B ಮತ್ತು C ಅಕ್ಷರದಿಂದ ಹೆಣ್ಣು ಮಕ್ಕಳಿಗೆ ಇಡಬಹುದಾದ ಸಂಸ್ಕೃತದ ಹೆಸರುಗಳಿವು; ನಿಮಗೆ ಇಷ್ಟವಾದ ಹೆಸರನ್ನು ಆಯ್ಕೆ ಮಾಡಿಕೊಳ್ಳಿ
ಕನ್ನಡ ಸುದ್ದಿ  /  ಜೀವನಶೈಲಿ  /  B ಮತ್ತು C ಅಕ್ಷರದಿಂದ ಹೆಣ್ಣು ಮಕ್ಕಳಿಗೆ ಇಡಬಹುದಾದ ಸಂಸ್ಕೃತದ ಹೆಸರುಗಳಿವು; ನಿಮಗೆ ಇಷ್ಟವಾದ ಹೆಸರನ್ನು ಆಯ್ಕೆ ಮಾಡಿಕೊಳ್ಳಿ

B ಮತ್ತು C ಅಕ್ಷರದಿಂದ ಹೆಣ್ಣು ಮಕ್ಕಳಿಗೆ ಇಡಬಹುದಾದ ಸಂಸ್ಕೃತದ ಹೆಸರುಗಳಿವು; ನಿಮಗೆ ಇಷ್ಟವಾದ ಹೆಸರನ್ನು ಆಯ್ಕೆ ಮಾಡಿಕೊಳ್ಳಿ

ನಿಮ್ಮ ಹೆಣ್ಣು ಮಗುವಿಗೆ ಬಿ ಮತ್ತು ಸಿ ಅಕ್ಷರದಿಂದ ಆರಂಭವಾಗುವ ಸಂಸ್ಕೃತದ ಹೆಸರುಗಳನ್ನು ಹುಡುಕುತ್ತಿದ್ದರೆ ನಿಮಗಾಗಿ ಒಂದಿಷ್ಟು ಹೆಸರುಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ನಿಮಗೆ ಇಷ್ಟವಾದ ಹೆಸರನ್ನು ಆಯ್ಕೆ ಮಾಡಿಕೊಳ್ಳಬಹುದು. ಭಾಮಾದಿಂದ ಚಕ್ರಿಕಾವರಿಗೆ ಹೆಸರುಗಳ ಪಟ್ಟಿ ಇಲ್ಲಿದೆ.

ಬಿ ಮತ್ತು ಸಿ ಅಕ್ಷರಿಂದ ಹೆಣ್ಣು ಮಕ್ಕಳಿಗೆ ಇಡಬಹುದಾದ ಸಂಸ್ಕೃತದ ಹೆಸರುಗಳ ಪಟ್ಟಿ ಇಲ್ಲಿದೆ
ಬಿ ಮತ್ತು ಸಿ ಅಕ್ಷರಿಂದ ಹೆಣ್ಣು ಮಕ್ಕಳಿಗೆ ಇಡಬಹುದಾದ ಸಂಸ್ಕೃತದ ಹೆಸರುಗಳ ಪಟ್ಟಿ ಇಲ್ಲಿದೆ

ಸಾಮಾನ್ಯವಾಗಿ ಮನೆಗೆ ಮಹಾಲಕ್ಷ್ಮಿಯ ಆಗಮನವಾದರೆ ತಂದೆ-ತಾಯಿಗೆ ಎಲ್ಲಲ್ಲಿದ ಆನಂದ ಇರುತ್ತದೆ. ಜೊತೆಗೆ ತಮ್ಮ ಪುಟ್ಟ ಹೆಣ್ಣು ಮಗುವಿಗೆ ಯಾವ ಹೆಸರನ್ನು ಇಡಬೇಕೆಂದು ಹುಡುಕಾಟ ನಡೆಸುತ್ತಾರೆ. ಕೆಲವರು ಮೊದಲೇ ಒಂದಷ್ಟು ಹೆಸರುಗಳ ಪಟ್ಟಿ ಮಾಡಿಕೊಂಡಿರುತ್ತಾರೆ. ಇನ್ನೂ ಕೆಲವರು ಹೊಸದಾಗಿ ಟ್ರೆಂಡ್ ಆಗುವ ಹೆಸರುಗಳನ್ನು ಪರಿಶೀಲಿಸುತ್ತಾರೆ. ಮಗಳಿಗೆ ಹೆಸರಿಡಲು ಮನೆಯ ಹಿರಿಯರು, ಸಂಬಂಧಿಕರು ಹಾಗೂ ಸ್ನೇಹಿತರ ಸಹಾಯವನ್ನೂ ಪಡೆಯುತ್ತಾರೆ. ನೀವೇನಾದರೂ ನಿಮ್ಮ ಹೆಣ್ಣು ಮಗುವಿಗೆ ಬಿ ಮತ್ತು ಸಿ ಅಕ್ಷರದಿಂದ ಆರಂಭವಾಗುವ ಸಂಸ್ಕೃತದ ಹೆಸರನ್ನು ಹುಡುಕುತ್ತಿದ್ದರೆ ನಿಮಗಾಗಿ ಒಂದಿಷ್ಟು ಹೆಸರುಗಳ ಪಟ್ಟಿ ಇಲ್ಲಿದೆ.

ಭಾಮಾ: ಪ್ರಕಾಶಮಾನ, ತೇಜಸ್ಸು ಹಾಗೂ ಹೊಳಪು ಎಂಬ ಅರ್ಥವನ್ನು ಕೊಡುವ ಈ ಸಂಸ್ಕೃತದ ಹೆಸರು ನಿಮ್ಮ ಪುಟ್ಟ ಕಂದಮ್ಮನಿಗೆ ಇಟಬಹುದಾದ ಹೆಸರುಗಳಲ್ಲಿ ಒಂದಾಗಿದೆ.

ಬೆರಿಲ್: ಈ ಹೆಸರು ಹೇಳಿಕೊಳ್ಳುವಷ್ಟು ಟ್ರೆಂಡ್ ಆಗದಿದ್ದರೂ ಕೆಲವರು ಇಷ್ಟಪಡುತ್ತಾರೆ. ಬೆರಿಲ್ ಹೆಸರಿನ ಅರ್ಥ ರತ್ನದ ಕಲ್ಲು.

ಭೂಮಿ: ಇದು ಬಹಳ ಬಲವಾದ ಹೆಸರಾಗಿದೆ. ಹಳೆಯದು ಎನಿಸಿದರೂ ಸಾಕಷ್ಟು ಮಂದಿ ಈ ಹೆಸರನ್ನು ಇಷ್ಟಪಡುತ್ತಾರೆ

ಬೋಧಿ: ಬೋಧಿ ಹೆಸರಿನ ಅರ್ಥ ಜ್ಞಾನ ಮತ್ತು ಪರಮ ಜ್ಞಾನವನ್ನು ಪಡೆದವನು. ಈ ಸುಂದರವಾದ ಹೆಸರನ್ನು ನಿಮ್ಮ ಮಗಳಿಗೆ ಇಡಬಹುದು. ಅಂತಿಮವಾಗಿ ಆಯ್ಕೆ ನಿಮ್ಮದೇ ಆಗಿರುತ್ತದೆ.

ಬೋಧಿತಾ: ಪ್ರಬುದ್ಧ ಎಂಬ ಅರ್ಥವನ್ನು ಕೊಡುವ ಸಂಸ್ಕೃತದ ಟ್ರೆಂಡಿ ಹೆಸರುಗಳಲ್ಲಿ ಒಂದಾಗಿದೆ. ಬೋಧಿತಾ ಹೆಸರನ್ನು ಸಾಕಷ್ಟು ಮಂದಿ ಇಷ್ಟಪಡುತ್ತಾರೆ.

ಚಂದನ: ಸಂಸ್ಕತಿ ಮತ್ತು ಸಂಪ್ರದಾಯದೊಂದಿಗೆ ಸಂಪರ್ಕವನ್ನು ಕಲ್ಪಿಸುವ ಚಂದನ ಹೆಸರು ಕೂಡ ಚೆಂದ ಎನಿಸುತ್ತದೆ. ಚಂದನದ ಅರ್ಥ ಶ್ರೀಗಂಧ.

ಚಂದ್ರಭಾ: ನಿಮ್ಮ ಮುದ್ದು ಮಗಳಿಗೆ ಚಂದ್ರಭಾ ಹೆಸರನ್ನು ಇಡಬಹುದು. ಚಂದ್ರಭಾ ಎಂದರೆ ಚಂದ್ರ ಬೆಳಕು ಎಂಬ ಅರ್ಥವನ್ನು ಕೊಡುತ್ತದೆ.

ಚಿತ್ರಾಂಗದಾ: ಮಹಾಭಾರತದ ಮಹಾಕಾವ್ಯದಿಂದ ಅರ್ಜುನನ ಸುಂದರ ಹೆಂಡತಿಯ ಹೆಸರು ಚಿತ್ರಾಂಗದಾ. ಇದು ಒಂದು ಪರಿಮಳಯುಕ್ತ ವಸ್ತು ಆಗಿದೆ.

ಚಾರುಶೀಲ: ಸುಂದರವಾದ ಪಾತ್ರ ಅಥವಾ ವ್ಯಕ್ತಿತ್ವದ ಅರ್ಥ ಕೊಡುವ ಈ ಹೆಸರನ್ನು ಸಾಕಷ್ಟು ಮಂದಿ ತಮ್ಮ ಮಕ್ಕಳಿಗೆ ಇಟ್ಟಿರುವುದಿಲ್ಲ. ನೀವು ಈ ಹೆಸರನ್ನು ನಿಮ್ಮ ಮಗುವಿಗೆ ಇಡಬಹುದು.

ಚಕ್ರಿಕಾ: ನೀವೇನಾದರೂ ನಿಮ್ಮ ಪುಟ್ಟ ಕಂದಮ್ಮನಿಗೆ ದೇವಿಯ ಹೆಸರು ಇಡುವ ಮನಸ್ಸಿದ್ದರೆ ಚಕ್ರಿಕಾ ಹೆಸರನ್ನು ಇಡಬಹುದು. ಇದು ಹಿಂದೂ ಪುರಾಣಗಳಲ್ಲಿ ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯ ಉಲ್ಲೇಖವಾಗಿದೆ.

ಚೇತನಾ: ಈ ಹೆಸರು ಭಾರತದಲ್ಲಿ ಸಾಮಾನ್ಯವಾಗಿದೆ. ಇದರ ಅರ್ಥ ಚೈತನ್ಯ ತುಂಬಿರುವವರು. ನಿಮಗೆ ಇಷ್ಟವಾದರೆ ಈ ಹೆಸರನ್ನು ನಿಮ್ಮ ಮಗುವಿಗೆ ಪರಿಗಣಿಸಬಹುದು.

Whats_app_banner