ಆಹಾ, ಏನು ರುಚಿ; ಸಂಕ್ರಾಂತಿ ಹಬ್ಬಕ್ಕೆ ಮಾಡಿ ಟೇಸ್ಟಿ ಸಿಹಿ ಮುರುಕು: ಕಬ್ಬಿನ ಹಾಲಿನಿಂದ ತಯಾರಿಸುವ ಈ ವಿಶಿಷ್ಟ ತಿನಿಸಿನ ರೆಸಿಪಿ ಇಲ್ಲಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  ಆಹಾ, ಏನು ರುಚಿ; ಸಂಕ್ರಾಂತಿ ಹಬ್ಬಕ್ಕೆ ಮಾಡಿ ಟೇಸ್ಟಿ ಸಿಹಿ ಮುರುಕು: ಕಬ್ಬಿನ ಹಾಲಿನಿಂದ ತಯಾರಿಸುವ ಈ ವಿಶಿಷ್ಟ ತಿನಿಸಿನ ರೆಸಿಪಿ ಇಲ್ಲಿದೆ

ಆಹಾ, ಏನು ರುಚಿ; ಸಂಕ್ರಾಂತಿ ಹಬ್ಬಕ್ಕೆ ಮಾಡಿ ಟೇಸ್ಟಿ ಸಿಹಿ ಮುರುಕು: ಕಬ್ಬಿನ ಹಾಲಿನಿಂದ ತಯಾರಿಸುವ ಈ ವಿಶಿಷ್ಟ ತಿನಿಸಿನ ರೆಸಿಪಿ ಇಲ್ಲಿದೆ

ಸಂಕ್ರಾಂತಿ ಹಬ್ಬ ಸಮೀಪದಲ್ಲಿದೆ. ಎಲ್ಲರೂ ಈಗಾಗಲೇ ಹಬ್ಬಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ದಿನದಂದು ಪೊಂಗಲ್ ಸೇರಿದಂತೆ ಬಗೆ-ಬಗೆಯ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಈ ಬಾರಿ ಆರೋಗ್ಯಕರ, ನೈಸರ್ಗಿಕ ರುಚಿ ಹೊಂದಿರುವ ಕಬ್ಬಿನ ಹಾಲಿನಿಂದ ಮಾಡುವ ಈ ಪಾಕವಿಧಾನವನ್ನು ಪ್ರಯತ್ನಿಸಿ. ಇಲ್ಲಿದೆ ಸಿಹಿ ಮುರುಕು ಮಾಡುವ ವಿಧಾನ.

ಸಂಕ್ರಾಂತಿ ಹಬ್ಬಕ್ಕೆ ಮಾಡಿ ಟೇಸ್ಟಿ ಸಿಹಿ ಮುರುಕು ರೆಸಿಪಿ
ಸಂಕ್ರಾಂತಿ ಹಬ್ಬಕ್ಕೆ ಮಾಡಿ ಟೇಸ್ಟಿ ಸಿಹಿ ಮುರುಕು ರೆಸಿಪಿ (Vismai foods/Youtube)

ಸಂಕ್ರಾಂತಿ ಎಂದಾಗ ನೆನಪಿಗೆ ಬರುವುದು ಪೊಂಗಲ್, ಕಬ್ಬು, ಎಳ್ಳು-ಬೆಲ್ಲ ಇತ್ಯಾದಿ. ಅದರಲ್ಲೂ ಸಂಕ್ರಾಂತಿ ದಿನ ಎಳ್ಳು ಬೀರುವುದು ಅಂದ್ರೆ ಎಲ್ಲಾ ಹೆಣ್ಣು ಮಕ್ಕಳು ಸಡಗರ ಪಡುತ್ತಾರೆ. ಈ ವಿಶೇಷ ದಿನದಂದು ಬಗೆ-ಬಗೆಯ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಕಬ್ಬಿನ ರಸದಿಂದ ಮಾಡುವ ಸಿಹಿ ಮುರುಕಿನ ಬಗ್ಗೆ ಇಲ್ಲಿ ವಿವರ ನೀಡಲಾಗಿದೆ. ಈ ಸಿಹಿತಿಂಡಿ ತಯಾರಿಸುವುದು ತುಂಬಾ ಸುಲಭ. ಮಕ್ಕಳಿಗಂತೂ ಖಂಡಿತಾ ಇಷ್ಟವಾಗಬಹುದು. ಈ ರೆಸಿಪಿ ಮಾಡುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಸಿಹಿ ಮುರುಕು ಮಾಡುವ ವಿಧಾನ ಇಲ್ಲಿದೆ

ಬೇಕಾಗುವ ಸಾಮಗ್ರಿಗಳು: ಅಕ್ಕಿ ಹಿಟ್ಟು- 1 ಕಪ್, ಎಳ್ಳು- 1/2 ಟೀ ಚಮಚ, ಉಪ್ಪು- 1/2 ಟೀ ಚಮಚ, ಎಣ್ಣೆ- ಕರಿಯಲು, ಬೆಣ್ಣೆ- 2 ಟೀ ಚಮಚ, ಕಬ್ಬಿನ ರಸ- ಕಾಲು ಕಪ್.

ಮಾಡುವ ವಿಧಾನ: ಸಿಹಿ ಮುರುಕು ತಯಾರಿಸುವ ಮೊದಲು ಒಂದು ಬಟ್ಟಲಿನಲ್ಲಿ ಅಕ್ಕಿ ಹಿಟ್ಟನ್ನು ತೆಗೆದುಕೊಳ್ಳಿ. ಇದಕ್ಕೆ ಎಳ್ಳು, ಉಪ್ಪು ಮತ್ತು ಬೆಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇದಕ್ಕೆ ಕಬ್ಬಿನ ರಸವನ್ನು ಬೆರೆಸಿ, ಚಪಾತಿ ಹಿಟ್ಟಿನಂತೆ ಕಲಸಿ. ಈ ಮಿಶ್ರಣ ತೆಳುವಾಗಬಾರದು, ಹಾಗೆಯೇ ದಪ್ಪವೂ ಆಗಬಾರದು.

- ಈಗ ಕಡಾಯಿಯನ್ನು ಒಲೆ ಮೇಲೆ ಇರಿಸಿ, ಡೀಪ್ ಫ್ರೈ (ಕರಿಯಲು) ಮಾಡಲು ಸಾಕಷ್ಟು ಎಣ್ಣೆಯನ್ನು ಸೇರಿಸಿ. ಈಗ ಚಕ್ಕುಲಿ ಮಾಡುವ ಸಾಧನವನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಎಣ್ಣೆ ಸವರಿ ಹಿಟ್ಟು ಸೇರಿಸಿ. ಎಣ್ಣೆ ಬಿಸಿಯಾದಾಗ ಹಿಟ್ಟನ್ನು ಒತ್ತಿ. ಬಣ್ಣ ಬದಲಾಗುವವರೆಗೆ ಎರಡೂ ಬದಿಗಳನ್ನು ಚೆನ್ನಾಗಿ ಕರಿಯಿರಿ.

- ಕರಿದ ಸಿಹಿ ಖಾದ್ಯಗಳನ್ನು ಒಂದೊಂದಾಗಿ ತೆಗೆದು ಟಿಶ್ಯೂ ಇರಿಸಿದ ಪ್ಲೇಟ್‍ಗೆ ವರ್ಗಾಯಿಸಿ. ಇಷ್ಟಾದರೆ ರುಚಿಕರವಾದ ಕಬ್ಬಿನ ರಸದಿಂದ ಮಾಡಲಾಗುವ ಸಿಹಿ ಮುರುಕು ತಿನ್ನಲು ಸಿದ್ಧ.

ಈ ಪಾಕವಿಧಾನದಲ್ಲಿ ಕಬ್ಬಿನ ರಸ ಮತ್ತು ಅಕ್ಕಿ ಹಿಟ್ಟನ್ನು ಬಳಸಬೇಕು. ಇವೆರಡೂ ನಮ್ಮ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಸಕ್ಕರೆ ಪಾಕಕ್ಕೆ ಹೋಲಿಸಿದರೆ, ಕಬ್ಬಿನ ರಸದಿಂದ ಮಾಡಲಾಗುವ ಈ ಖಾದ್ಯ ಆರೋಗ್ಯಕ್ಕೂ ಒಳ್ಳೆಯದು, ನೈಸರ್ಗಿಕ ರುಚಿಯನ್ನೂ ನೀಡುತ್ತದೆ. ಈ ಕಬ್ಬಿನ ರಸದಿಂದ ಮಾಡಿದ ರುಚಿಕರ ಸಿಹಿ ಮುರಕನ್ನು ನೀವು ಒಮ್ಮೆ ಮಾಡಿ ನೋಡಿ. ಖಂಡಿತ ಇಷ್ಟವಾಗಬಹುದು.

Whats_app_banner