FD rates: ಈ ಬ್ಯಾಂಕ್ಗಳಲ್ಲಿ 3 ವರ್ಷದ ಎಫ್ಡಿ ಮಾಡಿದ್ರೆ ನಿಮಗೆ ಸಿಗತ್ತೆ ಅಧಿಕ ಬಡ್ಡಿ
Fixed deposits: ಸಾರ್ವಜನಿಕ ಹಾಗೂ ಖಾಸಗಿ ವಲಯದ ಬ್ಯಾಂಕುಗಳ ಪೈಕಿ 3 ವರ್ಷದ ಸ್ಥಿರ ಠೇವಣಿಗೆ ಹೆಚ್ಚು ಬಡ್ಡಿದರ ನೀಡುವ ಬ್ಯಾಂಕ್ ಯಾವುದು? ಯಾವ್ಯಾವ ಬ್ಯಾಂಕ್ಗಳಳು ಎಷ್ಟು ಬಡ್ಡಿ ನೀಡುತ್ತೆ ಎಂಬುದರ ಮಾಹಿತಿ ಇಲ್ಲಿದೆ.
ನೀವು ಬ್ಯಾಂಕ್ಗಳಲ್ಲಿ ಹಣ ಉಳಿತಾಯ ಮಾಡಬೇಕೆಂದು ಯೋಚಿಸುತ್ತಿದ್ದರೆ ಈ ಕೆಳಕಂಡ ಬ್ಯಾಂಕ್ಗಳಲ್ಲಿನ ಸ್ಥಿರ ಠೇವಣಿ (Fixed deposits) ಬಗ್ಗೆ ತಿಳಿದುಕೊಳ್ಳಿ. ಇಲ್ಲಿ ನೀವು 3 ವರ್ಷದ ಎಫ್ಡಿ ಮಾಡಿದ್ರೆ ನಿಮಗೆ ಶೇ 7.25 ವರೆಗೆ ಬಡ್ಡಿ ಸಿಗತ್ತೆ. ಹೆಚ್ಚು ಬಡ್ಡಿ ನೀಡುವ 10 ಬ್ಯಾಂಕ್ಗಳ ಲಿಸ್ಟ್ ಇಲ್ಲಿದೆ. ಭವಿಷ್ಯದಲ್ಲಿ ಸ್ಥಿರ ಠೇವಣಿಗಳು ನಿಮಗೆ ಸಹಾಯಕ್ಕೆ ಬರುತ್ತದೆ.
ಬ್ಯಾಂಕ್ ಆಫ್ ಬರೋಡಾ: ಸಾರ್ವಜನಿಕ ವಲಯದ ಬ್ಯಾಂಕುಗಳ ಪೈಕಿ ಬ್ಯಾಂಕ್ ಆಫ್ ಬರೋಡಾ ಅತ್ಯುತ್ತಮ ಬಡ್ಡಿದರ ನೀಡುವ ಬ್ಯಾಂಕ್ ಆಗಿದೆ. ಇಲ್ಲಿ ನೀವು ಮೂರು ವರ್ಷಗಳ ಎಫ್ಡಿಗೆ 1 ಲಕ್ಷ ರೂಪಾಯಿ ಡೆಪಾಟಿಟ್ ಮಾಡಿದರೆ ಮೂರು ವರ್ಷದ ಬಳಿಕ ನಿಮಗೆ ಶೇ 7.25 ವರೆಗೆ ಬಡ್ಡಿ ಸಿಗುತ್ತದೆ. ಅಂದರೆ 1.25 ಲಕ್ಷ ರೂಪಾಯಿ ನಿಮಗೆ ಸಿಗುತ್ತದೆ.
ಆ್ಯಕ್ಸಿಸ್ ಬ್ಯಾಂಕ್: ಮೂರು ವರ್ಷಗಳ ಎಫ್ಡಿ ಮೇಲೆ ಆ್ಯಕ್ಸಿಸ್ ಬ್ಯಾಂಕ್ 7.10 ಪ್ರತಿಶತದವರೆಗೆ ಬಡ್ಡಿದರಗಳನ್ನು ನೀಡುತ್ತದೆ. ಖಾಸಗಿ ವಲಯದ ಬ್ಯಾಂಕುಗಳಲ್ಲಿ, ಈ ಬ್ಯಾಂಕ್ ಅತ್ಯುತ್ತಮ ಬಡ್ಡಿದರಗಳನ್ನು ನೀಡುತ್ತದೆ. ಇಲ್ಲಿ ಹೂಡಿಕೆ ಮಾಡಿದ 1 ಲಕ್ಷ ರೂಪಾಯಿ ಮೂರು ವರ್ಷಗಳಲ್ಲಿ 1.24 ಲಕ್ಷಕ್ಕೆ ಬೆಳೆಯುತ್ತದೆ.
ಎಚ್ಡಿಎಫ್ಸಿ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್: ಈ ಮೂರೂ ಬ್ಯಾಂಕ್ಗಳು ಮೂರು ವರ್ಷಗಳ FD ಗಳ ಮೇಲೆ 7 ಪ್ರತಿಶತದವರೆಗೆ ಬಡ್ಡಿದರಗಳನ್ನು ನೀಡುತ್ತವೆ. ಇಲ್ಲಿ ಹೂಡಿಕೆ ಮಾಡಿದ 1 ಲಕ್ಷ ರೂ.ಗಳ ಮೊತ್ತವು ಮೂರು ವರ್ಷಗಳಲ್ಲಿ 1.23 ಲಕ್ಷಕ್ಕೆ ಬೆಳೆಯುತ್ತದೆ.
ಕೆನರಾ ಬ್ಯಾಂಕ್: ಇದು ಮೂರು ವರ್ಷಗಳ ಸ್ಥಿರ ಠೇವಣಿ ಮೇಲೆ 6.80 ಪ್ರತಿಶತದವರೆಗೆ ಬಡ್ಡಿದರಗಳನ್ನು ನೀಡುತ್ತದೆ. ಇಲ್ಲಿ 1 ಲಕ್ಷ ರೂ ಹೂಡಿಕೆ ಮಾಡಿದರೆ ಮೂರು ವರ್ಷಗಳಲ್ಲಿ 1.22 ಲಕ್ಷ ರೂ. ನಿಮಗೆ ಸಿಗುತ್ತದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ): ಮೂರು ವರ್ಷಗಳ ಫಿಕ್ಸಡ್ ಡೆಪಾಸಿಟ್ ಮೇಲೆ 6.75 ಪ್ರತಿಶತದವರೆಗೆ ಬಡ್ಡಿದರಗಳನ್ನು ನೀಡುತ್ತದೆ. ಇಲ್ಲಿ ಹೂಡಿಕೆ ಮಾಡಿದ 1 ಲಕ್ಷ ರೂ.ಗಳ ಮೊತ್ತವು ಮೂರು ವರ್ಷಗಳಲ್ಲಿ 1.22 ಲಕ್ಷಕ್ಕೆ ಬೆಳೆಯುತ್ತದೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಬ್ಯಾಂಕ್ ಆಫ್ ಇಂಡಿಯಾ: ಈ ಎರಡೂ ಬ್ಯಾಂಕ್ಗಳು ಮೂರು ವರ್ಷಗಳ ಎಫ್ಡಿ ಮೇಲೆ 6.50 ಪ್ರತಿಶತದವರೆಗೆ ಬಡ್ಡಿದರವನ್ನು ನೀಡುತ್ತವೆ. ಇಲ್ಲಿ ಹೂಡಿಕೆ ಮಾಡಿದ 1 ಲಕ್ಷ ರೂ.ಗಳ ಮೊತ್ತವು ಮೂರು ವರ್ಷಗಳಲ್ಲಿ 1.21 ಲಕ್ಷಕ್ಕೆ ಬೆಳೆಯುತ್ತದೆ.
ಇಂಡಿಯನ್ ಬ್ಯಾಂಕ್: ಮೂರು ವರ್ಷಗಳ ಸ್ಥಿರ ಠೇವಣಿ ಮೇಲೆ ಶೇಕಡಾ 6.25 ರವರೆಗೆ ಬಡ್ಡಿದರಗಳನ್ನು ನೀಡುತ್ತದೆ. ಇಲ್ಲಿ 1 ಲಕ್ಷ ರೂ ಹೂಡಿಕೆ ಮಾಡಿದರೆ ಮೂರು ವರ್ಷಗಳಲ್ಲಿ 1.20 ಲಕ್ಷ ರೂ. ನಿಮಗೆ ಸಿಗುತ್ತದೆ.