ನಿಮ್ಮದೇ ಮನೆಯಲ್ಲಿ ನಿಮಗೆ ಬೋರ್‌ ಆಗ್ತಿದ್ಯಾ? ಹಾಗಾದ್ರೆ ಇದೊಂದು ಉಪಾಯ ಫಲಿಸುತ್ತಾ ಟ್ರೈ ಮಾಡಿ-simple lifestyle tips are you bored in your own home so try this idea and see if it works ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ನಿಮ್ಮದೇ ಮನೆಯಲ್ಲಿ ನಿಮಗೆ ಬೋರ್‌ ಆಗ್ತಿದ್ಯಾ? ಹಾಗಾದ್ರೆ ಇದೊಂದು ಉಪಾಯ ಫಲಿಸುತ್ತಾ ಟ್ರೈ ಮಾಡಿ

ನಿಮ್ಮದೇ ಮನೆಯಲ್ಲಿ ನಿಮಗೆ ಬೋರ್‌ ಆಗ್ತಿದ್ಯಾ? ಹಾಗಾದ್ರೆ ಇದೊಂದು ಉಪಾಯ ಫಲಿಸುತ್ತಾ ಟ್ರೈ ಮಾಡಿ

ಮನೆ ನಿಮ್ಮದೇ ಆದರೂ ಕೆಲವೊಮ್ಮೆ ಒಬ್ಬರೇ ಇದ್ದಾಗ ಬೋರ್‌ ಆಗುತ್ತದೆ. ಆಗ ದಿನವಿಡಿ ಮೊಬೈಲ್ ನೋಡಿ ಇದೂ ಸಾಕು ಎಂದು ಅನಿಸಿಬಿಡುತ್ತದೆ. ಇಂತಹ ಸಂದರ್ಭದಲ್ಲಿ ಏನು ಮಾಡು ಬೇಕು ಎಂದು ನೀವು ಯೋಚಿಸುತ್ತಿದರೆ ಆ ಸಮಸ್ಯೆಗೆ ಪರಿಹಾರ ಎಂಬಂತ ಸಲಹೆ ಇಲ್ಲಿದೆ ಗಮನಿಸಿ

ನಿಮ್ಮದೇ ಮನೆಯಲ್ಲಿ ನಿಮಗೆ ಬೋರ್‌ ಆಗ್ತಿದ್ಯಾ? ಹಾಗಾದ್ರೆ ಇದೊಂದು ಉಪಾಯ ಫಲಿಸುತ್ತಾ ಟ್ರೈ ಮಾಡಿ
ನಿಮ್ಮದೇ ಮನೆಯಲ್ಲಿ ನಿಮಗೆ ಬೋರ್‌ ಆಗ್ತಿದ್ಯಾ? ಹಾಗಾದ್ರೆ ಇದೊಂದು ಉಪಾಯ ಫಲಿಸುತ್ತಾ ಟ್ರೈ ಮಾಡಿ (Canva)

ಎಷ್ಟೋ ಜನ ಹೆಂಗಳೆಯರು ಇತ್ತೀಚಿನ ದಿನದಲ್ಲಿ ಒಂಟಿತನ ಅನುಭವಿಸುತ್ತಾ ಇದ್ದಾರೆ. ಮನೆಯಲ್ಲೇ ಇದ್ದರೂ ಗಂಡ ಕೆಲಸಕ್ಕೆ, ಮಕ್ಕಳು ಶಾಲೆಗೆ ಹೋದ ಸಂದರ್ಭದಲ್ಲಿ ಅವರಿಗೆ ತಾನು ಒಂಟಿ ಎನಿಸುತ್ತದೆ. ಈ ಸಂದರ್ಭಗಳಲ್ಲಿ ತಾವೇನು ಮಾಡಬೇಕು ಎಂದು ತಿಳಿಯದೇ ಬೋರ್ ಆಗುತ್ತಾರೆ. ಅಂತವರು ಮೊಬೈಲ್ ಹಾಗೂ ಟಿವಿ ನೋಡುತ್ತ ಕಾಲ ಕಳೆಯಲು ಪ್ರಯತ್ನಿಸುತ್ತಾರೆ. ಆದರೆ ಅದೂ ಸಹ ಇತ್ತೀಚಿನ ದಿನದಲ್ಲಿ ಬೋರ್ ಬರುತ್ತಿದೆ ಎಂದು ಹೇಳುವವರು ಹಲವರಾಗಿದ್ದಾರೆ.

i) ಹೂದೋಟ ಮಾಡಿ
ನಿಮ್ಮ ಮನೆಯ ಅಂಗಳದಲ್ಲಿ ಜಾಗವಿದ್ದರೆ ಅಲ್ಲೊಂದಷ್ಟು ಹೂ ಗಿಡಗಳನ್ನು ನೆಡಿ ಅಥವಾ ಪಾಟ್‌ನಲ್ಲಿ ಆಗುವಂತಹ ತರಕಾರಿಗಳನ್ನು ಬೆಳೆಸಿ. ಇದ್ದಷ್ಟೇ ಜಾಗವನ್ನು ಸರಿಯಾಗಿ ಉಪಯೋಗ ಮಾಡಿಕೊಂಡು ಅಲ್ಲಿ ನಿಮ್ಮ ಸಮಯವನ್ನು ಕಳೆಯಿರಿ. ಸುಂದರವಾದ ಪಾಟ್‌ಗಳನ್ನು ಆಯ್ಕೆ ಮಾಡಿಕೊಂಡು ಮನೆ ಸೌಂದರ್ಯ ಹೆಚ್ಚಿಸಿ.

ii) ಇಷ್ಟವಾದ ಅಡುಗೆ ಮಾಡಿ
ನೀವು ಯಾವಾಗಲು ನಿಮ್ಮ ಗಂಡ ಹಾಗೂ ಮಕ್ಕಳ ಇಷ್ಟದ ಬಗ್ಗೆ ಯೋಚನೆ ಮಾಡುತ್ತೀರಾ ಆದರೆ ಈ ಬಾರಿ ನಿಮಗೆ ಏನು ಇಷ್ಟ ಎಂದು ಅದನ್ನೇ ಮಾಡಿಕೊಂಡು ತಿನ್ನಿ. ಅಥವಾ ನೀವು ಮಾಡಿದ ಅಡುಗೆಯನ್ನು ತುಂಬಾ ಇಷ್ಟಪಟ್ಟು ತಿಂದು ಅದನ್ನು ಅವರು ಹೊಗಳಿದಾಗ ಸಂತೋಷ ಆಗುತ್ತದೆ ಎಂದಾದರೆ ಅದನ್ನೇ ಮಾಡಿ. ಅಂದರೆ ನಿಮ್ಮವರಿಗೆ ಇಷ್ಟವಾಗುವ ಅಡುಗೆಯನ್ನೇ ಮಾಡಿ.

iii) ಡ್ರಾಯಿಂಗ್‌ ಮಾಡಿ
ನೀವು ಬಣ್ಣಗಳೊಂದಿಗೆ ಒಂದಷ್ಟು ಆಟ ಆಡಿ ಸುಂದರವಾದ ಚಿತ್ರ ಬಿಡಿಸಿ. ಅಂದವಾದ ಚಿತ್ರವನ್ನು ಬಿಡಿಸಿ. ಅದಕ್ಕೆ ಬಣ್ಣ ಹಾಕಿ ವಾಲ್ ಹ್ಯಾಂಗಿಂಗ್‌ ಮಾಡಿ. ಅಥವಾ ಕಸೂತಿ, ಹೊಲಿಗೆ ಏನಾದರೂ ಒಂದನ್ನು ಮಾಡಿ. ಅದು ನಿಮ್ಮ ಮನಸ್ಸಿಗೆ ಆರಾಮ ನೀಡುತ್ತದೆ.

iv) ಆನ್‌ಲೈನ್‌ ಕ್ಲಾಸ್‌ ಸೇರಿಕೊಳ್ಳಿ

ಆನ್ಲೈನ್ ಕ್ಲಾಸ್ ಸೇರಿಕೊಳ್ಳಿ ನಿಮಗೆ ಯಾವ ವಿಷಯ ಇಷ್ಟವೋ ಅದೇ ವಿಷಯವನ್ನು ಆಯ್ಕೆ ಮಾಡಿಕೊಂಡು ಆನ್ಲೈನ್ ಕ್ಲಾಸ್ ಸೇರಿ. ಉದಾಹರಣೆಗೆ ಕುಕಿಂಗ್ ಕ್ಲಾಸ್, ಇಂಗ್ಲಿಷ್ ಲರ್ನಿಂಗ್, ಯೋಗ ಹೀಗೆ ಯಾವುದಕ್ಕೆ ಬೇಕೋ ಅದಕ್ಕೆ ಸೇರಿಕೊಂಡು ನಿಮ್ಮ ಆಸಕ್ತಿಯ ಕ್ಷೇತ್ರದಲ್ಲಿ ನಿಮ್ಮ ದಿನ ಕಳೆಯಿರಿ.

v) ರೀಲ್ಸ್‌ ಮಾಡಿ, ಪುಸ್ತಕ ಓದಿ

ನಿಮಗೆ ಅಭಿನಯದಲ್ಲಿ ಆಸಕ್ತಿ ಇದ್ದರೆ ರೀಲ್ಸ್‌ ಮಾಡಿ ಅಥವಾ ಮೋಜು-ಮಸ್ತಿ ಮಾಡುವ ಮನಸ್ಸಿದ್ದರೆ ಅದನ್ನು ಟ್ರೈ ಮಾಡಿ. ಇಲ್ಲ ನಿಮಗೆ ಪುಸ್ತಕ ಓದುವುದೇ ಇಷ್ಟ ಎಂದಾದರೆ ಪುಸ್ತಕ ಓದಿ. ನಿಮ್ಮದೇ ಒಂದು ಗುರುತು ಸ್ಥಾಪಿಸಿ. ನಿಮ್ಮ ಆಸಕ್ತಿ ತಕ್ಕಂತೆ ಇವುಗಳನ್ನು ಬದಲಾಯಿಸಿಕೊಳ್ಳಿ.

vi) ಅತಿಥಿಗಳನ್ನು ಕರೆಯಿರಿ
ನಿಮ್ಮ ಮನೆಗೆ ಅತಿಥಿಗಳನ್ನು ಕರೆದು ಅವರನ್ನು ಸತ್ಕರಿಸಿ ನಿಮ್ಮ ಸ್ನೇಹಿತರು ಅಥವಾ ಕುಟುಂಬದ ಸದಸ್ಯರನ್ನು ಆಹ್ವಾನಿಸಿ ದಿನ ಕಳೆಯಿರಿ. ಅಥವಾ ಯಾವುದಾದರೂ ಒಂದು ಸಂಘಕ್ಕೆ ಸೇರಿಕೊಳ್ಳಿ.