Saturday Motivation: ನಿಮಗೂ ಕೋಪ ಹೆಚ್ಚು, ತಾಳ್ಮೆ ಕಡಿಮೆನಾ; ಗೌತಮ ಬುದ್ಧ ತನ್ನ ಶಿಷ್ಯರಿಗೆ ಹೇಳಿದ ಈ ಸಾಲುಗಳನ್ನೊಮ್ಮೆ ಓದಿ-saturday motivation gautama buddha taught about patience how to control angry to his followers rsm ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Saturday Motivation: ನಿಮಗೂ ಕೋಪ ಹೆಚ್ಚು, ತಾಳ್ಮೆ ಕಡಿಮೆನಾ; ಗೌತಮ ಬುದ್ಧ ತನ್ನ ಶಿಷ್ಯರಿಗೆ ಹೇಳಿದ ಈ ಸಾಲುಗಳನ್ನೊಮ್ಮೆ ಓದಿ

Saturday Motivation: ನಿಮಗೂ ಕೋಪ ಹೆಚ್ಚು, ತಾಳ್ಮೆ ಕಡಿಮೆನಾ; ಗೌತಮ ಬುದ್ಧ ತನ್ನ ಶಿಷ್ಯರಿಗೆ ಹೇಳಿದ ಈ ಸಾಲುಗಳನ್ನೊಮ್ಮೆ ಓದಿ

Saturday Motivation: ಈ ಪ್ರಪಂಚದಲ್ಲಿ ಕೋಪದಿಂದ ಎಷ್ಟೋ ವಿನಾಶಗಳು ನಡೆದುಹೋಗಿವೆ. ಆದರೆ ಕೋಪ ಬಂದಾಗ ಪ್ರತಿಕ್ರಿಯಿಸದೆ ತಾಳ್ಮೆಯಿಂದ ಇದ್ದರೆ ಜಗತ್ತನ್ನೇ ಗೆಲ್ಲಬಹುದು ಎಂದು ಗೌತಮ ಬುದ್ಧ ಸಂದೇಶ ನೀಡಿದ್ದಾನೆ. ಆದ್ದರಿಂದ ಪ್ರತಿಯೊಬ್ಬರೂ ಜೀವನದಲ್ಲಿ ತಾಳ್ಮೆ ಅಳವಡಿಸಿಕೊಳ್ಳುವುದು ಬಹಳ ಅವಶ್ಯಕ.

ಜೀವನಕ್ಕೊಂದು ಸ್ಫೂರ್ತಿ ಮಾತು
ಜೀವನಕ್ಕೊಂದು ಸ್ಫೂರ್ತಿ ಮಾತು (PC: Unsplash)

Saturday Motivation: ಭೂಮಿ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಗೆ ಕೋಪ ಇರುತ್ತದೆ. ಅದರಲ್ಲೂ ಮನುಷ್ಯ ತಾಳ್ಮೆಯಿಂದ ಇರದೆ ಕೋಪ ಹೆಚ್ಚಿಸಿಕೊಂಡು ಎಷ್ಟೋ ಅಚಾತುರ್ಯಗಳು ನಡೆದುಹೋಗಿವೆ. ಆದರೆ ಕೋಪದಲ್ಲಿ ಕೊಯ್ದುಕೊಂಡು ಮೂಗು ವಾಪಸ್‌ ಬರುವುದಿಲ್ಲ ಎಂಬ ಮಾತಿನಂತೆ ಕೋಪದಿಂದ ನಾವು ಆಡಿದ ಮಾತುಗಳು, ಕೋಪದಿಂದ ನಾವು ತೆಗೆದುಕೊಂಡ ನಿರ್ಧಾರಗಳು ಮುಂದೆ ಒಂದು ದಿನ ನಮಗೇ ಸಮಸ್ಯೆ ಆಗಬಹುದು. ಆದ್ದರಿಂದ ಜೀವನದಲ್ಲಿ ತಾಳ್ಮೆ ಎಷ್ಟು ಮುಖ್ಯ ಎಂಬುದನ್ನು ಗೌತಮ ಬುದ್ದನ ಈ ಕಥೆಯಿಂದ ತಿಳಿದುಕೊಳ್ಳಿ.

ಸಿದ್ಧಾರ್ಥನು ರಾಜ್ಯವನ್ನು ತೊರೆದು ಗೌತಮ ಬುದ್ಧನಾಗಿ ಮರದ ಕೆಳಗೆ ಕುಳಿತು ಧ್ಯಾನ ಮಾಡುತ್ತಾನೆ. ಧ್ಯಾನ ಮುಗಿಸುವ ಹೊತ್ತಿಗೆ ಆತನಿಗೆ ಬಾಯಾರಿಕೆಯಾದ್ದರಿಂದ ಒಬ್ಬ ಶಿಷ್ಯನನ್ನು ಕರೆದು ಹತ್ತಿರದ ಕೊಳದಿಂದ ನೀರು ತರಲು ಹೇಳಿದರು. ಶಿಷ್ಯನು ಒಂದು ಚಿಕ್ಕ ಪಾತ್ರೆ ತೆಗೆದುಕೊಂಡು ಕೊಳದ ಕಡೆಗೆ ಹೋಗುತ್ತಾನೆ. ಕೆರೆ ಬಳಿ ಹೋದಾಗ ಕೆಲವು ಕಾಡು ಪ್ರಾಣಿಗಳು ನೀರು ಕುಡಿಯುತ್ತಿದ್ದವು. ಕೆರೆ ಕೆಸರುಮಯವಾದಂತೆ ತೋರಿತು. ಆತ ತಕ್ಷಣ ಬುದ್ಧನ ಬಳಿಗೆ ಬಂದು ಕ್ಷಮೆ ಕೇಳಿ ನೀರು ಕೆಸರುಮಯವಾಗಿದೆ, ಕ್ಷಮಿಸಿ ನೀರು ತರಲಾಗಲಿಲ್ಲ, ಅಲ್ಲಿ ಪ್ರಾಣಿಗಳು ನೀರು ಕುಡಿಯುತ್ತಿವೆ ಎನ್ನುತ್ತಾನೆ. ಸ್ವಲ್ಪ ಸಮಯದ ನಂತರ ಮತ್ತೆ ಬುದ್ಧ , ತನ್ನ ಶಿಷ್ಯನಿಗೆ ನೀರು ತರಲು ಹೇಳುತ್ತಾನೆ.

ತಾಳ್ಮೆ ಕಳೆದುಕೊಂಡ ಬುದ್ಧನ ಶಿಷ್ಯ

ಎರಡನೇ ಬಾರಿಗೆ ಕೂಡಾ ಶಿಷ್ಯ ಕೆರೆಯ ಬಳಿ ಹೋದಾಗ ಮತ್ತೆ ಪ್ರಾಣಿಗಳು ಅಲ್ಲಿ ನೀರು ಕುಡಿಯುತ್ತಿದ್ದವು. ಸ್ವಲ್ಪ ಸಮಯದ ನಂತರ ಮತ್ತೆ ನೀರು ತರಲು ಹೇಳಿದಾಗ ಆ ಶಿಷ್ಯ ಕೋಪಗೊಳ್ಳುತ್ತಲೇ ಮತ್ತೆ ಕೆರೆ ಬಳಿ ಹೋಗುತ್ತಾನೆ. ಆದರೆ ಆ ಸಮಯದಲ್ಲಿ ಕೆರೆಯ ನೀರು ಸ್ಫಟಿಕದಂತೆ ಮಿಂಚುತ್ತಿತ್ತು. ಶಿಷ್ಯನು ಕೂಡಲೇ ಬುದ್ಧನಿಗೆ ನೀರು ತಂದುಕೊಡುತ್ತಾನೆ. 2 ಬಾರಿ ಕೂಡಾ ಕೆರೆ ನೀರು ಕೆಸರಿನಂತೆ ಇತ್ತು. 3ನೇ ಬಾರಿ ಹರಳಿನಂತೆ ಮಿಂಚುತ್ತಿತ್ತು ಅದು ಹೇಗೆ ಸಾಧ್ಯ ಎಂದು ಕೇಳುತ್ತಾನೆ. ಇದಕ್ಕೆ ಉತ್ತರಿಸುವ ಗೌತಮ ಬುದ್ಧ, ಎಲ್ಲವೂ ಸಮಯ ತೆಗೆದುಕೊಳ್ಳುತ್ತದೆ. ಪ್ರಾಣಿಗಳು ನೀರು ಕುಡಿಯುವುದನ್ನು ನೀವು ನೋಡಿದೆ, ಅವುಗಳು ಓಡಾಡಿದ್ದರಿಂದ ನೀರು ಕೆಸರಾಯಿತು. ಆದರೆ ನೀನು ಸ್ವಲ್ಪ ಹೊತ್ತು ಅಲ್ಲೇ ನಿಂತು ತಾಳ್ಮೆಯಿಂದ ಇದ್ದಿದ್ದರೆ ಹೀಗೆ 2-3 ಬಾರಿ ಸುತ್ತಾಡುವ ಅವಶ್ಯಕತೆ ಇರಲಿಲ್ಲ.

ನಿಮ್ಮಲ್ಲಿ ತಾಳ್ಮೆ ಮತ್ತು ಸಹನೆ ಹೆಚ್ಚಿದಷ್ಟು ಜೀವನದಲ್ಲಿ ಶಾಂತಿಯುತವಾಗಿರುತ್ತೀರಿ, ಕೋಪ ಬಂದಾಗ ಸ್ವಲ್ಪ ತಾಳ್ಮೆ ವಹಿಸಿದರೆ ಸಮಸ್ಯೆ ಬಗೆಹರಿಯುತ್ತದೆ. ಕೆಲ ಕ್ಷಣ ಸಿಟ್ಟನ್ನು ಹತೋಟಿಯಲ್ಲಿಟ್ಟುಕೊಳ್ಳಲು ಸಾಧ್ಯವಾಗದೆ ಪ್ರಪಂಚದಲ್ಲಿ ಅನೇಕ ವಿನಾಶಗಳು ಸಂಭವಿಸಿವೆ. ಕೋಪವು ಮನುಷ್ಯನ ಗುಣಗಳಲ್ಲಿ ಒಂದಾಗಿದೆ. ನಮಗೆ ಇಷ್ಟವಿಲ್ಲದ ವಿಷಯ ನಡೆದ ತಕ್ಷಣ ಕೋಪ ಬರುತ್ತದೆ. ಕೋಪ ಬಂದಾಗ ತಕ್ಷಣ ಪ್ರತಿಕ್ರಿಯಿಸಬೇಡಿ. ನಿಮ್ಮ ಮನಸ್ಸಿಗೆ ಸ್ವಲ್ಪ ಸಮಯ ನೀಡಿ, ನಂತರ ನಿಮ್ಮ ಕೋಪ ತಾನಾಗೇ ಶಾಂತವಾಗುತ್ತದೆ. ಯಾವುದೇ ವಿನಾಶ ಸಂಭವಿಸುವುದಿಲ್ಲ.

ಪ್ರತಿಯೊಬ್ಬ ಮನುಷ್ಯನಿಗೂ ಕೋಪ ಇರುತ್ತದೆ. ಅದೊಂದು ಸಹಜ ಭಾವನೆ, ನಮ್ಮ ಸುತ್ತಲಿನ ಪರಿಸ್ಥಿತಿಗೆ ಅನುಗುಣವಾಗಿ ಆ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಕೋಪವನ್ನು ನಿಯಂತ್ರಿಸಲು ತಾಳ್ಮೆ ಅಗತ್ಯ. ಹಾಗೇ ಕೋಪ ಬಂದಾಗ ಬಾಯಿ ಜಾರದೆ ಯಾವುದೇ ನಿರ್ಧಾರ ತೆಗೆದುಕೊಳ್ಳದೇ ತಾಳ್ಮೆಯಿಂದ ವರ್ತಿಸಬೇಕು. ಕೋಪ ನಿಯಂತ್ರಣದಲ್ಲಿಟ್ಟುಕೊಂಡರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ನೀವು ಯಾರೊಂದಿಗೂ ದ್ವೇಷ ಸಾಧಿಸುವುದಿಲ್ಲ ಎಂದು ಬುದ್ಧಿ ಮಾತು ಹೇಳುತ್ತಾನೆ.

ಕೋಪ ಬಂದಾಗ ಪ್ರತಿಕ್ರಿಯಿಸಬೇಡಿ

ಕ್ರೋಧವನ್ನು ಜಯಿಸುವವನು ಈ ಜಗತ್ತನ್ನು ಗೆಲ್ಲುತ್ತಾನೆ. ಕೋಪವು ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ನೀವು ಆರೋಗ್ಯವನ್ನು ಕಾಪಾಡಿಕೊಳ್ಳಲು ಬಯಸಿದರೆ ಕೋಪವನ್ನು ನಿಯಂತ್ರಿಸಿ. ಇತರರ ಮೇಲೆ ಕೋಪ ವ್ಯಕ್ತಪಡಿಸುವುದರಿಂದ ನೀವು ಶಾಂತವಾಗಿರಬಹುದು. ಆದರೆ ಇದು ಇತರರಿಗೆ ಸಾಕಷ್ಟು ನೋವುಂಟುಮಾಡುತ್ತದೆ. ಅದೇ ಸಮಯದಲ್ಲಿ, ಕೋಪಗೊಳ್ಳುವುದು ನಿಮ್ಮ ಆರೋಗ್ಯವನ್ನು ಹಾಳುಮಾಡುತ್ತದೆ. ಹೆಚ್ಚು ಕೋಪಗೊಳ್ಳುವವರಿಗೆ ತಲೆನೋವು ಬರುತ್ತದೆ. ರಕ್ತದೊತ್ತಡವೂ ಹೆಚ್ಚುತ್ತದೆ. ಉಸಿರಾಟದ ವೇಗ ಹೆಚ್ಚಾಗುತ್ತದೆ. ಇದೆಲ್ಲಾ ಒಳ್ಳೆಯದಲ್ಲ. ಅಲ್ಲದೆ, ಹೆಚ್ಚಾಗಿ ಕೋಪಗೊಳ್ಳುವವರಿಗೆ ಮಾನಸಿಕ ಸಮಸ್ಯೆಗಳು ಬೇಗನೆ ಬರುತ್ತವೆ. ಆತಂಕ ಮತ್ತು ಖಿನ್ನತೆಯು ಅವರಿಗೆ ಯಾವುದೇ ಸಮಯದಲ್ಲಿ ಸಂಭವಿಸುವ ಸಾಧ್ಯತೆಯಿದೆ. ಆದ್ದರಿಂದ ಕೋಪವನ್ನು ಹೇಗೆ ನಿಯಂತ್ರಿಸಬೇಕೆಂದು ಕಲಿಯಿರಿ.

mysore-dasara_Entry_Point