sexual problem and food: ಲೈಂಗಿಕ ಸಮಸ್ಯೆಯೇ? ಈ ಆಹಾರಗಳು ನಿಮ್ಮಲ್ಲಿ ಲೈಂಗಿಕಶಕ್ತಿ ಹೆಚ್ಚಿಸಬಹುದು ನೋಡಿ
sexual problem and food: ದೈಹಿಕ ಹಾಗೂ ಭಾವನಾತ್ಮಕ ಆರೋಗ್ಯ ಸುಧಾರಣೆಗೆ ಆರೋಗ್ಯಕರ ಲೈಂಗಿಕ ಜೀವನ ಅವಶ್ಯ. ನಾವು ಸೇವಿಸುವ ಆಹಾರ ಪದಾರ್ಥಗಳು ನಮ್ಮ ಲೈಂಗಿಕ ಜೀವನವನ್ನು ಸುಧಾರಿಸುತ್ತವೆ ಎಂದರೆ ನಂಬಲೇಬೇಕು.

ಇಂದಿನ ಒತ್ತಡದ ಜೀವನಶೈಲಿ, ಆಹಾರಪದ್ಧತಿ, ಕಲುಷಿತ ವಾತಾವರಣ ಇದರೊಂದಿಗೆ ಮಧ್ಯಪಾನ, ಧೂಮಪಾನ, ಡ್ರಗ್ಸ್ ಸೇವನೆ ಈ ಹಲವು ಕಾರಣಗಳಿಂದ ಹಲವು ಜನರು ಲೈಂಗಿಕ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಇದರೊಂದಿಗೆ ಹೃದಯ ಸಂಬಂಧಿ ಕಾಯಿಲೆಗಳು, ನಿಮಿರುವಿಕೆಯ ತೊಂದರೆ, ಮಧುಮೇಹ, ರಕ್ತದೊತ್ತಡ ಈ ಕಾರಣಗಳೂ ಲೈಂಗಿಕ ಸುಖಕ್ಕೆ ಅಡ್ಡಿ ಪಡಿಸಬಹುದು.
ಆದರೆ ಆರೋಗ್ಯಕರ ಲೈಂಗಿಕ ಕ್ರಿಯೆ ದೈಹಿಕ ಹಾಗೂ ಭಾವನಾತ್ಮಕ ಆರೋಗ್ಯಕ್ಕೆ ಅವಶ್ಯ. ನಾವು ಸೇವಿಸುವ ಆಹಾರ ಪದಾರ್ಥಗಳು ನಮ್ಮ ಲೈಂಗಿಕ ಜೀವನವನ್ನು ಸುಧಾರಿಸುತ್ತವೆ ಎಂದರೆ ನಂಬಲೇಬೇಕು.
ಪೌಷ್ಟಿಕ ಆಹಾರ ಸೇವನೆಯಿಂದ ಲೈಂಗಿಕ ಜೀವನಕ್ಕೆ ಹಲವು ರೀತಿಯ ಉಪಯೋಗಗಳಿವೆ. ಇವುಗಳು ಕಾಮವನ್ನು ಉತ್ತೇಜಿಸುತ್ತವೆ, ರಕ್ತಪರಿಚಲನೆಯನ್ನು ಸುಧಾರಿಸುವ ಜೊತೆಗೆ ಹೃದಯ ಆರೋಗ್ಯಕ್ಕೂ ಉತ್ತಮ. ಜೊತೆಗೆ ದೇಹಕ್ಕೆ ತ್ರಾಣ ನೀಡುತ್ತವೆ. ಪೌಷ್ಟಿಕಾಂಶ ಸಮೃದ್ಧವಾಗಿರುವ ತರಕಾರಿಗಳು, ಲೀನ್ ಪ್ರೊಟೀನ್, ಸಕ್ಕರೆ ಹಾಗೂ ಸ್ಯಾಚುರೇಟೆಡ್ ಕೊಬ್ಬಿನಂಶ ಕಡಿಮೆ ಇರುವ ಆಹಾರ ಪದಾರ್ಥಗಳು ಕಾಮೋತ್ತೇಜನಗೆ ಸಹಾಯ ಮಾಡಬಲ್ಲವು. ಅಲ್ಲದೆ ಇವು ಹಾರ್ಮೋನಿನ ಸುಧಾರಣೆಗೂ ಸಹಾಯ ಮಾಡುತ್ತವೆ.
ಲೈಂಗಿಕ ಸಮಸ್ಯೆಗಳನ್ನು ನಿವಾರಿಸಿ, ಲೈಂಗಿಕ ಸುಖ ಹೆಚ್ಚಿಸಲು ನೆರವಾಗುವ ಕೆಲವು ಆಹಾರ ಪದಾರ್ಥಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಸಿಂಪಿ
ಸಿಂಪಿ ಎಂದರೆ ಬಹಳಷ್ಟು ಜನಕ್ಕೆ ಗೊತ್ತಿರಲಿಕ್ಕಿಲ್ಲ. ಇದು ಕಪ್ಪೆಚಿಪ್ಪಿನ ರೀತಿ ಇರುತ್ತದೆ. ಇದರ ಒಳಗಿನ ಮಾಂಸವು ಕಾಮೋತ್ತೇಜಕ ಗುಣಲಕ್ಷಣಗಳನ್ನು ಹೊಂದಿದೆ. ಇದರಲ್ಲಿ ಸತುವಿನ ಅಂಶ ಅಧಿಕವಾಗಿದೆ. ಇದು ರಕ್ತದ ಹರಿವನ್ನು ಹೆಚ್ಚಿಸುತ್ತದೆ, ಇದು ಲೈಂಗಿಕ ಅಂಗಗಳಿಗೆ ರಕ್ತಗಳಲ್ಲಿ ರಕ್ತದ ಹರಿವು ಹೆಚ್ಚಿಸಲು ನೆರವಾಗುತ್ತದೆ. ಸತು ಪುರುಷರ ಫಲವಂತಿಕೆಗೆ ಅವಶ್ಯ. ಇದು ಟೆಸ್ಟೊಸ್ಟೆರಾನ್ ಹಾರ್ಮೋನ್‌ನ ಮಟ್ಟವನ್ನು ನಿಯಂತ್ರಿಸುತ್ತದೆ.
ಮಾಂಸಾಹಾರಗಳು
ಅಮಿನೊ ಆಸಿಡ್ ಸಂಯುಕ್ತಗಳನ್ನು ಹೊಂದಿರುವ ಮಾಂಸ ಹಾಗೂ ಇತರ ಆಹಾರ ಪದಾರ್ಥಗಳ ಸೇವನೆಯು ಲೈಂಗಿಕ ಆರೋಗ್ಯ ಸುಧಾರಣೆಗೆ ಸಹಾಯ ಮಾಡುತ್ತದೆ. ಗೋಮಾಂಸ, ಕೋಳಿ ಹಾಗೂ ಹಂದಿ ಮಾಂಸಗಳಲ್ಲಿ ಕಾರ್ನಿಟೈನ್, ಎಲ್ ಅರ್ಜಿನೈನ್ ಹಾಗೂ ಸತುವಿನ ಪ್ರಮಾಣ ಅಧಿಕವಾಗಿದ್ದು, ಇದು ರಕ್ತದ ಹರಿವನ್ನು ಸುಧಾರಿಸುತ್ತದೆ. ದೇಹದಲ್ಲಿ ರಕ್ತ ಸಂಚಾರ ಸುಗಮವಾದರೆ ಲೈಂಗಿಕ ಕ್ರಿಯೆಯ ಮಟ್ಟ ಸುಧಾರಿಸುತ್ತದೆ. ಆದರೆ ನೆನಪಿರಲಿ ಅತಿಯಾದ ಕೆಂಪು ಮಾಂಸದ ಸೇವನೆ ಹೃದಯದ ಆರೋಗ್ಯಕ್ಕೆ ಉತ್ತಮವಲ್ಲ. ಸಸ್ಯಾಹಾರಿಗಳಿಗೆ ಧಾನ್ಯಗಳು, ಹಾಲು, ಚೀಸ್‌ನಂತಹ ಡೇರಿ ಉತ್ಪನ್ನಗಳಲ್ಲಿ ಈ ಅಂಶಗಳು ಹೇರಳವಾಗಿ ಸಿಗುತ್ತವೆ.
ಸಾಲ್ಮನ್ ಮೀನು
ಸಾಲ್ಮನ್ ಮೀನಿನಲ್ಲಿ ಒಮೆಗಾ 3 ಫ್ಯಾಟಿ ಆಸಿಡ್ ಅಂಶ ಅಧಿಕವಾಗಿದೆ. ಆದ್ದರಿಂದ ಇದರ ಸೇವನೆ ಹೃದಯದ ಆರೋಗ್ಯಕ್ಕೆ ಉತ್ತಮ. ಸಾಲ್ಮಾನ್ ಮೀನಿನ ಸೇವನೆಯಿಂದ ದೈಹಿಕ ಆರೋಗ್ಯ ಸುಧಾರಿಸುವ ಜೊತೆಗೆ ಲೈಂಗಿಕ ಆರೋಗ್ಯವೂ ಸುಧಾರಿಸುತ್ತದೆ. ರಕ್ತಪರಿಚಲನಾ ವ್ಯವಸ್ಥೆಯು ಸರಾಗವಾಗಿ ಕಾರ್ಯನಿರ್ವಹಿಸುವುದರಿಂದ ಲೈಂಗಿಕ ಕ್ರಿಯೆಯನ್ನು ದುರ್ಬಲಗೊಳಿಸುವ ಕೆಲವು ರೋಗಗಳ ಅಪಾಯವನ್ನು ಇದು ಕಡಿಮೆ ಮಾಡುತ್ತದೆ.
ಒಣ ಹಣ್ಣು ಹಾಗೂ ಬೀಜಗಳು
ಒಣ ಹಣ್ಣು ಹಾಗೂ ಕೆಲವು ಬೀಜಗಳಲ್ಲಿ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚು ಮಾಡುವ ಗುಣಗಳಿವೆ. ಗೋಡಂಬಿ ಹಾಗೂ ಬಾದಾಮಿಯಲ್ಲಿ ಸತುವಿನ ಅಂಶ ಸಮೃದ್ಧವಾಗಿದೆ. ವಾಲ್‌ನಟ್, ಕುಂಬಳಕಾಯಿ ಬೀಜ, ಸೂರ್ಯಕಾಂತಿ ಬೀಜ, ಶೇಂಗಾದಂತಹ ಬೀಜಗಳಲ್ಲಿ ರಕ್ತದ ಹರಿವನ್ನು ಹೆಚ್ಚಿಸುವ ಸಾಮರ್ಥ್ಯವಿದೆ. ವಾಲ್‌ನಟ್‌ನಲ್ಲಿ ಓಮೆಗಾ 3 ಅಂಶ ಸಮೃದ್ಧವಾಗಿದೆ.
ಸೇಬುಹಣ್ಣು
ಸೇಬುಹಣ್ಣಿನಲ್ಲಿ ಕ್ವೆರ್ಸೆಟಿನ್ ಎಂಬ ಅಂಶ ಅಧಿಕವಾಗಿದೆ. ಇದು ಫ್ಲೆವನಾಯ್ಡ್ ರೀತಿಯ ಆಂಟಿ ಆಕ್ಸಿಡೆಂಟ್ ಆಗಿದ್ದು, ಹಲವು ರೀತಿಯ ಆರೋಗ್ಯಗುಣಗಳನ್ನು ಹೊಂದಿದೆ. ಲೈಂಗಿಕ ವಿಷಯಕ್ಕೆ ಸಂಬಂಧಿಸಿ ಇದು ಪ್ರಸರಣವನ್ನು ಉತ್ತೇಜಿಸುತ್ತದೆ, ನಿಮಿರುವಿಕೆಯ ಮಟ್ಟವನ್ನು ಹೆಚ್ಚಿಸುತ್ತದೆ. ಅಧಿಕರಕ್ತದೊತ್ತಡದ ಕಾರಣದಿಂದ ನಿಮಿರುವಿಕೆಗೆ ಅಡ್ಡಿಯಾಗಬಹುದು. ಯಾಕೆಂದರೆ ರಕ್ತನಾಳದಲ್ಲಿನ ತೊಂದರೆಗಳು ಜನನಾಂಗಗಳಿಗೆ ರಕ್ತದ ಹರಿವನ್ನು ದುರ್ಬಲಗೊಳಿಸುತ್ತದೆ. ಇದರಿಂದ ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ ಉಂಟಾಗಬಹುದು.
ಬಿಟ್ರೂಟ್
ಬಿಟ್ರೂಟ್‌ನಲ್ಲಿ ವಿಟಮಿನ್ ಹಾಗೂ ಆಂಟಿಆಕ್ಸಿಡೆಂಟ್ ಅಂಶ ಅಧಿಕವಾಗಿದೆ. ಆದ್ದರಿಂದ ಇದು ಎಲ್ಲಾ ರೀತಿಯ ದೈಹಿಕ ಸಮಸ್ಯೆಯ ಪರಿಹಾರಕ್ಕೂ ಉತ್ತಮ. ಇದರಲ್ಲಿ ನೈಟ್ರೇಟ್ ಅಂಶ ಕೂಡ ಅಧಿಕವಾಗಿದ್ದು, ಇದು ಲೈಂಗಿಕ ಜೀವನದ ಸುಧಾರಣೆಗೂ ಸಹಾಯ ಮಾಡುತ್ತದೆ.

ವಿಭಾಗ