ನಿಮ್ಮ ಹೆಣ್ಣು ಮಗುವಿಗೆ A ಅಕ್ಷರದಿಂದ ಬರುವ ಸಂಸ್ಕೃತದ ಹೆಸರಿಡಬೇಕಾ; ಆದ್ಯಾ, ಅನ್ವಿತಾ ಸೇರಿ ಮುದ್ದಾದ ಹೆಸರುಗಳ ಪಟ್ಟಿ ಇಲ್ಲಿದೆ
ಮಗುವಿಗೆ ಒಳ್ಳೆ ಹೆಸರು ಇಡಬೇಕೆಂಬುದು ತಂದೆ, ತಾಯಿಯ ಆಸೆಯಾಗಿರುತ್ತೆ. ಇದಕ್ಕಾಗಿ ಸಾಕಷ್ಟು ಹೆಸರುಗಳ ಹುಡುಕಾಟ ನಡೆಸುತ್ತಾರೆ, ಪರಿಶೀಲನೆ ಮಾಡುತ್ತಾರೆ. ಒಂದು ವೇಳೆ ನೀವೇನಾದರು ನಿಮ್ಮ ಹೆಣ್ಣು ಮಗುವಿಗೆ ಸಂಸ್ಕೃತದಿಂದ ಅದರಲ್ಲೂ ಎ ಅಕ್ಷರದಿಂದ ಪ್ರಾರಂಭವಾಗುವ ಹೆಸರು ಇಡಬೇಕೆಂದು ಪ್ಲಾನ್ ಮಾಡುತ್ತಿದ್ದರೆ ನಿಮಗಾಗಿ ಒಂದಷ್ಟು ಹೆಸರುಗಳ ಪಟ್ಟಿ ಇಲ್ಲಿದೆ.

ತಮಗೆ ಮಗು ಆಗುತ್ತಿದೆ ಎಂಬ ಖುಷಿಯ ನಡುವೆಯೇ ಪೋಷಕರು ಗಂಡು ಮಗು ಹುಟ್ಟಿದರೆ ಯಾವ ಹೆಸರು ಇಡಬೇಕು, ಹೆಣ್ಣು ಮಗು ಹುಟ್ಟಿದರೆ ಯಾವ ಹೆಸರು ಇಡಬೇಕು ಎಂಬುದರ ಬಗ್ಗೆ ಚರ್ಚೆ ಮಾಡುತ್ತಾರೆ. ಮಗುವಿಗೆ ಹೆಸರು ಇಡುವ ಬಗ್ಗೆ ಮನೆಯಲ್ಲಿನ ಹಿರಿಯರೊಂದಿಗೆ ಚರ್ಚಿಸುತ್ತಾರೆ. ಆಪ್ತ ಸ್ನೇಹಿತರು ಹಾಗೂ ಸಂಬಂಧಿಕರೊಂದಿಗೂ ಚರ್ಚಿಸುತ್ತಾರೆ. ಇವರುಗಳಿಂದ ಬರುವ ಸಲಹೆಗಳನ್ನು ಪಡೆದು ಅಂತಿಮವಾಗಿ ಎಲ್ಲರೂ ಇಷ್ಟ ಪಡುವ ಹೆಸರನ್ನು ಆಯ್ಕೆ ಮಾಡುತ್ತಾರೆ. ಒಂದು ವೇಳೆ ನೀವೇನಾದರೂ ನಿಮ್ಮ ಹೆಣ್ಣು ಮಗುವಿಗೆ ಸಂಸ್ಕೃತದ ಹೆಸರು ಇಡಬೇಕೆಂದು ಯೋಚಿಸುತ್ತಿದ್ದರೆ, ಅದರಲ್ಲೂ ಎ ಅಕ್ಷರದಿಂದ ಬರುವ ಹೆಸರು ಇಡುವ ಆಲೋಚನೆಯಲ್ಲಿದ್ದರೆ ನಿಮಗಾಗಿ ಇಲ್ಲಿ ಒಂದಿಷ್ಟು ಹೆಸರುಗಳ ಪಟ್ಟಿ ಮಾಡಲಾಗಿದೆ. ಸಂಸ್ಕೃತದ ಹೆಸರುಗಳ ಜೊತೆಗೆ ಆ ಹೆಸರಿನ ಅರ್ಥವನ್ನೂ ನೀಡಲಾಗಿದೆ.
1. ಆದ್ಯಾ: ಈ ಹೆಸರು ಮೊದಲು ಅಥವಾ ಪ್ರಾಚೀನ ಎಂಬ ಅರ್ಥವನ್ನು ಕೊಡುತ್ತದೆ. ಪ್ರಾರಂಭ ಮತ್ತು ಅಂತರ್ಗತ ಶಕ್ತಿಯನ್ನು ಸಂಕೇತಿಸುವ ಈ ಹೆಸರನ್ನು ಚೊಚ್ಚಲ ಮಗುವಿಗೆ ಇಡಲು ಸೂಕ್ತವಾಗಿದೆ.
2. ಆರುಣ್ಯ: ಹಿಂದೂ ಧರ್ಮದಲ್ಲಿ ಸೂರ್ಯನಿಗೆ ಪ್ರಮುಖ ಸ್ಥಾನವನ್ನು ನೀಡಲಾಗಿದೆ. ಆರುಣ್ಯ ಹೆಸರಿನ ಅರ್ಥ ಸೂರ್ಯನ ಮೊದಲ ಕಿರಣಗಳು.
3. ಅಭಾ: ಸಂಸ್ಕೃತದಲ್ಲಿ ಮಕ್ಕಳಿಗೆ ಇಡಬಹುದಾದ ಹೆಸರುಗಳಲ್ಲಿ ತುಂಬಾ ಚಿಕ್ಕದಾಗಿರುವ ಹೆಸರುಗಳಲ್ಲಿ ಅಭಾ ಕೂಡ ಒಂದು. ಇದರ ಅರ್ಥ ಪ್ರಕಾಶಮಾನ. ಈ ಹೆಸರನ್ನು ಮಗಳಿಗೆ ಇಟ್ಟರೆ ನಿಮ್ಮ ಜೀವನದ ಸಂತೋಷವನ್ನು ಪ್ರತಿಬಿಂಬಿಸುತ್ತೆ.
4. ಅಭಿತಾ: ನಿಮ್ಮ ಪುಟ್ಟ ಮಗಳಿಗೆ ದೈವಿಕ ಸಂಬಂಧಿತ ಹೆಸರು ಇಡಲು ಬಯಸುತ್ತಿದ್ದರೆ ಅಭಿತಾ ಸೂಕ್ತವಾಗಿದೆ. ಹಿಂದೂ ಪುರಾಣದ ಪ್ರಕಾರ ಸೃಷ್ಟಿಯ ಸ್ತ್ರೀಲಿಂಗ ಭಾಗವನ್ನು ಪ್ರತಿಬಿಂಬಿಸುವ ಪಾರ್ವತಿ ದೇವಿಯ ಅರ್ಥವೇ ಅಭಿತಾ. ಇದು ಶಕ್ತಿ, ಶುದ್ದತೆ, ಪ್ರೀತಿ ಹಾಗೂ ಸೃಜನಶೀಲತೆಯನ್ನು ಸಂಕೇತಿಸುತ್ತದೆ.
5. ಅದಿತಿ: ಎ ಅಕ್ಷರದಿಂದ ಆರಂಭವಾಗುವ ಸಂಸ್ಕೃತದ ಸರಳ ಹೆಸರುಗಳಲ್ಲಿ ಅದಿತಿ ಕೂಡ ಒಂದು. ಇದು ಸಾರ್ವತ್ರಿಕ ಎಂಬ ಅರ್ಥವನ್ನು ಕೊಡುತ್ತದೆ. ನಿಮ್ಮ ಮಗುವಿಗೆ ಸಂಸ್ಕೃತ ಸರಳ ಹೆಸರು ಹುಡುಕುತ್ತಿದ್ದರೆ ಅದಿತಿ ಸೂಕ್ತವಾಗಬಹುದು.
6. ಐಶ್ವರ್ಯ: ಈ ಹೆಸರನ್ನು ಈಗಾಗಲೇ ಸಾಕಷ್ಟು ಮಂದಿ ಇಟ್ಟುಕೊಂಡಿದ್ದಾರೆ. ಇದರಲ್ಲಿ ಜನಪ್ರಿಯ ನಟಿ ಹಾಗೂ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಕೂಡ ಒಬ್ಬರು. ಐಶ್ವರ್ಯ ಹೆಸರಿನ ಅರ್ಥ ಶ್ರೀಮಂತ ಮತ್ತು ಸಮೃದ್ಧಿ. ನಿಮಗೆ ಇಷ್ಟವಾದರೆ ಈ ಹೆಸರನ್ನು ನಿಮ್ಮ ಮಗುವಿಗೆ ಇಡಬಹುದು.
7. ಅಲಿಶಾ: ಈ ಹೆಸರಿನ ಅರ್ಥ ದೇವರಿಂದ ರಕ್ಷಿಸಲ್ಪಟ್ಟಿದೆ. ಅಳಿಶಾ ಎಂಬ ಹೆಸರನ್ನು ತುಂಬಾ ಸ್ಮಾರ್ಟ್ ಎಂದು ಪರಿಗಣಿಸಲಾಗಿದೆ
8. ಅಮಲಾ: ಅತ್ಯಂತ ಶುದ್ಧವಾದದ್ದು ಎಂಬ ಅರ್ಥವನ್ನು ಕೊಡುವ ಅಮಲಾ ದಕ್ಷಿಣ ಭಾರತದಲ್ಲಿ ಜನಪ್ರಿಯವಾಗಿರುವ ಹೆಸರು. ನಿಮ್ಮ ಪುಟ್ಟ ಕಂದಮ್ಮನಿಗೆ ಈ ಸಂಸ್ಕೃತದ ಹೆಸರನ್ನು ಇಡಬಹುದು.
9. ಅಮಿತಾ: ಈ ಹೆಸರನ್ನು ಬಳಸಿರುವುದು ತುಂಬಾ ಅಪರೂಪ. ಅಮಿತಾ ಹೆಸರಿನ ಅರ್ಥ ಅಂತ್ಯವಿಲ್ಲದ್ದು. ಇದು ಕೂಡ ನಿಮ್ಮ ಮಗುವಿಗೆ ಒಂದೊಳ್ಳೆ ಆಯ್ಕೆಯಾಗಿದೆ.
10. ಅಮೋದಿನಿ: ಹೆಸರನ್ನು ಕೇಳಿದಾಗ ಸ್ವಲ್ಪ ಲೇಟೆಸ್ಟ್ ಎನಿಸುತ್ತೆ. ಅಮೋದಿನಿ ಎಂದರೆ ಸಂತೋಷದ ಹುಡುಗಿ ಎಂದರ್ಥ. ಟ್ರೆಂಡಿಯ ಹೆಸರುಗಳಲ್ಲಿ ಇದು ಕೂಡ ಒಂದಾಗಿದೆ.
11. ಅಂಜಲಿ: ಕೇಳುವುದಕ್ಕೆ ಸ್ವಲ್ಪ ಹಳೆಯ ಹೆಸರು ಎನಿಸಿದರೂ ಇವತ್ತಿಗೂ ಬಳಕೆಯಲ್ಲಿರುವ ಹೆಸರು ಅಂಜಲಿ. ಇದರ ಅರ್ಥ ಉಡುಗೊರೆ ಅಥವಾ ಕಾಣಿಕೆ. ನಿಮಗೆ ಇಷ್ಟವಾದರೆ ಈ ಹೆಸರನ್ನು ನಿಮ್ಮ ಮಗುವಿಗೆ ಇಡಬಹುದು.
12. ಅನೋಮಾ: ಇಂಗ್ಲಿಷ್ ಮಾತನಾಡುವ ದೇಶಗಳಲ್ಲಿ ಸುಲಭವಾಗಿ ಹೇಳಬಹುದಾದ ಕೆಲವೇ ಸಂಸ್ಕೃತ ಹೆಸರುಗಳಲ್ಲಿ ಅನೋಮಾ ಕೂಡ ಒಂದು. ಇದು ಪ್ರಸಿದ್ಧ ಎಂಬ ಅರ್ಥವನ್ನು ಕೊಡುತ್ತದೆ.
13. ಅನ್ವಿತಾ: ಆಕರ್ಷಿತ ಎಂಬ ಅರ್ಥವನ್ನು ಕೊಡುವ ಅನ್ವಿತಾ, ಎ ಅಕ್ಷರದಿಂದ ಪ್ರಾರಂಭವಾಗುವ ಸಂಸ್ಕೃತದ ಪದವಾಗಿದೆ.
14. ಅನುಜಾ: ಅನುಜ್ ಎಂಬ ಹೆಸರಿನ ಸ್ತ್ರೀ ಆವೃತ್ತಿಯೇ ಅನುಜಾ. ಈ ಹೆಸರನ್ನು ನಿಮ್ಮ ಎರಡನೇ ಮಗು ಅಥವಾ ನಂತರದ ಮಗುವಿಗೆ ಇಡಲು ಉತ್ತಮ ಆಯ್ಕೆಯಾಗಿದೆ. ಹೆಸರಿನ ಅರ್ಥ ತಂಗಿ.
15. ಅಪೇಕ್ಷಾ: ಹೆಣ್ಣು ಮಗುವಿಗೆ ಇಡಬಹುದಾದ ಸುಂದರ ಹೆಸರುಗಳಲ್ಲಿ ಅಪೇಕ್ಷಾ ಕೂಡ ಒಂದು. ಉತ್ಸಾಹ ಅರ್ಥವನ್ನು ನೀಡುತ್ತದೆ.
16. ಆಶಾ: ಈ ಹೆಸರಿನ ಅರ್ಥ ಆಸೆ ಅಥವಾ ಭರವಸೆ ಎಂಬ ಸಂಸ್ಕೃತದ ಪದವಾಗಿದೆ. ತುಂಬಾ ಹಳೆಯದು ಎನಿಸಿದರೂ ಕೆಲವರಿಗೆ ಈ ಹೆಸರು ಇಷ್ಟವಾಗಬಹುದು.
17. ಅಸ್ಮಿ: ತುಂಬಾ ಸರಳ ಹಾಗೂ ಚಿಕ್ಕ ಹೆಸರನ್ನು ಹುಡುಕುತ್ತಿರುವವರಿಗೆ ಅಸ್ಮಿ ಉತ್ತಮ ಆಯ್ಕೆಯಾಗಿದೆ. ಈ ಹೆಸರಿನ ಅರ್ಥ ನಾನು ಎಂಬುದಾಗಿದೆ.
