ್ಲದೇ ಅವಧಿ ವಿಮೆ, ಪ್ರೀಮಿಯಂ ಹಿಂದಿರುಗಿಸುವೆ (ROP) ವೈಶಿಷ್ಟ್ಯವನ್ನೂ ಹೊಂದಿದೆ. ಅದಲ್ಲದೇ ಇದು ನಿಮ್ಮ ಜೀವ ವಿಮಾ ಯೋಜನೆಯ ಅವಧಿಯ ನಂತರನೂ ಪ್ರೀಮಿಯಂ ಸಿಗುವಂತೆ ಮಾಡುತ್ತದೆ.

ವಿಶೇಷವಾಗಿ, ಅವಧಿ ಯೋಜನೆಗಳಿಗಾಗಿ ಪಾವತಿಸಿದ ಪ್ರೀಮಿಯಂಗಳು ಪಾಲಿಸಿಯ ಅವಧಿಯ ತನಕ ಲಾಕ್ ಆಗಿರುತ್ತದೆ. ಅದಲ್ಲದೇ, ನಾಮಿನಿಗಳು ವಿಮಾ ಮೊತ್ತವನ್ನು ಒಟ್ಟು ಎಲ್ಲಾ ಮೊತ್ತ, ಮಾಸಿಕ ಅಥವಾ ವಾರ್ಷಿಕ ಆದಾಯದಂತೆ, ಒಟ್ಟು ಮತ್ತು ನಿಯಮಿತ ಆದಾಯದ ರೂಪದಲ್ಲಿಯೂ ಪಡೆಯಬಹುದು.

ಅವಧಿ ವಿಮೆ ರೈಡರ್ಸ್ ಮತ್ತು ಅವುಗಳ ಪ್ರಯೋಜನಗಳ ಬಗ್ಗೆ ನೋಡೋಣ:

ವ್ಯಾಪ್ತಿಯನ್ನು ವರ್ಧಿಸುವ ಮೂಲಕ ಅವಧಿ ವಿಮೆ ರೈಡರ್ಸ್ ನಿಮ್ಮ ಮೂಲ ಪಾಲಿಸಿಗೆ ಹೆಚ್ಚುವರಿ ಪ್ರಯೋಜನಗಳನ್ನು ಕೂಡಿಸುತ್ತದೆ. ಗಮನದಲ್ಲಿ ಇಟ್ಟುಕೊಳ್ಳಬೇಕಾದ ಸಂಗತಿಯೆಂದರೆ ಈ ರೈಡರ್ಸ್ ಅಥವಾ ಆಡ್ ಆನ್ ಗಳು ನಿರ್ದಿಷ್ಟ ಅಪಾಯಗಳಾದ ಗಂಭೀರ ಅನಾರೋಗ್ಯ ಮತ್ತು ಆಕಸ್ಮಿತ ಸಾವುಗಳನ್ನು ಒಳಗೊಂಡಿರುತ್ತದೆ. ಸಾಮಾನ್ಯವಾದ ನೀಡಲಾಗುವ ರೈಡರ್ಸ್ ಗಳು ಈ ಕೆಳಗಿನಂತಿದೆ.

ಆಕಸ್ಮಿಕ ಸಾವಿನ ರೈಡರ್: ಪಾಲಿಸಿದಾರರು ಅಪಘಾತದಲ್ಲಿ ಒಂದು ವೇಳೆ ಸಾವನ್ನು ಅಪ್ಪಿದರೆ ಇದು ಹೆಚ್ಚುವರಿ ವ್ಯಾಪ್ತಿಯನ್ನು ಒದಗಿಸುತ್ತದೆ. ಸಾಮಾನ್ಯ ಪ್ರಯೋಜನದ ಅಡಿಯಲ್ಲಿ ಆಕಸ್ಮಿಕ ಸಾವು ಪ್ರಯೋಜನವನ್ನು ನಾಮಿನಿಗೆ ನೀಡಲಾಗುತ್ತದೆ. ಇದು ಕೇವಲ ಸಂತೃಪ್ತ ಕುಟುಂಬಕ್ಕೆ ಜೀವಹಾನಿಯನ್ನು ಸಹಿಸಲು ಸಹಾಯ ಮಾಡುವುದು ಮಾತ್ರವಲ್ಲದೇ ಭವಿಷ್ಯದ ಆದಾಯವು ಆಗುತ್ತದೆ

ಅಪಘಾತ ಒಟ್ಟು ಶಾಶ್ವತ ಅಸಾಮರ್ಥ್ಯ ರೈಡರ್: ಅಪಘಾತದಲ್ಲಿ ಏನಾದರೂ ನೀವು ಸಂಪೂರ್ಣವಾಗಿ ಮತ್ತು ಶಾಶ್ವತವಾಗಿ ಅಂಗವಿಕಲರಾದರೆ ಈ ಆಡ್ ಆನ್ ಒಂದು ಒಟ್ಟು ಮೊತ್ತವನ್ನು ನೀಡುತ್ತದೆ.

ಗಂಭೀರ ಅನಾರೋಗ್ಯದ ರೈಡರ್ : ಪಾಲಿಸಿದಾರರು ಒಂದು ವೇಳೆ ಗಂಭೀರ ಕಾಯಿಲೆಗಳಾದ ಕ್ಯಾನ್ಸರ್, ಹೃದಯಾಘಾತ, ಮೂತ್ರ ಪಿಂಡ ವೈಫಲ್ಯ ಗಳಂತಹ ರೋಗಗಳಿಂದ ಬಳಲುತ್ತಿದ್ದರೆ ಇದು ದೊಡ್ಡ ಮೊತ್ತವನ್ನು ನೀಡುತ್ತದೆ. ಇದು ಉಳಿತಾಯಕ್ಕೆ ಧಕ್ಕೆ ಬರದಂತೆ ನಿಮಗೆ ಸರಿಯಾದ ಚಿಕಿತ್ಸೆಯನ್ನು ನೀಡುತ್ತದೆ.

ಟರ್ಮಿನಲ್ ಅನಾರೋಗ್ಯದ ರೈಡರ್: ಒಂದು ವೇಳೆ ವಿಮೇದಾರರು ಅಲ್ಜ್ಐಮರ್ ರೋಗ, ಮೆದುಳಿನ ಗೆಡ್ಡೆ ಅಥವಾ ಪಾರ್ಶ್ವ ವಾಯುವಿನಂತಹ ರೋಗಗಳಿಂದ ಬಳಲುತ್ತಿದ್ದರೆ ಕೆಲವು ಇನ್ಶುರೆನ್ಸ್ ಪೂರೈಕೆದಾರರು ಟೆರ್ಮಿನಲ್ ಅನಾರೋಗ್ಯದ ಕವರ್ ಅದು ಒಂದು ತೆರಿಗೆ ರಹಿತ ನಿರ್ದಿಷ್ಟವಾದ ದೊಡ್ಡ ಮೊತ್ತವನ್ನು ನೀಡುತ್ತದೆ. ಇದು ನಿಮ್ಮ ಆರ್ಥಿಕ ಸ್ಥಿತಿಗೆ ಹಾನಿಯಾಗದಂತೆ ದುಬಾರಿ ಚಿಕಿತ್ಸೆಯನ್ನು ಪಡೆದುಕೊಳ್ಳಲು ಸಹಾಯ ಮಾಡುತ್ತದೆ.

ನಿಮ್ಮ ಅವಧಿ ಯೋಜನೆಗೆ ರೈಡರ್‌ಗಳನ್ನು ಸೇರಿಸುವಾಗ,ನಿಮ್ಮ ಅವಶ್ಯಕತೆ ಮತ್ತು ಅಗತ್ಯತೆಗಳನ್ನು ಪರಿಗಣಿಸುವುದು ಅತೀ ಮುಖ್ಯವಾಗಿದೆ. ಅದಲ್ಲದೇ ನಿಯಮಗಳನ್ನು ಮತ್ತು ಷರತ್ತುಗಳನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡುವುದು ಅತ್ಯಗತ್ಯ ಏಕೆಂದರೆ ಕೆಲವೊಂದು ರೈಡರ್ ಗಳಿಗೆ ಇತಿಮಿತಿಗಳು ಮತ್ತು ಬಹಿಷ್ಕರಣಗಳಿರುತ್ತವೆ.

ಅವಧಿ ವಿಮೆ ಕ್ಯಾಲ್ಕುಲೇಟರ್: ಇದು ಹೇಗೆ ಕೆಲಸ ಮಾಡುತ್ತದೆ?

ಅವಧಿ ವಿಮೆ ಕ್ಯಾಲ್ಕುಲೇಟರ್ ಒಂದು ಉಪಯುಕ್ತವಾದ ಆನ್ ಲೈನ್ ಸಾಧನವಾಗಿದ್ದು ಮತ್ತದು ಕೇವಲ ಖ್ಯಾತ ವಿಮೆಗಾರರಾದ ACKO ನೀಡುತ್ತದೆ. ನಿಮ್ಮ ಆವಶ್ಯಕತೆಗಳನ್ನು ಅಳೆದು ಈ ಸಾಧನ ನಿಮಗೆ ಎಷ್ಟು ವ್ಯಾಪ್ತಿಯ ಅಗತ್ಯವಿದೆ ಮತ್ತು ಅದರ ವೆಚ್ಚವೆಷ್ಟು ತಗಲುತ್ತದೆ ಎಂಬುದನ್ನೂ ತಿಳಿದುಕೊಳ್ಳಲು ಸಹಾಯ ಮಾಡುತ್ತದೆ.

ಇದು ಉಪಯೋಗಿಸಲು ಸರಳವಾಗಿದ್ದು, ಈ ಕ್ಯಾಲ್ಕುಲೇಟರ್ ನಮ್ಮ ಅವಶ್ಯಕ ವಿವರಗಳಾದ ವಯಸ್ಸು, ಲಿಂಗ ಮತ್ತು ಆದಾಯಗಳನ್ನು ನೀಡುತ್ತದೆ. ನಂತರ ಅವರು ನಿಮ್ಮ ಆಪ್ತರಿಗೆ ದೊರೆಯಬೇಕಾದ ಮೊತ್ತವನ್ನು ಆರಿಸಿಕೊಳ್ಳಲು ಹೇಳುತ್ತದೆ. ನಂತರ ಎಷ್ಟು ವರುಷಗಳಿಗೆ ನಿಮಗೆ ವಿಮೆ ಬೇಕಾಗುತ್ತದೆ ಎಂಬುದನ್ನು ಆರಿಸಿ ಕೊಳ್ಳಬೇಕಾಗುತ್ತದೆ. ಈ ವಿವರಗಳನ್ನು ಆಧರಿಸಿ, ಈ ಸಾಧನ ಒಂದು ವರುಷದ ಪ್ರೀಮಿಯಂ ಮತ್ತು ಒಟ್ಟು ವ್ಯಾಪ್ತಿಯ ಮೊತ್ತವನ್ನು ಲೆಕ್ಕಾಚಾರ ಮಾಡುತ್ತದೆ. ಇದಲ್ಲದೇ ಈ ಸಾಧನ ನಿಮಗೆ ವಿವಿಧ ವಿಮಾಗಾರರ ಆಯ್ಕೆ ಮತ್ತು ರೈಡರ್ ಅನ್ನು ಹೋಲಿಸಲು ಅನುವು ಮಾಡುತ್ತದೆ. ಇದು ನಿಮಗೆ ನಿಮ್ಮ ಅಗತ್ಯ ಮತ್ತು ಬಜೆಟ್ ಗೆ ಅನುಗುಣವಾಗಿಯೇ ಅತ್ಯುತ್ತಮ ಅವಧಿ ವಿಮೆಯ ಆಯ್ಕೆಯ ಸರಿಯಾದ ಮಾಹಿತಿಯುಕ್ತ ತೀರ್ಮಾನವನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.

ತೀರ್ಮಾನ

ನಿಮ್ಮ ಕುಟುಂಬದ ಭವಿಷ್ಯದ ಆರ್ಥಿಕ ಸ್ಥಿತಿಯನ್ನು ಸುರಕ್ಷಿತಗೊಳಿಸಲು ಅವಧಿ ವಿಮೆ ಒಂದು ಅತ್ಯುತ್ತಮ ಹಣಕಾಸಿನ ಸಾಧನ ಎಂದು ಪರಿಗಣಿಸಬಹುದು. ಆಡ್ ಆನ್ ಗಳಾದ

ಗಂಭೀರ ಅನಾರೋಗ್ಯದ ರೈಡರ್, ಟರ್ಮಿನಲ್ ಅನಾರೋಗ್ಯದ ರೈಡರ್ , ಆಕಸ್ಮಿಕ ಸಾವಿನ ರೈಡರ್ ಮೂಲಕ ನೀವು ನಿಮ್ಮ ವ್ಯಾಪ್ತಿಯನ್ನು ವರ್ಧಿಸಬಹುದು. ನೀವು ನಿಮ್ಮ ವಿಮೆಯ ಅಗತ್ಯಗಳನ್ನು ಅಳೆಯಬಹುದು ಅಥವಾ ಆನ್ ಲೈನ್ ಅವಧಿ ವಿಮೆ ಕ್ಯಾಲ್ಕುಲೇಟರ್ ನ ಸಹಾಯದಿಂದ ವಿವಿಧ ರೈಡರ್ ಗಳ ಮೌಲ್ಯ ಮಾಪನ ಮಾಡಬಹುದು ಅದು ನಿಮಗೆ ಬೇಕಾಗಿರುವ ವ್ಯಾಪ್ತಿಯ ಪ್ರೀಮಿಯಂ ಅನ್ನು ತಿಳಿಯಲು ಸಹಕರಿಸುತ್ತದೆ. ಅದಲ್ಲದೇ ಯಾವುದೇ ವಿಮೆ ಸಂಬಂಧಿತ ಪ್ರಶ್ನೆಗಳಿಗೆ ACKO ಅನ್ನು ಸಂಪರ್ಕಿಸಿ.

ಗಮನಿಸಿ: ಇದು ಪ್ರಾಯೋಜಿತ ಬರಹ. ಓದುಗರಿಗೆ ಪ್ರಾಥಮಿಕ ಮಾಹಿತಿ ಒದಗಿಸುವ ಉದ್ದೇಶದಿಂದ ಈ ಬರಹ ಪ್ರಕಟಿಸಲಾಗಿದೆ. ಅನುಸರಿಸುವ ಮೊದಲು ಸಂಬಂಧಿಸಿದವರಿಂದ ಸಂಪೂರ್ಣ ವಿವರ ಪಡೆದುಕೊಳ್ಳಿ.