Sugar Control: ಆಹಾರದಲ್ಲಿ ಸಕ್ಕರೆಯ ಪ್ರಮಾಣ ಕಡಿಮೆ ಮಾಡ್ಬೇಕಾ? ಹಾಗಾದ್ರೆ ಜಸ್ಟ್ ಈ 10 ಸಲಹೆಗಳನ್ನು ಟ್ರೈ ಮಾಡಿ ನೋಡಿ
ಸಕ್ಕರೆಯಲ್ಲಿ ಯಾವುದೇ ಪೋಷಕಾಂಶಗಳು ಇರುವುದಿಲ್ಲ. ಸಕ್ಕರೆ ತಿನ್ನುವುದು ಸಂಪೂರ್ಣವಾಗಿ ಹಾನಿಕಾರಕ. ಸಕ್ಕರೆಯ ಬದಲು ಬೆಲ್ಲ ಮತ್ತು ಜೇನುತುಪ್ಪವನ್ನು ನೀವು ಉಪಯೋಗಿಸಬಹುದು. ಇನ್ನು ಹತ್ತಾರು ಪರ್ಯಾಯ ಮಾರ್ಗಗಳನ್ನು ನಾವಿಲ್ಲಿ ಸೂಚಿದ್ದೇವೆ ಗಮನಿಸಿ. ಇದೇ ರೀತಿ ನೀವೂ ಟ್ರೈ ಮಾಡಿ ನೋಡಿ.
ಕೆಲವರು ಸಿಹಿತಿಂಡಿಗಳನ್ನು ಇಷ್ಟಪಡುತ್ತಾರೆ. ಅವುಗಳನ್ನು ತಿನ್ನದೆ ಇರಲು ಸಾಧ್ಯವಿಲ್ಲ ಎಂದು ಪದೇ ಪದೇ ತಿನ್ನುತ್ತಾರೆ. ಕೆಲವರು ಸಿಹಿ ಪದಾರ್ಥಗಳನ್ನು ತಿನ್ನಬಾರದು ಎಂದು ನಿರ್ಧಾರ ಮಾಡುತ್ತಾರೆ. ಆದರೂ ಅವರಿಗೆ ತಮ್ಮ ಬಯಕೆಯನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗದೇ ಒಂದಲ್ಲ ಒಂದು ರೀತಿಯಲ್ಲಿ ಅದನ್ನು ತಿಂದೇ ತಿನ್ನುತ್ತಾರೆ. ಆದರೆ ಅತಿಯಾದ ಸಕ್ಕರೆ ಸೇವನೆ ದೇಹಕ್ಕೆ ಒಳ್ಳೆಯದಲ್ಲ. ಇನ್ನು ಸಾಮಾನ್ಯ ದಿನದಲ್ಲಿ ಬೇರೆ ಬೇರೆ ರೀತಿ ಸಕ್ಕರೆಯನ್ನು ಉಪಯೋಗ ಮಾಡಲಾಗುತ್ತದೆ. ದಿನ ನಿತ್ಯದ ಊಟದಲ್ಲಿ ಅದು ತನ್ನಿಂದ ತಾನೇ ಬೆರೆತು ಸೇವನೆ ಮಾಡುತ್ತೇವೆ. ಇದು ದೇಹದಲ್ಲಿ ಸಕ್ಕರೆ ಅಂಶವನ್ನು ಕಾಪಾಡುತ್ತದೆ. ಆದರೆ ದೇಹದಲ್ಲಿ ಹೆಚ್ಚು ಸಕ್ಕರೆ ಹೋಗದಂತೆ ಎಚ್ಚರಿಕೆ ವಹಿಸುವುದು ಅಗತ್ಯ. ಏಕೆಂದರೆ ಹೆಚ್ಚಿನ ಸಕ್ಕರೆ ಸೇವನೆಯು ಅನೇಕ ಆರೋಗ್ಯ ಅಪಾಯಗಳನ್ನು ಉಂಟುಮಾಡುತ್ತದೆ.
ಸಿಹಿತಿಂಡಿಗಳಲ್ಲಿ ಹೆಚ್ಚಿನ ಕ್ಯಾಲೋರಿ ಅಂಶದಿಂದಾಗಿ, ತೂಕ ಹೆಚ್ಚಾಗುವುದು ಮತ್ತು ಬೊಜ್ಜು ಉಂಟಾಗಬಹುದು ಒಂದು ಸಾಮಾನ್ಯ ಸಂಗತಿಯಾಗಿದೆ. ನೀವು ತೂಕ ಇಳಿಕೆ ಮಾಡಿಕೊಳ್ಳಬೇಕು ಎಂಬ ಪ್ರಯತ್ನವನ್ನೇನಾದರೂ ಮಾಡುತ್ತಿದ್ದೀರಿ ಎಂದಾದರೆ ಸಕ್ಕರೆಯನ್ನು ಸಂಪೂರ್ಣವಾಗಿ ನಿಲ್ಲಿಸ ಬೇಕಾಗುತ್ತದೆ. ಇಲ್ಲವಾದರೆ ನೀವು ತುಂಬಾ ತೊಂದರೆ ಅನುಭವಿಸುತ್ತೀರಾ. ಇನ್ನು ಮಧುಮೇಹ ಖಾಯಿಲೆ ಇದ್ದವರು ಎಷ್ಟು ಎಚ್ಚರಿಕೆ ವಹಿಸಿದರೂ ಅದು ಕಡಿಮೆ. ನಾವು ಇಲ್ಲಿ ಕೆಲ ಸಲಹೆ ನೀಡಿದ್ದೇವೆ ಗಮನಿಸಿ.
ಈ ಕ್ರಮ ಅನುಸರಿಸಿ
ಸಕ್ಕರೆ ಬದಲು ಬೆಲ್ಲ ಸೇವನೆ ಮಾಡಿ
ಬೇಕರಿ ತಿಂಡಿಗಳನ್ನು ಕಡಿಮೆ ತಿನ್ನಿ
ಆಹಾರದ ಪ್ಯಾಕೆಟ್ ಮೇಲಿನ ಲೇಬಲ್ ಓದಿ ವಸ್ತುಗಳನ್ನು ಖರೀದಿ ಮಾಡಿ
ಹಣ್ಣಿನ ರಸಗಳನ್ನು ಮಾತ್ರ ಸೇವನೆ ಮಾಡಿ ಸಕ್ಕರೆ ಸೇರಿಸಬೇಡಿ
ಸಕ್ಕರೆ ಪಾನೀಯಗಳು, ಕೂಲ್ ಡ್ರಿಂಕ್ಸ್, ಸೋಡಾ, ಎನರ್ಜಿ ಡ್ರಿಂಕ್ಸ್, ಸ್ವೀಟ್ ಕಾಫಿ ಕುಡಿಯುವದನ್ನು ನಿಲ್ಲಿಸಿ
ಮೊಸರಿನ ಜೊತೆ ಸಕ್ಕರೆ ಸೇರಿಸಿ ತಿನ್ನುವ ಅಥವಾ ಐಸ್‌ಕ್ರೀಂ ತಿನ್ನುವ ಅಭ್ಯಾಸ ಇದ್ದೆ ಅದನ್ನು ಬಿಡಿ
ಇದನ್ನೂ ಓದಿ: ಬೆಂಡೆಕಾಯಿ ಪ್ರಿಯರೇ ಗಮನಿಸಿ, ನೀವು ಹೀಗೆ ಮಾಡಿದ್ರೆ ಬೆಂಡೆಕಾಯಿ ಬಹುಕಾಲ ತಾಜಾ ಆಗಿಯೇ ಇರುತ್ತೆ
ಪ್ರತಿನಿತ್ಯ ಚಹಾ ಅಥವಾ ಕಾಫಿ ಕುಡಿಯುವ ಅಭ್ಯಾಸ ಇದ್ದರೆ ಅದಕ್ಕೆ ಸಕ್ಕರೆ ಸೇರಿಸಬೇಡಿ
ಕಡಿಮೆ ಸಕ್ಕರೆ ಇರುವ ಪದಾರ್ಥಗಳನ್ನೇ ಹೆಚ್ಚಾಗಿ ನಿಮ್ಮ ಊಟದಲ್ಲಿ ಆಯ್ಕೆ ಮಾಡಿ
ಹೊರಗಿನ ಆಹಾರಗಳಲ್ಲಿ ಹೆಚ್ಚು ಸಕ್ಕರೆ ಅಂಶ ಇರುತ್ತದೆ. ಹಾಗಾಗಿ ಕಡಿಮೆ ಸಕ್ಕರೆ ಇರುವ ಪದಾರ್ಥಗಳನ್ನೇ ಸೇವಿಸಿ
ಅಡುಗೆ ಮನೆಯಲ್ಲಿ ಬಳಸುವ ಮಸಾಲೆಗಳ ಬಗ್ಗೆಯೂ ಗಮನವಿರಲಿ
ನೀವು ಈ ಎಲ್ಲಾ ವಿಧಾನಗಳನ್ನು ಅನುಸರಿಸಿದರೆ, ನೀವು ತಿನ್ನುವ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಬಹುದು. ಇನ್ನು ಕೆಲವು ಬಾರಿ ನೀವು ಸಕ್ಕರೆಯ ಬದಲು ಅನಿವಾರ್ಯ ಎಂಬ ಸಂದರ್ಭದಲ್ಲಿ ಬೆಲ್ಲವನ್ನೂ ಸೇವನೆ ಮಾಡಬಹುದು. ಅಥವಾ ಇತರ ಸಿಹಿ ಅಂಶವಿರುವ ಹಣ್ಣುಗಳನ್ನು ತಿನ್ನಿ.
ಬೆಲ್ಲ ಅಥವಾ ಜೇನುತುಪ್ಪವೇ ಉತ್ತಮ
ಸಕ್ಕರೆಯಲ್ಲಿ ಯಾವುದೇ ಪೋಷಕಾಂಶಗಳು ಇರುವುದಿಲ್ಲ. ಸಕ್ಕರೆ ತಿನ್ನುವುದು ಸಂಪೂರ್ಣವಾಗಿ ಹಾನಿಕಾರಕ. ಸಕ್ಕರೆಯ ಬದಲು ಬೆಲ್ಲ ಮತ್ತು ಜೇನುತುಪ್ಪವನ್ನು ನೀವು ಉಪಯೋಗಿಸಬಹುದು. ಸಕ್ಕರೆ ತಿಂದರೆ ಬೇಗ ತೂಕ ಹೆಚ್ಚುತ್ತದೆ. ಸಕ್ಕರೆಯಂಶ ಅತಿಯಾದರೆ ದೇಹದಲ್ಲಿ ಕ್ಯಾಲೊರಿ ಹೆಚ್ಚಲು ಕಾರಣವಾಗುತ್ತದೆ. ಇದು ಸಂಸ್ಕರಿಸಿದ ಆಹಾರವಾಗಿದ್ದು, ಅತಿಯಾದ ಸಂಸ್ಕರಿಸಿದ ಆಹಾರ ಸೇವನೆಯಿಂದ ತೂಕ ಹೆಚ್ಚಲು ಕಾರಣವಾಗಬಹುದು. ಸಕ್ಕರೆ ಆರೋಗ್ಯಕ್ಕೆ ಸ್ವಲ್ಪವೂ ಒಳ್ಳೆಯದಲ್ಲ.
ವಿಭಾಗ