Brain Teaser: ಸಾಂತಾಕ್ಲಾಸ್‌ ತಾತನ ಟೋಪಿ ಕಳೆದುಹೋಗಿದ್ಯಂತೆ, ಹುಡುಕಿ ಕೊಡ್ತೀರಾ; ಎಲ್ಲಿದೆ ಕಾಣಿಸ್ತಿದ್ಯಾ
ಕನ್ನಡ ಸುದ್ದಿ  /  ಜೀವನಶೈಲಿ  /  Brain Teaser: ಸಾಂತಾಕ್ಲಾಸ್‌ ತಾತನ ಟೋಪಿ ಕಳೆದುಹೋಗಿದ್ಯಂತೆ, ಹುಡುಕಿ ಕೊಡ್ತೀರಾ; ಎಲ್ಲಿದೆ ಕಾಣಿಸ್ತಿದ್ಯಾ

Brain Teaser: ಸಾಂತಾಕ್ಲಾಸ್‌ ತಾತನ ಟೋಪಿ ಕಳೆದುಹೋಗಿದ್ಯಂತೆ, ಹುಡುಕಿ ಕೊಡ್ತೀರಾ; ಎಲ್ಲಿದೆ ಕಾಣಿಸ್ತಿದ್ಯಾ

Christmas Puzzle: ಕ್ರಿಸ್‌ಮಸ್‌ ಹತ್ತಿರ ಬರುತ್ತಿದ್ದಂತೆ ಜರ್ಮನ್‌ ಮೂಲದ ಜಾರ್ಜ್‌ ಡುಡುಸ್‌ ಎಂಬಾತ ಸೋಷಿಯಲ್‌ ಮೀಡಿಯಾದಲ್ಲಿ ಒಂದು ಪಜಲ್‌ ಹಂಚಿಕೊಂಡಿದ್ದಾರೆ. ಸಾಂತಾಕ್ಲಾಸ್‌ ತಾತನ ಟೋಪಿ ಮಿಸ್‌ ಆಗಿದ್ದು ಅದನ್ನು ಹುಡುಕಿಕೊಂಡುವಂತೆ ನೆಟ್ಟಿಗರಿಗೆ ಕೇಳುತ್ತಿದ್ದಾರೆ.

ಕ್ರಿಸ್‌ಮಸ್‌ ಪಜಲ್
ಕ್ರಿಸ್‌ಮಸ್‌ ಪಜಲ್

Christmas Puzzle: ಕ್ರಿಸ್‌ಮಸ್‌ಗೆ ಇನ್ನು 5 ದಿನಗಳಷ್ಟೇ ಬಾಕಿ ಇದೆ. ಕ್ರಿಸ್‌ಮಸ್‌ ಎಂದರೆ ನಮಗೆ ತಕ್ಷಣ ನೆನಪಾಗುವುದು ಸಾಂತಾಕ್ಲಾಸ್‌. ಕೆಂಪು ಬಣ್ಣದ ಉಡುಪು ಧರಿಸಿ, ತಲೆ ಮೇಲೆ ಟೋಪಿ ಧರಿಸಿ, ಗಿಫ್ಟ್‌ ಮೂಟೆ ಹೊತ್ತು ಬರುವ ಸಾಂತಾ ತಾತ ಎಂದರೆ ಮಕ್ಕಳಿಗೆ ಬಹಳ ಪ್ರೀತಿ. ಇದೀತ ಸಾಂತಾ ತಾತನಿಗೆ ಸಂಬಂಧಿಸಿದಂತೆ ಒಂದು ಬ್ರೈನ್‌ ಟೀಸರ್‌ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಜಾರ್ಜ್‌ ಡುಡುಸ್‌ ಹಂಚಿಕೊಂಡಿರುವ ಪಜಲ್

ಜರ್ಮನಿ ಮೂಲದ ಜಾರ್ಜ್‌ ಡುಡುಸ್‌ ಎಂಬ ಡಿಜಿಟಲ್‌ ಆರ್ಟಿಸ್ಟ್‌, ಜನರು ಸದಾ ಆಕ್ಟಿವ್‌ ಇರಬೇಕೆಂಬ ಉದ್ಧೇಶದಿಂದ ಪ್ರತಿದಿನ ಸೋಷಿಯಲ್‌ ಮೀಡಿಯಾದಲ್ಲಿ ಬ್ರೈನ್‌ ಟೀಸರ್‌ ಹಂಚಿಕೊಳ್ಳುತ್ತಾರೆ. ಕ್ರಿಸ್‌ಮಸ್‌ ಹತ್ತಿರ ಬರುತ್ತಿದೆ. ಈ ಸಂದರ್ಭದಲ್ಲಿ ಜಾರ್ಜ್‌, ಕ್ರಿಸ್‌ಮಸ್‌ ಪಜಲ್‌ ಹಂಚಿಕೊಂಡಿದ್ದಾರೆ. ಈ ಬಾರಿ ಅವರು ಪಜಲ್‌ ಪ್ರಿಯರಿಗೆ ಸಾಂತಾ ತಾತ ಕಳೆದುಕೊಂಡಿರುವ ಟೋಪಿಯನ್ನು ಹುಡುಕಿಕೊಡಲು ಕೇಳುತ್ತಿದ್ದಾರೆ. ಆದರೆ ಆ ಟೋಪಿ ಹುಡುಕಲು ನಿಮಗೆ ಹೆಚ್ಚಿನ ಸಮಯ ಇಲ್ಲ, ಇರೋದು ಕೆಲವೇ ಕೆಲವು ಸೆಕೆಂಡ್‌ಗಳು ಮಾತ್ರ, ಈ ಚಾಲೆಂಜ್‌ ಸ್ವೀಕರಿಸಿ ಸಾಂತಾಕ್ಲಾಸ್‌ ತಾತನ ಟೋಪಿ ಹುಡುಕಿಕೊಡಲು ನೀವು ರೆಡಿ ಇದ್ದೀರಾ?

ಹ್ಯಾಟ್‌ ಕಳೆದುಕೊಂಡ ಸಾಂತಾಕ್ಲಾಸ್

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ಫೋಟೋದಲ್ಲಿ ಸಾಂತಾನ ಹ್ಯಾಟ್‌ ಹುಡುಕಿಕೊಡುವಿರಾ ಎಂದು ಪ್ರಶ್ನಿಸಲಾಗಿದೆ. ಈ ಫೋಟೋದಲ್ಲಿ ಕೆಲವು ಸ್ನೋ ಮ್ಯಾನ್‌ಗಳು ಕ್ರಿಸ್‌ಮಸ್‌ ಮರವನ್ನು ಡೆಕೊರೇಷನ್‌ ಮಾಡುತ್ತಿದ್ದಾರೆ. ಇನ್ನೂ ಕೆಲವು ಸ್ನೋಮೆನ್‌ ಕ್ಯಾಂಡಿ ಕೇನ್ಸ್‌ ಹಿಡಿದಿದ್ದಾರೆ. ಅವರೆಲ್ಲರ ನಡುವೆ ಸಾಂತಾ ತಾತ ಸೊಂಟದ ಮೇಲೆ ಕೈ ಇಟ್ಟುಕೊಂಡು ಬೇಸರದಿಂದ ನಿಂತಿದ್ದಾರೆ. ಆದರೆ ತಲೆಯಲ್ಲಿ ಹ್ಯಾಟ್‌ ಇಲ್ಲ. ನೀವಾದರೂ ಆ ಹ್ಯಾಟ್‌ ಹುಡುಕಿಕೊಟ್ಟು ಸಹಾಯ ಮಾಡುವಿರಾ? ಆ ಕ್ರಿಸ್‌ಮಸ್‌ ಟ್ರೀ, ಕೆಂಪು ಬಟ್ಟೆ ಧರಿಸಿ ನಿಂತಿರುವ ಸ್ನೋ ಮ್ಯಾನ್‌ಗಳ ನಡುವೆ ಸಾಂತಾ ತಾತನ ಕೆಂಪು ಟೋಪಿ ನಿಮಗೆ ಕಾಣಿಸುತ್ತಿದ್ಯಾ?

ಸ್ನೋಮೆನ್‌ಗಳ ನಡುವೆ ಟೋಪಿ ಇದೆ

ಜಾರ್ಜ್‌ ಡುಡುಸ್‌, ಈ ಬ್ರೈನ್‌ ಟೀಸರನ್ನು ಮಂಗಳವಾರ ಹಂಚಿಕೊಂಡಿದ್ದಾರೆ. ಅನೇಕರು ಈ ಪಜಲನ್ನು ತಮ್ಮ ಸ್ನೇಹಿತರು, ಕುಟುಂಬದೊಂದಿಗೆ ಶೇರ್‌ ಮಾಡಿದ್ದಾರೆ. ಕೆಲವರು ಸಾಂತಾ ತಾತನ ಟೋಪಿ ಹುಡುಕಿದ್ದಾರೆ. ಜೊತೆಗೆ ಕ್ರಿಸ್‌ಮಸ್‌ ಶುಭಾಶಯವನ್ನೂ ಕೋರಿದ್ಧಾರೆ. ತಾತನ ಹ್ಯಾಟ್‌ ಸಿಕ್ತು, ಮೇರಿ ಕ್ರಿಸ್‌ಮಸ್‌, ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ, ಹ್ಯಾಟ್‌ ಸಿಕ್ತು, ಪಜಲ್‌ ತುಂಬಾ ಚೆನ್ನಾಗಿದೆ ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ. ಇನ್ನೊಬ್ಬರು 5 ಸೆಕೆಂಡ್‌ ಸಮಯದಲ್ಲೇ ಪಜಲ್‌ ಬ್ರೇಕ್‌ ಮಾಡಿದೆ. ಬಹಳ ಸುಲಭ, ಸ್ನೋ ಮ್ಯಾನ್‌ಗಳ ಮಧ್ಯದಲ್ಲೇ ಸಾಂತಾಕ್ಲಾಸ್‌ ಟೋಪಿ ಇದೆ ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿ ಕ್ರಿಸ್‌ಮಸ್‌ ಶುಭ ಕೋರಿದ್ದಾರೆ.

ಹಾ ಅವರೆಲ್ಲಾ ಸಾಂತಾ ಕ್ಲಾಸ್‌ ತಾತನ ಹ್ಯಾಟ್‌ ಹುಡುಕಿದ್ದಾರೆ. ನಿಮಗೆ ಕಾಣಿಸಿದಾ ಇಲ್ಲವಾ? ಬೇಗ ಹುಡುಕಿ, ಕಾಮೆಂಟ್‌ ಮಾಡಿ.‌

Whats_app_banner