Samsung Galaxy A56: ಮಾರುಕಟ್ಟೆಗೆ ಲಗ್ಗೆ ಇರಿಸಿದೆ ಹೊಸ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ 56, ಗ್ಯಾಲಕ್ಸಿ ಎ 36 ಮತ್ತು ಗ್ಯಾಲಕ್ಸಿ ಎ 26
ಕನ್ನಡ ಸುದ್ದಿ  /  ಜೀವನಶೈಲಿ  /  Samsung Galaxy A56: ಮಾರುಕಟ್ಟೆಗೆ ಲಗ್ಗೆ ಇರಿಸಿದೆ ಹೊಸ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ 56, ಗ್ಯಾಲಕ್ಸಿ ಎ 36 ಮತ್ತು ಗ್ಯಾಲಕ್ಸಿ ಎ 26

Samsung Galaxy A56: ಮಾರುಕಟ್ಟೆಗೆ ಲಗ್ಗೆ ಇರಿಸಿದೆ ಹೊಸ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ 56, ಗ್ಯಾಲಕ್ಸಿ ಎ 36 ಮತ್ತು ಗ್ಯಾಲಕ್ಸಿ ಎ 26

ಸ್ಯಾಮ್‌ಸಂಗ್ ನೂತನ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ ಎ 56, ಗ್ಯಾಲಕ್ಸಿ ಎ 36 ಮತ್ತು ಗ್ಯಾಲಕ್ಸಿ ಎ 26 ಪ್ರಮುಖ ಎಐ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಿದೆ. ನೂತನ ಸರಣಿ ಜಾಗತಿಕ ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, ಹಲವು ವಿಶೇಷ ಫೀಚರ್ಸ್ ಹೊಂದಿದೆ. ನೂತನ ಸ್ಮಾರ್ಟ್‌ಫೋನ್ ತಾಂತ್ರಿಕ ವೈಶಿಷ್ಟ್ಯಗಳ ವಿವರ ಇಲ್ಲಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ 56, ಗ್ಯಾಲಕ್ಸಿ ಎ 36, ಗ್ಯಾಲಕ್ಸಿ ಎ 26
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ 56, ಗ್ಯಾಲಕ್ಸಿ ಎ 36, ಗ್ಯಾಲಕ್ಸಿ ಎ 26 (Samsung)

ಸ್ಯಾಮ್‌ಸಂಗ್ ಗ್ಯಾಲಕ್ಸಿ ಸ್ಮಾರ್ಟ್‌ಫೋನ್ ನೂತನ ಎ ಸರಣಿಯ ಸ್ಮಾರ್ಟ್‌ಫೋನ್‌ ಗ್ಯಾಲಕ್ಸಿ ಎ 56, ಗ್ಯಾಲಕ್ಸಿ ಎ 36 ಮತ್ತು ಗ್ಯಾಲಕ್ಸಿ ಎ 26 ಜಾಗತಿಕವಾಗಿ ಗ್ಯಾಜೆಟ್ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ದಕ್ಷಿಣ ಕೊರಿಯಾ ಮೂಲದ ಟೆಕ್ ದೈತ್ಯ ಕಂಪನಿ ಸ್ಯಾಮ್‌ಸಂಗ್, ನೂತನ ಎ ಸರಣಿ ಸ್ಮಾರ್ಟ್‌ಫೋನ್‌ಗಳಲ್ಲಿ ಕೆಲವು ಗಮನಾರ್ಹ ನವೀಕರಣಗಳು ಮತ್ತು ಫೀಚರ್ಸ್ ಪರಿಚಯಿಸಿದೆ. ಇದು ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಹೊಂದಿರುವ ಮಾದರಿಯಾಗಿದೆ. ನೂತನ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ ಸರಣಿ ಮಾದರಿಗಳು ಕಂಪನಿಯ ಪ್ರಮುಖ ಎಐ ವೈಶಿಷ್ಟ್ಯಗಳೊಂದಿಗೆ ಬರುತ್ತವೆ, ಮತ್ತು ಇದು ಸ್ಲೋ-ಮೋಶನ್ ವಿಡಿಯೊ, ಎಐ ಆಯ್ಕೆ, ಸರ್ಕಲ್ ಟು ಸರ್ಚ್ ಮತ್ತು ಇನ್ನೂ ಹೆಚ್ಚಿನ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ 56, ಗ್ಯಾಲಕ್ಸಿ ಎ 36 ಮತ್ತು ಗ್ಯಾಲಕ್ಸಿ ಎ 26 ಕುರಿತು ಹೆಚ್ಚಿನ ವಿವರ ಇಲ್ಲಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ 56, ಗ್ಯಾಲಕ್ಸಿ ಎ 36, ಗ್ಯಾಲಕ್ಸಿ ಎ 26: ವೈಶಿಷ್ಟ್ಯಗಳು

ಸ್ಯಾಮ್‌ಸಂಗ್ ನೂತನ ಸರಣಿಯ ಸ್ಮಾರ್ಟ್‌ಫೋನ್‌ಗಳಾದ ಗ್ಯಾಲಕ್ಸಿ ಎ 56 ಮತ್ತು ಗ್ಯಾಲಕ್ಸಿ ಎ 36 6.7 ಇಂಚಿನ ಫುಲ್ ಎಚ್‌ಡಿ + ಸೂಪರ್ ಅಮೋಲೆಡ್ ಇನ್ಫಿನಿಟಿ-ಒ ಡಿಸ್‌ಪ್ಲೇ, 120 ಹೆರ್ಟ್ಜ್ ರಿಫ್ರೆಶ್ ರೇಟ್ ಮತ್ತು 1200 ಎನ್ಐಟಿಗಳವರೆಗೆ ಪೀಕ್ ಬ್ರೈಟ್ನೆಸ್‌ ಹೊಂದಿದೆ. ಗ್ಯಾಲಕ್ಸಿ ಎ 26 6.7 ಇಂಚಿನ ಫುಲ್‌ಎಚ್‌ಡಿ + ಇನ್ಫಿನಿಟಿ-ಯು ಸೂಪರ್ ಅಮೋಲೆಡ್ ಡಿಸ್‌ಪ್ಲೇ 120 ಹೆರ್ಟ್ಜ್ ರಿಫ್ರೆಶ್ ರೇಟ್‌ನೊಂದಿಗೆ ಹೊಂದಿದೆ. ಕಾರ್ಯಕ್ಷಮತೆಗಾಗಿ, ಗ್ಯಾಲಕ್ಸಿ ಎ 56 ಸ್ಯಾಮ್‌ಸಂಗ್‌ನ ಎಕ್ಸಿನೋಸ್ 1580 ಪ್ರೊಸೆಸರ್‌ ಹೊಂದಿದೆ, ಗ್ಯಾಲಕ್ಸಿ ಎ 36 ಸ್ನ್ಯಾಪ್‌ಡ್ರ್ಯಾಗನ್ 6 ಜೆನ್ 3 ಪ್ರೊಸೆಸರ್‌ನಿಂದ ನಿಯಂತ್ರಿಸಲ್ಪಡುತ್ತದೆ ಮತ್ತು ಗ್ಯಾಲಕ್ಸಿ ಎ 26 ಎಕ್ಸಿನೋಸ್ 1380 ಪ್ರೊಸೆಸರ್‌ನೊಂದಿಗೆ ಲಭ್ಯವಿದೆ.

ಸೂಪರ್ ಕ್ಯಾಮೆರಾ

ಫೋಟೊ ಮತ್ತು ವಿಡಿಯೊಗಾಗಿ ನೂತನ ಸ್ಯಾಮ್‌ಸಂಗ್ ಗ್ಯಾಲಕ್ಸಿ ಶ್ರೇಣಿಯು ಒಐಎಸ್ ಬೆಂಬಲದೊಂದಿಗೆ 50 ಎಂಪಿ ಮುಖ್ಯ ಕ್ಯಾಮೆರಾವನ್ನು ಹೊಂದಿದೆ. ಗ್ಯಾಲಕ್ಸಿ ಎ 56 ಮತ್ತು ಗ್ಯಾಲಕ್ಸಿ ಎ 36 ಸಹ 10-ಬಿಟ್ ಎಚ್‌ಡಿಆರ್ ವೀಡಿಯೊ ಬೆಂಬಲ ಹೊಂದಿದೆ. ಗ್ಯಾಲಕ್ಸಿ ಎ 56 12 ಎಂಪಿ ಅಲ್ಟ್ರಾವೈಡ್ ಕ್ಯಾಮೆರಾದೊಂದಿಗೆ ಬರುತ್ತದೆ, ಆದರೆ ಗ್ಯಾಲಕ್ಸಿ ಎ 36 ಮತ್ತು ಗ್ಯಾಲಕ್ಸಿ ಎ 36 8 ಎಂಪಿ ಅಲ್ಟ್ರಾವೈಡ್ ಕ್ಯಾಮೆರಾವನ್ನು ಹೊಂದಿವೆ. ಗ್ಯಾಲಕ್ಸಿ ಎ 56 ಮತ್ತು ಗ್ಯಾಲಕ್ಸಿ ಎ 36 5 ಎಂಪಿ ಮ್ಯಾಕ್ರೋ ಲೆನ್ಸ್ ಅನ್ನು ಹೊಂದಿದ್ದರೆ, ಗ್ಯಾಲಕ್ಸಿ ಎ 26 2 ಎಂಪಿ ಮ್ಯಾಕ್ರೋ ಲೆನ್ಸ್ ಇರಲಿದೆ.

ಬ್ಯಾಟರಿ ಮತ್ತು ಫಾಸ್ಟ್ ಚಾರ್ಜಿಂಗ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ 56, ಗ್ಯಾಲಕ್ಸಿ ಎ 36, ಗ್ಯಾಲಕ್ಸಿ ಎ 26 ಸ್ಮಾರ್ಟ್‌ಫೋನ್‌ಗಳಲ್ಲಿ 5000ಎಂಎಎಚ್ ಬ್ಯಾಟರಿ ಬೆಂಬಲಿವಿದೆ. ಗ್ಯಾಲಕ್ಸಿ ಎ 56 ಮತ್ತು ಗ್ಯಾಲಕ್ಸಿ ಎ 36 45 ವ್ಯಾಟ್ ಚಾರ್ಜಿಂಗ್ ಅನ್ನು ಬೆಂಬಲಿಸಿದರೆ, ಎ 26 25 ವ್ಯಾಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಜತೆಗೆ ಎಲ್ಲ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ 15 ಆಧಾರಿತ ಒನ್ ಯುಐ 7 ಮೂಲಕ ಕಾರ್ಯನಿರ್ವಹಿಸುತ್ತವೆ. ಸ್ಯಾಮ್‌ಸಂಗ್ 6 ವರ್ಷಗಳ ಸಾಫ್ಟ್‌ವೇರ್ ಓಎಸ್ ಅಪ್‌ಡೇಟ್ ನೀಡಲಿದೆ.

ಬೆಲೆ ಮತ್ತು ಲಭ್ಯತೆ

ಸ್ಯಾಮ್‌ಸಂಗ್ ನೂತನ ಸ್ಮಾರ್ಟ್‌ಫೋನ್ ಸರಣಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ 56 ನಾಲ್ಕು ಬಣ್ಣಗಳ ಆಯ್ಕೆಗಳಲ್ಲಿ ದೊರೆಯಲಿದೆ. ಅವ್ಸಮ್ ಗ್ರೇ, ಅವ್ಸಮ್ ಗ್ರಾಫೈಟ್, ಅವ್ಸಮ್ ಆಲಿವ್ ಮತ್ತು ಅವ್ಸಮ್ ಪಿಂಕ್. ಗ್ಯಾಲಕ್ಸಿ ಎ 36 ಅವ್ಸಮ್ ಲ್ಯಾವೆಂಡರ್, ಅವ್ಸಮ್ ಕಪ್ಪು, ಅವ್ಸಮ್ ಬಿಳಿ ಮತ್ತು ಅವ್ಸಮ್ ಲೈಮ್ ಬಣ್ಣಗಳಲ್ಲಿ ಬರಲಿದೆ. ಕೊನೆಯದಾಗಿ, ಗ್ಯಾಲಕ್ಸಿ ಎ 26 ಕಪ್ಪು, ಬಿಳಿ, ಮಿಂಟ್ ಮತ್ತು ಪೀಚ್ ಪಿಂಕ್ ಬಣ್ಣಗಳಲ್ಲಿ ಖರೀದಿಗೆ ಲಭ್ಯ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ56 8ಜಿಬಿ RAM + 128 ಜಿಬಿ ಬೆಲೆ 41,999 ರುಪಾಯಿ. ಗ್ಯಾಲಕ್ಸಿ ಎ 36 8ಜಿಬಿ RAM + 128 ಜಿಬಿ ಸ್ಟೋರೇಜ್ ಗೆ 32,999 ರೂ.ಗೆ ದೊರೆಯಲಿದೆ.

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in